ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 27/09/2021 ರಂದು ಪಿರ್ಯಾದಿದಾರರಾದ ರಮಾಕಾಂತ್ ಭಟ್ ಟಿ.ಎಲ್ (58), ತಂದೆ:: ದಿ. ಲಕ್ಷ್ಮೀನಾರಾಯಣ ಭಟ್, ವಾಸ: ಎಮ್.ಜಿ.ಎಮ್ ಕಾಲೇಜು ರಸ್ತೆ, ಸಂಗಮ್, ಬುಡ್ನಾರು, ವಿಷ್ಣುಮೂರ್ತಿ ನಗರ, 2ನೇ ಮೈನ್, ಕುಂಜಿಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರು ಮನೆಯ ಸೋಲಾರ್ ಲೈಟ್ ನ ಪ್ಯಾನಲ್ ರಿಪೇರಿ ಬಗ್ಗೆ ಬ್ರಹ್ಮಾವರದ ಶ್ರೀ ದುರ್ಗಾ ಇಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ರಿಪೇರಿಗೆ ಕೊಟ್ಟು ವಾಪಾಸ್ಸು ಮನೆಗೆ ಹೋಗಲು ಅವರ KA-20-EL-6529 ನೇ ನಂಬ್ರದ ಟಿವಿಎಸ್ ಜ್ಯುಪಿಟರ್ ಸ್ಕೂಟರ್ ನಲ್ಲಿ ಬ್ರಹ್ಮಾವರದಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಮಧ್ಯಾಹ್ನ 1:15 ಗಂಟೆಗೆ 52 ನೇ ಹೇರೂರು ಗ್ರಾಮದ ದೀಪ್ತಿ ಎಂಟರ್ ಪ್ರೈಸಸ್ ಎದುರು ತಲುಪುವಾಗ ಅವರ ಹಿಂದಿನಿಂದ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಆರೋಪಿ ಮಂಜುನಾಥ ಎಸ್ ಎಂಬುವವರು ಅವರ KA-47-A-7195 ಈಚರ್ ಪ್ಯಾಸೆಂಜರ್ ಮಿನಿ ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ಸ್ಕೂಟರ್‌ನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಎಡಕೆನ್ನೆಗೆ, ಎಡಹಣೆಗೆ ರಕ್ತಗಾಯ, ಬಲಕೆನ್ನಗೆ, ಬೆನ್ನಿಗೆ ತರಚಿದ ಗಾಯ, ತಲೆಯ ಹಿಂಭಾಗಕ್ಕೆ ರಕ್ತಗಾಯ, ಬಲಭುಜ, ಬಲಪಕ್ಕೆಲುಬಿಗೆ ಗುದ್ದಿದ ಒಳನೋವು ಬಲಕಾಲಿನ ಪಾದದ ಮಣಿಗಂಟಿನ ಬಳಿ ತೀವ್ರ ತರಹದ ರಕ್ತಗಾಯವಾಗಿದ್ದು, ಎಡಕಾಲಿನ ಪಾದದ ಹಿಂಭಾಗ ರಕ್ತಗಾಯವಾಗಿರುತ್ತದೆ, ಅವರನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರದ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಗಾಂಧಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ . ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 144/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಪ್ರಸೀನ್ ಜಿ ಪೂಜಾರಿ (52), ತಂದೆ: ದಿ. ಗೋವಿಂದ ಪೂಜಾರಿ, ವಾಸ: ಗರಡಿ ತೋಟ ಹೌಸ್ ಪಡು ಏಣಗುಡ್ಡೆ ಕಟಪಾಡಿ ಇವರು ಮನೆಯಲ್ಲಿರುವಾಗ ಅವರ ಪರಿಚಯದ ಆಸ್ಟೀನ್ ಎಂಬುವವರು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ಏಣಗುಡ್ಡೆ ಗ್ರಾಮದ ಕಜಕೋಡಿ ಪಾಪನಾಶಿನಿ ಹೊಳೆಯ ತೀರದಲ್ಲಿ ಅಪರಿಚಿತ ಮೃತ ಶರೀರ ಇರುವ ಬಗ್ಗೆ ತಿಳಿಸಿದ್ದು ಪಿರ್ಯಾದಿದಾರರು ಕೂಡಲೇ ಸ್ಥಳಕ್ಕೆ ಹೋಗಿ ನೋಡಿದಾಗ ಸುಮಾರು 60-65 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವವಾಗಿದ್ದು, ವ್ಯಕ್ತಿಯು ದಿನಾಂಕ 28/07/2021 ರಿಂದ ದಿನಾಂಕ 29/07/2021 ರ ಮಧ್ಯದ ಅವಧಿಯಲ್ಲಿ ಪಾಪನಾಶಿನಿ ಹೊಳೆಗೆ ಆಕಸ್ಮಿಕವಾಗಿ ಬಿದ್ದು ಅಥವಾ ಜೀವನದಲ್ಲಿ ಜಿಗುಪ್ಸೆಗೊಂಡು ಹೊಳೆಗೆಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ ನಂಬ್ರ 27/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕೋಟ: ದಿನಾಂಕ 29/07/2021 ರಂದು ಮದ್ಯಾಹ್ನ 3:00 ಗಂಟೆಗೆ ಪಿರ್ಯಾದಿದಾರರಾದ ನೀಲಕಂಠ ಕರಬ (73), ತಂದೆ: ದಿ. ಅನಂತಯ್ಯ ಕರಬ, ವಾಸ: ಕರಬರಬೆಟ್ಟು, ನೆಂಚಾರು ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು ಈ ಹಿಂದೆ ವಾಸವಾಗಿದ್ದು ಬೀಗ ಹಾಕಿ ಇಟ್ಟಿದ್ದ ಹಳೆಯ ಮನೆಗೆ ಕೆಲವು ವಸ್ತುಗಳನ್ನು ತರಲು ಹೋದ ಸಮಯದಲ್ಲಿ ಮನೆಯ ಹಿಂಬದಿ ಬಾಗಿಲು ಒಡೆದಿರುವುದು ಕಂಡು ಬಂದಿದ್ದು ಒಳಗೆ ಹೋಗಿ ನೋಡಿದಾಗ ಮನೆಯಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿರುತ್ತದೆ. ನಂತರ ಮನೆಯ ಎಲ್ಲಾ ಭಾಗಗಳನ್ನು ಸೂಕ್ಷ್ಮವಾಗಿ ನೋಡಲಾಗಿ ಮನೆಯಲ್ಲಿರುವ ವಸ್ತುಗಳಾದ 1) ಹಿತ್ತಾಳೆ ಯ ಚಂಬು - 5 ಮೌಲ್ಯ 2,000/- ರೂಪಾಯಿ, 2) ಹಿತ್ತಾಳೆಯ ಕೊಡಪಾನ-15 ಮೌಲ್ಯ 5,000/-. ರೂಪಾಯಿ, 3) ಪೂಜೆಗೆ ಬಳಸುತ್ತಿದ್ದ 10 ಗಂಟೆಗಳು ಮೌಲ್ಯ 3,500/- ರೂಪಾಯಿ, 4) 4 ದೀಪಗಳು ಮೌಲ್ಯ 1,200/- ರೂಪಾಯಿ, 5) ಒಂದು ದೇವರ ಮೂರ್ತಿಯ ಬೆಳ್ಳಿಯ ಕವಚ ಮೌಲ್ಯ 15,000/- ರೂಪಾಯಿ, 6) ಒಂದು ಗ್ರಾಂ ಚಿನ್ನದ ಪದಕ ಅಂದಾಜು ಮೌಲ್ಯ 4,000/- ರೂಪಾಯಿ, 7) 150 ಕೆ.ಜಿ ಯಷ್ಟು ಕಬ್ಬಿಣದ ಗೃಹಪಯೋಗಿ ವಸ್ತುಗಳು ಮೌಲ್ಯ 7,500/- ರೂಪಾಯಿ, ಒಟ್ಟು ಮೌಲ್ಯ 38,200/- ರೂಪಾಯಿಯಾಗಿದ್ದು, ಈ ಎಲ್ಲಾ ವಸ್ತುಗಳು ಕಣ್ಮರೆಯಾಗಿರುವುದು ಕಂಡು ಬಂದಿರುತ್ತದೆ. ವಸ್ತುಗಳನ್ನು ಪಿರ್ಯಾದಿದಾರರು ದಿನಾಂಕ 20/05/2021 ರಂದು ನೋಡಿರುತ್ತಾರೆ. ವಸ್ತುಗಳನ್ನು ಯಾರೋ ಕಳ್ಳರು ದಿನಾಂಕ 20/05/2021 ರಿಂದ 29/07/2021 ರ ಮದ್ಯಾಹ್ನ 3:00 ಗಂಟೆಯ ನಡುವೆ ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 145/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-07-2021 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080