ಅಭಿಪ್ರಾಯ / ಸಲಹೆಗಳು

ಅಸ್ವಾಬಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ವಿಜಯ ಸುವರ್ಣ, (47) ತಂದೆ: ದಿ/ ಕೃಷ್ಣಪ್ಪ ಸುವರ್ಣ, ವಾಸ: ಹೆಗ್ಗಾರಬೈಲು ದೇವಸ್ಥಾನ ಹತ್ತಿರ, ವಕ್ವಾಡಿ, ಕುಂದಾಪುರ ಇವರ ತಾಯಿ ನಾಗರತ್ನ ಸುವರ್ಣ (70) ಮತ್ತು ಕುಟುಂಬದೊಂದಿಗೆ ವಕ್ವಾಡಿಯಲ್ಲಿ ವಾಸವಾಗಿದ್ದು ದಿನಾಂಕ 28/05/2021 ರಂದು 22:00 ಗಂಟೆಗೆ ಇವರ ತಾಯಿ ಎಲ್ಲರೊಂದಿಗೆ ಊಟ ಮಾಡಿ ಮಲಗಿದ್ದು  ದಿನಾಂಕ 29/05/2021 ರಂದು ಬೆಳಗಿನ ಜಾವ ನಾಯಿ ಕೂಗುವ ಸದ್ದು ಕೇಳಿ ವಿಜಯ ಸುವರ್ಣ ರವರು ಮನೆಯಿಂದ ಹೊರಗೆ ಬಂದು ನೋಡಿದಾಗ ನಾಗರತ್ನ ಸುವರ್ಣರವರು ಮನೆಯ ಪಕ್ಕದ ಬಾವಿಯಲ್ಲಿ ಕೂಗಾಡುತ್ತಿರುವುದು ಕೇಳಿ ಬಾವಿ ನೋಡಿದಾಗ ಬಾವಿಗೆ ಅಳವಡಿಸಿ ಪಂಪಸೆಟ್ಟಿನ ಹಗ್ಗ ಹಿಡಿದುಕೊಂಡಿರುವುದು ಕಂಡುಬಂದಿದ್ದು ನಂತರ ಅವರನ್ನು ಬಾವಿಯಿಂದ ಮೇಲಕ್ಕೆತ್ತಲಾಗಿ ಉಸಿರಾಡುತ್ತಿದ್ದು ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ನಾಗರತ್ನ ಸುವರ್ಣರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ನಾಗರತ್ನ ಸುವರ್ಣರವರು  ಯೂವುದೋ ಕಾರಣದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತರ ಮರಣದ ಬಗ್ಗೆ ಯಾವುದೇ ಸಂಶಯ ಇಲ್ಲದೇ ಇರುವುದಾಗಿದೆ, ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 20/2021 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕೋಳಿ ಅಂಕ ಜುಗಾರಿ ಪ್ರಕರಣ

  • ಮಲ್ಪೆ: ದಿನಾಂಕ 29/05/2021 ರಂದು ಸಕ್ತಿವೇಲು ಈ  ಪೊಲೀಸ್  ಉಪ ನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ,  ಉಡುಪಿ ಇವರಿಗೆ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ  ಕಡೇಕಾರು ಗ್ರಾಮ ದ ಸೋಮಯ್ಯ ರಸ್ತೆಯಲ್ಲಿರುವ  ಲಕ್ಷ್ಮೀ  ಮರಕಾಲ್ತಿ  ರವರ  ತೋಟದ  ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಕೋಳಿಗಳ ಕಾಲುಗಳಿಗೆ  ಬಾಳುಗಳನ್ನು ಕಟ್ಟಿ  ಜುಗಾರಿ ಆಟ ನಡೆಸುತ್ತಿರುವವರನ್ನು  ದಾಳಿ ನಡೆಸಿ  ಕೋಳಿ ಜುಗಾರಿ ಆಡುತ್ತಿದ್ದ ಭರತ್, ರಾಜೇಶ, ರವಿಕುಮಾರ, ಸುದರ್ಶನ ರವರುಗಳನ್ನು ವಶಕ್ಕೆ ಪಡೆದು ಜುಗಾರಿ ಆಟಕ್ಕೆ ಬಳಸಿದ ನಗದು 2000 ರೂಪಾಯಿ, 4 ಕೋಳಿಗಳನ್ನು  ಹಾಗೂ ಎರಡು ಕೋಳಿ ಬಾಳುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದು, ಆರೋಪಿತರು ಕೊರೋನಾ ಮಾರಾಣಾಂತಿಕ ಕಾಯಿಲೆ ಹರಡದಂತೆ ಮುಖಕ್ಕೆ ಮಾಸ್ಕ ಧರಿಸದೇ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಉಲ್ಲಂಘಿಸಿರುವುದಾಗಿದೆ.ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 68/2021 ಕಲಂ: 269 ಐಪಿಸಿ & 87, 93  ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಪಡುಬಿದ್ರಿ: ಪಿರ್ಯಾದಿದಾರರಾದ ನಾಗರಾಜ ದೇವಾಡಿಗ (34) ತಂದೆ: ಮಹಾಬಲ ದೇವಾಡಿಗ, ವಾಸ: ಮನೆ ನಂಬ್ರ # 3-68, ತೆಂಕರಗುತ್ತು ಬಳಿ, ಅದಮಾರು ಅಂಚೆ, ಎಲ್ಲೂರು ಗ್ರಾಮ, ಕಾಪು ಇವರು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 12/05/2021 ರಂದು ಕಾಪು ತಾಲೂಕು ಎಲ್ಲೂರು ಗ್ರಾಮದ ಅದಮಾರು ಎಂಬಲ್ಲಿರುವ ಅವರ ನೆರೆಮನೆಯ ನಿವಾಸಿ ಅವಿನಾಶ್ ದೇವಾಡಿಗ ಎಂಬುವರ ಮನೆಯಲ್ಲಿನ ಮೆಹಂದಿ ಕಾರ್ಯಕ್ರಮಕ್ಕೆ ರಾತ್ರಿ ಹೋಗಿದ್ದು, ಸದ್ರಿ ಕಾರ್ಯಕ್ರಮಕ್ಕೆ ನಾಗರಾಜ ದೇವಾಡಿಗ ರವರ ಸಂಬಂಧಿ 1 ನೇ ಆರೋಪಿತ ಸುರೇಶ್ ದೇವಾಡಿಗ, 2 ನೇ ಆರೋಪಿತ ರೋಶನ್ ದೇವಾಡಿಗ, ಮತ್ತು 3 ನೇ ಆರೋಪಿತ ಪ್ರಶಾಂತ್ ದೇವಾಡಿಗ ಎಂಬವರೂ ಸಹ ಬಂದಿದ್ದು, ಅವರ ಜೊತೆ ಮಾತನಾಡುತ್ತಿರುವ ಸಮಯ 1 ನೇ ಆರೋಪಿತನು ಮನೆಯ ವಿಚಾರದಲ್ಲಿ ನಾಗರಾಜ ದೇವಾಡಿಗ ರವರಿಗೆ ಅವಾಚ್ಯವಾಗಿ ಬೈದಿದ್ದು, 2 ನೇ ಆರೋಪಿತನು ನಿನ್ನ ಮನೆ ಬಿಟ್ಟು ಬೇರೆ 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ಇರುವಂತೆ ಹೇಳಿದ್ದು ಇದಕ್ಕೆ ನಾಗರಾಜ ದೇವಾಡಿಗ ರವರು ಅವರ ತಾಯಿಯನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದು ತಿಳಿಸಿರುತ್ತಾರೆ. ನಂತರ ರಾತ್ರಿ 23:30 ಗಂಟೆಗೆ ನಾಗರಾಜ ದೇವಾಡಿಗ ರವರು ಊಟ ಮಾಡಿ ತಮ್ಮ ಮನೆಯ ಕಡೆಗೆ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, 2 ನೇ ಆರೋಪಿತನು ಶರ್ಟ್‌ನ ಕುತ್ತಿಗೆ ಪಟ್ಟಿಯನ್ನು ಹಿಡಿದು ನಿಲ್ಲಿಸಿ, ಪೋನ್ ಮಾಡಿ 1 ಹಾಗೂ3 ನೇ ಆರೋಪಿತರನ್ನು ಸ್ಥಳಕ್ಕೆ ಬರಲು ಹೇಳಿದ್ದು, ನಂತರ  ಸ್ಥಳಕ್ಕೆ ಬಂದ 1 ಹಾಗೂ 3ನೇ ಆಪಾದಿತರು ನಾಗರಾಜ ದೇವಾಡಿಗ ರವರಿಗೆ ಅವಾಚ್ಯ ಶಬ್ಧಗಳಿಂದ ಬೈದು ಕೆನ್ನೆಗೆ ಹಾಗೂ ಮೈ ಕೈಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿರುತ್ತಾರೆ. ಸದ್ರಿ ಹಲ್ಲೆಯಿಂದ ಪಿರ್ಯಾದಿದಾರ ಮೈಕೈಗೆ ಗುದ್ದಿದ ಒಳನೋವು ಹಾಗೂ ಬಲಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಒಳ ಜಖಂ ಆಗಿರುತ್ತದೆ. ನಂತರ ಚಿಕಿತ್ಸೆಯ ಬಗ್ಗೆ ನಿಟ್ಟೆಯ ಸರ್ಕಾರಿ ಆಸ್ಪತ್ರೆಗೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಮನೆಗೆ ಬಂದು ಮರುದಿನ ದಿನಾಂಕ 13/05/2021 ರಂದು ಕಾರ್ಕಳದ ಗಜರಿಯಾ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದು, ದಿನಾಂಕ 20/05/2021 ರಂದು ಬಿಡುಗಡೆ ಹೊಂದಿರುತ್ತಾರೆ. ಅರೋಪಿತರು ನಾಗರಾಜ ದೇವಾಡಿಗ ರವರಿಗೆ ಆಸ್ಪತ್ರೆಯ ಪೂರ್ತಿ ಖರ್ಚು ವೆಚ್ಛವನ್ನು ಭರಿಸುವುದಾಗಿ ತಿಳಿಸಿ ಕೇವಲ ರೂಪಾಯಿ. 15,000/- ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2021, ಕಲಂ: 341, 504, 323, 325 506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬ್ರಹ್ಮಾವರ: ಪಿರ್ಯಾದಿದಾರರಾದ ಕೆ.ಸಿ ಐಸಾಕ್, (86), ತಂದೆ: ದಿ| ಚಾಕೋ, ವಾಸ: ಚೆಗತ್ತ್‌‌‌ಕಲ್ ಮನೆ, ಶಿರೂರು ಅಂಚೆ, ಬೈಂದೂರು ಇವರು ಬ್ರಹ್ಮಾವರ ತಾಲೂಕು 52 ನೇ ಹೇರೂರು ಗ್ರಾಮದ S.M.S PU ಕಾಲೇಜು ಎದುರುಗಡೆ ಹಾಗೂ ಸೈಂಟ್ ಪೀಟರ್ ಚರ್ಚ್‌ ಪಕ್ಕದಲ್ಲಿ ಇರುವ ಆಲ್ಪಾ ಓಮೇಗಾ ಚಾರಿಟೇಬಲ್ ಟ್ರಸ್ಟ್ ರಿ. ಇದರ ಸ್ನೇಹಾಲಯ ವೃದ್ಧಾಶ್ರಮದಲ್ಲಿ ಕಾರ್ಯದರ್ಶಿಯಾಗಿದ್ದು, ದಿನಾಂಕ 29/05/2021 ರಂದು ಸದ್ರಿ ಆಶ್ರಮದಲ್ಲಿ ವಾಸವಾಗಿರುವ ತೇಜು @ ಬಯ್ಯ ಎಂಬವರನ್ನು ಬೆಳಿಗ್ಗೆ 11:30 ಗಂಟೆಗ ಸುಮಾರಿಗೆ ಸ್ನಾನ ಮಾಡಿಸುವ ಬಗ್ಗೆ ಅವರು ವಿಶ್ರಾಂತಿ ಪಡೆಯುವ ಬೆಡ್‌‌ನಿಂದ T.V ಹಾಲಿನ ಪಕ್ಕದ ಬಾತ್‌ರೂಮ್‌ಗೆ  ಅದೇ ಆಶ್ರಮದ ವಾಸಿ ಪುಟ್ಟಣ್ಣ ಎಂಬವರು ಕರೆದುಕೊಂಡು ಬರುವಾಗ, ತೇಜು @ ಬಯ್ಯ ಎಂಬವರು ಸ್ನಾನಕ್ಕೆ ಬರಲು ಒಪ್ಪದೇ ಪುಟ್ಟಣ್ಣರವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ದುಡುಕಿನಿಂದ ಪುಟ್ಟಣ್ಣ (70) ರವರ ಮೇಲೆ  ಮಾಡಿದ ಬಲ ಪ್ರಯೋಗದ ಪರಿಣಾಮ ಪುಟ್ಟಣ್ಣರವರು ಆಯ ತಪ್ಪಿ ಹಾಲ್‌ನಲ್ಲಿ ನೆಲಕ್ಕೆ ಬಿದ್ದು  ತಲೆಯ ಹಿಂಭಾಗಕ್ಕೆ ಉಂಟಾದ ತೀವ್ರ ಗಾಯದ ಪರಿಣಾಮ ಪುಟ್ಟಣ್ಣ ರವರು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101/2021 ಕಲಂ: 304 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾಪು: ಕೋವಿಡ್-19 ಕೊರೋನಾ ಸೊಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಜನರು ಗುಂಪು ಸೇರುವುದನ್ನು ನಿರ್ಬಂಧಿಸುವರೇ ಮಾರ್ಗಸೂಚಿಯನ್ನು ಜ್ಯಾರಿಗೊಳಿಸಿದ್ದು ಸದ್ರಿ ಆದೇಶವು ಉಲ್ಲಂಘಿಸಿರುವುದಾಗಿ ಮಜೂರು ದೊಡ್ಡಮನೆ ಕುಟುಂಬದ ಸದಸ್ಯರಾದ ಜಗದೀಶ್ ಎಸ್ ಹೆಗ್ಡೆ ವಕೀಲರು, ಮುಂಬೈ ರವರು, ಮಾನ್ಯ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ. ಉಡುಪಿ ರವರಿಗೆ ನೀಡಿದ ದೂರಿನ ಅರ್ಜಿಯ ವಿಚಾರಣೆಗೆ ಸಂಬಂದಿಸಿದಂತೆ, ದಿನಾಂಕ 30/04/2021 ರಂದು ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ ಫೇರ್ ಅಸೋಷಿಯೆಷನ್, ಮಜೂರು. ಸದ್ರಿ ಸಂಸ್ಥೆಯವರು ಹಾಗೂ ಪುಣೆಯಿಂದ ಆಗಮಿಸಿದ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಒಳಗಾಗದ 50 ಕ್ಕಿಂತ ಹೆಚ್ಚು ಮಂದಿ ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಕಾಪಾಡದೇ ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ ಫೇರ್ ಅಸೋಷಿಯೆಷನ್ ಇದರ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮಜೂರು ಗ್ರಾಮದ ದೊಡ್ಡಮನೆಯಲ್ಲಿ ನಡೆಸಿ ಸರಕಾರದ ಹಾಗೂ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿದ್ದು,  ಈ ಸಂಬಂಧ, ರಮೇಶ್ ಶೆಟ್ಟಿ ಅಂಗಡಿಗುತ್ತು ಕಳತ್ತೂರು ರವರ ಹೇಳೀಕೆಯನ್ನು ಸದ್ರಿ  ನೀಡಿದ ಹೇಳಿಕೆಯಲ್ಲಿ  “ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ ಫೇರ್ ಅಸೋಷಿಯೆಷನ್ ಕಳೆದ ಎಂಟು ವರ್ಷಗಳಿಂದ ಮಜೂರು ದೊಡ್ಡಮನೆಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು ಕಳೆದ ವರ್ಷ ಕೊರೋನಾ ಸೊಂಕಿನ ಹರಡುವಿಕೆಯ ಕಾರಣದಿಂದ ಕಾರ್ಯಕ್ರಮವನ್ನು ನಡೆಸಿರುವುದಿಲ್ಲ ಆದರೆ ಈ ವರ್ಷ ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ ಫೇರ್ ಅಸೋಷಿಯೆಷನ್ ಇದರ ವಾರ್ಷಿಕ ಕಾರ್ಯಕ್ರಮವನ್ನು ನಡೆಸುವರೇ, ತಾವೂ ಸಹಿತ, ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಎಸ್. ಹೆಗ್ಡೆ, ಗೌರವಾಧ್ಯಕ್ಷರಾದ ಸಾಂತೂರು ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿಗಳಾದ ಭಾಸ್ಕರ್ ಡಿ ಶೆಟ್ಟಿ ರವರೊಂದಿಗೆ ಚರ್ಚಿಸಿ ದಿನಾಂಕ 30/04/2021 ರಂದು ಮಜೂರು ದೊಡ್ಡಮನೆಯಲ್ಲಿ ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ ಫೇರ್ ಅಸೋಷಿಯೆಷನ್ ನ 8ನೇ ವರ್ಷದ ವಾರ್ಷಿಕ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿ ಕಾರ್ಯಕ್ರಮ ನಡೆಸುವರೇ ಅನುಮತಿ ನೀಡುವಂತೆ ಸಂಸ್ಥೆಯ ಅಧ್ಯಕ್ಷರ ಮುಖಾಂತರ ಮಾನ್ಯ ತಹಶೀಲ್ದಾರರು, ತಾಲೂಕು ಕಛೇರಿ ಕಾಪು ರವರಿಗೆ ಕೋರಿಕೆ ಪತ್ರವನ್ನು ಸಲ್ಲಿಸಿದ್ದು ಅದರೆ ಮಾನ್ಯ ಕಾಪು ತಹಶೀಲ್ದಾರರಿಂದ ಅನುಮತಿ ದೊರೆಯದೇ ಇದ್ದುದರಿಂದ ನಾವುಗಳು ಪರಸ್ಪರ ಚರ್ಚಿಸಿ ದಿನಾಂಕ 30/04/2021 ರಂದು ಮಜೂರು ದೊಡ್ಡಮನೆಯಲ್ಲಿ ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ ಫೇರ್ ಅಸೋಷಿಯೆಷನ್ ನ 8ನೇ ವರ್ಷದ ವಾರ್ಷಿಕ ಕಾರ್ಯಕ್ರಮವನ್ನು ನಡೆಸಿರುವುದಾಗಿ ತಿಳಿಸಿದ್ದು, ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ ಫೇರ್ ಅಸೋಷಿಯೆಷನ್ ಇದರ ಅಧ್ಯಕ್ಷರಾದ ಸುಭಾಶ್ಚಂದ್ರ ಎಸ್. ಹೆಗ್ಡೆ, ಗೌರವಾಧ್ಯಕ್ಷರಾದ ಸಾಂತೂರು ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿಗಳಾದ ಭಾಸ್ಕರ್ ಡಿ ಶೆಟ್ಟಿ, ಖಜಾಂಚಿ ರಮೇಶ್ ಶೆಟ್ಟಿ ಅಂಗಡಿಗುತ್ತು ಕಳತ್ತೂರು  ರವರುಗಳು ತಮ್ಮ ಮುಂದಾಳ್ವತದಲ್ಲಿ ಮಾನ್ಯ ತಹಶೀಲ್ದಾರರು ಕಾಪು ತಾಲೂಕು ರವರ ಅನುಮತಿ ಇಲ್ಲದೇ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತದ ಕೋವಿಡ್-19 ಮಾರ್ಗಸೂಚಿಯನ್ನು ಉಲ್ಲಂಘಿಸಿ ದಿನಾಂಕ 30/04/2021 ರಂದು ಮಜೂರು ದೊಡ್ಡಮನೆ ಯಲ್ಲಿ ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ ಫೇರ್ ಅಸೋಷಿಯೆಷನ್ ಇದರ 8ನೇ ವರ್ಷದ ವಾರ್ಷಿಕ ಕಾರ್ಯಕ್ರಮವನ್ನು ನಡೆಸಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 91/2021 ಕಲಂ: 269 271 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಆರೋಪಿ ಪ್ರಭಾಕರ ಶೆಟ್ಟಿ (60) ತಂದೆ, ಸಂಜೀವ ಶೆಟ್ಟಿ ವಾಸ,ಚೋರಾಡಿ ವಂಡಾರು  ಗ್ರಾಮ ಬ್ರಹ್ಮಾವರ ತಾಲೂಕು ಇತನು ದಿನಾಂಕ 29/05/2021 ರಂದು 16:10 ಘಂಟೆಗೆ ಬ್ರಹ್ಮಾವರ  ತಾಲೂಕಿನ ವಂಡಾರು ಗ್ರಾಮದ ಮಾರ್ವಿ ನೀರೊಣಿ ಎಂಬಲ್ಲಿ ಸಾರ್ವಜನಿಕ ಬಸ್ಸು ನಿಲ್ದಾಣದ ಒಳಗಡೆ ಕೋವಿಡ್-19 ಸಾಂಕ್ರಾಮಿಕ ಕರೋನಾ ಸೊಂಕನ್ನು ತಡೆಗಟ್ಟಲು ಜಿಲ್ಲಾಡಳಿತ ನಿಷೇದಾಜ್ಜೆಯನ್ನು ಜಾರಿಗೊಳಿಸಿದ್ದು, ಉಡುಪಿ ಜಿಲ್ಲಾಡಳಿತದ ಹಾಗೂ ಘನ ಸರಕಾರದ ಆದೇಶವನ್ನು ಉಲ್ಲಂಘಿಸಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ, ಸಾರ್ವಜನಿಕ ಬಸ್ಸು ನಿಲ್ದಾಣದಲ್ಲಿ ಅಕ್ರಮವಾಗಿ ಶರಾಬು ಸೇವನೆ ಮಾಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 KARNATAKA EXCISE ACT, 1965 (U/s-15(A)); IPC 1860 U/s-269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 30-05-2021 09:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080