ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಕಾರ್ಕಳ: ದಿನಾಂಕ 30/05/2022 ರಂದು 13:45 ಗಂಟೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಕರಿಮಾರುಕಟ್ಟೆ ಎಂಬಲ್ಲಿ ಹಾದು ಹೋಗಿರುವ ಕಾರ್ಕಳ-ಧರ್ಮಸ್ಥಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ KA20-D-7949 ನೇ ನಂಬ್ರದ ವಿಶಾಲ್ ಬಸ್ ನ ಚಾಲಕ ಅಣ್ಣಿ ಸಾಲ್ಯಾನ್ ರವರು ತನ್ನ ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆತನ  ಮುಂದಿನಿಂದ ಹೋಗುತ್ತಿದ್ದ ಅಂದರೆ ಕಾರ್ಕಳ ಕಡೆಯಿಂದ ಬಜಗೋಳಿ ಕಡೆಗೆ ಪಿರ್ಯಾದಿ ಶ್ರೀ ಸುಶಾಂತ್ ಬಜಗೋಳಿ ರವರು ಚಲಾಯಿಸಿಕೊಂಡು ಹೋಗುತ್ತಿದ್ದ KA20-MC-0476 ನೇ ನಂಬ್ರದ ಆಲ್ಟೋ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರ ಹೆಂಡತಿ ಶ್ರೀಮತಿ ರೋಶ್ನಿರವರ ಕುತ್ತಿಗೆಯ ಬಳಿ ಒಳನೋವು ಉಂಟಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಗಂಗೊಳ್ಳಿ: ಫಿರ್ಯಾದಿದಾರರಾದ ಪ್ರಮೋದ ನಾಯ್ಕ್ ರವರು ದಿನಾಂಕ: 29-05-2022 ರಂದು ಸಮಯ ಸುಮಾರು 16:30 ಗಂಟೆಗೆ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಜಂಕ್ಷನ್ ಬಳಿ ಇರುವಾಗ ಗ್ರಹಾಂ  ಎಸ್ ವಾರ್ಡ್ ರೋಪ್ ಎಂಬವರು KA-20 EU-2149 ನೇ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ಸವಾರಿ ಮಾಡಿಕೊಂಡು ರಾ.ಹೆ 66 ರಸ್ತೆಯಲ್ಲಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಾ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಜಂಕ್ಷನ್ ಬಳಿ ತಲುಪುವಾಗ್ಗೆ ತ್ರಾಸಿ ಚರ್ಚ್ ರೋಡ್ ಕಡೆಯಿಂದ ತ್ರಾಸಿ ರಿಕ್ಷಾ ಸ್ಟ್ಯಾಂಡ್ ಕಡೆಗೆ ಕುಪ್ಪಯ್ಯ ಪೂಜಾರಿ ಎಂಬವರು KA-20 C-7723 ನೇ ಆಟೋರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ರಾ.ಹೆ 66 ರಸ್ತೆಗೆ ಬಂದು ಗ್ರಹಾಂ  ಎಸ್ ವಾರ್ಡ್ ರೋಪ್ ರವರು ಸವಾರಿ ಮಾಡಿಕೊಂಡಿದ್ದ ಬೈಕ್  ಗೆ ಡಿಕ್ಕಿ ಹೊಡೆದ ಪರಿಣಾಮ ಗ್ರಹಾಂ  ಎಸ್ ವಾರ್ಡ್ ರೋಪ್ ರವರು ಬೈಕ್ ಸಮೇತ ರಸ್ತೆಗೆ ಬಿದ್ದು ಎಡಕಾಲು ಮತ್ತು ಎಡಕೈಗೆ ತೀವ್ರ ಸ್ವರೂಪದ ಗಾಯಗೊಂಡಿರುತ್ತಾರೆ. ಫಿರ್ಯಾದಿದಾರರು ಗ್ರಹಾಂ  ಎಸ್ ವಾರ್ಡ್ ರೋಪ್ ರವರನ್ನು ತನ್ನ ಅಂಬುಲೆನ್ಸ್  ವಾಹನದಲ್ಲಿ   ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2022 ಕಲಂ:279, 338   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿ ಸದಾಶಿವ ಮಹಾಬಲೇಶ್ವರ ರಾವ್‌ ಇವರು ಉಡುಪಿಯ ವಿಭುದಪ್ರಿಯ ನಗರದಲ್ಲಿ ವಾಸವಿದ್ದು, ಅವರು ತಂತ್ರಾಡಿಯಲ್ಲಿ ಇನ್ನೊಂದು ಮನೆಯನ್ನು ಹೊಂದಿದ್ದು, ಅಲ್ಲಿ ಕೃಷಿಯನ್ನು ಮಾಡಿಕೊಂಡಿರುತ್ತಾರೆ. ಆಗಾಗ ಅಲ್ಲಿಗೆ ಹೋಗಿ ಬಂದು ಮಾಡಿಕೊಂಡಿದ್ದು, ಅಲ್ಲಿ 9 ಜನ ಕೆಲಸದವರನ್ನು ಇಟ್ಟು ಕೆಲಸ ಮಾಡಿಸುತ್ತಿರುತ್ತಾರೆ. ಇದೆಲ್ಲವನ್ನೂ ಅವರ ಸಂಬಂಧಿ ಸುದರ್ಶನ ಎಂಬುವನು ನೋಡಿಕೊಳ್ಳುವುದಾಗಿದೆ. ಪಿರ್ಯಾದುದಾರರು ಕೃಷಿಯಿಂದ ಬಂದ ಉತ್ಪನ್ನವಾದ 32 ಅಡಿಕೆ ಮೂಟೆಗಳನ್ನು ಹಾಗೂ 12 ಕಾಳು ಮೆಣಸಿನ ಮೂಟೆಗಳನ್ನು ಮನೆಯ ರೂಮಿನಲ್ಲಿಟ್ಟಿದ್ದು, ದಿನಾಂಕ:26-03-2022 ರಂದು ಅಲ್ಲಿಯ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘದವರ ವತಿಯಿಂದ ಪೂಜೆಯನ್ನಿಟ್ಟುಕೊಂಡಿದ್ದು, ರಾತ್ರಿ ಎಲ್ಲಾ ಪರಿಸರದವರು ಓಡಾಡಿಕೊಂಡಿದ್ದು, ಅಲ್ಲಿಂದ ದಿನಾಂಕ: 04-04-2022 ರ ನಡುವಿನ ಅವಧಿಯಲ್ಲಿ ಪಿರ್ಯಾದುದಾರರ ಮನೆಯಲ್ಲಿಟ್ಟಿದ್ದ 7 ಕಾಳು ಮೆಣಸಿನ ಮೂಟೆಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ  ಅದರ ಅಂದಾಜು  ಮೌಲ್ಯ 1,75,000 ಲಕ್ಷ ರೂ ಆಗಬಹುದು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2022 ಕಲಂ: 454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

 

ಮನುಷ್ಯ ಕಾಣೆ ಪ್ರಕರಣ

 • ಕಾರ್ಕಳ: ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಬ್ರಹ್ಮರಹಾಡಿ ನಿವಾಸಿ ಶೇಖರ ಶೆಟ್ಟಿ ಇವರ ಮಗ ಹರೀಶ್ ಶೆಟ್ಟಿ, ಪ್ರಾಯ 33 ವರ್ಷ, ಈತನು 2 ವರ್ಷಗಳಿಂದ ಮಂಗಳೂರಿನ ಪೂಂಜಾ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದು,  ಈಗ್ಗೆ 4 ತಿಂಗಳುಗಳಿಂದ ಮನೆಯಲ್ಲಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದನು. ಹರೀಶ್ ಶೆಟ್ಟಿಯು ಕಳೆದ 10 ವರ್ಷಗಳಿಂದ ಹಿಂದ ಸ್ವಲ್ಪ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಬಳಿಕ ಔಷಧಿ ಮಾಡಿದ್ದು ಗುಣಮುಖನಾಗಿದ್ದವನು ಇತ್ತೀಚೆಗೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದವನು ದಿನಾಂಕ 24/05/2022 ರಂದು ಮಧ್ಯಾಹ್ನ 2:45 ಗಂಟೆಗೆ ಮನೆಯಲ್ಲಿದ್ದವನು ಮನೆಯಲ್ಲಿ ಯಾರಿಗೂ ಹೇಳದೆ ಮನೆ ಬಿಟ್ಟು ಹೋಗಿದ್ದು, ಆತನನ್ನು ನಮ್ಮ ಸಂಬಂದಿಕರು ಹಾಗೂ ಪರಿಚಯಸ್ಥರಲ್ಲಿ ಹುಡುಕಾಡಿದಲ್ಲಿ ಇದುವರೆಗೆ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2022 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿ ಪ್ರಮೀಳಾ ಇವರು ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಪಕ್ಕಿಬೆಟ್ಟು ಕೆಳಗಿನ ಮನೆಯಲ್ಲಿ ಗಂಡ ಸಂದೇಶ್ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು, ದಿನಾಂಕ 29/05/2022 ರಂದು ಸಂದೇಶ್ ವಿಪರೀತ ಮಧ್ಯಪಾನ ಮಾಡಿ ಮನೆಯಲ್ಲಿದ್ದು, ರಾತ್ರಿ 7:30 ಗಂಟೆಗೆ ಮಕ್ಕಳು ಮಲಗುವ ತಲೆ ದಿಂಬಿನ ವಿಚಾರದಲ್ಲಿ ಸಂದೇಶ್ ನು ಪಿರ್ಯಾದಿದಾರರ ಜೊತೆ ಬಾಯಿ ಮಾತಿನ ಜಗಳ ಮಾಡಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಪಕ್ಕದಲ್ಲಿದ್ದ  ಕುರ್ಚಿಯಿಂದ ಪಿರ್ಯಾದಿದಾರರ ತಲೆಗೆ ಹೊಡೆದು  ಗಾಯ ಉಂಟುಮಾಡಿರುವುದಾಗಿದೆ.  ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2022 ಕಲಂ: 504, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಉಡುಪಿ:  ಪಿರ್ಯಾದಿ ಶ್ರೀಮತಿ ರಕ್ಷಾ ಉಪಾಧ್ಯಾಯ ಇವರು ಅಪಾದಿತ ಗೋವಿಂದ ರಾಜ್ ನೊಂದಿಗೆ  ಗುರು ಹಿರಿಯರು ನಿಶ್ಚಯಿಸಿದಂತೆ ಆರೋಪಿಯ ಬೇಡಿಕೆಯಂತೆ 3 ಲಕ್ಷ ವರದಕ್ಷಿಣೆ ಹಾಗೂ 30 ಪವನ್ ಚಿನ್ನಾಭರಣ ಗಳನ್ನು ನೀಡಿ ಮದುವೆಯ ಎಲ್ಲಾ ಖರ್ಚುನ್ನು ಪಿರ್ಯಾದಿದಾರರ ಮನೆಯವರೇ  ಭರಿಸಿ  ದಿನಾಂಕ: 20/10/2021 ರಂದು ಉಡುಪಿಯ ಚಿಟ್ಪಾಡಿ ಸರಸ್ವತಿ ಸಭಾಭವನದಲ್ಲಿ  ವಿವಾಹವಾಗಿದ್ದು, ಮದುವೆಯ ನಂತರ ಪಿರ್ಯಾದಿದಾರರು ತನ್ನ ಗಂಡನ ಮನೆಯಾದ ಶಿವಳ್ಳಿ ಗ್ರಾಮದ ಮೂಡುಸಗ್ರಿಯಲ್ಲಿ  ವಾಸ ಮಾಡಿಕೊಂಡಿದ್ದರು. ಅಲ್ಲಿ ಅಪಾದಿತನು ಪಿರ್ಯಾದಿದಾರರು ತಂದ ವರದಕ್ಷಿಣೆ ಕಡಿಮೆ ಆಯಿತೆಂದು  ಹಾಗೂ ಇನ್ನೂ ಹೆಚ್ಚಿನ ಚಿನ್ನಾಭರಣಕ್ಕಾಗಿ ಬೇಡಿಕೆ ಇಟ್ಟು ಇದಕ್ಕೆ ಪಿರ್ಯಾದಿದಾರರು ಒಪ್ಪದಿದ್ದಾಗ ಕೈಯಿಂದ ಹೊಡೆದು  ದೈಹಿಕ ಹಿಂಸೆ ನೀಡಿರುತ್ತಾರೆ.  ಪಿರ್ಯಾದಿದರರು ತನ್ನ ಗಂಡನೊಂದಿಗೆ ಬೆಂಗಳೂರಿನ ಇಟ್ಟ ಮಡುವಿನ ಅಪಾರ್ಟ್ ಮೆಂಟ್ ನಲ್ಲಿ ಆಪಾದಿತನೊಂದಿಗೆ  ಇದ್ದಾಗ ಆಪಾದಿತನು ಮದ್ಯಪಾನ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಕೆಟ್ಟದ್ದಾಗಿ ಬೈದು ಪಿರ್ಯಾದಿದಾರರೊಂದಿಗೆ ಬೇಡವಾದ ಮಾತುಗಳನ್ನು ಆಡಿ   ಕುತ್ತಿಗೆಯನ್ನು ಒತ್ತಿ ಕೊಂದು  ಬಿಡುವುದಾಗಿ ಜೀವ ಬೆದರಿಕೆಯನ್ನು ಹಾಕಿರುತ್ತಾನೆ. ಆಪಾದಿತನ  ಹೆಚ್ಚಿನ ವರದಕ್ಷಿಣೆಯ ಬೇಡಿಕೆಯಿಂದಾಗಿ ಪಿರ್ಯಾದಿದಾರರು ಮದುವೆಯ ನಂತರ  ಸುಮಾರು 1,90,000/- ರೂ ವನ್ನು ಆರೋಪಿತನ   ಬ್ಯಾಂಕ್ ಖಾತೆಗೆ ಹಂತ-ಹಂತವಾಗಿ ವರ್ಗಾಯಿಸಿದ್ದರೂ  ಕೂಡಾ  ಆರೋಪಿಯು ಪಿರ್ಯಾದಿದಾರರನ್ನು ತ್ಯಜಿಸಿ ಹೋಗಿ ಮಾನಸಿಕ ಹಿಂಸೆಯನ್ನು ನೀಡಿರುತ್ತಾನೆ ಎಂಬಿತ್ಯಾದಿ. ಈ ಬಗ್ಗೆ ಮಹಿಳಾ  ಠಾಣೆ ಅಪರಾಧ ಕ್ರಮಾಂಕ 42/2022  ಕಲಂ: 498(ಎ), 504,506 ಐ.ಪಿ.ಸಿ ಮತ್ತು ಕಲಂ: 3, 4 ಡಿಪಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.  

 ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ಪಿರ್ಯಾದಿ ಪ್ರಕಾಶ ಇವರ ತಂದೆ ಲಕ್ಷ್ಮಣರವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಡಿ’  ಗ್ರೂಪ್ ನೌಕರಾಗಿ ನಿವೃತ್ತಿ ಹೊಂದಿ ಮನೆಯಲ್ಲಿ ಇರುವುದಾಗಿದೆ. ಪಿರ್ಯಾದಿದಾರರ ತಂದೆ ಮನೆಕಟ್ಟಲು ಸಾಲ ಮಾಡಿಕೊಂಡಿದ್ದು ,ಸಾಲ ತೀರಿಸಲು ಆಗದೇ ಬೇಸರದಿಂದ ಇದ್ದಿದ್ದು ದಿನಾಂಕ: 23/05/2022ರಂದು ಬೆಳಿಗ್ಗೆ 09:00ಗಂಟೆಗೆ ಮನೆಯಿಂದ ಕುಂದಾಪುರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಮದ್ಯಾಹ್ನ ಮನೆಗೆ ಬಾರದೇ ಇದ್ದು ಈ ಬಗ್ಗೆ ಪಿರ್ಯಾದಿದಾರರ ತಂದೆಗೆ  ದೂರವಾಣಿ ಮುಖೇನ ಸಂಪರ್ಕಿಸಿದಲ್ಲಿ ಮೊಬೈಲ್ ನಾಟ್ ರಿಚೇಬಲ್ ಆಗಿರುತ್ತದೆ. ಮದ್ಯಾಹ್ನ 02:15ಗಂಟೆಗೆ ಕುಂದಾಪುರ ಸರಕಾರಿ ಆಸ್ಪತ್ರೆಯಿಂದ ಪಿರ್ಯಾದಿದಾರರಿಗೆ ಪಿರ್ಯಾದಿದಾರರ ತಂದೆ ಲಕ್ಷ್ಮಣರವರು ವಿಷ ಸೇವಿಸಿ ಆಸ್ಪತ್ರೆಯಲ್ಲಿ  ದಾಖಲಾಗಿರುವುದಾಗಿ ದೂರವಾಣಿ  ಕರೆ ಬಂದಿದ್ದು ಅದರಂತೆ ಪಿರ್ಯಾದಿದಾರರು ಆಸ್ಪತ್ರೆಗೆ  ಹೋಗಿ ನೋಡಲಾಗಿ ಲಕ್ಷ್ಮಣರವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಅವರನ್ನು ಹೆಚ್ಚಿನ ಚಿಕಿತ್ಸೆಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:29/05/2022ರಂದು ಸಂಜೆ 06:15 ಗಂಟೆಗೆ ಮೃತ ಪಟ್ಟಿರುತ್ತಾರೆ.ಮೃತರು ಆರೋಗ್ಯ ಸಮಸ್ಯೆ ಹಾಗೂ ಹಣಕಾಸಿನ ಸಮಸ್ಯೆಯಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ಕೀಟನಾಶಕ ಔಷಧಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 18/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ:: ಫಿರ್ಯಾದಿ ಶಾಭಿ ಬೆರಟ್ಟೋ ಇವರ ತಮ್ಮ ರಾಬರ್ಟ ಬೆರಟ್ಟೋ (62 ವರ್ಷ) ಎಂಬವರು ಅವಿವಾಹಿತರಾಗಿದ್ದು ಪಿರ್ಯಾದಿದಾರರೊಂದಿಗೆ ವಾಸವಾಗಿದ್ದು ವಿಪರೀತ ಮದ್ಯಪಾನ ಮಾಡುವ ಚಟದವರಾಗಿದ್ದು ಪ್ರತಿದಿನ ಮನೆಗೆ ಬಂದು ಕುಡಿದ ಅಮಲಿನಲ್ಲಿ ನಾನು ಸಾಯುತ್ತೇನೆ ನನಗೆ ಯಾರು ಇಲ್ಲಾ ಎಂಬುದಾಗಿ ಹೇಳಿಕೊಂಡಿರುತ್ತಾರೆ. ದಿನಾಂಕ: 29.05.2022 ರಂದು ರಾತ್ರಿ 10:00 ಎಂದಿನಂತೆ ಊಟ ಮಾಡಿ ಹಳೇ ಮನೆಗೆ ಮಲಗುವುದಾಗಿ ಹೇಳಿ ಹೋದವರನ್ನು ದಿನಾಂಕ 30.05.2022 ರಂದು 09:00 ಗಂಟೆಗೆ ಹಳೇ ಮನೆಗೆ ಸ್ನಾನಮಾಡಲು  ಹೋದಾಗ ಬಚ್ಚಲು ಮನೆಯು ಒಳಗಿನಿಂದಲೇ ಲಾಕ್‌ ಆಗಿದ್ದು ಬಾಗಿಲಿನ ಸಂದಿಯಿಂದ ನೋಡಿದಾಗ ರಾಬರ್ಟ ಬೆರಟ್ಟೋರವರು ಬಚ್ಚಲು ಮನೆಯ ಪಕ್ಕಾಸಿಗೆ  ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 16/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-05-2022 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080