ಅಭಿಪ್ರಾಯ / ಸಲಹೆಗಳು

ಜುಗಾರಿ ಪ್ರಕರಣಗಳು

  • ಕುಂದಾಪುರ: ದಿನಾಂಕ 27/06/2021 ರಂದು 16:00 ಗಂಟೆಯ ಸಮಯಕ್ಕೆ ಸದಾಶಿವ ಆರ್. ಗವರೋಜಿ  ಪಿಎಸ್‌ಐ ಕುಂದಾಪುರ ಪೊಲೀಸ್‌ಠಾಣೆ ರವರಿಗೆ ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದ ಮದ್ದುಗುಡ್ಡೆ ಬೋಟ್ ನಿರ್ಮಾಣ ಮಾಡುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ 16:15 ಗಂಟೆಗೆ ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದ ಮದ್ದುಗುಡ್ಡೆ ಬೋಟ್ ನಿರ್ಮಾಣ ಮಾಡುವ ಸ್ಥಳ ತಲುಪಿ ಇಲಾಖಾ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ 12 ಜನರು ಕುಳಿತುಕೊಂಡಿದ್ದು ಅಂದರ್ ಬಾಹರ್ ಎಂಬ ಇಸ್ಪೀಟ್ ಆಟದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 16:30  ಗಂಟೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ, 1)  ಹರೀಶ (31) , ತಂದೆ: ತಿಮ್ಮ  ಮೊಗವೀರ,  ವಾಸ: ಪಾದ್ರಿಗುಡ್ಡೆ ಮನೆ, ಚರ್ಚ್‌ರಸ್ತೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ 2) ಪ್ರಭಾಕರ, (52) ತಂದೆ: ಕಾಳಣ್ಣ ಮೊಗವೀರ, ವಾಸ: ಕುಷ್ಣಿ ಮನೆ, ಚರ್ಚ್‌ರಸ್ತೆ, ಕುಂದಾಪುರ, 3) ನವೀನ್ ಪೂಜಾರಿ, (30) ತಂದೆ: ಕೃಷ್ಣ ಪೂಜಾರಿ, ವಾಸ: ಅನುಗ್ರಹ ನಿಲಯ, ಚರ್ಚ್‌ರಸ್ತೆ, ಕುಂದಾಪುರ, 4) ವಾಸು ಮೊಗವೀರ, (60) ತಂದೆ: ಸುಬ್ಬ ಮೊಗವೀರ, ವಾಸ: ವಾಸುಕಿ ನಿಲಯ, ಚರ್ಚ್‌ರಸ್ತೆ, ಕುಂದಾಪುರ, 5). ಸಂತೋಷ ಚರ್ಚ್‌ರೋಡ್, 6).  ಸಂದೀಪ ಚರ್ಚ್‌ರೋಡ್, 7). ಸಂತೋಷ ಬರೆಕಟ್ಟು, 8). ಪ್ರದೀಪ ಚರ್ಚ್‌ರೋಡ್, 9). ವಿಜಯ ಚರ್ಚ್‌ರೋಡ್, 10). ಪ್ರಶಾಂತ, 11). ವೆಂಕಟೇಶ ಚರ್ಚ್‌ರೋಡ್, 12). ಶಿವ ಖಾರ್ವಿ ಮದ್ದುಗುಡ್ಡೆ ಇವರನ್ನು ವಶಕ್ಕೆ ಪಡೆದು ಆರೋಪಿತರು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ. 3125/, ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52, ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಆರೋಪಿತರು ಕೋವಿಡ್-19 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ಹಾಗೂ ಮಾನ್ಯ ಜಿಲ್ಲಾ ದಂಡಾಧಿಕಾರಿಗಳ ಆದೇಶದ ಬಗ್ಗೆ ತಿಳುವಳಿಕೆ ಇದ್ದರೂ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಆರೋಪಿತರು ಒಟ್ಟು ಸೇರಿಕೊಂಡು  ಜೂಜಾಟದಲ್ಲಿ ಪಾಲುಗೊಂಡಿದ್ದು, ಅಪಾಯಕಾರಿಯಾದ ರೋಗದ ಸೋಂಕನ್ನು ತಡೆಗಟ್ಟುವಲ್ಲಿ ನಿರ್ಲಕ್ಷ್ಯತನ ತೋರಿ ಅಪರಾಧ ಎಸಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 81/2021  ಕಲಂ:269 ಐಪಿಸಿ ಮತ್ತು  87 KP ACTರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 29/06/2021 ರಂದು 09:00 ಗಂಟೆಯ ಸಮಯಕ್ಕೆ ಸದಾಶಿವ ಆರ್. ಗವರೋಜಿ  ಪಿಎಸ್‌ಐ ಕುಂದಾಪುರ ಪೊಲೀಸ್‌ಠಾಣೆ ರವರಿಗೆ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ  ಅರಾಲುಗುಡ್ಡೆ ರಸ್ತೆಯ ಕೆ.ಕೆ. ಹೌಸ್ ಬಳಿ  ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ  ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ 09:15 ಗಂಟೆಗೆ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಅರಾಲುಗುಡ್ಡೆ ರಸ್ತೆಯ ಕೆ.ಕೆ. ಹೌಸ್ ಬಳಿ ತಲುಪಿ  ಇಲಾಖಾ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ 15 ಜನರು ಕುಳಿತುಕೊಂಡಿದ್ದು ಅಂದರ್ ಬಾಹರ್ ಎಂಬ ಇಸ್ಪೀಟ್ ಆಟದಲ್ಲಿ ಹಣವನ್ನು ಪಣವಾಗಿಟ್ಟು  ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 09:30  ಗಂಟೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 1) ಸಂಪತ್ ಪೂಜಾರಿ (22), 2) ವಿಶ್ವನಾಥ ಪೂಜಾರಿ (30),  3)ಅರುಣ್  (30), 4)ರಂಜಿತ್ (24), 5)ರಿತೇಶ್ (19), 6) ಅಶೋಕ (35), 7)ಅಭಿಷೇಕ್ ( 20), 8)ಹರೀಶ್ (30),  9)ಸಂದೀಪ (28)10) ಅರುಣ್  (28), 11) ಶಿವ (33)  ತಂದೆ  ಶೀನ, 12) ಶ್ರವಣ್ (27), 3)ಗಣೇಶ್ (32), 14)ಸಂದೇಶ (19) 15) ಚರಣ್ ರಾಜ್ (24)ಇವರನ್ನು ಸಿಬ್ಬಂದಿಗಳ  ಸಹಾಯದಿಂದ  ಹಿಡಿದುಕೊಂಡಿದ್ದು, ಇವರುಗಳು ತಾವು ಇಸ್ಪೀಟ್ ಜುಗಾರಿ  ಆಟದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಟ ಆಡುತ್ತಿದ್ದುದಾಗಿ ಒಪ್ಪಿಕೊಂಡಿದ್ದ ರಿಂದ ಅವರನ್ನು ವಶಕ್ಕೆ ಪಡೆದು  ಆರೋಪಿತರು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ. 3610/, ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52, ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಆರೋಪಿತರು ಕೋವಿಡ್-19 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ಹಾಗೂ ಮಾನ್ಯ ಜಿಲ್ಲಾ ದಂಡಾಧಿಕಾರಿಗಳ ಆದೇಶದ ಬಗ್ಗೆ ತಿಳುವಳಿಕೆ ಇದ್ದರೂ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಆರೋಪಿತರು ಒಟ್ಟು ಸೇರಿಕೊಂಡು  ಜೂಜಾಟದಲ್ಲಿ ಪಾಲುಗೊಂಡಿದ್ದು, ಅಪಾಯಕಾರಿಯಾದ ರೋಗದ ಸೋಂಕನ್ನು ತಡೆಗಟ್ಟುವಲ್ಲಿ ನಿರ್ಲಕ್ಷ್ಯತನ ತೋರಿ ಅಪರಾಧ ಎಸಗಿರುವುದಾಗಿದೆ, ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 82/2021  ಕಲಂ:269 ಐಪಿಸಿ ಮತ್ತು  87 KP ACTರಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 26/06/2021 ರಂದು ಹರ್ಕೂರು ಗ್ರಾಮದ ನಾರ್ಕಳಿಯ ಹಾಡಿಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಸಂತೋಷ ಅ ಕಾಯ್ಕಿಣಿ ಸಿ.ಪಿ.ಐ ಬೈಂದೂರು ವೃತ್ತರವರು ವೃತ್ತ ಕಛೇರಿ ಸಿಬ್ಬಂದಿಗಳು ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾ ಪಿ.ಎಸ್‌.ಐ ನಂಜಾನಾಯ್ಕ್‌ ಎನ್‌ಮತ್ತು ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ 17:00 ಗಂಟೆಗೆ ಧಾಳಿ ನಡೆಸಿ ಆಪಾದಿತರಾದ 1] ರಾಘವೇಂದ್ರ (27), 2] ನರಸಿಂಹ (48), 3] ರಮೇಶ ಶೆಟ್ಟಿ (32) ಎಂಬುವವರನ್ನು ವಶಕ್ಕೆ ಪಡೆದಿದ್ದು, ಬಳಿಕ ಕೃತ್ಯಕ್ಕೆ ಬಳಸಿದ ಕೋಳಿ ಹುಂಜ – 14 (ಅಂದಾಜು ಮೌಲ್ಯ 7,000/-ರೂ) , ಕತ್ತಿ (ಕೋಳಿ ಬಾಳು) –2 ಹಾಗೂ ನಗದು 1,000/- ರೂ ನ್ನು ಸ್ವಾಧೀನಪಡಿಸಿಕೊಂಡಿದ್ದು, ಆಪಾದಿತರು ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ಕೋವಿಡ್-19 ತಡೆಗಟ್ಟಲು ಹೊರಡಿಸಿದ ಲಾಕ್‌ಡೌನ್ ಆದೇಶ/ಮಾರ್ಗಸೂಚಿಯನ್ನು ಉಲ್ಲಂಘಿಸಿ, ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಸೋಂಕು ಹರಡುವ ಸಂಭವ ಇದೆ ಎಂದು ತಿಳಿದೂ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 60/2021 ಕಲಂ: 87, 93 ಕರ್ನಾಟಕ ಪೊಲೀಸ್ ಕಾಯ್ದೆ, 269 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾಧ ಫಾತಿಮಾ ಜೊಹರಾ (31) ಗಂಡ: ಜಾವಿದ್  ಕೆಮ್ಮಣ್ಣು ವಾಸ: ಪಿರಾಜ್ ಮಝಿಲ್ ಸೈಮ್ ಅಸೋಸೊಯೆಶನ್  ಹತ್ತಿರ  ಕೆಪ್ಪತೋಟ  ಬ್ರೀಡ್ಜ್  ಹೂಡೆ, ಪಡುತೋನ್ಸೆ ಇವರ ತಂಗಿಯಾದ ಹೀನಾ (20) ರವರು 10 ನೇ ತರಗತಿಯವರೆಗೆ ಹೂಡೆಯ ಸಾಲಿಯಾತ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾಬ್ಯಾಸ ಮುಗಿಸಿ ನಂತರ ಉಡುಪಿಯಲ್ಲಿ ಎರಡು ವರ್ಷ ಇಸ್ಮಾಮಿಕ್ ಕೋರ್ಸ್ ಮುಗಿಸಿ  ಮನೆಯಲ್ಲಿದ್ದಳು .ಹೀನಾಳಿಗೆ ಸುಮಾರು 1 ತಿಂಗಳ ಹಿಂದೆ ಮಾನಸಿಕ ಕಾಯಿಲೆ ಪ್ರಾರಂಭವಾಗಿ ಆ ಬಗ್ಗೆ  ಉಡುಪಿ ಬಾಳಿಗ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು ಮನೆಯಲ್ಲಿ ಇದ್ದರು.  ಕೆಲವೊಮ್ಮೆ ಮನೆಯಲ್ಲಿ  ಯಾರೊಡನೆ ಸರಿಯಾಗಿ ಮಾತನಾಡದೇ ಅವರಷ್ಟಕ್ಕೆ ಅವರು ಇರುತ್ತಿದ್ದರು. ದಿನಾಂಕ 29/06/2021 ರಂದು ಪಿರ್ಯಾದಿದಾರರು ಅವರ ಮಗಳನ್ನು  ಸ್ನಾನ ಮಾಡಲಿಕ್ಕೆ  ಬೆಳಿಗ್ಗೆ ಸುಮಾರು 10:45 ಗಂಟೆಗೆ ಕರೆದುಕೊಂಡು  ಹೋಗುವ ಮೊದಲು ಹೀನಾಳು ಮನೆಯ ಹಾಲ್ ನಲ್ಲಿ ಕುಳಿತುಕೊಂಡಿದ್ದವಳು ಪಿರ್ಯಾದಿದಾರರು ಮಗಳಿಗೆ  ಸ್ನಾನ ಮುಗಿಸಿ  ಬೆಡ್ ರೂಮಿಗೆ ಬೆಳಿಗ್ಗೆ  11:00 ಗಂಟೆಗೆ  ಹೋಗುವಾಗ ಬೆಡ್ ರೂಮಿನ ಒಳಗೆ  ಹೀನಾಳು  ಬಟ್ಟೆ ಒಣಗಿಸಲು ಕಟ್ಟಿದ ರೀಪ್ ಗೆ ನೈಲಾನ್ ಚೂಡಿದಾರದ ಶಾಲನ್ನು ಕಟ್ಟಿ  ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವುದನ್ನು ಗಮನಿಸಿ ಪಿರ್ಯಾದಿದಾರರು ತಾಯಿಯೊಂದಿಗೆ  ಹೀನಾಳನ್ನು  ನೈಲಾನ್  ಶಾಲಿನಿಂದ  ಬಿಡಿಸಿ  ಉಪಚರಿಸುವಾಗ  ಅಸ್ವಸ್ಥಗೊಂಡು ಮಾತಾನಾಡದೆ ಇದ್ದವರನ್ನು ಚಿಕಿತ್ಸೆಯ ಬಗ್ಗೆ  ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು 11:30 ಗಂಟೆಗೆ ಹೀನಾ ಳು ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ  ಹೀನಾಳು  ಮಾನಸಿಕ ಖಾಯಿಲೆಯಿಂದ  ಮಾನಸಿಕ ಖಿನ್ನತೆಗೆ ಒಳಗಾಗಿ  ಕುತ್ತಿಗೆಗೆ  ನೈಲಾನ್   ಚೂಡಿದಾರದ ಶಾಲನ್ನು  ಬಿಗಿದು ಆತ್ಯಹತ್ಯೆ ಮಾಡಿಕೊಂಡಿದ್ದು  ಅವಳ ಸಾವಿನಲ್ಲಿ  ಬೇರೆ ಯಾವುದೇ  ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 32/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಧಕ ವಸ್ತು ಸೇವನೆ ಪ್ರಕರಣ

  • ಉಡುಪಿ: ದಿನಾಂಕ 28/06/2021 ರಂದು ಮಂಜುನಾಥ, ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಇವರು ಸಿಬ್ಬಂದಿ ಕೇಶವ ಗೌಡ, ಎಎಸ್‌ಐ, ಪ್ರದೀಪ್ ಶೆಟ್ಟಿ ಮತ್ತು ನಾಗೇಶ ರವರನ್ನು ಕರೆದುಕೊಂಡು, ಅಕ್ರಮ ಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ಮಾಹಿತಿ ಸಂಗ್ರಹಣೆ ಬಗ್ಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿಯಂತೆ ಬೈಂದೂರು ತಾಲೂಕು, ಕಂಬದಕೋಣೆ ಗ್ರಾಮದ ಮಹಾಸತಿ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಗಾಂಜಾ ಸೇವನೆ ಸೇವಿಸಿರುವಂತೆ ಕಂಡು ಬಂದ ಸ್ವಸ್ತಿಕ್ ಧಾರವಾದಕರ್ ಎಂ ಎಂಬಾತನನ್ನು ಮಧ್ಯಾಹ್ನ 12:00 ಗಂಟೆಗೆ ವಶಕ್ಕೆ ಪಡೆದು, ಠಾಣೆಗೆ ಕರೆತಂದು, ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ದಿನಾಂಕ 29/06/2021 ರಂದು  ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು 16:00 ಗಂಟೆಗೆ ಸ್ವೀಕರಿಸಿ, ವರದಿಯಲ್ಲಿ ಸದ್ರಿ ವ್ಯಕ್ತಿಯು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಆರೋಪಿ ಸ್ವಸ್ತಿಕ್ ಧಾರವಾದಕರ್ ಎಂ ವಿರುದ್ಧ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 37/2021 ಕಲಂ: 27 (b) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-06-2021 10:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080