ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಅಶೋಕ ಶೆಟ್ಟಿ (52), ತಂದೆ : ದಿ. ಸೀನಾ ಶೆಟ್ಟಿ, ವಾಸ : ಮೂಡಬೆಟ್ಟು ಗುತ್ತು, ಮೂಡಬೆಟ್ಟು ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 28/09/2021 ರಂದು ಸಂಜೆ 3:00 ಗಂಟೆಗೆ ಅಗತ್ಯ ಕೆಲಸದ ಬಗ್ಗೆ ಕಟಪಾಡಿಗೆ ಹೋಗುವಾಗ ಮೂಡಬೆಟ್ಟು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯ ಸಮೀಪ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯ ಮಣ್ಣು  ರಸ್ತೆಯಲ್ಲಿ ಪಿರ್ಯಾದಿದಾರರ ಪರಿಚಯದ ಪುಷ್ಪಾರವರು ನಡೆದುಕೊಂಡು ಹೋಗುತ್ತಿರುವಾಗ ಕಾಪು ಕಡೆಯಿಂದ ಕಟಪಾಡಿ ಕಡೆಗೆ ಮಹಮ್ಮದ್ ಇಮ್ರಾನ ರವರು ತನ್ನ KA-20-EU-7429 ನೇ ಸ್ಕೂಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ಪುಷ್ಪಾ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಪುಷ್ಪಾರವರು ರಸ್ತೆಗೆ ಬಿದ್ದಿದ್ದು, ಅವರ ತಲೆಗೆ ಪೆಟ್ಟಾಗಿ ತೀವೃ ಸ್ವರೂಪದ ಗಾಯವಾಗಿದ್ದು, ಸ್ಕೂಟರ ಸವಾರ ಮಹಮ್ಮದ್ ಇಮ್ರಾನ್ ಹಾಗೂ ಪಿರ್ಯಾದಿದಾರರು ಸೇರಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 154/2021  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶ್ರೀಮತಿ ಶಾಂತ ಬಿ (55), ಗಂಡ; ಶ್ರೀನಿವಾಸ, ವಾಸ; ಸ್ನೇಹಾ ಕ್ಲಿನಿಕ್ ಉಪಕೇಂದ್ರ, ತಗ್ಗರ್ಸೆ ಗ್ರಾಮ, ಬೈಂದೂರು ತಾಲೂಕು ಇವರ ಮಗ ರಕ್ಷತ್ (25) ಇವರು ಕೆಲಸವಿಲ್ಲದೇ ಮನೆಯಲ್ಲಯೇ ಇದ್ದು, ಈ ಬಗ್ಗೆ ಫಿರ್ಯಾದಿದಾರರ ಬಳಿ ಹೇಳಿಕೊಂಡು ಖಿನ್ನತೆ ತೋರಿಸಿಕೊಳ್ಳುತ್ತಿದ್ದವರು. ಈ ಬಗ್ಗೆ ಪಿರ್ಯಾದಿದಾರರು ರಕ್ಷತ್ ಗೆ ತುಂಬಾ ಸಲ ಬುದ್ದಿಮಾತು ಹೇಳಿರುತ್ತಾರೆ. ದಿನಾಂಕ 29/09/2021 ರಂದು ಪಿರ್ಯಾದಿದಾರರು ವಸ್ರೆಗೆ ಕೆಲಸಕ್ಕೆ ಹೋಗಿದ್ದು ಕೆಲಸ ಮಾಡುತ್ತಿರುವ ಸಮಯ ಸಾಯಂಕಾಲ 04:00 ಗಂಟೆಗೆ ಪಿರ್ಯಾದಿದಾರರಿಗೆ ಅವರ ವಸತಿ ಗೃಹದ ಪಕ್ಕದಲ್ಲಿ ವಾಸವಾಗಿರುವ ಗೋಪಾಲಕೃಷರವರು ಕರೆ ಮಾಡಿ ರಕ್ಷತನು ವಸತಿ ಗೃಹದಲ್ಲಿ ನೇಣು  ಬಿಗಿದುಕೊಂಡಿರುವುದಾಗಿ ತಿಳಿಸಿದ್ದು ಪಿರ್ಯಾದಿದಾರರು ಬಂದು ನೋಡಿದಾಗ ರಕ್ಷತನು ಪಿರ್ಯಾದಿದಾರರ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಮಗ ರಕ್ಷತನು ಸುಮಾರು 4 ವರ್ಷಗಳಿಂದ ಯಾವುದೇ ಉದ್ಯೋಗವಿಲ್ಲದೇ ಒಂಟಿಯಾಗಿ ಮನೆಯಲ್ಲಿ ಇದ್ದು ಮಾನಸಿಕ ಖಿನ್ನತೆಗೊಳಗಾಗಿ ವಸತಿ ಗೃಹದಲ್ಲಿ ಯಾರು ಇಲ್ಲದ ಸಮಯ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 39/2021 ಕಲಂ: 174 ಸಿ.ಅರ್.ಪಿ,ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ರಶೀದ್ ಅಬ್ಬಾಸ್ (39), ತಂದೆ: ಅಬ್ಬಾಸ್ ಬ್ಯಾರಿ, ವಾಸ: ಇಂದಿರಾನಗರ, ಕೋಟೆ ಗ್ರಾಮ, ಕಟಪಾಡಿ, ಕಾಪು ಇವರ ಚಿಕ್ಕಮ್ಮ ನೆಬೀಸಾ ರವರ ಮಗ ಮಹಮ್ಮದ್ ಅಶ್ರಫ್ ಬ್ಯಾರಿ ರವರು ತನ್ನ ತಾಯಿ, ಅಜ್ಜಿ ಯವರೊಂದಿಗೆ ವಾಸವಾಗಿದ್ದು ಡ್ರೈವರ್ ಕೆಲಸ ಮಾಡಿಕೊಂಡಿದ್ದು ಅವರು ಶರಾಬು ಕುಡಿಯುವ ಚಟವನ್ನು ಹೊಂದಿದ್ದು ಅವರ ಹೆಂಡತಿ ಜೋಹಾರ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದು ದಿನಾಂಕ 29/09/2021 ರಂದು ಮದ್ಯಾಹ್ನ 1:30 ಗಂಟೆಗೆ ಮಹಮ್ಮದ್ ಅಶ್ರಫ್ ಬ್ಯಾರಿ ರವರ ತಾಯಿ ಸಬೀಸಾ ರವರು ತನ್ನ ಅಕ್ಕನ ಮಗಳ ಮನೆಗೆ ಹೋಗಿದ್ದು ಸಂಜೆ 6:00 ಗಂಟೆಗೆ ಮನೆಗೆ ಬಂದು ನೋಡುವಾಗ ಮಹಮ್ಮದ್ ಅಶ್ರಫ್ ಬ್ಯಾರಿ ಯವರು ಮನೆಯಲ್ಲಿ ಇಲ್ಲದೇ ಇದ್ದು ಹುಡುಕಾಡಿ ಅಡುಗೆ ಮನೆಯಲ್ಲಿ ನೋಡುವಾಗ ಮಹಮ್ಮದ್ ಅಶ್ರಫ್ ಬ್ಯಾರಿ ಅಡುಗೆ ಮನೆಯ ಮಾಡಿನ ಜಂತಿಗೆ ಸೀರೆಯ ತುಂಡನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವುದನ್ನು ನೋಡಿ ಬೊಬ್ಬೆ ಹೊಡೆದಿದ್ದು ಪಿರ್ಯಾದಿದಾರರು ಹಾಗೂ ಊರಿನವರು ಹೋಗಿ ನೋಡುವಾಗ  ಮಹಮ್ಮದ್ ಅಶ್ರಫ್ ಬ್ಯಾರಿ ಅಡುಗೆ ಮನೆಯ ಮಾಡಿನ ಜಂತಿಗೆ ಸೀರೆಯ ತುಂಡನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದು ಪಿರ್ಯಾದಿದಾರರು ಸ್ಥಳೀಯರೊಂದಿಗೆ ಪರೀಕ್ಷಿಸಿದಾಗ  ಮಹಮ್ಮದ್ ಅಶ್ರಫ್ ಬ್ಯಾರಿ ಯವರು ಮೃತ ಪಟ್ಟಿರುವುದಾಗಿ ತಿಳಿದಿದ್ದು ಮಹಮ್ಮದ್ ಅಶ್ರಫ್ ಬ್ಯಾರಿ ಯವರು ಶರಾಬು ಕುಡಿಯವ ಚಟವನ್ನು ಹೊಂದಿದ್ದು ಅಲ್ಲದೇ ಸರಿಯಾಗಿ ಕೆಲಸಕ್ಕೆ ಹೋಗದೇ  ಇದ್ದು ಹೆಂಡತಿ ಮಕ್ಕಳು ಸಹ ದೂರವಿದ್ದುದರಿಂದ ಖಿನ್ನತೆಗೊಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29/09/2021 ರಂದು ಮದ್ಯಾಹ್ನ 1:30 ಗಂಟೆಯಿಂದ ಸಂಜೆ 6:00 ಗಂಟೆಯ ನಡುವಿನ ಸಮಯದಲ್ಲಿ ತನ್ನ ಮನೆಯ ಅಡುಗೆ ಕೋಣೆಯ ಮಾಡಿನ ಜಂತಿಗೆ  ಸೀರೆಯ ತುಂಡನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 34/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-09-2021 10:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080