ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಹೇಮಂತ್ ಕುಮಾರ್‌‌(38) ತಂದೆ: ಪುಂಡಲೀಕ ವಾಸ: ಮನೆ ನಮಬ್ರ 1-4 ಇ ಗುಡ್ಡೆಅಂಗಡಿ ಉದ್ಯಾವರ ಗ್ರಾಮ ಉಡುಪಿ ಇವರ ತಾಯಿ ಶ್ರೀಮತಿ ವಸಂತಿ (55) ರವರು ಕಂಟ್ಟಿಂಗೇರಿಯಲ್ಲಿರುವ ಯೂನಿಯನ್ ಬ್ಯಾಂಕ್ ನಲ್ಲಿ ಉದ್ಯೋಗ ಮಾಡಿಕೊಂಡಿದ್ದು ದಿನಾಂಕ 30/06/2022 ರಂದು ಬೆಳಿಗ್ಗೆ 8:30 ಗಂಟೆಗೆ  ಬ್ಯಾಂಕ್‌ಗೆ ಹೋಗಲು ಉದ್ಯಾವರದ ಗುಡ್ಡೆಯಂಗಡಿ ಬಸ್‌ ನಿಲ್ದಾಣದಲ್ಲಿ ಬಸ್ ಗೆ ಕಾಯುತ್ತಿದ್ದಾಗ ಕುಸಿದು ಬಿದ್ದವರನ್ನು ಸ್ಥಳೀಯ ರಿಕ್ಷಾದವರು ಒಂದು ರಿಕ್ಷಾದಲ್ಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ  ಈ ದಿನ ಬೆಳಿಗ್ಗೆ 11:20 ಗಂಟೆಗೆ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಹೇಮಂತ್‌ ಕುಮಾರ್ ರವರ ತಾಯಿ ವಸಂತಿ ರವರಿಗೆ ಮಧುಮೇಹದ ಖಾಯಿಲೆ ಇದ್ದು ಒಂದೂವರೆ ವರ್ಷದ ಮೊದಲು ಎದೆ ಬಡಿತದ ಸಮಸ್ಯೆ ಕಾಣಿಸಿಕೊಂಡಿದ್ದು ಈ ಬಗ್ಗೆ ಉಡುಪಿ ಮಿತ್ರಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ವಸಂತಿಯವರು ಹೃದಯಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 20/2022 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ವಿಕೇಶ್ ಶೆಟ್ಟಿ (25) ತಂದೆ: ಗೋಪಾಲ ಶೆಟ್ಟಿ ವಾಸ: ಮಡುಂಬು ಕೊಲ್ಲಂಗಾಲ್ ಹೌಸ್ ಇನ್ನಂಜೆ ಅಂಚೆ ಮತ್ತು ಗ್ರಾಮ ಕಾಪು ಇವರ ತಂಗಿ ಶರ್ಮಿಳಾ (22) ರವರು ಸುಮಾರು 8 ತಿಂಗಳಿನಿಂದ ಬೆಂಗಳೂರಿನಲ್ಲಿ ಸಾಫ್ಟ್ ವೇರ್‌ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಕೆ ಸುಮಾರು ಒಂದು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿರುವ ವಿಚಾರ ಆಕೆಯ ಸಹದ್ಯೋಗಿಗಳಿಂದ ವಿಕೇಶ್ ಶೆಟ್ಟಿ ರವರಿಗೆ ತಿಳಿದು ಬಂದಿರುತ್ತದೆ. ಸುಮಾರು 3 ದಿನಗಳಿಂದ ಆಕೆ ತಾನು ವಾಸವಿದ್ದ ಪಿಜಿಯಿಂದ ಯಾರಿಗೂ ಹೇಳದೇ ಕುಣಿಗಲ್‌ಗೆ ಹೋಗಿರುವ ವಿಚಾರ ಪಿರ್ಯಾದಿದಾರಿಗೆ ಆಕೆಯ ಸ್ನೇಹಿತರು ತಿಳಿಸಿದ್ದು ಈ ಬಗ್ಗೆ ವಿಕೇಶ್ ಶೆಟ್ಟಿ ರವರು ವಾಪಾಸು ಬೆಂಗಳೂರಿಗೆ ಹೊಗುವಂತೆ ಶರ್ಮಿಳಾಗೆ ಪೋನ್ ಕರೆ ಮಾಡಿ ತಿಳಿಸಿರುತ್ತಾರೆ. ದಿನಾಂಕ 28/06/2022 ರಂದು ಶರ್ಮಿಳಾಳು ವಿಕೇಶ್ ಶೆಟ್ಟಿ ರವರಿಗೆ ಕರೆಮಾಡಿ ತಾನು ಒಂದು ತಿಂಗಳ ಅವಧಿಗೆ ಮನೆಗೆ ಬಂದು ಹೋಗುವಂತೆ ತಿಳಿಸಿದ್ದು ಅದರಂತೆ ದಿನಾಂಕ 30/06/2022 ರಂದು ಬೆಳಿಗ್ಗೆ 7:45 ಗಂಟೆಗೆ ಮನೆಗೆ ಬಂದಿದ್ದು ತನ್ನ ಲಗೇಜನ್ನು ಮನೆಯ ಒಳಗೆ ಇಟ್ಟು ಶೌಚಾಲಯಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ತುಂಬಾ ಹೊತ್ತಾದರೂ ವಾಪಾಸು ಬಾರದೇ ಇದ್ದ ಕಾರಣ ವಿಕೇಶ್ ಶೆಟ್ಟಿ ರವರು ನೆರೆಕರೆಯ ನಿವಾಸಿಗಳೊಂದಿಗೆ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದ್ದಲ್ಲಿ ಎಲ್ಲಿಯೂ ಪತ್ತೆಯಾಗದ ಕಾರಣ ಮನೆಯ ಪಕ್ಕದ ಬಾವಿಯಲ್ಲಿ ಬಿದ್ದಿರಬಹುದು ಎಂದು ಅನುಮಾನಗೊಂಡು ಸುರೇಶ ಎಂಬವರ ಮುಖಾಂತರ ಪಾತಾಳ ಗರುಡವನ್ನು ಬಾವಿಗೆ ಹಾಕಿ ಹುಡುಕಿದಾಗ ಶರ್ಮಿಳಾ ದೇಹವು ಮೇಲೆ ಬಂದಿದ್ದು ಆಕೆಯು ಮೃತಪಟ್ಟಿರುವುದಾಗಿ ಕಂಡು ಬಂತು. ಶರ್ಮಿಳಾಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30/06/2022 ರಂದು ಬೆಳಿಗ್ಗೆ 7:45 ಗಂಟೆಯಿಂದ ಬೆಳಿಗ್ಗೆ 10:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 21/2022 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕುಂದಾಪುರ: ಪಿರ್ಯಾದಿದಾರರಾದ ಉದಯ ದೇವಾಡಿಗ(40) ತಂದೆ: ದಿ ಶೀನ ದೇವಾಡಿಗ, ವಾಸ: ಚೀಪಾನ್ ಬೆಟ್ಟು, ಬೀಜಾಡಿ ಗ್ರಾಮ, ಕೋಟೆಶ್ವರ ಅಂಚೆ, ಕುಂದಾಪುರ ಇವರ ಅಣ್ಣ ಸುರೇಶ (43) ಇವರು ಅವಿವಾಹಿತರಾಗಿದ್ದು ಮನೆಯಲ್ಲಿಯೇ ಟೈಲರಿಂಗ್ ವೃತ್ತಿ ಮಾಡಿಕೊಂಡಿರುತ್ತಾರೆ. ಮೃತರು 15 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ದಿನಾಂಕ 30/06/2022 ರಂದು ಬೆಳಿಗ್ಗೆ 09:30 ಗಂಟೆಯಿಂದ ದಿನಾಂಕ 30/06/2022 ರಂದು ಬೆಳಿಗ್ಗೆ 10:00 ಗಂಟೆಯ ನಡುವೆ ಉದಯ ದೇವಾಡಿಗ ರವರ ಮನೆಯಲ್ಲಿ ಯಾರೂ ಇಲ್ಲದ ಸಮಯ ಇವರ ಅಣ್ಣ ಸುರೇಶನು ಮಾನಸಿಕ ಖಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಬೆಡ್‌ರೂಂ ಕೋಣೆಯ ಮಹಡಿಯ ಮರದ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಮೃತರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 21/2022 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ಫಿರ್ಯಾದಿ ಗಿರಿಜ ಪ್ರಾಯ: 40 ವರ್ಷ ಗಂಡ: ನಾಗೇಶ್ ದುರ್ಗಪ್ಪ ಮೊಗೇರ ವಾಸ: ಚಿಕ್ಕಜ್ಜಿ  ಮನೆ ಕರಾವಳಿ ಶಿರೂರು ಗ್ರಾಮ ಇವರು ಶಿರೂರು ಗ್ರಾಮದ ಕರಾವಳಿಯ ಚಿಕ್ಕಜ್ಜಿ ಮನೆ ಎಂಬಲ್ಲಿ ಗಂಡ ನಾಗೇಶ್ ದುರ್ಗಪ್ಪ ಮೊಗೇರ  (43 ವರ್ಷ) ಹಾಗೂ ಮಕ್ಕಳಾದ ರಶ್ಮಿ  ಹಾಗೂ ಕಿರಣ ರವರೊಂದಿಗೆ ವಾಸವಾಗಿದ್ದು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಇವರ ಗಂಡ ನಾಗೇಶ್ ದುರ್ಗಪ್ಪ ಮೊಗೇರ  ರವರು ವಿಪರೀತ ಮದ್ಯಪಾನ  ಮಾಡುವ ಚಟ ಉಳ್ಳವರಾಗಿದ್ದು ಇದರಿಂದ ಮಾನಸಿಕವಾಗಿ ನೊಂದುಕೊಂಡು ಏಕಾಂಗಿಯಾಗಿ ಇರುತ್ತಿದ್ದು ಇದರಿಂದ  ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 30/06/2022 ರಂದು  ಬೆಳಿಗ್ಗೆ 7:30 ಗಂಟೆಯಿಂದ 8:30 ಗಂಟೆಯ ಮಧ್ಯಾವಧಿಯಲ್ಲಿ  ತಾನು ವಾಸವಾಗಿರುವ ಮನೆಯ ಅಡುಗೆ ಕೋಣೆಯ  ಜಂತಿಗೆ ರೋಪ್ ನ್ನು  ಕಟ್ಟಿ ಕುತ್ತಿಗೆಗೆ  ನೇಣು ಬಿಗಿದುಕೊಂಡು  ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಅರ್‌ನಂಬ್ರ 30/2022 ಕಲಂ 174 ಸಿಅರ್‌ಪಿಸಿ ಯಂತೆ  ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 30-06-2022 06:24 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080