ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ  29/09/2021 ರಂದು ಸಂಜೆ ಸುಮಾರು 6:30 ಗಂಟೆಗೆ  ಕುಂದಾಪುರ ತಾಲೂಕಿನ  ಕರ್ಕುಂಜಿ ಗ್ರಾಮದ  ನೆಂಪು ಸರಕಾರಿ ಹೈಸ್ಕೂಲ್‌‌ ಬಳಿ, ಎಸ್‌‌‌. ಹೆಚ್ ರಸ್ತೆಯಲ್ಲಿ, ಆಪಾದಿತ ಕೃಷ್ಣ ಪೂಜಾರಿ ಎಂಬವರು KA20-A-9676 ನೇ ಅಟೋರಿಕ್ಷಾವನ್ನು ನೇರಳಕಟ್ಟೆ ಕಡೆಯಿಂದ ನೆಂಪು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ  ಮಾಡಿಕೊಂಡು ರಸ್ತೆಯ ಬಲಬದಿಗೆ ಬಂದು, ನೆಂಪು ಕಡೆಯಿಂದ ನೇರಳಕಟ್ಟೆ ಕಡೆಗೆ ಪಿರ್ಯಾದಿದಾರರಾದ ರಾಜೀವ ಶೆಟ್ಟಿ ಎಂಬವರು ಸವಾರಿ ಮಾಡಿಕೊಂಡು  ಹೋಗುತ್ತಿದ್ದ KA20-EB5467ನೇ  Honda Active ಸ್ಕೂಟರ್‌ ಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿನ ಮುಂಗಾಲು ಗಂಟಿಗೆ ಒಳಜಕಂ, ಬಲ ಕಾಲಿನ ಹೆಬ್ಬೆರಳಿಗೆ ಹಾಗೂ ಬಲ ಕೈಗೆ ಗಾಯವಾಗಿ ವಂಡ್ಸೆ ಕ್ಲಿನಿಕ್‌‌‌‌‌‌‌‌‌ ಬಳಿಕ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ  ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2021 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಸುನೀತಾ.ಕೆ.ಆರ್‌‌ ರವರು  ಠಾಣಾ ಸರಹದ್ದಿನಲ್ಲಿ  ಹಗಲು ರೌಂಡ್ಸ್ ಕರ್ತವ್ಯದ ಬಗ್ಗೆ ಸಮವಸ್ತ್ರದಲ್ಲಿ ಇಲಾಖಾ ವಾಹನದಲ್ಲಿ ಸಿಬ್ಬಂದಿಯವರೊಂದಿಗೆ ಹಗಲು ರೌಂಡ್ಸ್‌‌ ಕರ್ತವ್ಯದಲ್ಲಿರುವಾಗ ದಿನಾಂಕ 30.09.2021 ರಂದು ಬೆಳಿಗ್ಗೆ 11:30 ಗಂಟೆಗೆ ಬ್ರಹ್ಮಾವರ ತಾಲೂಕು, ಉಪ್ಪೂರು ಗ್ರಾಮದ ಅಮ್ಮುಂಜೆಗೆ ಹೋಗುವ ರಸ್ತೆಯ ಕ್ರಾಸ್‌‌ ಬಳಿ ತಲುಪುವಾಗ ಸತೀಶ ನಾಯ್ಕ ಪ್ರಾಯ : 29 ವರ್ಷ ತಂದೆ : ಅಚ್ಚುತ ನಾಯ್ಕ ವಾಸ : ಕೋಟನ್‌ ಬೈಲ್‌, ಕೊಕ್ಕರ್ಣೆ, ಬೈದಬೆಟ್ಟು ಅಂಚೆ, 34 ಕುದಿ ಗ್ರಾಮ, ಬ್ರಹ್ಮಾವರ ತಾಲೂಕು ಎಂಬವರು ಒಂದು ದೊಡ್ಡ ಮರದ ಅಡ್ಡ ತನ್ನ ಇರುವಿಕೆಯನ್ನು ಮರೆಮಾಚಿಕೊಂಡು ನಿಂತುಕೊಂಡಿದ್ದು, ಸಮವಸ್ತ್ರದಲ್ಲಿದ್ದ ಅವರನ್ನು ನೋಡಿ ಅವನು ಅಲ್ಲಿಯೇ ಹಿಂದೆ ಓಡಿ ಹೋಗಲು ಪ್ರಯತ್ನಿಸುತ್ತಿದ್ದು, ಕೂಡಲೇ ಜೀಪನ್ನು ನಿಲ್ಲಿಸಿ ಆತನನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದುಕೊಂಡಿರುವುದಾಗಿದೆ. ಸದ್ರಿ ಪರಿಸರದಲ್ಲಿ ಈ ಹಿಂದೆ ಕಳ್ಳತನವಾಗಿದ್ದು, ಸದ್ರಿ  ವ್ಯಕ್ತಿಯು ಸಾರ್ವಜನಿಕರ ನಡುವೆ ನಿಂತು  ಯಾವುದೋ ಬೇವಾರಂಟು ತಕ್ಷೀರು ಮಾಡುವ ಇರಾದೆಯಿಂದ ಹೊಂಚು ಹಾಕುತ್ತಿದ್ದವನಾಗಿ ಕಂಡು ಬಂದಿದ್ದರಿಂದ ಆತನನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 06/2021 ಕಲಂ: 109 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ : ಫಿರ್ಯಾದಿ ಪ್ರದೀಪ ಇವರ  ಭಾವ ಆನಂದ ಎಂಬವರು ಅಂಚೆ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದು  ದಿನಾಂಕ 29/09/2021 ರಂದು ಸಂಜೆ 07:00 ಗಂಟೆ ಸಮಯಕ್ಕೆ ಸ್ನಾನ ಮಾಡುವಾಗ ಕುಸಿದು ಬಿದ್ದು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಕೂಡಲೇ ಆನಂದರವರನ್ನು ಕುಂದಾಪುರ ನ್ಯೂ ಮೆಡಿಕಲ್ ಗೆ ಸೆಂಟರ್ ಗೆ ಕರೆದುಕೊಂಡು ಹೋದಲ್ಲಿ ವೈಧ್ಯಾಧಿಕಾರಿಯವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆಎಮ್ ಸಿ ಮಣಿಪಾಲಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ದಿನಾಂಕ 29/09/2021 ರಂದು ರಾತ್ರಿ 09:50 ಗಂಟೆಗೆ  ಕೆಎಮ್ ಸಿ ಮಣಿಪಾಲಕ್ಕೆ ಕರೆದುಕೊಂಡು  ಹೋಗಿದ್ದು ಅಲ್ಲಿಯ ವೈದ್ಯರು ಆನಂದ ರವರು ಮೃತ ಪಟ್ಟಿರುವುದಾಗಿ  ತಿಳಿಸಿರುತ್ತಾರೆ  ಆನಂದ ರವರು  ಹೃದಯಾಘಾತ ಅಥವಾ ಇನ್ಯಾವುದೋ ರೀತಿಯ ಅಸೌಖ್ಯದಿಂದ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 27/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಕುಂದಾಪುರ : ಫಿರ್ಯಾದಿ ಆನಂದ ಮೊಗವೀರ ಇವರ ತಂಗಿಯ ಮಗಳು ನೇತ್ರಾವತಿಯು ಹಟ್ಟಿಯಂಗಡಿ ಗ್ರಾಮದ ಸಬ್ಲಾಡಿ ಎಂಬಲ್ಲಿ ಗಂಡ ಮಕ್ಕಳೊಂದಿಗೆ ವಾಸ ಮಾಡಿಕೊಂಡಿದ್ದು, ನೇತ್ರಾವತಿಯ ಮಗಳಾದ ಕುಮಾರಿ ಕಾವ್ಯಾ (11) ಈಕೆಯು ನಿನ್ನೆ ರಾತ್ರಿ ಒಂದೆರಡು ಬಾರಿ ವಾಂತಿ ಮಾಡಿಕೊಂಡಿದ್ದವಳು ದಿನಾಂಕ 30.09.2021 ರಂದು ಬೆಳಿಗ್ಗೆ 09-30 ಗಂಟೆಗೆ ಮನೆಯಲ್ಲಿ ವಾಂತಿ ಮಾಡಿಕೊಂಡು ಅಸ್ವಸ್ಥಳಾದವಳನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಬೆಳಿಗ್ಗೆ 11-30 ಗಂಟೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಕಾವ್ಯಾಳು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈಕೆಯು ಯಾವುದೋ ಅಸೌಖ್ಯದ ಕಾರಣ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 28/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 30-09-2021 06:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080