ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಗೀತಾ ಬೇಲಿ (45), ಗಂಡ: ಶ್ರೀಕಾಂತ  ಭೀಮಪ್ಪ  ಬೇಲಿ, ವಾಸ: ವಾರ್ಡ್ ನಂ:4, ರಂಗನಾಥ  ನಗರ,  ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆ ಇವರ ಗಂಡ  ಉಡುಪಿ ಸಾಯಿರಾಧ ಡೆವಲಪರ್ಸ್ ನಲ್ಲಿ  ಇಂಜಿನೀಯರ್ ಆಗಿ ಪಡುಬಿದ್ರಿ-ಕಾರ್ಕಳ ರಸ್ತೆ ಬದಿಯ  ಕಾಮಗಾರಿ ನಡೆಯುವಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 24/09/2022 ರಂದು ಸಂಜೆ 17:30 ಗಂಟೆಗೆ ಪಿರ್ಯಾದಿದಾರರ ಗಂಡ ಶ್ರೀಕಾಂತ ಬೀಮಪ್ಪ ಬೇಲಿ ಅವರೊಂದಿಗೆ ಕೆಲಸ ಮಾಡುವ ರಂಜಾನ್, ಹಿತೇಶ್,ಅಪ್ಪಾರಾವ್ ಮತ್ತು ಅನ್ರೂಲ್ ಎಂಬುವವರೊಂದಿಗೆ ಕಾರ್ಕಳ-ಪಡುಬಿದ್ರಿ ರಸ್ತೆಯ ಸಾಯಿರಾಧ ಡೆವಲಪರ್ಸ್‌ನ ರಸ್ತೆಯ ಎದುರು ದಕ್ಷಿಣ ಬದಿಯಲ್ಲಿರುವ ಹೊಟೇಲ್‌ನಲ್ಲಿ ಚಹಾ ಕುಡಿದು ಹೊಟೇಲ್ ಎದುರು ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿರುವಾಗ  ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ  KA-18-EB-6304 ನೇ ಮೋಟಾರ್ ಸೈಕಲ್‌ನ್ನು ಅದರ ಸವಾರ ಪ್ರತೀಶ್ ಸಹಸವಾರ ರಾಕೇಶ್ ಶೆಟ್ಟಿ ಯವರೊಂದಿಗೆ  ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಗಂಡ ಮತ್ತು  ಅಪ್ಪಾರಾವ್  ರವರಿಗೆ  ಡಿಕ್ಕಿಹೊಡೆದ ಪರಿಣಾಮ ಅವರು ಹಾಗೂ ಬೈಕ್ ಸವಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಗಂಡನಿಗೆ ತಲೆಗೆ ಗಾಯ ಮತ್ತು ಎಡಕೈ ಮೂಳೆ ಮುರಿತ ಹಾಗೂ ಮೈಕೈಗೆ ರಕ್ತಗಾಯ ವಾಗಿರುತ್ತದೆ.  ಅಪ್ಪಾರಾವ್‌ರವರಿಗೆ  ತಲೆಗೆ  ಮತ್ತು ಕಿವಿ, ಕಣ್ಣಿನ ಬಳಿ ಹಾಗೂ ಹಿಂಭಾಗ ಗಾಯವಾಗಿರುವುದಲ್ಲದೇ ಬೈಕ್ ಸವಾರರಿಗೂ ಕೂಡ ಗಾಯವಾಗಿರುತ್ತದೆ. ಅಪ್ಪಾರಾವ್‌ರವರು ಆದರ್ಶ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದಿದ್ದು, ಪಿರ್ಯಾದಿದಾರರ ಗಂಡ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 120/2022 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ  26/.0/9/2022  ರಂದು 12:30 ಗಂಟೆಗೆ  ಪಿರ್ಯಾದಿದಾರರಾದ ಕೇಶವ  ಆಚಾರ್ಯ   (36),  ತಂದೆ: ಗಣಪಯ್ಯ  ಆಚಾರ್ಯ, ವಾಸ: ಮೂಡಬೆಟ್ಟು  ತೊಂಬತ್ತು ಹೆಂಗವಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು  ಕುಂದಾಪುರ  ತಾಲೂಕಿನ  ಹೆಂಗವಳ್ಳಿ  ಗ್ರಾಮದ  ಹೆಂಗವಳ್ಳಿ ಸೊಸೈಟಿಯ  ಎದುರುಗಡೆ   KA-20-EM- 3138 ನೇ ನಂಬ್ರದ  ಮೋಟಾರ್ ಸೈಕಲ್  ಚಲಾಯಿಸಿಕೊಂಡು ಹಣೆಜೆಡ್ಡು ಎಂಬಲ್ಲಿದ ಹೆಂಗವಳ್ಳಿ  ಕಡೆಗೆ  ಬರುತ್ತಿರುವಾಗ ಆರೋಪಿ KL-13-G- 3493 ಜೀಪನ್ನು  ಹೆಂಗವಳ್ಳಿ ಸೊಸೈಟಿ ಕಡೆಯಿಂದ ಅತೀ ವೇಗ  ಹಾಗೂ ಅಜಾಗರೂಕತೆಯಿಂದ  ಒಮ್ಮೆಲೇ  ಮುಖ್ಯ  ರಸ್ತೆಯ  ಕಡೆಗೆ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು   ಚಲಾಯಿಸಿಕೊಂಡು  ಬರುತ್ತಿದ್ದ  ಮೋಟಾರ್  ಸೈಕಲ್‌‌ಗೆ  ಡಿಕ್ಕಿ ಹೊಡೆದ  ಪರಿಣಾಮ  ಪಿರ್ಯಾದಿದಾರರು   ಮೋಟಾರ್  ಸೈಕಲ್  ಸಮೇತ  ರಸ್ತೆಯ  ಮೇಲೆ ಬಿದ್ದು ಗಾಯಗೊಂಡಿರುತ್ತಾರೆ. ಗಾಯಗೊಂಡ ಪಿರ್ಯಾದಿದಾರರನ್ನು  ಮಣಿಪಾಲ  ಕೆ.ಎಮ್.ಸಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದು, ಅಲ್ಲಿ  ಆತನ  ಬಲಕೈ ತೋಳಿನ ಬಳಿ  ಮೂಳೆ  ಮುರಿತದ  ಗಾಯವಾಗಿದೆ ಎಂದು ತಿಳಿಸಿ  ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 97/2022  ಕಲಂ: 279,338 ಐಪಿಸಿ ಮತ್ತು 134(B)  ಮೊ.ವಾ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 28/09/2022  ರಂದು  ಬೆಳಿಗ್ಗೆ  9:00 ಗಂಟೆಗೆ, ಕುಂದಾಪುರ  ತಾಲೂಕಿನ ಗುಲ್ವಾಡಿ ಗ್ರಾಮದ ಉದಯನಗರ ಎಂಬಲ್ಲಿ ಕಾಂಕ್ರೀಟ್‌ ರಸ್ತೆಯಲ್ಲಿ ಆಪಾದಿತ ಪ್ರಕಾಶ ಪೂಜಾರಿ  KA-20-ER-7112ನೇ ಬೈಕನ್ನು ಗುಲ್ವಾಡಿ ಕಡೆಯಿಂದ ಮಾವಿನಕಟ್ಟೆ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು ಬಂದು, ಎದುರುಗಡೆಯಿಂದ ಬಂದ ಶಾಲಾ ವಾಹನಕ್ಕೆ ಜಾಗ ನೀಡಲು ಬೈಕನ್ನು ರಸ್ತೆಯ ಬದಿಗೆ ಚಲಾಯಿಸಿದಾಗ  ಬೈಕ್‌ ಸ್ಕಿಡ್‌ ಆಗಿ ಕಾಂಕ್ರೀಟ್ ರಸ್ತೆಯಲ್ಲಿ ಬೈಕ್ ಸಮೇತ ಬಿದ್ದು, ತಲೆಗೆ ಒಳ ಜಖಂ ಉಂಟಾಗಿ ಸ್ಥಳೀಯ ಕ್ಲಿನಿಕ್‌ ‌ಹಾಗೂ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ. ಸಿ ಆಸ್ಪತ್ರೆ ತುರ್ತು  ಘಟಕದಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 102/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಉಡುಪಿ: ಪಿರ್ಯಾದಿದಾರರಾದ ಕೃಷ್ಣ ನಾಯ್ಕ್ (31),    ತಂದೆ: ದಿ. ಗಣೇಶ್ ನಾಯ್ಕ್, ವಾಸ: 8 ನೇ ಕ್ರಾಸ್, ಇಂದಿರಾನಗರ, ಕುಕ್ಕಿಕಟ್ಟೆ76 ನೇ ಬಡಗುಬೆಟ್ಟು ಗ್ರಾಮ , ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಅಣ್ಣ ರಾಘವೇಂದ್ರ ನಾಯ್ಕ್ ದಿನಾಂಕ 27/09/2022 ರಂದು ಕೊರಂಗ್ರಪಾಡಿ ಗ್ರಾಮದ ಡಯಾನ ಟಾಕೀಸ್ ಬಳಿ ರಸ್ತೆ ದಾಟುತ್ತಿರುವಾಗ ರಾತ್ರಿ 8:30 ಗಂಟೆಗೆ ಡಯಾನ ಕಡೆಯಿಂದ ಕುಕ್ಕಿಕಟ್ಟೆ ಕಡೆಗೆ KA-20-EX-8564 ನೇ ಸ್ಕೂಟರ್ ಸವಾರ ಹಸನ್ ಎಂಬಾತನು ತಾನು ಸವಾರಿ ಮಾಡುತ್ತಿದ್ದ ಸ್ಕೂಟರ್‌ನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಅಣ್ಣ ರಾಘವೇಂದ್ರ ನಾಯ್ಕ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಅಣ್ಣ ರಾಘವೇಂದ್ರ ನಾಯ್ಕ್ ರಸ್ತೆಗೆ ಬಿದ್ದು, ತುಟಿಗೆ ರಕ್ತ ಗಾಯ ಮತ್ತು ಕಾಲಿಗೆ ರಕ್ತಗಾಯವಾಗಿದ್ದು, ಅಲ್ಲದೇ ನನ್ನ ಹಿಂಬದಿ ತಲೆಗೆ ಗಾಯವಾಗಿ ಚಿಕಿತ್ಸೆಯ ಬಗ್ಗೆಉಡುಪಿ ನ್ಯೂಸಿಟಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆ.ಎಮ್.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2022 ಕಲಂ: 279, 338, ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .   

ಇತರ ಪ್ರಕರಣ

  • ಉಡುಪಿ: ದಿನಾಂಕ 28/09/2022 ರಂದು ಮಂಜುನಾಥ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರಿಗೆ ಉಡುಪಿ ತಾಲೂಕು, ಹೆರ್ಗ ಗ್ರಾಮದ ಸರಳಬೆಟ್ಟು ಕೊಡಂಗೆಕಟ್ಟೆ ಬಳಿ, ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಮನುಕೃಷ್ಣನ್ (21) ಎಂಬಾತನನ್ನು ಮೆಡಿಕಲ್ ತಪಾಸಣೆಗೊಳಪಡಿಸಿದ್ದು,  ದಿನಾಂಕ 29/09/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಮನುಕೃಷ್ಣನ್‌ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2022  ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 28/09/2022 ರಂದು ಮಂಜುನಾಥ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರಿಗೆ ಉಡುಪಿ ತಾಲೂಕು, ಹೆರ್ಗ ಗ್ರಾಮದ ಸರಳಬೆಟ್ಟು ಕೊಡಂಗೆಕಟ್ಟೆ ಬಳಿ, ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ವಿಷ್ಣು ಬಾಬುರಾಜ್ (20) ಎಂಬಾತನನ್ನು ಮೆಡಿಕಲ್ ತಪಾಸಣೆಗೊಳಪಡಿಸಿದ್ದು,  ದಿನಾಂಕ 29/09/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ವಿಷ್ಣು ಬಾಬುರಾಜ್ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 77/2022  ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 28/09/2022 ರಂದು ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಮಾಹಿತಿಯ ಮೇರೆಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಯಶ್‌ ಶರ್ಮಾ(19) ಎಂಬಾತನನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು , ವೈದ್ಯಾಧಿಕಾರಿಗಳು ದಿನಾಂಕ 29/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 138/2022 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 28/09/2022 ರಂದು ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಮಾಹಿತಿಯ ಮೇರೆಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಪ್ರಥಮೇಶ್‌ ಬಿ. ಪೈ (20) ಎಂಬಾತನನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು , ವೈದ್ಯಾಧಿಕಾರಿಗಳು ದಿನಾಂಕ 29/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 139/2022 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 28/09/2022 ರಂದು ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಮಾಹಿತಿಯ ಮೇರೆಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ರೋಹನ್‌ ಖ್ಯಾನಿ (20) ಎಂಬಾತನನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು , ವೈದ್ಯಾಧಿಕಾರಿಗಳು ದಿನಾಂಕ 29/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 140/2022 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 28/09/2022 ರಂದು ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಮಾಹಿತಿಯ ಮೇರೆಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಯಶ್‌ ಮಯೂರ್‌ ದೋಶಿ (20) ಎಂಬಾತನನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು , ವೈದ್ಯಾಧಿಕಾರಿಗಳು ದಿನಾಂಕ 29/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 141/2022 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 28/09/2022 ರಂದು ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಮಾಹಿತಿಯ ಮೇರೆಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಯಶ್‌ ಇಶ್ರಿತ್‌ ತಿನ್ಡೇವಾಲ್‌ (20) ಎಂಬಾತನನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು , ವೈದ್ಯಾಧಿಕಾರಿಗಳು ದಿನಾಂಕ 29/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 142/2022 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 28/09/2022 ರಂದು ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಮಾಹಿತಿಯ ಮೇರೆಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಕೊಮ್ಮುರಿ ಸಿದ್ದಿ ಸುಹಾಸ್‌ (20)  ಎಂಬಾತನನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು , ವೈದ್ಯಾಧಿಕಾರಿಗಳು ದಿನಾಂಕ 29/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 143/2022 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 28/09/2022 ರಂದು ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಮಾಹಿತಿಯ ಮೇರೆಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಪ್ರನೀತ್‌ ನರಪರಾಜು (21) ಎಂಬಾತನನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು , ವೈದ್ಯಾಧಿಕಾರಿಗಳು ದಿನಾಂಕ 29/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 144/2022 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 28/09/2022 ರಂದು ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಮಾಹಿತಿಯ ಮೇರೆಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಏಕಾನ್ಷ್‌ ರೋಹಿತ್‌ ಅಗರ್‌ವಾಲ್‌ (21) ಎಂಬಾತನನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು , ವೈದ್ಯಾಧಿಕಾರಿಗಳು ದಿನಾಂಕ 29/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 145/2022 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 28/09/2022 ರಂದು ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಮಾಹಿತಿಯ ಮೇರೆಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಆದರ್ಶ್‌ ಮೋಹನ್‌ (21) ಎಂಬಾತನನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು , ವೈದ್ಯಾಧಿಕಾರಿಗಳು ದಿನಾಂಕ 29/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 146/2022 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಮಣಿಪಾಲ: ದಿನಾಂಕ 28/09/2022 ರಂದು ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಮಾಹಿತಿಯ ಮೇರೆಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ವೇದಾಂತ್‌ ಶೆಟ್ಟಿ (20) ಎಂಬಾತನನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು , ವೈದ್ಯಾಧಿಕಾರಿಗಳು ದಿನಾಂಕ 29/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 147/2022 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಮಣಿಪಾಲ: ದಿನಾಂಕ 28/09/2022 ರಂದು ಮಣಿಪಾಲ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದೊರೆತ ಮಾಹಿತಿಯ ಮೇರೆಗೆ  ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಷಬ್‌ಜೋತ್‌ ಸಂಧು (21) ಎಂಬಾತನನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು , ವೈದ್ಯಾಧಿಕಾರಿಗಳು ದಿನಾಂಕ 29/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 148/2022 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಶಾಹಿನಾ (33), ತಂದೆ: ಅಕ್ಬರ್, ವಾಸ: ಇಂದಿರಾ ನಗರ 5 ಸೆಂಟ್ಸ ವಾರಂಬಳ್ಳಿ ಬ್ರಹ್ಮಾವರ ತಾಲೂಕು ಇವರ ತಾಯಿ ಅವಮ್ಮ ಅಚ್ಲಾಡಿಯ ಗಾಣೀಗರ ಬೆಟ್ಟುವಿನಲ್ಲಿ  ವಾಸವಾಗಿದ್ದು , ದಿನಾಂಕ 28/09/2022 ರಂದು ಪಿರ್ಯಾದಿದಾರರು ತಾಯಿಯನ್ನು ನೋಡಿಕೊಂಡು ಹೋಗಲು ಬಂದವರು ತಾಯಿ ಮನೆಗೆ ಬಂದು ಇದ್ದರು. ದಿನಾಂಕ 29/09/2022 ರಂದು ಮಧ್ಯಾಹ್ನ 1:20 ಗಂಟೆಯ ಸಮಯಕ್ಕೆ  ಪಿರ್ಯಾದಿದಾರರ ಅತ್ತೆಯ ಮಗ ಅನ್ಸಾರ್ ಪಿರ್ಯಾದಿದಾರರ ತಂಗಿಯ ಮಗಳನ್ನು ಮಧುವನ ಅಂಗನವಾಡಿಯಿಂದ  ರಿಕ್ಷಾದಲ್ಲಿ ಕರೆದುಕೊಂಡು ಮನೆಗೆ ಬಂದಾಗ  ಪಿರ್ಯಾದಿದಾರರು  ಮನೆಯ ಸಿಟೌಟ್ ನಲ್ಲಿ ಕುಳಿತಿದ್ದರು ಆ ಸಮಯ ಭಾವ ಉಮ್ಮರ್ ಪಾರೂಕ್ ಹಾಗೂ ಅಕ್ಕ ಸಾಜಿದ್   ಮನೆಯಿಂದ ಹೊರಗೆ ಬಂದರು ಹಾಗೂ ಉಮ್ಮರ್ ಪಾರೂಕ್ ನ ಕೈಯಲ್ಲಿ ಒಂದು ಮರದ ದೊಣ್ಣೆಯನ್ನು ಹಿಡಿದು ಕೊಂಡು  ಬಂದಿದ್ದು ತಾಯಿಯ ಮನೆಯ ಎದುರು ಅಂಗಳಕ್ಕೆ ಬಂದು  ಅನ್ಸಾರಿಗೆ ನೀನು ಯಾಕೆ ಇಲ್ಲಿಗೆ ಬಂದಿದ್ದು ಎಂದು ಅವಾಚ್ಯ ಶಬ್ದಗಳಿಂದ  ಬೈದು  ಆ ವೇಳೆಗೆ ಬೊಬ್ಬೆ ಕೇಳಿ ಪಿರ್ಯಾದಿದಾರರ ತಾಯಿ ಹೊರಗೆ ಬಂದರು. ಉಮ್ಮರ್ ಫಾರೂಕ್  ಅತ್ತೆಯ ಮಗ ಅನ್ಸಾರ್ ನಿಗೆ ಏಕಾಏಕಿ ಮರದ ಸೋಂಟೆಯಿಂದ ಬೆನ್ನಿಗೆ ಕೈಗೆ ಹೊಡೆದರು.  ಆಗ ಪಿರ್ಯಾದಿದಾರರು ಹಾಗೂ ಅವರ ತಾಯಿ ಬಿಡಿಸಲು ಹೋದಾಗ ಪಿರ್ಯಾದಿದಾರರಿಗೂ ಅದೇ ಮರದ ಸೋಂಟೆಯಿಂದ ಹೊಡೆದರು. ಕೈಯನ್ನು ಹಿಡಿದು ಎಳೆದಾಡಿದರು. ಇದರಿಂದ ಪಿರ್ಯಾದಿದಾರರ ಕೈ ಬಾತಿದ್ದು ,ಹಾಗೂ ತಾಯಿಗೂ ಕೈಯಿಂದ ಹಿಡಿದು ಎಳೆದಾಡಿರುತ್ತಾರೆ.ಅಲ್ಲದೆ ಪಿರ್ಯಾದಿದಾರರ ಅಕ್ಕ ಸಾಜಿದಾ ಬಂದು ಕೂದಲನ್ನು ಹಿಡಿದು ಎಳೆದಾಡಿ  ತಾಯಿಗೂ ದೂಡಿ  ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಮುಂದಕ್ಕೆ ಮನೆಗೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂಬುವುದಾಗಿ  ಜೀವ ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 161/2022 ಕಲಂ: 447, 504, 506, 354, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 30-09-2022 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080