ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಹಮ್ಜಾದ್ ಅಲಿ (33) ತಂದೆ: ಪಿ.ಜೆ. ಇಸ್ಮಾಯಿಲ್ ವಾಸ: ಆಶಿಯಾನ್ ಅಪಾರ್ಟಮೆಂಟ್ ರೂಮ್ ನಂಬ್ರ 003, ಪಡು ಗ್ರಾಮ ಕಾಪು ಇವರು ದಿನಾಂಕ 30/05/2021 ರಂದು ತನ್ನ ಸ್ಕೂಟರ್ ನಂಬ್ರ ಕೆಎ-20-ಇವಿ-7583 ನೇದರಲ್ಲಿ ಮಹಮ್ಮದ ಅಪ್ಸರ್‌ಎಂಬವರನ್ನು ಸಹ ಸವಾರನಾಗಿ ಕುಳ್ಳರಿಸಿಕೊಂಡು ಉಡುಪಿ ಮಂಗಳೂರು ರಾಷ್ರೀಯ ಹೆದ್ದಾರಿ 66 ರಲ್ಲಿ ಕೊಪ್ಪಲಂಗಡಿ ಕಡೆಗೆ ಹೋಗುತ್ತಿರುವಾಗ, ಕೊಪ್ಪಲಂಗಡಿ ನೂರುಲ್ಲಾ ಹುದಾ ಮದ್ರಾಸ್ ಬಳಿ ತಲುಪುತ್ತಿದ್ದಂತೆ ಬೆಳಗ್ಗೆ 10:10 ಗಂಟೆಗೆ, ಅದೇ ರಸ್ತೆಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಕೆಎ-20-ಎಎ-3997 ನೇದರ ಲಾರಿಯ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹಿಂದಿನಿಂದ ಚಲಾಯಿಸಿಕೊಂಡು ಬಂದು ಓವರ್‌ಟೇಕ್ ಮಾಡುವಾಗ ಹಮ್ಜಾದ್ ಅಲಿ ರವರ ಸ್ಕೂಟರ್‌‌ಗೆ ಢಿಕ್ಕಿ ಹೊಡೆದ ಪರಿಣಾಮ ಹಮ್ಜಾದ್ ಅಲಿ ರವರು ಮತ್ತು ಸಹ ಸವಾರ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದಿದ್ದು ಹಮ್ಜಾದ್ ಅಲಿ ರವರಿಗೆ ಬಲಕೈಯ ಕೋಲು ಕೈಗೆ, ಬಲಭುಜಕ್ಕೆ, ಎಡಕೈಯ ಮಣಿಗಂಟಿನ ಕೆಳಗಡೆ ಎರಡು ಕಾಲುಗಳ ಮೊಣಗಂಟಿಗೆ ಬಲಕಾಲಿನ ಪಾದದ ಮೇಲ್ಭಾಗಕ್ಕೆ ರಕ್ತ ಗಾಯ ಮತ್ತು ಸಹಸವಾರರಿಗೆ ಹಣೆಗೆ, ಬಲಕೈಗೆ ಬಲಬದಿಯ ಸೊಂಟಕ್ಕೆ ಬಲಕಾಲಿನ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ. ಹಮ್ಜಾದ್ ಅಲಿ ರವರ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಲಾರಿಯನ್ನು ಅದರ ಚಾಲಕ ಮುಂದಕ್ಕೆ ನಿಲ್ಲಿಸಿ ನಂತರ ಚಲಾಯಿಸಿಕೊಂಡು ಹೋಗಿರುವುದಾಗಿದೆ. ಅಲ್ಲಿ ಸೇರಿದ ಜನರ ಸಹಾಯದಿಂದ ಒಂದು ವಾಹನದಲ್ಲಿ ಕಾಪು ಪ್ರಶಾಂತ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 92/2021, ಕಲಂ: 279 338 IPC & 134(A&B) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಬಾವಿಕ ಮರಣ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ಗ್ಯಾನಪ್ಪ ಹುಲಿಗಪ್ಪ ಕುರಿ (34) ತಂದೆ: ದಿ, ಹುಲಿಗಪ್ಪ ಕುರಿ, ವಾಸ: ಶ್ರೀ ದುರ್ಗಾ ನಿಲಯ, ಪಡುಅಲೆವೂರು, ಪೆರುಪಾದೆ ರಸ್ತೆ,  ಉಡುಪಿ ಇವರ ಚಿಕ್ಕಪ್ಪನ ಮಗನಾದ ಗ್ಯಾನಪ್ಪ ನರಿಯಪ್ಪ ಕುರಿ (23) ಎಂಬಾತನು ಉಡುಪಿಯಲ್ಲಿ ಕೂಲಿ ಕಾರ್ಮಿಕನಾಗಿದ್ದು, ಉಡುಪಿ  ತಾಲೂಕು ಪುತ್ತೂರು ಗ್ರಾಮದ ಕುದ್ಮಲ್‌ ರಂಗರಾವ್‌ ನಗರದ ಬಾಷಾ ಸಾಹೇಬ್‌ರವರ ಬಾಡಿಗೆ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಒಬ್ಬನೇ ವಾಸವಿದ್ದು, ಅವಿವಾಹಿತನಾಗಿದ್ದವನು, ಆತನ ಯಾವುದೋ ವೈಯಕ್ತಿಕ ವಿಚಾರಕ್ಕೆ  ಮನನೊಂದು ದಿನಾಂಕ 29/05/2021 ರಂದು ರಾತ್ರಿ 10:00 ಗಂಟೆಯಿಂದ ಬೆಳಿಗ್ಗೆ 7:30 ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಿದ್ದ ಬಾಡಿಗೆ ಮನೆಯ  ಮಾಡಿನ ಷೀಟಿಗೆ ಅಡ್ಡಲಾಗಿ ಹಾಕಿದ ಕಬ್ಬಿಣದ ಪೈಪಿಗೆ  ಚೂಡಿದಾರದ ನೈಲಾನ್‌ ವೇಲ್‌ನಿಂದ  ಕುತ್ತಿಗೆಗೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 21/2021 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಶಂಕರನಾರಾಯಣ: ದಿನಾಂಕ 18/05/2021 ರಂದು  ಬೆಳಿಗ್ಗೆ 9:30 ಗಂಟೆಗೆ ಪಿರ್ಯಾದಿದಾರರಾದ ಸುರೇಂದ್ರ ನಾಯ್ಕ (34) ತಂದೆ, ಸುಬ್ರಾಯ ನಾಯ್ಕ ವಾಸ, ಸುರ್ಗೊಳ್ಳಿ   ಅಬ್ಬಿಕಟ್ಟೆ  ಬೆಳ್ಬೆ ಗ್ತಾಮ ಹೆಬ್ರಿ ತಾಲೂಕು ಇವರ ತಾಯಿ ಶ್ರೀಮತಿ ಸೀತು (52) ಇವರು ಅವರ ವಾಸದ ಮನೆಯಾದ ಹೆಬ್ರಿ ತಾಲೂಕಿನ ಬೆಳ್ವೆ   ಗ್ರಾಮದ ಸುರ್ಗೋಳ್ಳಿ ಅಬ್ಬಿಕಟ್ಟೆ ಎಂಬಲ್ಲಿ ಕೊಟ್ಟಿಗೆಯಲ್ಲಿ ಇದ್ದ ದನವನ್ನು ಮೇಯಲು ಕಟ್ಟಲು ಹೋದಾಗ ಅಲ್ಲಿಯೇ  ಮೇಯಲು ಬಿಟ್ಟ ಎತ್ತು ಅವರಿಗೆ ಗುದ್ದಿದ್ದು ಇದರ ಪರಿಣಾಮ ಅವರ ಕುತ್ತಿಗೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಕೂಡಲೇ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆಯ   ಬಗ್ಗೆ ದಾಖಲು ಮಾಡಿದ್ದು, ಅಲ್ಲಿಂದ ದಿನಾಂಕ 27/05/2021 ರಂದು  ಉಡುಪಿ  ಜಿಲ್ಲಾ  ಸರಕಾರಿ   ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 29/05/2021 ರಂದು 23:30   ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 19/2021 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಹೆಬ್ರಿ: ಪಿರ್ಯಾದಿದಾರರಾದ ಅಭಿಷೇಕ್ ಶೆಟ್ಟಿಗಾರ್ (21) ವಾಸ: 5 ಸೇಂಟ್ಸ್ ಬಚ್ಚಪು ಹೆಬ್ರಿ ಗ್ರಾಮ ಹೆಬ್ರಿ ಇವರ ತಂದೆ ಶೇಖರ ಶೆಟ್ಟಿಗಾರ್ (49) ರವರು ಸುಮಾರು ವರ್ಷಗಳಿಂದ ಹೆಬ್ರಿ ಪೇಟೆಯಲ್ಲಿರುವ ಶ್ರೀ ಗಣೇಶ್ ಹೋಟೇಲ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು. ಈಗ ಲಾಕ್ ಡೌನ್ ಇರುವುದರಿಂದ ಹೆಬ್ರಿ ಗ್ರಾಮದ ಬಚ್ಚಪ್ಪು ಎಂಬಲ್ಲಿರುವ  ಅವರ ಮನೆಯಲ್ಲಿಯೇ ಇದ್ದು. ದಿನಾಂಕ 29/05/2021 ರಂದು ರಾತ್ರಿ ಸಮಯ ಶೇಖರ ಶೆಟ್ಟಿಗಾರ್ ಇವರಿಗೆ ವಿಪರೀತ ತಲೆ ನೋವುಂಟಾಗಿ ಮನೆಯಲ್ಲಿ ಮಲಗಿದವರು ದಿನಾಂಕ 30/05/2021 ರಂದು ಮುಂಜಾನೆ 03:15 ಗಂಟೆಗೆ ಅವರು ಎದ್ದಾಗ ಅಲ್ಲಿಯೇ ಕುಸಿದು ಬಿದ್ದು ಮಾತನಾಡದ ಕಾರಣ ಅವರನ್ನು 108 ಅಂಬುಲೈನ್ಸ್ ವಾಹನದಲ್ಲಿ ಮುಂಜಾನೆ 04:30 ಗಂಟೆಗೆ ಚಿಕಿತ್ಸೆಯ ಬಗ್ಗೆ ಹೆಬ್ರಿ ಸರಕಾರಿ ಅಸ್ಪತ್ರೆಗೆ ತಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಅವರು ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ ಮೃತರು ಹೃದಯಾಘಾತದಿಂದ ಮೃತ ಪಟ್ಟಿರುವ ಸಾದ್ಯತೆ ಇರುತ್ತದೆ ಮೃತರ ಮರಣದಲ್ಲಿ ಬೇರೆ ಯಾವುದೇ ಸಂದೇಹ ಇರುವುದಿಲ್ಲವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 18/2021 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಶಂಕರನಾರಾಯಣ: ಪಿರ್ಯಾದಿದಾರರಾಧ ರತ್ನಾಕರ ಶೆಟ್ಟಿ (38) ತಂದೆ ಮಂಜಯ್ಯ ಶೆಟ್ಟಿ ವಾಸ, ಗುಮ್ಟಿಬೇರು ಯಡಮೊಗ್ಗೆ ಗ್ರಾಮ ಕುಂದಾಪುರ ಇವರ ಅಣ್ಣ  ಆನಂದ  ಶೆಟ್ಟಿ (58) ಇವರು ಸುಮಾರು 5  ವರ್ಷದಿಂದ ಮಾನಸಿಕ ರೋಗದಿಂದ ಬಳಲುತ್ತಿದ್ದು, ಈ ಬಗ್ಗೆ ಕುಂದಾಪುರ ಡಾ, ಕಾರಂತ್ ಎಂಬುವರಲ್ಲಿ  ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಕಾಯಿಲೆ ಗುಣವಾಗಿರಲಿಲ್ಲ, ಇದೇ ಕಾರಣದಿಂದ ಜೀವನದಲ್ಲಿ  ಜಿಗುಪ್ಸೆಗೊಂಡು ದಿನಾಂಕ 29/05/2021 ರಂದು 21:00 ಗಂಟೆಯಿಂದ ದಿನಾಂಕ 30/05/2021 ರಂದು   ಬೆಳಿಗ್ಗೆ 7:00 ಗಂಟೆಯ ಮದ್ಯದ ಅವಧಿಯಲ್ಲಿ ಕುಂದಾಪುರ ತಾಲೂಕಿನ ಯಡಮೊಗ್ಗೆ ಗ್ರಾಮದ ಗುಮ್ಟಿಬೇರು ಎಂಬಲ್ಲಿ ವಾಸದ ಮನೆಯ ಪಕ್ಕಾಸಿಗೆ ಕುತ್ತಿಗೆಗೆ ನೈಲಾನ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 20/2021 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 30-05-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080