ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಕುಂದಾಪುರ: ದಿನಾಂಕ 29/09/2022 ರಂದು ಸಂಜೆ 20:30 ಗಂಟೆಯಿಂದ ದಿನಾಂಕ 30/09/2022 ರಂದು ಬೆಳಿಗ್ಗೆ 9:00 ಗಂಟೆಯ ಮಧ್ಯಾವದಿಯಲ್ಲಿ ಕುಂದಾಪುರ ತಾಲೂಕು ಕೊರವಡಿ ಗ್ರಾಮದ ಫಿರ್ಯಾಧಿ ರವೀಂದ್ರ ಇವರ ಮನೆಯ ಸಮೀಪ ಗಂಗ ಮೊಗವೀರರವರ ಮನೆಯ ಬಳಿ ಡಾಮಾರು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಫಿರ್ಯಧಿದಾರರ ಬಾಬ್ತು ಹೋಂಡಾ ಆಕ್ಟೀವಾ ಕಂಪೆನಿಯ KA 20 EU6705 ನೇ ರಿಜಿಸ್ಟ್ರೇಶನ್ ನಂಬ್ರದ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಕಳವಾದ ವಾಹನದ ಅಂದಾಜು ಮೌಲ್ಯ ರೂ 40,000/-  ಆಗಬಹುದು. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 107/2022  ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

  • ಉಡುಪಿ: ದಿನಾಂಕ:28-09-2022 ರಂದು ಸೆನ್ ಠಾಣಾ ಸಿಬ್ಬಂದಿ ಜೀವನ್ ಇವರು ಅಕ್ರಮ ಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ಮಾಹಿತಿ ಸಂಗ್ರಹಣೆ ಬಗ್ಗೆ ಉಡುಪಿ, ಮಣಿಪಾಲ ಕಡೆಗಳಲ್ಲಿ ಸಂಚರಿಸಿಕೊಂಡಿರುವಾಗ, ಖಚಿತ ಮಾಹಿತಿ ಮೇರೆಗೆ ಉಡುಪಿ ತಾಲೂಕು, ಹೆರ್ಗ ಗ್ರಾಮದ, ಸರಳಬೆಟ್ಟು, ಕೊಡಂಗೆಕಟ್ಟೆ, ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಜೋಶೂವ ಸಾಜನ್ ಥೋಮಸ್ ಎಂಬಾತನನ್ನು  11:25 ಗಂಟೆಗೆ ವಶಕ್ಕೆ ಪಡೆದು, ಠಾಣೆಗೆ ಕರೆತಂದು ವರದಿಯೊಂದಿಗೆ ಹಾಜರುಪಡಿಸಿದ್ದು, ಪೊಲೀಸ್ ನಿರೀಕ್ಷಕ ರವರು ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 30.09.2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು 09:15 ಗಂಟೆಗೆ ಸ್ವೀಕರಿಸಿ, ವರದಿಯಲ್ಲಿ ಜೋಶೂವ ಸಾಜನ್ ಥೋಮಸ್ ಈತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಈ ಬಗ್ಗೆ ಸೆನ್‌ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 78/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ: 28-09-2022 ರಂದು ಸೆನ್ ಠಾಣಾ ಸಿಬ್ಬಂದಿ ಮಾಯಪ್ಪ ಇವರು ಅಕ್ರಮ ಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ಮಾಹಿತಿ ಸಂಗ್ರಹಣೆ ಬಗ್ಗೆ ಉಡುಪಿ, ಮಣಿಪಾಲ ಕಡೆಗಳಲ್ಲಿ ಸಂಚರಿಸಿಕೊಂಡಿರುವಾಗ, ಖಚಿತ ಮಾಹಿತಿ ಮೇರೆಗೆ ಉಡುಪಿ ತಾಲೂಕು, ಹೆರ್ಗ ಗ್ರಾಮದ, ಈಶ್ವರ ನಗರ, ವಿಜಯದುರ್ಗ ಅಪಾರ್ಟ್‌ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಕುರಿಯನ್ ಜೆ. ವಿನ್ಸೆಂಟ್ ಎಂಬಾತನನ್ನು 12.30 ಗಂಟೆಗೆ ವಶಕ್ಕೆ ಪಡೆದು, ಠಾಣೆಗೆ ಕರೆತಂದು ವರದಿಯೊಂದಿಗೆ ಹಾಜರುಪಡಿಸಿದ್ದು, ಠಾಣಾಧಿಕಾರಿಯವರು ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿ, ದಿನಾಂಕ 30.09.2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು 09:15 ಗಂಟೆಗೆ ಸ್ವೀಕರಿಸಿ, ವರದಿಯಲ್ಲಿ ಕುರಿಯನ್ ಜೆ. ವಿನ್ಸೆಂಟ್ ಈತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಈ ಬಗ್ಗೆ ಸೆನ್‌ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 79/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ  28.09.2022 ರಂದು 12.00 ಗಂಟೆಗೆ ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕ ರಾಜಶೇಖರವಂದಲಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ಸಿಬ್ಬಂದಿ  ರೇವಣಸಿದ್ದ  ಮತ್ತು  ಬಸವರಾಜ್‌  ರವರೊಂದಿಗೆ  ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಮಣಿಪಾಲ ಎಂಐಟಿ ಕಾಲೇಜಿನಿಂದ Shivendra Kumar ಎಂಬಾತನನ್ನು ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ.  ಆರೋಪಿ Shivendra Kumar ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ಈ ದಿನ ದಿನಾಂಕ: 30.09.2022 ರಂದು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 149/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಮಣಿಪಾಲ: ದಿನಾಂಕ  28.09.2022 ರಂದು 12.00 ಗಂಟೆಗೆ ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕ ರಾಜಶೇಖರವಂದಲಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ಸಿಬ್ಬಂದಿ ರೇವಣಸಿದ್ದ  ಮತ್ತು  ಬಸವರಾಜ್‌  ರವರೊಂದಿಗೆ  ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಮಣಿಪಾಲ ಎಂಐಟಿ ಕಾಲೇಜಿನಿಂದ Kushal Guptha ಎಂಬಾತನನ್ನು ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ.  ಆರೋಪಿ Kushal Guptha, ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ಈ ದಿನ ದಿನಾಂಕ: 30.09.2022 ರಂದು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 150/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಮಣಿಪಾಲ: ದಿನಾಂಕ  28.09.2022 ರಂದು 12.00 ಗಂಟೆಗೆ ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕ ರಾಜಶೇಖರವಂದಲಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ಸಿಬ್ಬಂದಿ  ರೇವಣಸಿದ್ದ  ಮತ್ತು  ಬಸವರಾಜ್‌  ರವರೊಂದಿಗೆ  ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಮಣಿಪಾಲ ಎಂಐಟಿ ಕಾಲೇಜಿನಿಂದ PRANJAL KUMAR  ಎಂಬಾತನನ್ನು ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ. ಆರೋಪಿ PRANJAL KUMAR, ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ: 30.09.2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 151/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಮಣಿಪಾಲ: ದಿನಾಂಕ  28.09.2022 ರಂದು 12.00 ಗಂಟೆಗೆ ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕ ರಾಜಶೇಖರವಂದಲಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ಸಿಬ್ಬಂದಿ  ರೇವಣಸಿದ್ದ  ಮತ್ತು  ಬಸವರಾಜ್‌  ರವರೊಂದಿಗೆ  ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ Nipun Sreevastav ಎಂಬಾತನನ್ನು  ಮಣಿಪಾಲ ಎಂಐಟಿ ಕಾಲೇಜಿನಿಂದ ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ. ಆರೋಪಿ Nipun Sreevastav ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ಈ ದಿನ ದಿನಾಂಕ: 30.09.2022 ರಂದು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 152/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಮಣಿಪಾಲ: ದಿನಾಂಕ  28.09.2022 ರಂದು 12.30 ಗಂಟೆಗೆ ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕ ರಾಜಶೇಖರವಂದಲಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ಸಿಬ್ಬಂದಿ   ಆನಂದಯ್ಯ ಮತ್ತು   ಚನ್ನೇಶ ರವರೊಂದಿಗೆ  ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಆರೋಪಿ ‌‌SAHIL BASHIR  ಎಂಬಾತನನ್ನು  ಮಣಿಪಾಲ ಎಂಐಟಿ ಕಾಲೇಜಿನಿಂದ ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ.  ಆರೋಪಿ ‌‌SAHIL BASHIR  ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ಈ ದಿನ ದಿನಾಂಕ: 30.09.2022 ರಂದು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 153/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಮಣಿಪಾಲ: ದಿನಾಂಕ  28.09.2022 ರಂದು 12.30 ಗಂಟೆಗೆ ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ಸಿಬ್ಬಂದಿ ಆನಂದಯ್ಯ ಮತ್ತು   ಚನ್ನೇಶ ರವರೊಂದಿಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಆರೋಪಿ ‌‌ PAVAN PRETHAM ಎಂಬಾತನನ್ನು  ಮಣಿಪಾಲ ಎಂಐಟಿ ಕಾಲೇಜಿನಿಂದ ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ.  ಆರೋಪಿ PAVAN PRETHAM ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ಈ ದಿನ ದಿನಾಂಕ: 30.09.2022 ರಂದು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 154/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಮಣಿಪಾಲ: ದಿನಾಂಕ  28.09.2022 ರಂದು 12.30 ಗಂಟೆಗೆ ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ಸಿಬ್ಬಂದಿ   ಆನಂದಯ್ಯ ಮತ್ತು   ಚನ್ನೇಶ ರವರೊಂದಿಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಆರೋಪಿ ‌‌ MURAD  ಎಂಬಾತನನ್ನು  ಮಣಿಪಾಲ ಎಂಐಟಿ ಕಾಲೇಜಿನಿಂದ ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ. ಆರೋಪಿ MURAD ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ಈ ದಿನ ದಿನಾಂಕ: 30.09.2022 ರಂದು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 155/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಮಣಿಪಾಲ: ದಿನಾಂಕ  28.09.2022 ರಂದು 12.30 ಗಂಟೆಗೆ ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ಸಿಬ್ಬಂದಿ ಆನಂದಯ್ಯ ಮತ್ತು   ಚನ್ನೇಶ ರವರೊಂದಿಗೆ  ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಆರೋಪಿ ‌‌ AARAYAN ಎಂಬಾತನನ್ನು  ಮಣಿಪಾಲ ಎಂಐಟಿ ಕಾಲೇಜಿನಿಂದ ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ.  ಆರೋಪಿ AARAYAN ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ಈ ದಿನ ದಿನಾಂಕ: 30.09.2022 ರಂದು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 156/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಮಣಿಪಾಲ: ದಿನಾಂಕ  28.09.2022 ರಂದು 13.00 ಗಂಟೆಗೆ ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕ ರಾಜಶೇಖರ ವಂದಲಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಠಾಣಾ ಸಿಬ್ಬಂದಿ ರೇವಣ್ಣ ಸಿದ್ದ ಮತ್ತು   ಬಸವರಾಜ್‌  ರವರೊಂದಿಗೆ  ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಆರೋಪಿ Harsh Kumar, ಎಂಬಾತನನ್ನು  ಮಣಿಪಾಲ ಎಂಐಟಿ ಕಾಲೇಜಿನಿಂದ ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ.   ಆರೋಪಿ Harsh Kumar ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ಈ ದಿನ ದಿನಾಂಕ: 30.09.2022 ರಂದು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 158/2022  ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಶಂಕರನಾರಾಯಣ: ಅಂಪಾರು ಗ್ರಾಮದ ಅಂಪಾರು ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ  ಪೂಜೆಯ ದೇಣಿಗೆ  ಹಣವನ್ನು ಅಜಿತ್  ಕುಲಾಲ್  ಈತನಲ್ಲಿ ನೀಡುವಂತೆ  ವಾಟ್ಟಾಪ್   ಗ್ರೂಪನಲ್ಲಿ  ಹಾಕಿದ್ದು, ಈ  ವಿಷಯದಲ್ಲಿ ಫಿರ್ಯಾದಿ ರಂಜಿತ್‌  ಶೆಟ್ಟಿ  ಇವರು ದೇವರಿಗೆ ನೀಡುವ ಹಣವನ್ನು ಯಾವುದೇ  ವ್ಯಕ್ತಿಯ ಹತ್ತಿರ ನೀಡುವ ಅವಶ್ಯಕತೆ ಇಲ್ಲ,ಕಾಣಿಕೆ  ಡಬ್ಬಿಗೆ ಹಾಕಿದರು  ಸಹ ಹೋಗುತ್ತದೆ ಎಂದು  ಮೆಸೇಜ್  ಹಾಕಿರುತ್ತಾರೆ, ಈ ವಿಷಯದಲ್ಲಿ ಕೋಪಗೊಂಡ ಆರೋಪಿಗಳು ದಿನಾಂಕ 30.09.2022 ರಂದು ಬೆಳಿಗ್ಗೆ ಸುಮಾರು 7;45  ಘಂಟೆಗೆ ಫಿರ್ಯಾದುದಾರರು ಕುಂದಾಪುರ  ತಾಲೂಕಿನ ಅಂಪಾರು ಗ್ರಾಮದ ಅಂಪಾರು ಆಟೋರಿಕ್ಷಾ ನಿಲ್ದಾಣದಲ್ಲಿ  ಇರುವಾಗ  ಆರೋಪಿ ಅಜಿತ್  ಕುಲಾಲ್ ಹಾಗೂ  ಸಂಕೇತ್  ಕುಲಾಲ್ ಮೋಟಾರ್  ಸೈಕಲ್‌ನಲ್ಲಿ  ಬಂದು  ನಮ್ಮ ವಿಷಯದಲ್ಲಿ  ನೀನು ಎನು ಮೆಸೇಜ್ ಮಾಡಿದೇ ನಿನ್ನ ಸುಮ್ಮನೇ  ಬಿಡುವುದಿಲ್ಲ  ಎಂದು  ಕೇಳಿ ಏಕಾಏಕೀ ಅಕ್ರಮವಾಗಿ   ತಡೆದು ನಿಲ್ಲಿಸಿ     ಕಬ್ಬಿಣದ ರಾಡ್‌‌ನಿಂದ   ಹಲ್ಲೆ  ಮಾಡಿ  ಇವತ್ತು  ನಿನನ್ನು ಕೊಲ್ಲದೆ  ಬಿಡುವುದಿಲ್ಲ ಎಂದು  ಹೇಳಿ ನೆಲದ  ಮೇಲೆ ದೂಡಿ ಹಾಕಿ   ಚಪ್ಪಲಿ ಹಾಕಿದ  ಕಾಲಿನಿಂದ ಒದ್ದು   ಅವಮಾನ  ಮಾಡಿರುತ್ತಾರೆ, ಅಲ್ಲದೆ  ಈ ಸಮಯ  ಅಲ್ಲಿಗೆ  ಕೆಎ, 20  ಎಮ್‌ಸಿ 7649 ನೇ ನಂಬ್ರದ  ಕಾರಿನಲ್ಲಿ ಬಂದ  ಆರೋಪಿ ನಾಗರಾಜ ಪೂಜಾರಿ ಈತನು ನಿನ್ನದು ಜಾಸ್ತಿ  ಆಯ್ತ  ಎಂದು   ಹೇಳಿ  ಕೈಯಿಂದ ಕಪಾಲಕ್ಕೆ ಹೊಡೆದಿರುತ್ತಾನೆ, ಈ  ಸಮಯ ಅಲ್ಲಿಯೇ  ಇದ್ದ  ಉಮೇಶ  ಕೊಠಾರಿ  ಈತನು  ನಾಗರಾಜ ಪೂಜಾರಿಯವರಲ್ಲಿ ಫಿರ್ಯಾಧುದಾರರಿಗೆ ಹೊಡೆಯುವಂತೆ ಪ್ರಚೋದನೆ ಮಾಡಿರುತ್ತಾರೆ, ಆರೋಪಿಗಳು ಹಲ್ಲೆ ಮಾಡಿದ  ಪರಿಣಾಮ  ಫಿರ್ಯಾದುದಾರರ ಎಡಭುಜ ಹಾಗೂಎಡಕಾಲಿಗೆ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 98/2022  ಕಲಂ:. 341,323,324,504,506.355,109     ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ ‌

  • ಕಾಪು: ಪಿರ್ಯಾದಿ ಪ್ರವೀಣ ಇವರ ತಂದೆ ಶಂಕರ ಮರಕಾಲ (77) ರವರು ಹಾಗೂ ತಾಯಿ ಶಾರದರವರು ಪಿರ್ಯಾದಿದಾರರ ತಮ್ಮ ರಾಘವೇಂದ್ರರವರ ಮನೆ ಸಂಪಿಗೆನಗರದಲ್ಲಿ ವಾಸಮಾಡಿಕೊಂಡಿದ್ದು ತಂದೆ ಶಂಕರ ಮರಕಾಲ ರವರು ಸುಮಾರು 40 ವರ್ಷಗಳಿಂದ ತೀವ್ರವಾದ ತಲೆ ನೋವಿನಿಂದ ಬಳಲುತ್ತಿದ್ದುಇದಕ್ಕಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ದಿನಾಂಕ 29.09.2022 ರಂದು ಶಂಕರ್ ರವರು ರಾತ್ರಿ 9:30 ಗಂಟೆಗೆ ಊಟ ಮಾಡಿ ಮಲಗಿದ್ದು ಬೆಳಿಗ್ಗೆ 5:45 ಗಂಟೆಗೆ ಪಿರ್ಯಾದಿದಾರರ ತಾಯಿ ಎದ್ದು ನೋಡುವಾಗ ಶಂಕರ ಮರಕಾಲ ರವರು ಮನೆಯ ಒಳಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಯು.ಡಿ.ಆರ್ 29/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 30-09-2022 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080