ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾದ ಪ್ರಮೋದ ನಾಯ್ಕ್ (33), ತಂದೆ: ಶ್ರೀನಿವಾಸ ನಾಯ್ಕ್, ವಾಸ: ಕಂಚಗೋಡು, ಗುಜ್ಜಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 29/05/2022 ರಂದು 16:30 ಗಂಟೆಗೆ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಜಂಕ್ಷನ್ ಬಳಿ ಇರುವಾಗ ಗ್ರಹಾಂ ಎಸ್ ವಾರ್ಡ್ ರೋಪ್ ಎಂಬುವವರು KA-20 EU-2149 ನೇ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ಸವಾರಿ ಮಾಡಿಕೊಂಡು ರಾಷ್ಟ್ರೋಯ ಹೆದ್ದಾರಿ 66 ರಸ್ತೆಯಲ್ಲಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಾ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಜಂಕ್ಷನ್ ಬಳಿ ತಲುಪುವಾಗ್ಗೆ ತ್ರಾಸಿ ಚರ್ಚ್ ರೋಡ್ ಕಡೆಯಿಂದ ತ್ರಾಸಿ ರಿಕ್ಷಾ ಸ್ಟ್ಯಾಂಡ್ ಕಡೆಗೆ ಕುಪ್ಪಯ್ಯ ಪೂಜಾರಿ ಎಂಬವವರು KA-20-C-7723 ನೇ ಆಟೋರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ರಸ್ತೆಗೆ ಬಂದು ಗ್ರಹಾಂ  ಎಸ್ ವಾರ್ಡ್ ರೋಪ್ ರವರು ಸವಾರಿ ಮಾಡಿಕೊಂಡಿದ್ದ ಬೈಕ್  ಗೆ ಡಿಕ್ಕಿ ಹೊಡೆದ ಪರಿಣಾಮ ಗ್ರಹಾಂ ಎಸ್ ವಾರ್ಡ್ ರೋಪ್ ರವರು ಬೈಕ್ ಸಮೇತ ರಸ್ತೆಗೆ ಬಿದ್ದು ಎಡಕಾಲು ಮತ್ತು ಎಡಕೈಗೆ ತೀವ್ರ ಸ್ವರೂಪದ ಗಾಯಗೊಂಡಿರುತ್ತಾರೆ. ಪಿರ್ಯಾದಿದಾರರು ಗ್ರಹಾಂ  ಎಸ್ ವಾರ್ಡ್ ರೋಪ್ ರವರನ್ನು ತನ್ನ ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ವಸಂತರಾಜ್‌ (30), ತಂದೆ: ಸುಬ್ರಾಯ ನಾಯಕ್‌, ವಾಸ: ನರಸಿಂಗೆ ಹೌಸ್‌, 7-63, ನರಸಿಂಹ ದೇವಸ್ಥಾನದ ಹತ್ತಿರ,  ಹೆರ್ಗಾ ಗ್ರಾಮ, ಉಡುಪಿ ತಾಲೂಕು ಇವರ ತಂದೆ ಸುಬ್ರಾಯ ನಾಯಕ್‌ (70) ರವರು ಕಳೆದ ವರ್ಷ ರಸ್ತೆ ಅಪಘಾತವಾಗಿ  ಹಿಪ್‌ ರಿಪ್ಲೇಸ್‌ಮೆಂಟ್‌ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಅದೇ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29/05/2022 ರಂದು ಬೆಳಿಗ್ಗೆ 10:30 ಗಂಟೆಯಿಂದ ಮಧ್ಯಾಹ್ನ 2:15 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಪಕ್ಕದಲ್ಲಿರುವ ಗೇರುಬೀಜ ಪ್ಲಾಂಟೇಶ್‌ನಲ್ಲಿ  ಗೇರು ಮರದ ಕೊಂಬೆಗೆ ನೈಲಾನ್‌ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಶಿರ್ವಾ: ದಿನಾಂಕ 29/05/2022 ರಂದು ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಶಿರ್ವ ಪೊಲೀಸ್‌ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬೆಳ್ಳೆ ಗ್ರಾಮದ ಪಡುಬೆಳ್ಳೆ ಎಂಬಲ್ಲಿರುವ ಸಂಪತ್ ಬಾರ್‌ & ರೆಸ್ಟೋರೆಂಟ್‌ನ ಹಿಂದೆ ಇರುವ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಫೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದಂತೆ ದಾಳಿ ನಡೆಸಿದಾಗ ಅಲ್ಲಿದ್ದವರಲ್ಲಿ ಕೆಲವರು ಕತ್ತಲಲ್ಲಿ ಓಡಿ ಹೋಗಿದ್ದು, ವಶಕ್ಕೆ ಪಡೆದುಕೊಂಡವರ ಹೆಸರು ವಿಳಾಸ ವಿಚಾರಿಸಲಾಗಿ ಇಸ್ಪೀಟ್ ಎಲೆಯನ್ನು ಹಾಕುತ್ತಿದ್ದವನ ಹೆಸರು 1) ಭದ್ರ, ಪ್ರಾಯ: 32, ತಂದೆ:ರಾಜು, ವಾಸ: ನಿನ್ನಿಪಾದೆ, ಕುಂಜಾರುಗಿರಿ ಅಂಚೆ ಮತ್ತು ಕುರ್ಕಾಲು ಗ್ರಾಮ,ಕಾಪು ತಾಲೂಕು, ಉಡುಪಿ ಜಿಲ್ಲೆ. 2) ಪ್ರತಾಫ್‌, ಪ್ರಾಯ:25, ಧರ್ಮ,ವಾಸ: ಮದ್ವ ಕಾಲೋನಿ, ಪಡುಬೆಳ್ಳೆ,ಬೆಳ್ಳೆ ಗ್ರಾಮ, ಕಾಪು ತಾಲೂಕು,ಉಡುಪಿ ಜಿಲ್ಲೆ, 3) ಮಂಜುನಾಥ, ಪ್ರಾಯ: 41, ತಂದೆ: ದಿ. ತಂಗರಾಜು, ವಾಸ: ಗಿರಿನಗರ, ಕುಂಜಾರುಗಿರಿ,ಕುರ್ಕಾಲು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ,  4)ಕಾರ್ತಿಕ್‌, ಪ್ರಾಯ: 28 ವರ್ಷ, ತಂದೆ: ದಿ. ಆರ್‌. ಕುಮಾರ್‌, ವಾಸ: ಹರೀಶ್‌ರವರ ಬಾಡಿಗೆ ಮನೆ, ಪಾಂಬೂರು, ಪಡುಬೆಳ್ಳೆ,ಬೆಳ್ಳೆಗ್ರಾಮ, ಕಾಪು ತಾಲೂಕು, ಉಡುಪು ಜಿಲ್ಲೆ.5) ಪ್ರದೀಪ್‌, ಪ್ರಾಯ: 32, ತಂದೆ:ದಿ. ಸಂಜೀವ, ವಾಸ: ಕುಂಜಾರುಗಿರಿ, ಕುರ್ಕಾಲು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ.6) ತಂಬಿ, ಪ್ರಾಯ:35, ತಂದೆ:ಆರ್‌ಮೋಹಿನ್‌, ವಾಸ: ಮದ್ವ ಕಾಲೋನಿ, ಪಡುಬೆಳ್ಳೆ, ಬೆಳ್ಳೆಗ್ರಾಮ, ಕಾಪುತಾಲೂಕು, ಉಡುಪಿ ಜಿಲ್ಲೆ ಎಂಬುದಾಗಿ ತಿಳಿಸಿದ್ದು ಅಲ್ಲದೇ ಓಡಿ ಹೋದವರ ಬಗ್ಗೆ ಕೇಳಲಾಗಿ 1) ಸುರೇಶ್‌, 2) ರಾಜೇಶ್‌, 3) ಶಶೀ, 4) ಕುಂಜಾ, 5) ಮಂಜೇಶ, 6) ಚಂದ್ರು, 7) ಕಾರ್ತಿಕ್‌ಎಂದು ತಿಳಿಸಿರುತ್ತಾರೆ.  ನಂತರ ಅಪಾದಿತರ ವಶದಲ್ಲಿದ್ದ  ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ನಗದು  ಒಟ್ಟು 1785/- ರೂಪಾಯಿ 52 ಇಸ್ಪೀಟು ಎಲೆಗಳು, ಜುಗಾರಿ ಆಡಲು ಉಪಯೋಗಿಸಿದ ಹಳೆ ದಿನಪತ್ರಿಕೆ -1ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2022, ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ದಿನಾಂಕ 27/05/2022 ರಂದು 19:45 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಅತ್ತೂರು ಇಗರ್ಜಿ ಬಳಿ ಅಫ್ರೋಜ್, ತಬ್ರೀಜ್, ಹನೀಫ್ ಹಾಗೂ ಇತರರು ರಿಡ್ಜ್ ಕಾರಿನಲ್ಲಿ ಬಂದು ಅಫ್ರೋಜನ ತಾಯಿಗೆ ಪಿರ್ಯಾದಿದಾರರಾದ ಮೊಹಮ್ಮದ್ ಅನ್ವರ್ (20), ತಂದೆ: ಬಿ.ಎಂ ಅಬ್ಬಾಸ್, ವಾಸ: ಜರಿಗುಡ್ಡೆ ಮನೆ, ಸಾಲ್ಮಾರ ಕಸಬ ಗ್ರಾಮ, ಕಾರ್ಕಳ ತಾಲೂಕು ಇವರು ಬೈಯ್ದಿರುವುದಾಗಿ ಪಿರ್ಯಾದಿದಾರರನ್ನು ಅವರ ಕಾರಿನಿಂದ ಹೊರಗೆ ಎಳೆದು ಪಿರ್ಯಾದಿದಾರರಿಗೆ ಕೈಗಳಿಂದ ಹೊಡೆದು, ಅವರನ್ನು ಬಲಾತ್ಕಾರವಾಗಿ ಆಪಾದಿತರು ಬಂದಿದ್ದ ಕಾರಿನಲ್ಲಿ ಕುಳ್ಳಿರಿಸಿ ಕಾರಿನೊಳಗೆ ಪಿರ್ಯಾದಿದಾರರ ಮುಖಕ್ಕೆ, ತಲೆಗೆ ಮತ್ತು ಬೆನ್ನಿಗೆ ಕೈಗಳಿಂದ ಹೊಡೆದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2022 ಕಲಂ: 342, 323, 504, 506 ಜತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.       

ಇತ್ತೀಚಿನ ನವೀಕರಣ​ : 30-05-2022 09:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080