ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿ ಎಂ.ಟಿ.ಲೀಲಾನಂದ (44 ವರ್ಷ), ಆಹಾರ ನಿರೀಕ್ಷಕರು,(ಪ್ರಭಾರ), ಬ್ರಹ್ಮಾವರ ತಾಲೂಕು, ರವರಿಗೆ ಬ್ರಹ್ಮಾವರ ಠಾಣಾ ಪಿಎಸ್‌ಐ ರವರು ದಿನಾಂಕ: 29/07/2022 ರಂದು ರಾತ್ರಿ 8-50  ಘಂಟೆ ಸುಮಾರಿಗೆ ಕರೆ ಮಾಡಿ ಬ್ರಹ್ಮಾವರ  ಉಪ್ಪಿನಕೋಟೆ ಫಾರ್ಚೂನ್‌ ಪ್ಲಾಜಾ ಹೋಟೆಲ್‌ ಎದುರು ರಾ. ಹೆ. 66 ರ  ಕುಂದಾಪುರ – ಉಡುಪಿ  ರಸ್ತೆಯಲ್ಲಿ ಅಕ್ರಮವಾಗಿ ಚೀಲದಲ್ಲಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ವಾಹನವನ್ನು ತಡೆದು ನಿಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ ಮೇರೆಗೆ ರಾತ್ರಿ 9-00 ಘಂಟೆಗೆ ಪಿರ್ಯಾದಿದಾರರು ಸ್ಥಳಕ್ಕೆ ಹೋದಾಗ ಬ್ರಹ್ಮಾವರ ಠಾಣಾ ಪಿಎಸ್‌ಐ ರವರು ಹಾಗೂ ಠಾಣಾ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು, ಸ್ಥಳದಲ್ಲಿ ನಿಲ್ಲಿಸಿರುವ KA20AB3661 ನೇ ಬೊಲೆರೋ ವಾಹನದ ಹಿಂಭಾಗದ ಬಾಡಿಯಲ್ಲಿರುವ ಅಕ್ಕಿಯನ್ನು ಪರಿಶೀಲಿಸಿದಾಗ ಅದು ಸಾರ್ವಜನಿಕ ವಿತರಣಾ ಪದ್ದತಿಯಲ್ಲಿ ವಿತರಿಸಿರುವ ಪಡಿತರ  ಅಕ್ಕಿಯಂತೆ ಹೋಲುತ್ತಿರುವುದು ಕಂಡು ದಿರುತ್ತದೆ. ನಂತ್ರ ಸದ್ರಿ ವಾಹನದ ಚಾಲಕನಾದ 1 ನೇ ಆರೋಪಿ ಉಸ್ಮಾನ್‌ ರನ್ನು ವಾಹನದಲ್ಲಿ ಇರುವ ಅಕ್ಕಿಯ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲಾತಿಗಳು ಇರುವುದಿಲ್ಲ ಎಂದು ತಿಳಿಸಿರುತ್ತಾನೆ. ಆತನ ಬಳಿ  ವಾಹನದಲ್ಲಿ ಇರುವ ಈ ಅಕ್ಕಿಯ ಬಗ್ಗೆ ವಿಚಾರಿಸಿದಾಗ ವಾಹನದ ಮಾಲಕರಾದ 2ನೇ ಆರೋಪಿ ಬಾಬುರವರು ತಿಳಿಸಿದಂತೆ ತಾನು ಬೈಂದೂರು ತಾಲೂಕು ಶಿರೂರು ಎಂಬಲ್ಲಿಂದ  3 ನೇ ಆರೋಪಿ ಶರೀಫ್‌ ಎಂಬವರು ವಾಹನಕ್ಕೆ ಅಕ್ಕಿಯನ್ನು ತುಂಬಿಸಿ ಕಳುಹಿಸಿದ್ದನ್ನು 4ನೇ ಆರೋಪಿಯಾದ ಉಪ್ಪೂರಿನ ಅಜಿತ್‌ ಶೆಟ್ಟಿಯವರ ಅಕ್ಕಿ ಮಿಲ್ಲಿಗೆ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ ಬಳಿಕ ಪಿರ್ಯಾದಿದಾರರು ಪಂಚರ ಮುಖೇನ ಬೊಲೆರೋ ವಾಹನದ ಹಿಂಭಾಗದ ಬಾಡಿಯಲ್ಲಿದ್ದ  ತಲಾ 50 ಕೆ. ಜಿ. ತೂಕದ ಬಿಳಿ ಬಣ್ಣದ ಚೀಲದಲ್ಲಿ ತುಂಬಿಸಿರುವ ಒಟ್ಟು ಅಕ್ಕಿ ಚೀಲಗಳು- 70, ಅಂದಾಜು ಮೌಲ್ಯರೂ:77,000/- ಹಾಗೂ KA20AB3661 ನಂಬ್ರದ ಬೊಲೆರೋ ವಾಹನವನ್ನು ಸ್ವಾಧೀನ ಪಡಿಸಿಕೊಂಡು  ಹಾಗೂ 1 ನೇ ಆರೋಪಿಯನ್ನು ಠಾಣಾ ಪಿ. ಎಸ್. ಐ ರವರು  ದಸ್ತಗಿರಿ ಮಾಡಿ, ಮಾಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 128/2022 ಕಲಂ : ಅಗತ್ಯವಸ್ತುಗಳ ಕಾಯ್ದೆ 1955 ಕಲಂ: 3, 5, 6(A), 7  & ಅಗತ್ಯವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ  (ನಿಯಂತ್ರಣ) ಆದೇಶ 2016  ಕ್ಲಾಸ್‌ 3 (2) (3), & 18(1)  ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಮಲ್ಪೆ: ಪಿರ್ಯಾದಿ ಹರ್ಷವರ್ಧನ್ (42) ತಂದೆ: ದಿ ಬೂದು ಪೂಜಾರಿ ಹರ್ಷ ನಿಲಯ, ಹೂಡೆ, ಇವರು ದಿನಾಂಕ; 29.07.2022 ರಂದು ರಾತ್ರಿ 9.40 ಗಂಟೆಗೆ ಮನೆಯಲ್ಲಿ ಇರುವಾಗ ಅರೋಪಿ ಪ್ರಶಾಂತ್ ಕಾಂಚನ್ ಪಿರ್ಯಾದುದಾರರಿಗೆ ಪೋನ್ ಮಾಡಿ ನೀನು ನಿನ್ನ ಸ್ನೇಹಿತರ ಕುಮ್ಮಕ್ಕಿನಿಂದ ನಮ್ಮ ನಾಯಕರ ವಿರುದ್ದ ಬಾರಿ ಅವಹೇಳನಕಾರಿ ಪೋಸ್ಟ್ ಹಾಕುತ್ತಿಯಾ  ಎಂದು ಬೈದು ಈಗ ನೀನು ಎಲ್ಲಿದ್ದಿಯಾ ಎಂದು ಕೇಳಿದಕ್ಕೆ ಪಿರ್ಯಾದುದಾರರು ನಾನು ಮನೆಯಲ್ಲಿ ಇರುವುದಾಗಿ ತಿಳಿಸಿದ್ದು ಅರೋಪಿ ಪ್ರಶಾಂತ್ ಕಾಂಚನ್  ಮತ್ತು ರೋಶನ್ ರವರು ಪಿರ್ಯಾದುದಾರರ ಮನೆಗೆ ರಾತ್ರಿ 10.00 ಗಂಟೆಗೆ ಬಂದು ಪಿರ್ಯಾದುದಾರರನ್ನು ಕರೆದು ಮನೆ ಒಳಗೆ ಅಕ್ರಮ ಪ್ರವೇಶಮಾಡಿ ಅರೋಪಿಗಳು ಪಿರ್ಯಾದುದಾರರಿಗೆ ನೀನು ನಮ್ಮ ನಾಯಕರ ವಿರುದ್ದ ಬಾರಿ ಅವಹೇಳನಕಾರಿ ಪೋಸ್ಟ್ ಹಾಕುತ್ತಿಯಾ  ಎಂದು ಅವಾಚ್ಯ ಶಬ್ದಗಳಿಂದ  ಬೈದು ಕೈಯಿಂದ ಪಿರ್ಯಾದುದಾರರ ಕೆನ್ನೆಗೆ , ಎದೆಗೆ ಹೊಡೆದು ಕಾಲಿನಿಂದ ತುಳಿದು ಕಬ್ಬಿಣದ ರಾಡ್ ತೋರಿಸಿ ಪಿರ್ಯಾದುದಾರರಿಗೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  62/2022 . ಕಲಂ 448,323,504,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣಗಳು

  • ಉಡುಪಿ: ಪಿರ್ಯಾದಿ ಪುನೀತ್ (22) ವರ್ಷ, ತಂದೆ: ಶಂಕರ ಮೂಲ್ಯ, ವಾಸ: ಆದರ್ಶ ಯುವಕ ಮಂಡಲದ ಬಳಿ, ವಾಜಪಾಯಿ ನಗರ ಆದಮಾರು ಎರ್ಮಾಳ್ ರವರು ನೀಡಿದ ದೂರಿನಂತೆ ದಿನಾಂಕ 30/07/2022 ರಂದು ಬೆಳಿಗ್ಗೆ 08:00 ಗಂಟೆಗೆ ಕೊರಂಗ್ರಪಾಡಿ ಗ್ರಾಮದ ಬಲಾಯಿಪಾದೆ ಜಂಕ್ಷನ್ ಬಳಿ ಹಾದು  ಹೋಗಿರುವ ರಾಹೆ-66 ನೇ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಆರೋಪಿ ಮಂಜುನಾಥ್ ಎಂಬಾತನು MH46BF6865ನೇ ಕಂಟೈನರ್ ವಾಹನವನ್ನು ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಟಪಾಡಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20EX2703ನೇ ಸ್ಕೂಟರ್‌ನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಕಂಟೈನರ್ ವಾಹನದ ಮುಂಭಾಗದ ಎಡಬದಿಯ ಚಕ್ರದ ಅಡಿಗೆ ಬಿದ್ದು,ಪಿರ್ಯಾದಿದಾರರ ಬಲಕಾಲಿಗೆ ಗಂಬೀರ ಸ್ವರೂಪದ ಮೂಳೆ ಮುರಿತದ ಜಖಂ ಆಗಿರುತ್ತದೆ. ಈ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಅಫಗಾತಕ್ಕೆ MH46BF6865ನೇ ಕಂಟೈನರ್ ವಾಹನದ ಚಾಲಕ ಮಂಜುನಾಥ್ ರವರ ದುಡುಕುತನ ಮತ್ತು ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌  ಠಾಣೆ ಅಪರಾಧ ಕ್ರಮಾಂಕ 59/2022 ಕಲಂ: 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ: ದಿನಾಂಕ 29/07/2022 ರಂದು ಪಿರ್ಯಾದಿ ಮಂಜುನಾಥ ಪ್ರಾಯ 23 ವರ್ಷ ತಂದೆ: ಕೃಷ್ಣ ಮರಕಾಲ ವಾಸ:ತೋಡು ಕಟ್ಟು ಸಾಲಿಗ್ರಾಮ ಪಾರಂಪಳ್ಳಿ ಇವರು ತನ್ನ KA20ES3180 ಡಿಯೋ ಸ್ಕೂಟಿಯಲ್ಲಿ   ಸಂಜೆ ಉಡುಪಿಗೆ ಹೋಗಿ ವಾಪಾಸ್ಸು ಬರುತ್ತಾ ಕೋಡಿ ಕನ್ಯಾನ ಪಡುಕೆರೆ ರಸ್ತೆಯಲ್ಲಿ  ವಾಪಸ್ಸು ಬರುತ್ತಿರುವಾಗ  ಪಾರಂಪಳ್ಳಿಯ  ಸ್ಂದ ಜಂಕ್ಷನ್  ಹತ್ತಿರ ಇಂಡಿಕೇಟರ್ ಹಾಕಿ  ಮನೆಗೆ ಹೋಗಲು ಸ್ಕೂಟಿಯನ್ನು ತಿರುಗಿಸುವಷ್ಟರಲ್ಲಿ  ಕೋಡಿ ಕನ್ಯಾನ ಪಡುಕೆರೆ ರಸ್ತೆಯಲ್ಲಿ ಕೋಡಿಕನ್ಯಾನ ಕಡೆಯಿಂದ KA20EU5454 ನೇ ಮೊಟಾರ್ ಸೈಕಲ್ ಸವಾರ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟಿಯ ಹಿಂದಿನಿಂದ ಢಿಕ್ಕಿ ಹೊಡೆದಿದ್ದು ಪರಿಣಾಮ ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಪರಿಣಾಮ ಪಿರ್ಯಾದಿದಾರರ ಬಲ ಭುಜಕ್ಕೆ ತರಚಿದ ಹಾಗೂ ಗುದ್ದಿದ ತೀವೃ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 121/2022 ಕಲಂ: 279 338 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಪ್ರಕರಣಗಳು

  • ಮಲ್ಪೆ: ಪಿರ್ಯಾದಿ ಪ್ರಜ್ವಲ್(20)ತಂದೆ: ಕಿಟ್ಟು ಪೂಜಾರಿವಾಸ: 3-20 ಗುರುಜ್ಯೋತಿ, ಕೊಜಕುಳಿ ಇವರ ತಂದೆ ಕಿಟ್ಟು   ಪೂಜಾರಿ   ಪ್ರಾಯ 65  ವರ್ಷ  ಇವರು  ದಿನಾಂಕ 29-07-2022  ರಂದು ಬೆಳಿಗ್ಗೆ  10-00  ಗಂಟೆಗೆ  ತನ್ನ  ಮನೆಯಿಂದ  ಕೆಲಸದ ಬಗ್ಗೆ  ತನ್ನ ಸೈಕಲಿನಲ್ಲಿ  ಹೋಗಿದ್ದು ಬೆಳಿಗ್ಗೆ  11-30  ಗಂಟೆಗೆ  ಹಂಪನಕಟ್ಟೆ ಬಾರ್ ಬಳಿ  ಕಿಟ್ಟು  ಪೂಜಾರಿ ಇದ್ದ  ಬಗ್ಗೆ  ನೆರೆಮನೆಯವರು   ಪಿರ್ಯಾದಿದಾರರ  ತಾಯಿಗೆ ತಿಳಿಸಿರುತ್ತಾರೆ.  ಪಿರ್ಯಾದಿದಾರರ ತಾಯಿ  ಕಿಟ್ಟು ಪೊಜಾರಿರವರ ಮೊಬೈಲ್  ಪೊನ್ ಗೆ  ಕರೆ ಮಾಡಿದಾಗ ಸ್ವೀಚ್ ಆಫ್‌ ಆಗಿರುತ್ತದೆ. ಬಳಿಕ ಪಿರ್ಯಾದಿದಾರರು  ತನ್ನ  ಸ್ನೇಹಿತರ ಜೊತೆ   ಮನೆ  ಸಮೀಪ ಹುಡುಕಾಡಿದ  ಬಳಿಕ   ರಾತ್ರಿ   ಸುಮಾರು 8-30  ಗಂಟೆಗೆ  ಎಡಬೆಟ್ಟು     ರಸ್ತೆಯಿಂದ – ಕೆಳನೇಜಾರ್   ಕಡೆಗೆ  ಹೋಗುವ  ರಸ್ತೆಯಲ್ಲಿ   ಪಿರ್ಯಾದಿದಾರು ಹುಡುಕಾಡುವಾಗ  ದಾರಿಯ  ಹಾಡಿಯ ಬದಿಯಲ್ಲಿ  ಕಿಟ್ಟು ಪೂಜಾರಿ  ರವರ  ಸೈಕಲ್  ನಿಲ್ಲಿಸಿರುವುದನ್ನು    ನೋಡಿ   ಕಾಡಿನ  ಒಳಗೆ  ಹೋಗಿ  ಹುಡುಕಾಡಿದಾಗ  ಕಿಟ್ಟು ಪೂಜಾರಿ ಇವರ  ಚಪ್ಗಲ್ ಮರದ ಕೆಳಗೆ   ಇದ್ದು  ಮೇಲೆ ನೋಡುವಾಗ  ಕಿಟ್ಟು  ಪೂಜಾರಿರವರ  ಮೃತ ದೇಹವು ಕಾಟು ಮರದ ಕೊಂಬೆಗೆ ಲುಂಗಿಯಿಂದ ಕುತ್ತಿಗೆ ನೇಣು ಬಿಗಿದುಕೊಂಡು  ಮೃತ  ಪಟ್ಟಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರ  ತಂದೆ  ತಲೆಯ ನರದ ಸಮಸ್ಥೆಯಿಂದ  ಬಳಲುತಿದ್ದು  ಈ ಬಗ್ಗೆ ಸುಮಾರು 10 ವರ್ಷಗಳಿಂದ  ಉಡುಪಿ ಬಾಳಿಗ ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದಿರುತ್ತಾರೆ. ಕಿಟ್ಟು ಪೂಜಾರಿ  ರವರು  ತಲೆಯ ನರದ ಸಮಸ್ಥೆಯಿಂದ ಬಳಲುತಿದ್ದು ಇದೇ ಕಾರಣದಿಂದ ಜೀವನದಲ್ಲಿ  ಜಿಗುಪ್ಸೆ  ಗೊಂಡು   ದಿನಾಂಕ 29-07-2022 ರಂದುಬೆಳಿಗ್ಗೆ 11-30  ಗಂಟೆಯಿಂದ  ರಾತ್ರಿ 8-30  ಗಂಟೆಯ ಮದ್ಯಾವಧಿಯಲ್ಲಿ  ಕಾಡಿನ  ಒಳಗೆ  ಮರದ ಕೊಂಬೆಗೆ   ತನ್ನ  ಲುಂಗಿಯಿಂದ ಕುತ್ತಿಗೆ  ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌  ಠಾಣಾ ಯು.ಡಿ.ಆರ್ ನಂಬ್ರ  40/2022  ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 30-07-2022 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080