ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

  • ಮಲ್ಪೆ:  ಪಿರ್ಯಾದಿ ಕುದುರ್ ಸೈಪುಲ್ಲಾ ಇವರು ಹೂಡೆಯ ಮುಆವಿಯಾ ಮಸೀದಿಯ ಅಧ್ಯಕ್ಷರಾಗಿದ್ದು, ಮಸೀದಿಯಲ್ಲಿ ಜಪ್ರುಲ್ಲಾ ಇವರು ಕಾರ್ಯದರ್ಶಿಯಾಗಿರುತ್ತಾರೆ. ಹೂಡೆಯ ಜದೀದ ಮಸೀದಿ ಬಳಿಯ ನಿವಾಸಿಯಾದ ಪೈಜಲ್ ಸುಲೇಮಾನ್ ಎಂಬಾತನು ಮುಆಮಿಯಾ ಮಸೀದಿಯ ಬಳಿ ಖಾಸಗಿ ಜಾಗದಲ್ಲಿ ಶೆಡ್ ಕಟ್ಟಿಕೊಂಡು ಸಣ್ಣ ಮಕ್ಕಳಿಗೆ ಕುರಾನ್ ಬೋಧನೆ  ಮಾಡುತಿದದ್ದು ಅಲ್ಲದೆ ಆತನು ಮುಆವಿಯಾ ಮಸೀದಿಯಲ್ಲಿ ಪಿರ್ಯಾಧಿದಾರರ ಅನುಮತಿ ಇಲ್ಲದೆ 10-15 ವರ್ಷದ ಕೆಳಗಿನ ಮಕ್ಕಳಿಗೆ ಕುರಾನ್ ಕಲಿಸಲು ಪ್ರಾರಂಬಿಸಿದ್ದು ಪಿರ್ಯಾದಿದಾರರು ಆತನಲ್ಲಿ ಮಸೀದಿಯಲ್ಲಿ ಕುರಾನ್ ಕಲಿಸುವುದು ಬೇಡವೆಂದು ಹೇಳಿದ್ದು ಈ ವಿಚಾರವಾಗಿ ಪೈಜಲ್ ಸುಲೇಮಾನ್ ಹಾಗೂ ಪಿರ್ಯಾದಿದಾರರ ಮಧ್ಯ ಮಾತುಕತೆ ಆಗಿರುತ್ತದೆ. ಈ ದಿನ ದಿನಾಂಕ 30-08-2022 ರಂದು ಬೆಳಿಗ್ಗೆ 05:30 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಮುಆವಿಯಾ ಮಸೀದಿಗೆ ಹೋಗಿದ್ದು ಮಸೀದಿಯ ಪ್ರಾರ್ಥನೆ ಮುಗಿದ ಬಳಿಕ ಪೈಜಲ್ ಸುಲೇಮಾನ್ ಮತ್ತು ಆತನ ಅಣ್ಣ ಪಿರ್ಯಾದದಾರರ ಬಳಿ ಬಂದು ವಾಗ್ವಾದಕ್ಕಿಳಿದು ಪಿರ್ಯಾದಿದಾರರು ಮಸೀದಿಯಿಂದ ಹೊರಗೆ ಬಂದಾಗ ಸಮಯ 05-45 ಗಂಟೆಗೆ ಮಸೀದಿಯ ಗೇಟ್ ನ ಬಳಿ ಆರೋಪಿತರಾದ ಪೈಜಲ್ ಸುಲೇಮಾನ್ ಹಾಗೂ ಫಾರೂಕ್ ಸುಲೇಮಾನ್ ಇಬ್ಬರು ಸೇರಿ ಪಿರ್ಯಾದಿದಾರರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಆರೋಪಿತರು ಪಿರ್ಯಾದಿದಾರರಿಗೆ ಏರು ಧ್ವನಿಯಲ್ಲಿ ಮಾತನಾಡಿ ಆರೋಪಿತ ಫಾರೂಕ್ ಸುಲೇಮಾನ್ ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಹೊಡೆದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 73/2022 ಕಲಂ 341, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ಇತರ ಪ್ರಕರಣ

  • ಗಂಗೊಳ್ಳಿ : ದಿನಾಂಕ: 30/08/2022 ರಂದು ಬೆಳಿಗ್ಗಿನ ಜಾವ 5:00 ಗಂಟೆಗೆ ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ ಎ ಕಾಯ್ಕಣಿ ಯವರು ಪೋನ್‌ ಕರೆ ಮಾಡಿ ತ್ರಾಸಿ ಬೀಚ್‌ ನಲ್ಲಿ ಸಮುದ್ರದ ಬದಿಯಲ್ಲಿ ಕೆಲವು ಹಡುಗರು ಕುಳಿತು ಗಾಂಜಾ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದ ಮೇರೆಗೆ ಗಂಗೊಳ್ಳಿ ಠಾಣಾ ಪಿಎಸ್‌ಐ ವಿನಯ ಕೊರ್ಲಹಳ್ಳಿ ರವರು ಸಿಬ್ಬಂದಿಗಳೊಂದಿಗೆ ತ್ರಾಸಿ ಗ್ರಾಮದ ತ್ರಾಸಿ ಬೀಚ್‌ ಬಳಿ 05:15 ಗಂಟೆಗೆ ಹೋಗಿ  ಪರಿಶೀಲಿಸಿದಾಗ 3 ಜನ ಹುಡುಗರು  ಕುಳಿತುಕೊಂಡಿರುವುದು  ಕಂಡು ಬಂದಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1) ಮೊಹಮ್ಮದ್ ಶೆಹೀನ್ ಸಿ.ಹೆಚ್‌, 2) ಕುಬೈದ್ ಅಹಮ್ಮದ್ ಅಬ್ದುಲ್ ಸತ್ತಾರ್, 3) ಮೊಹಮ್ಮದ್ ರಫಾದ್ ಎಂಬುವುದಾಗಿ ತಿಳಿಸಿದ್ದು ಇವರುಗಳು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಿರುವುದರಿಂದ ಇವರುಗಳನ್ನು  ಸಿಬ್ಬಂದಿಯವರೊಂದಿಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ 3 ಜನರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ.  ಈ  ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 83/2022 ಕಲಂ: 27(B) NDPS Act ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 30-08-2022 05:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080