ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಹಿರಿಯಡ್ಕ : ಪಿರ್ಯಾದಿ ಆಶಾ ಇವರ ಗಂಡ ಪದ್ಮಶೇಖರ (37) ರವರಿಗೆ ಸುಮಾರು 8 ವರುಷಗಳ ಹಿಂದೆ ಮಣಿಪಾಲದ ಕೆಎಂಸಿಯಲ್ಲಿ ಹೃದಯದ ಎಂಜೋಗ್ರಾಂ ಚಿಕಿತ್ಸೆ ಆಗಿರುತ್ತದೆ. ದಿನಾಂಕ: 29/07/2021 ರಂದು ಸಂಜೆ ತನ್ನ ಸ್ನೇಹಿತ ಪರ್ಕಳದ ದಯಾನಂದರವರೊಂದಿಗೆ ತನ್ನ ಮನೆಯಲ್ಲಿ ಮಲಗಿದ್ದವರನ್ನು ಪಿರ್ಯಾದಿದಾರರು ಸಂಜೆ 7:00 ಗಂಟೆಗೆ ಊಟ ಮಾಡಲು ಎಬ್ಬಿಸಲು ಹೋದಾಗ ತುಂಭಾ ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ 108 ನೇ ಅ್ಯಂಬುಲೆನ್ಸ್ ನಲ್ಲಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್  ಠಾಣೆ ಯುಡಿಆರ್ ಕ್ರಮಾಂಕ 18/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿ ಮಲ್ಲಿಕಾರ್ಜುನ ರೆಡ್ಡಿ. ಇವರು  Employees Provident Fund Organisation (EPRO) Regional Office Udupi ಯಲ್ಲಿ  Enforcement Officer ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಆರೋಪಿ 1) ರತೀಶ್‌ ಶೆಟ್ಟಿ (46) ತಂದೆ: ವಿಠಲ ಶೆಟ್ಟಿ ವಾಸ: ಕ್ರೊಡಾಶ್ರಮ, ಮಲ್ಪೆ  2) ಪ್ರಕಾಶ್‌ ಅಡಿಗ (49) ತಂದೆ: ಶಂಕರನಾರಾಯಣ ಅಡಿಗ ವಾಸ: ಅಂಬಲ್ಪಾಡಿ, ಉಡುಪಿ 3) ಬೈಲಕೆರೆ ವಿಕ್ರಮ್‌ ರಾವ್‌ (43) ತಂದೆ: ಬೈಲಕೆರೆ ಶ್ಯಾಮರಾವ್‌ ವಾಸ: ಬೈಲಕೆರೆ, ತೆಂಕನಿಡಿಯೂರು ಗ್ರಾಮ ಇವ ರುಗಳು  ಉಡುಪಿ ಟ್ಯಾಕ್ಸಿ ಪ್ರೈವೇಟ್‌ ಲಿಮಿಟೆಡ್‌ ನ ಬೋರ್ಡ್‌ ಆಫ್‌ ಡೈರೆಕ್ಟರ್ಸ್‌ ಆಗಿದ್ದು, ಆರೋಪಿ  1ನೇಯವರು ಅವರ ಹೆಸರಿನಲ್ಲಿ ಪೌರಾಯುಕ್ತ ಉಡುಪಿ ನಗರ ಸಭೆಯಿಂದ ಪರವಾನಿಗೆಯನ್ನು ಪಡೆದು ಆರೋಪಿ 2 ಮತ್ತು 3 ನೇಯವರ ಜೊತೆ ಸೇರಿ ಒಳಸಂಚು ನಡೆಸಿ EPFO ನಿಂದ ಸಿಗುವ ಸವಲತ್ತುಗಳನ್ನು ಉಡುಪಿ ಪರಿಸರದ ಅಸಂಘಟಿತ ವಲಯದ ಆಟೋ ಚಾಲಕರಿಗೆ ಮತ್ತು ಇತರರಿಗೆ ದೊರಕಿಸಿಕೊಡುವುದಾಗಿ ನಂಬಿಸಿ, ಉಡುಪಿ ಟ್ಯಾಕ್ಸಿ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು, ಇದರಲ್ಲಿ 29 ಜನ ನೌಕರರು ಉದ್ಯೋಗದಲ್ಲಿದ್ದಾರೆಂದು ನಂಬಿಸಿ, ಅವರ ಹೆಸರುಗಳನ್ನು ನಮೂದಿಸಿದ್ದು, ಶ್ರಮ ಸುವಿಧ ಪೋರ್ಟಲ್‌ ಜಾಲತಾಣದಲ್ಲಿ ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡಿ ನೊಂದಣಿ ಮಾಡಿಕೊಂಡಿರುತ್ತಾರೆ. ಅಲ್ಲದೆ ಅವರ ಸಂಸ್ಥೆಯು EPFO ನ ಅಧಿಕೃತ ಪ್ರತಿನಿಧಿತವಾದದ್ದು ಎಂದು ಜನರಲ್ಲಿ ತಪ್ಪಾಗಿ ನಂಬಿಕೆ ಮೂಡಿಸಿರುತ್ತಾರೆ. ಈ ಮೂಲಕ ಆರೋಪಿಗಳು 2018 ರಿಂದ 2019 ರ ಅಕ್ಟೋಬರ್‌ ತಿಂಗಳ ವರೆಗೆ ಮಾನ್ಯ ಪ್ರಧಾನ ಮಂತ್ರಿ ರೋಜ್‌ಗಾರ್‌ ಪ್ರೋತ್ಸಾಹ ಯೋಜನೆಯ ಹಣ ಸುಮಾರು ರೂ. 64,952/- ಹಣವನ್ನು ಸದಸ್ಯರಿಂದ ಪಡೆದು EPFO ಹೆಸರಿನಲ್ಲಿ ದುರ್ಲಾಭ ಪಡೆದಿರುತ್ತಾರೆ. ಆರೋಪಿಗಳು EPFO ಎಂಬ ಸರಕಾರಿ ಸಂಸ್ಥೆಯ ಹೆಸರು ಕೆಡಿಸುವ ಉದ್ದೇಶದಿಂದ, ಸ್ವಂತ ಲಾಭ ಪಡೆಯುವುದಕ್ಕಾಗಿ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗುವ ಉದ್ದೇಶದಿಂದ EPFO ಸಂಸ್ಥೆಗೆ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ.ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 105/2021 ಕಲಂ: 406, 417, 420, 465, 468, 471 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 30-07-2021 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080