ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ  28/08/2021 ರಂದು  ರಾತ್ರಿ  ಸುಮಾರು 11:00 ಗಂಟೆಗೆ  ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ  ಕುಂಭಾಶಿ ಗ್ರಾಮದ  ಶ್ರೀ ಆನೆಗುಡ್ಡೆ  ದೇವಸ್ಥಾನದ  ಸ್ವಾಗತ  ಗೋಪುರದ ಬಳಿ  ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ, ಆಪಾದಿತ ಪುರುಷೋತ್ತಮ ಎಂಬವರು KA-52-B-1464ನೇ  Tata ಲಾರಿಯನ್ನು ಮಂಗಳೂರು ಕಡೆಯಿಂದ ಗುಲ್ಬರ್ಗ ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ  ಮಾಡಿಕೊಂಡು  ಬಂದು,  ಲಾರಿಯ  ಹಿಂಭಾಗದಲ್ಲಿ ಬರುತ್ತಿದ್ದ ವಾಹನಕ್ಕೆ  ಸೈಡ್‌ಕೊಡಲು ಆಪಾದಿತನು ಲಾರಿಯನ್ನು ಒಮ್ಮೇಲೆ ರಸ್ತೆಯ ಎಡಕ್ಕೆ ನಿರ್ಲಕ್ಷ್ಯತನದಿಂದ ಚಲಾಯಿಸಿದಾಗ ಲಾರಿಯು ಚಾಲಕನ  ನಿಯಂತ್ರಣ  ತಪ್ಪಿ  ರಸ್ತೆಯ  ಎಡಬದಿಯಲ್ಲಿ  ಪಾರ್ಕಿಂಗ್‌ ಲೈಟ್‌ ‌ಹಾಕಿ  ನಿಲ್ಲಿಸಿಕೊಂಡಿದ್ದ KA-14-C-0262  ನೇ ಲಾರಿಗೆ ಹಿಂದಿನಿಂದ ಡಿಕ್ಕಿ  ಹೊಡೆದ ಪರಿಣಾಮ ಎರಡೂ ವಾಹನಗಳು  ಜಖಂಗೊಂಡಿದ್ದು ಹಾಗೂ ಪಿರ್ಯಾದಿದಾರರಾದ ಕಿರಣ್‌ K (28) ತಂದೆ :  ಕೃಷ್ಣಪ್ಪ ಡಿ ವಾಸ:  ಗುಂಡೇನಹಳ್ಳಿ ಗ್ರಾಮ, ಕಳಲಘಟ್ಟ ಅಂಚೆ, ನೆಲಮಂಗಲ  ತಾಲೂಕು & ತ್ಯಾಮಗೊಂಡ್ಲು ಹೋಬಳಿ ಬೆಂಗಳೂರು ಗ್ರಾಮಾಂತರ ಇವರ ಲಾರಿಯಲ್ಲಿದ್ದ  ಕಿಂಗ್‌ಫಿಶರ್‌ ‌ಬಿಯರ್‌‌ ಟಿನ್‌‌ಬಾಕ್ಸ್‌ಗಳು ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ: 279  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸದಾಶಿವ, (44) ತಂದೆ: ತ್ಯಾಂಪ ಕುಲಾಲ್, ವಾಸ: ಮೈತ್ರಿ ನಿವಾಸ, ನೀರೆ ಪಾಲಟ್ಟ, ನೀರೆ ಗ್ರಾಮ, ಕಾರ್ಕಳ ತಾಲೂಕು ಇವರು ಮಣಿಪಾಲದಲ್ಲಿ ಹೊಟೆಲ್‌ನಲ್ಲಿ ಕುಕ್ ಕೆಲಸ ಮಾಡಿಕೊಂಡಿದ್ದು ದಿನಾಂಕ 30/08/2021 ರಂದು  ಬೆಳಿಗ್ಗೆ 06:15 ಗಂಟೆಗೆ ಕೆಲಸಕ್ಕೆ ಹೋಗಿದ್ದು , ಅವರ ಹೆಂಡತಿ ಮನೆ ಕೆಲಸದ ಬಗ್ಗೆ ಬೆಳಿಗ್ಗೆ 09:00 ಗಂಟೆಗೆ ಮನೆಯಿಂದ ಹೋಗಿದ್ದು ಮನೆಯಲ್ಲಿ ಮಕ್ಕಳಾದ ಅನೀಶ್ (19) ಮತ್ತು ಮಗ  ಅನ್ವಿತ್  (16)  ಇಬ್ಬರೇ ಇದ್ದರು. ಮಗ ಅನೀಶ್ (19) ವರ್ಷ ಎಂಬಾತನು ಹಿರಿಯಡ್ಕ ಮೈಟೆಕ್ ಐಟಿಐನಲ್ಲಿ ಅಟೋಮೊಬೈಲ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದು, ಈ ದಿನ ಮಧ್ಯಾಹ್ನ ಪರೀಕ್ಷೆ ಇದ್ದಿರುತ್ತದೆ. ಆತನ ಜೊತೆ ಪರೀಕ್ಷೆಗೆ ಹೋಗಲು ಸಂಬಂಧಿಯಾದ ನೆರೆಮನೆಯ ಆಶಿಶ್ ಬೆಳಿಗ್ಗೆ 10:00 ಗಂಟೆಗೆ ಮತ್ತು 11:00 ಗಂಟೆಗೆ ಫೋನ್  ಮಾಡಿದರೂ ತೆಗೆಯದ ಕಾರಣ ಕೂಡಲೇ  ಮನೆಗೆ ಹೋಗಿ ಬೆಡ್‌ರೂಮಿನ ಬಾಗಿಲು ಬಡಿದರೂ ಬಾಗಿಲು ತೆರೆಯದ ಕಾರಣ ಕಿಟಿಕಿಯಿಂದ ನೋಡಿದಾಗ ಫ್ಯಾನ್‌ಹುಕ್‌ಗೆ ಶಾಲಿನಿಂದ ನೇಣು ಹಾಕಿಕೊಂಡಿರುವುದನ್ನು ನೋಡಿ ಬೆಡ್‌ರೂಮಿನ  ಬಾಗಿಲು ಒಡೆದು ಅನೀಶ್‌ನನ್ನು ಕೆಳಗೆ ಇಳಿಸಿ ಪ್ರಥಮ ಚಿಕಿತ್ಸೆ ಮಾಡಿ ರಿಕ್ಷಾದಲ್ಲಿ ಬೈಲೂರು ಸರಕಾರಿ ಆಸ್ಪತ್ರೆಗೆ 11:30 ಗಂಟೆಗೆ ಕರೆದುಕೊಂಡು ಹೋದಾಗ ಅಲ್ಲಿನ  ವೈದ್ಯರು ಪರೀಕ್ಷಿಸಿ ಆತನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಅನೀಶ್‌ನು  ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 25/2021 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-08-2021 06:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ