ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ರವಿ ರಂಜನ್ ಶೆಟ್ಟಿ( 37), ತಂದೆ: ದಿ. ಕುಶಲ್ ಶೆಟ್ಟಿ, ವಾಸ: ಸಾಯಿರಥಿ ನಿವಾಸ , ನೂಜಿನ ಬೈಲ್ , ಪೇತ್ರಿ  , ಚೇರ್ಕಾಡಿ ಗ್ರಾಮ  ಬ್ರಹ್ಮಾವರ ತಾಲೂಕು , ಉಡುಪಿ ಜಿಲ್ಲೆ ಇವರು ದಿನಾಂಕ 28/06/2022 ರಂದು ಹಿರಿಯಡ್ಕದಿಂದ ಕುಕ್ಕೆಹಳ್ಳಿ ಕಡೆಗೆ  ಕುಕ್ಕೆಹಳ್ಳಿ ಬಜೆ ರಸ್ತೆಯಲ್ಲಿ ಬರುತ್ತಿರುವಾಗ ಕುಕ್ಕೆಹಳ್ಳಿ ಗ್ರಾಮದ ಬಿಡಾರಎಂಬಲ್ಲಿ ಎದುರಿನಿಂದ KA-47-M-2197 ಕಾರು ಚಾಲಕ ಮಂಜುನಾಥ ತನ್ನ ಕಾರನ್ನು ಅತೀವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದು 5:30 ಗಂಟೆಗೆ ಕುಕ್ಕೆಹಳ್ಳಿ ಬಿಡಾರ ಎಂಬಲ್ಲಿ ಎದುರಿನಿಂದ ಕುಕ್ಕೆಹಳ್ಳಿ ಕಡೆಯಿಂದ ಬರುತ್ತಿದ್ದ KA-20-EV-1739 ನೇ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರೆ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು ಅವರಿಗೆ ಸೊಂಟಕ್ಕೆ ಹಾಗೂ ತೊಡೆಗಳಿಗೆ ಗುದ್ದಿದ ಒಳಜಖಂ ಅಗಿದ್ದು ಕಾರಿನವರು ಸ್ಕೂಟಿ ಸವಾರೆಯನ್ನು ಮಣಿಪಾಲ ಕೆಎಂಸಿ ಅಸ್ಪತ್ರೆಗೆ ದಾಖಲಿಸಿರುತ್ತಾರೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 33/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ವಿಜಯ ಕುಮಾರ್‌ (29), ತಂದೆ: ಚಂದ, ವಾಸ: ದೀಟಿ ಮಧುಕೊಡ್ಲು, ಕೆರಾಡಿ ಗ್ರಾಮ ಕುಂದಾಪುರ  ತಾಲೂಕು ಇವರು ಕೆರಾಡಿ ಗ್ರಾಮದ ದೀಟಿ ಕೊಗ್ಗಿ ಶೆಡ್ತಿಯವರ ಗದ್ದೆಯನ್ನು ಉಳುಮೆ ಮಾಡಲು ಗೇಣಿ ಪಡೆದುಕೊಂಡು ದಿನಾಂಕ 29/06/2022 ರಂದು ಗದ್ದೆ ಉಳುಮೆ  ಮಾಡಲು ಬೆಳ್ಳಾಲ ನಾರಾಯಣ ಶೆಟ್ಟಿಯವರ ಟ್ರಾಕ್ಟರ್‌ನ್ನು ಅದರ ಚಾಲಕ ಕಾಂತುರಾಜು ರವರು ಬಂದು ಗದ್ದೆ ಉಳುಮೆ ಮಾಡಲು ಟ್ರಾಕ್ಟರ್‌ನ್ನು ಓಡಿಸುತ್ತಾ ಪಿರ್ಯಾದಿದಾರರು ಹಾಗೂ  ನಾರಾಯಣ, ಸಂತೋಷ, ಸೀತು ಮತ್ತು ಅಶ್ವತ್‌ ರವರು ಗದ್ದೆಯಲ್ಲಿ ಇತರ ಕೆಲಸ  ಮಾಡುತ್ತಾ ಮಧ್ಯಾಹ್ನ 2:15 ಗಂಟೆಗೆ  ಎಲ್ಲರೂ ಊಟ ಮಾಡಲು ಕೆಲಸ ನಿಲ್ಲಿಸಿದ್ದು ಕಾಂತರಾಜು ರವರು ಟ್ರಾಕ್ಟರ್‌ನ್ನು ನಿಲ್ಲಿಸಿ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದಾಗ ಅಲ್ಲಿಯೇ ಕುಸಿದು ಬಿದ್ದು ಅಸ್ವಸ್ಥರಾದವರನ್ನು ಪಿರ್ಯಾದಿದಾರರು ಮತ್ತು ಇತರರು ಖಾಸಗಿ ಅಂಬುಲೆನ್ಸ್‌ನಲ್ಲಿ ಚಿಕಿತ್ಸೆಗೆ  ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ  ಸಂಜೆ 4:00 ಗಂಟೆಗೆ  ವೈದ್ಯರು ಪರೀಕ್ಷಿಸಿ  ಚಿಕಿತ್ಸೆಗೆ ಕರೆತರುವ ದಾರಿಯಲ್ಲಿ ಮೃತಪಟ್ಟಿರುತ್ತಾರೆ ಎಂದು ದೃಢೀಕರಿಸಿರುತ್ತಾರೆ.  ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 08/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

  • ಬೈಂದೂರು:  ಪಿರ್ಯಾದಿದಾರರಾದ ಉದಯ (45), ತಂದೆ: ಶೀನ ಪೂಜಾರಿ, ವಾಸ: ಕೆಳಪೇಟೆ, ಸಿದ್ದಾಪುರ , ಋಷಿಕೆರೆ ಕುಂದಾಪುರ ತಾಲೂಕು ಇವರು ಉಪ್ಪುಂದದಲ್ಲಿರುವ ನಿತ್ಯಾನಂದ ಶೇಟ್ ರವರ ಮಾರುತಿ ಗೋಲ್ಡ್  ಜ್ಯುವೆಲ್ಲರ್ಸ ನಲ್ಲಿ  ತನ್ನ ಅಕ್ಕನ ಮಗಳ ಮದುವೆಗೆಂದು  ಕರಿಮಣಿ ಸರ ಹಾಗೂ ಬಳೆಗಳನ್ನು ಮಾಡಿಸುವ ಬಗ್ಗೆ ಮಾರುತಿ ಗೋಲ್ಡ್  ಜ್ಯುವೆಲ್ಲರ್ಸ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ  ಆರೋಪಿತರಾದ  ಗಿರೀಶ್ ಶೇಟ್ ಹಾಗೂ ಆತನ ಸಹೋದರರಾದ ವೆಂಕಟೇಶ್ ಹಾಗೂ ಹರೀಶ್ ರವರಲ್ಲಿ  ದಿನಾಂಕ 18/10/2021 ರಂದು ಹೊಸದಾಗಿ ಕರಿಮಣಿ ಸರ ಮತ್ತು ಬಳೆಗಳನ್ನು ಮಾಡಿಸುವ ಬಗ್ಗೆ ಆರೋಪಿತರಿಗೆ ಪಿರ್ಯಾದಿದಾರರು ಹಳೆಯ ಚಿನ್ನ 35 ಗ್ರಾಂ ತೂಕದ ಕರಿಮಣಿ ಸರ, 12 ಗ್ರಾಂ ತೂಕದ ಚಿನ್ನದ ಚೈನ್ ಹಾಗೂ 16 ಗ್ರಾಂ ತೂಕದ ಎರಡು ಬಳೆಗಳನ್ನು ಮತ್ತು  ಮುಂಗಡವಾಗಿ 45, 000/- ರೂಪಾಯಿ ನಗದು ಹಣವನ್ನು ನೀಡಿದ್ದು, ಪಿರ್ಯಾದಿದಾರರು ಆರೋಪಿಗಳಲ್ಲಿ  ಸ್ವಲ್ಪ ದಿನಗಳು ಕಳೆದ ಬಳಿಕ ಹೊಸತಾಗಿ ಮಾಡಿದ ಕರಿಮಣಿ ಸರ ಮತ್ತು ಬಳೆಗಳನ್ನು ಕೊಡುವಂತೆ ಕೇಳಿದಾಗ ಆರೋಪಿಗಳು ಸ್ವಲ್ಪ ದಿನ ಬಿಟ್ಟು ನೀಡುವುದಾಗಿ ಹೇಳುತ್ತಾ ದಿನಗಳನ್ನು ಮುಂದಕ್ಕೆ ಹಾಕುತ್ತಾ ಬಂದಿದ್ದು, ನಂತರ ಮಾರುತಿ ಗೋಲ್ಡ ಜ್ಯುವೆಲ್ಲರ್ಸ ಗೆ ಹೋದಾಗ  ಆರೋಪಿಗಳು ಇಲ್ಲದೇ ಇದ್ದು ಫೋನ್ ಕರೆ ಮಾಡಿದರೆ ಸ್ವೀಕರಿಸದೇ ಇದ್ದು ಪಿರ್ಯಾದಿದಾರರಿಗೆ  ಹೊಸ ಆಭರಣ ಮಾಡಿ ಕೊಡುವುದಾಗಿ ನಂಬಿಸಿ , ಪಿರ್ಯಾದಿದಾರರಿಂದ  63 ಗ್ರಾಂ ತೂಕದ ಹಳೆಯ ಚಿನ್ನವನ್ನು ಹಾಗೂ ನಗದನ್ನು ಪಡೆದುಕೊಂಡು ಹೊಸ ಆಭರಣವನ್ನು ಮಾಡಿಕೊಡದೇ, ಪಿರ್ಯಾದಿದಾರರು ನಿಡಿದ ಹಳೆಯ ಚಿನ್ನವನ್ನು ಹಾಗೂ ನಗದು ಹಣವನ್ನು ವಾಪಾಸ್ಸು  ನೀಡದೇ ಮೋಸ ಮಾಡಿರುತ್ತಾರೆ. ಆರೋಪಿತರು ಪಿರ್ಯಾದಿದಾರರಂತೆಯೇ ಪ್ರಕಾಶ್ ಎಂ ಪೂಜಾರಿ ಕಂಬದಕೋಣೆ, ಪ್ರಕಾಶ್ ಶೇಟ್ ಕಂಬದಕೋಣೆ,  ಲಕ್ಷ್ಮೀ ಕಾಂತ ಕಂಬದಕೋಣೆ , ಬಿ ಜಿ ಕಮಲೇಶ್ ಬೆಸ್ಕೂರು, ದಿನೇಶ್ ಹಕ್ಲಾಡಿ, ಇಲಿಯಾಸ್ ಮಯ್ಯಾಡಿ ಬೈಂದೂರು, ಲೀಲಾವತಿ ಹೆಬ್ಬಾರ್ ಕಂಬದಕೋಣೆ, ರಮೇಶ್ ರಾವ್ ಕಂಬದಕೋಣೆ, ಮಹಾಬಲ ಆಚಾರ್ಯ ಹೆರಂಜಾಲು, ರಾಘವೇಂದ್ರ ಬಿಜೂರು ಹಾಗೂ ಇತರ ವ್ಯಕ್ತಿಗಳಿಂದ ಹೊಸ ಚಿನ್ನಾಭರಣ ಮಾಡಿ ಕೊಡುತ್ತೇವೆ ಎಂದು ನಂಬಿಸಿ, ಹಳೆಯ ಚಿನ್ನ ಹಾಗೂ ನಗದನ್ನು ಪಡೆದು ಹೊಸ ಚಿನ್ನಾಭರಣವನ್ನು ಮಾಡಿ ಕೊಡದೇ,  ಹಳೆಯ ಚಿನ್ನ ಹಾಗೂ ನಗದನ್ನು ವಾಪಾಸ್ಸು ನೀಡದೇ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 132/2022 ಕಲಂ: 417, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಸುರೇಂದ್ರ ನಾಯ್ಕ (29), ತಂದೆ: ಗೋವಿಂದ ನಾಯ್ಕ, ವಾಸ: ಒಳಮಡಿ ಕುಕ್ಕೆಹಳ್ಳಿ ಗ್ರಾಮ ಉಡುಪಿ ಇವರು ಕುಕ್ಕೆಹಳ್ಳಿ ಒಳಮಡಿಯಲ್ಲಿ ಸರಕಾರದ 8.50 ಸೆಂಟ್ಸ್ ಜಾಗದಲ್ಲಿ 50 ವರ್ಷಗಳಿಂದ ಮನೆ ಮಾಡಿಕೊಂಡು ವಾಸ ಮಾಡಿಕೊಂಡಿರುತ್ತಾರೆ. ಅವರ ಮನೆಯ  ಪಕ್ಕದ  ಸರಕಾರಿ  ಸರ್ವೆ ನಂಬ್ರ 126 ರಲ್ಲಿ ಅವರ  ಸಮುದಾಯದವರು ಸೇರಿ ದಫನ ಮಾಡುವ  ಸ್ಥಳವಾಗಿ  ಕಾರ್ಯಗಳನ್ನು ಮಾಡುತ್ತಾ  ಬಂದಿದ್ದು, ಅಲ್ಲದೆ  2 ವರ್ಷಗಳ ಹಿಂದೆ ಸಮುದಾಯದ  ಸ್ಮಶಾನಕ್ಕೆ ಮೀಸಲಿಡಲು  ಸ್ಥಳೀಯ ಕಂದಾಯ ಇಲಾಖೆ ಮತ್ತು ಸಂಬಂದಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಿರುತ್ತಾರೆ. ದಿನಾಂಕ 29/06/2022 ರಂದು ಮಧ್ಯಾಹ್ನ ಸುಮಾರು 3:00 ಗಂಟೆಗೆ ವಿಶ್ವನಾಥ ಶೆಟ್ಟಿ, ತಂದೆ: ಗೋವಿಂದ ಶೆಟ್ಟಿ ಎಂಬುವವರು ತನ್ನ ಕೈಯಲ್ಲಿ ಪಿಕ್ಕಾಸಿ  ಹಿಡಿದುಕೊಂಡು ಪಿರ್ಯಾದಿದಾರರಿಗೆ ಮತ್ತು ಅವರ ಸಂಬಂಧಿ  ಶಾರದ, ಪ್ರೇಮಾ, ಸುಮಾ, ಅಮ್ಮಣ್ಣಿ ,ಗುಲಾಬಿ ರವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34 /2022  ಕಲಂ:  504, 506 ಐಪಿಸಿ  ಮತ್ತು 3(1-r),3(1-s),SC/ST ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-06-2022 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080