ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ರಾಜು ಮೂಲ್ಯ (49), ತಂದೆ: ದಿ. ತನಿಯಾ ಮೂಲ್ಯ, ವಾಸ: ರಂಗರಾವ್ ತೋಟದ ಬಳಿ, ಪಾಂಗಾಳ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 29/08/2022 ರಂದು ತನ್ನ ಆಟೋ ರಿಕ್ಷಾವನ್ನು ರಾಷ್ಟ್ರೀಯ ಹೆದ್ದಾರಿ 66 ಮಂಗಳೂರು-ಉಡುಪಿ ಏಕಮುಖ ರಸ್ತೆಯಲ್ಲಿ ಕಾಪು ಕಡೆಯಿಂದ ಪಾಂಗಾಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ 19:15 ಗಂಟೆಗೆ ಪಿರ್ಯಾದಿದಾರರ ಎದುರಿನಲ್ಲಿ ಮೋಟಾರ್ ಸೈಕಲ್ ಸವಾರನೊಬ್ಬ ತನ್ನ ಮೋಟಾರ್ ಸೈಕಲ್ ನ್ನು ಅತೀ ವೇಗ & ತೀವ್ರ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ಪಶ್ಚಿಮ ಬದಿಯಲ್ಲಿರುವ ಪಾಂಗಾಳ ಗುಡ್ಡೆ ರಸ್ತೆಯ ಕಡೆಯಿಂದ ಮಂಗಳೂರು-ಉಡುಪಿ ಏಕಮುಖ ರಸ್ತೆಯನ್ನು ದಾಟುತ್ತಿದ್ದ ಸುರೇಶ್ ಶೇರಿಗಾರ್ (50) ರವರಿಗೆ ಡಿಕ್ಕಿ ಹೊಡೆದು, ಮೋಟಾರು ಸೈಕಲ್ ಸವಾರ ತನ್ನ ಮೋಟಾರು ಸೈಕಲ್‌ನ್ನು ನಿಲ್ಲಿಸದೇ ಪರಾರಿಯಾಗಿದ್ದು,  ಪರಿಣಾಮ ಸುರೇಶ್ ಶೇರಿಗಾರ್ ರವರು ರಸ್ತೆಗೆ ಬಿದ್ದು ಅವರ ಎಡಗಣ್ಣಿನ ಭಾಗದ ಬಳಿ ತೀವ್ರ ರಕ್ತ ಗಾಯವಾಗಿದ್ದು, ಪ್ರಜ್ಞೆ ತಪ್ಪಿರುತ್ತದೆ. ಕೂಡಲೇ ಪಿರ್ಯಾದಿದಾರರು ಪಾಂಗಾಳದ ಜಾಯ್ ರವರೊಂದಿಗೆ ಸೇರಿ  ಸುರೇಶ್ ಶೇರಿಗಾರ್ ರವರನ್ನು ಜಾಯ್ ರವರ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ  ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ಅಲ್ಲಿನ ವೈದ್ಯರು ಈಗಾಗಲೇ  ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94/2022 ಕಲಂ: 279, 304(ಎ) ಐಪಿಸಿ ಮತ್ತು ಕಲಂ:134(ಎ&ಬಿ) ಐ.ಎಂ. ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ರಮೇಶ ಮೊಗವೀರ (39), ತಂದೆ: ಗೋವಿಂದ ಮೊಗವೀರ, ವಾಸ: ಮೇಲ್ಮನೆ, ಬಿ.ಸಿ ರೋಡ್, ವಡೇರಹೋಬಳಿ, ಕುಂದಾಪುರ  ಕುಂದಾಪುರ ತಾಲೂಕು ಇವರು ವಡೇರಹೋಬಳಿ ಗ್ರಾಮದ ಬಿ.ಸಿ ರೋಡ್ ಬಳಿಯ ದಿವ್ಯಶ್ರೀ ಕಾಂಪ್ಲೆಕ್ಸ್ ನ ಕೆಳ ಅಂತಸ್ತಿನಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಜನರಲ್ ಸ್ಟೋರ್ ಎನ್ನುವ ದಿನಸಿ ಅಂಗಡಿಯನ್ನು ಹೊಂದಿದ್ದು ದಿನಾಂಕ 28/08/2022 ರಂದು ರಾತ್ರಿ 09:30 ಗಂಟೆಯಿಂದ ದಿನಾಂಕ 29/08/2022 ರಂದು ಬೆಳಿಗ್ಗೆ  06:30 ಗಂಟೆಯ ನಡುವಿನ ಸಮಯ ಯಾರೋ ಕಳ್ಳರು ಅಂಗಡಿ ಶೆಟರ್ ಎದುರು ಇರುವ ಕಬ್ಬಿಣದ ಗ್ರಿಲ್ಸ್ ನ ಬೀಗವನ್ನುಒಡೆದು ನಂತರ  ಅಂಗಡಿಯ ಕಬ್ಬಿಣದ ಶಟರ್ ನ್ನು ಯಾವುದೋ ಆಯುಧದಿಂದ ಮೇಲಕ್ಕೆತ್ತಿ, ಅಂಗಡಿಯ ಒಳಗೆ ಪ್ರವೇಶಿಸಿ ಅಂಗಡಿ ಕೋಣೆಯ  ಕ್ಯಾಶ್ ಕೌಂಟರ್ ನಲ್ಲಿದ್ದ ನಗದು ರೂಪಾಯಿ 70,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94/2022 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಮಟ್ಕಾ ಜುಗಾರಿ ಪ್ರಕರಣ

  • ಕಾಪು:  ದಿನಾಂಕ 29/08/2022 ರಂದು ಶೈಲ ಡಿ ಎಂ,  ಪೊಲೀಸ್ ಉಪನಿರೀಕ್ಷಕರು,  ಕಾಪು ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ  ಕಾಪು ಪೇಟೆಗೆ ಹೊಂದಿಕೊಂಡಂತಿರುವ ಉಳಿಯಾರಗೋಳಿ ಗ್ರಾಮದಲ್ಲಿರುವ  ಸಂದೀಪ್‌ ಎಂಬುವವರ ಹೂವಿನ ಅಂಗಡಿ ಸಮೀಪ   ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ  ಮಾಹಿತಿಯಂತೆ  ದಾಳಿ ನಡೆಸಿದಾಗ ಅಲ್ಲಿ ಹಣ ಕಟ್ಟಲು ಸೇರಿದ್ದ ಸಾರ್ವಜನಿಕರು ಓಡಿ ಹೋಗಿದ್ದು ಮಟ್ಕಾ ಚೀಟಿ ಬರೆಯುತ್ತಿದ್ದ  ವ್ಯಕ್ತಿಯನ್ನು   ಹಿಡಿದು ವಿಚಾರಸಲಾಗಿ ತನ್ನ ಹೆಸರು ಮಹಮ್ಮದ್‌ ಸಾಧಿಕ್‌ (54),  ತಂದೆ :ದಿ. ಅಬ್ಬು ಸಾಹೇಭ್‌,  ವಾಸ: ಅಬ್ಬು ಮಂಜೀಲ್‌, ಕೋಟೆ ರಸ್ತೆ, ಮಲ್ಲಾರು ಗ್ರಾಮ, ಕಾಪು  ತಾಲೂಕು ಉಡುಪಿ ಜಿಲ್ಲೆ ಎಂದು ಹಾಗೂ ತಾನು ಮಟ್ಕಾ ಜೂಜಾಟದಿಂದ ಸಂಗ್ರಹಿಸಿದ ಹಣವನ್ನು ತಾನು ತನ್ನ ಸ್ವಂತ ಲಾಭಕ್ಕಾಗಿ ಬಳಿಸಿಕೊಳ್ಳುವುದಾಗಿ  ತಿಳಿಸಿದ್ದು,   ಆತನ ಕಿಸೆಯಲ್ಲಿ ಮಟ್ಕಾ ಬರೆಯಲು ಬಳಸಿದ ಬಾಲ್ ಪೆನ್-1 ಮತ್ತು ಮಟ್ಕಾ ಚೀಟಿ -01, ನಗದು ರೂಪಾಯಿ  770/- ರೂಪಾಯಿ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 93/2022 ಕಲಂ: 78(i)&(iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 30-08-2022 09:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080