ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ 29/04/2023 ರಂದು 20:30 ಗಂಟೆಗೆ ಕಾರ್ಕಳ  ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಹಾದು ಹೋಗಿರುವ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಏಸ್ ವಾಹನ ನಂಬ್ರ KA-20 D-5880 ನೇಯದರ ಚಾಲಕ ರಾಜೇಂದ್ರ ಶೆಟ್ಟಿಗಾರ್ ಎಂಬಾತನು ಏಸ್ ವಾಹನವನ್ನು ನಿಟ್ಟೆ ಕಡೆಯಿಂದ ಕಾರ್ಕಳ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ ಭೋಜ ಎಂಬವರಿಗೆ ಢಿಕ್ಕಿ ಹೊಡೆದು ತಲೆಯ ಎಡಬದಿಗೆ ತೀವೃ ಗಾಯ ಹಾಗೂ ಕೈಕಾಲುಗಳಿಗೆ ತರಚಿದ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿಯ ವೈದ್ಯರಲ್ಲಿ ತೋರಿಸಿದಾಗ, ವೈದ್ಯರು ಗಾಯಾಳುವನ್ನು ಪರೀಕ್ಷಿಸಿ, ಭೋಜರವರು ಅದಾಗಲೇ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ, ಎಂಬುದಾಗಿ ಶಶಿಕಾಂತ, (31), ತಂದೆ: ಸುಂದರ ಮೇರ, ವಾಸ: ಸುರ್ಲಗುರಿ ಮನೆ, ಪರ್ಪಲೆ ಸಾಣೂರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಇವರು ನೀಡಿದ ದೂರಿನಬಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 57/2023 ಕಲಂ: 279 304 (ಎ)   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾಧ ಪ್ರಮೋದ್‌‌‌‌‌‌ಪೂಜಾರಿ  (43), ತಂದೆ  ಕೋಟೆಪ್ಪ  ಪೂಜಾರಿ, ಪಣಿಯಕ್ಕ  ಹೌಸ್‌‌‌‌‌,  ಮ.ನಂ. 1-119, ಭಗವತಿ ಅಮ್ಮನವರ ದೇವಸ್ಥಾನದ  ಹತ್ತಿರ, ಗುಂಡ್ಮಿ ಗ್ರಾಮ,  ಬ್ರಹ್ಮಾವರ ಇವರು ದಿನಾಂಕ 29/04/2023 ರಂದು ಕಾರ್ಕಡದಲ್ಲಿ ಕೆಲಸ ಮಾಡಿ ಮಧ್ಯಾಹ್ನ ಊಟಕ್ಕೆಂದು ಬರುತ್ತಿದ್ದು, ಮಧ್ಯಾಹ್ನ 1:30 ಗಂಟೆ ಸುಮಾರಿಗೆ ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಡಿವೈನ್‌‌‌‌‌‌‌‌‌ಪಾರ್ಕ್‌ನ ಎದುರು ಅಂಗಡಿಯಲ್ಲಿ ನಿಂತುಕೊಂಡಿರುವಾಗ, ರಾ.ಹೆ . 66 ಉಡುಪಿ - ಕುಂದಾಪುರ ಮುಖ್ಯರಸ್ತೆಯಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅಪಘಾತಕ್ಕೀಡಾದ ಕೇಶವ (41) ರವರು ಸೈಕಲ್‌‌‌‌ಸವಾರಿ ಮಾಡಿಕೊಂಡು ಹೋಗುತ್ತಿದ್ದು, ಆಗ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಚಾಲಕ ಅರ್ಜುನ್‌ಶೆಣೈ ಎಂಬಾತನು ತನ್ನ ಬಿಳಿ ಬಣ್ಣದ ನಂ. KA-20 MD-6413 ನೇ ಕ್ರೆಟಾ ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸೈಕಲಿಗೆ ಹಿಂದಿನಿಂದ ಢಿಕ್ಕಿ ಹೊಡೆದನು. ಅಪಘಾತದ ಪರಿಣಾಮ ಕಾರು, ಚಾಲಕನ ಹತೋಟಿ ತಪ್ಪಿ ರಸ್ತೆಯ ತೀರಾ ಎಡಬದಿಗೆ ಚಲಿಸಿ ರಸ್ತೆ ಬದಿಯ ಸ್ಟೋನ್‌‌‌‌‌‌‌‌‌ ‌ಗಾರ್ಡ್ ನ ಎರಡು ಕಲ್ಲು ತುಂಡು ಮಾಡಿ ಅಲ್ಲಿಯೇ ಪಕ್ಕದಲ್ಲಿದ್ದ ಸಣ್ಣ ಮರದ ಮೇಲಕ್ಕೆ ಚಲಿಸಿ, ರಸ್ತೆಯ ಬದಿ ತಗ್ಗಿನಲ್ಲಿ ಪಲ್ಟಿಯಾಗಿರುತ್ತದೆ. ಸೈಕಲ್‌ಸವಾರ ಕೇಶವ ರವರು ಸೈಕಲ್‌‌‌‌‌‌‌‌ಸಮೇತ ಎಸೆಯಲ್ಪಟ್ಟು ರಸ್ತೆಯ ಪಶ್ಚಿಮ ಬದಿಯ ತಗ್ಗಿನ ಜಾಗಕ್ಕೆ ಬಿದ್ದು ತಲೆಯ ಎಡಭಾಗ ಮತ್ತು ಎಡಕಾಲಿನ ಮೂಳೆ ಮುರಿತದ ತೀವ್ರತರದ ಗಾಯ ಹಾಗೂ ಮೈಕೈಗೆ ಗಾಯವಾಗಿ ಪ್ರಜ್ಞಾಹೀನರಾಗಿ, ಗಾಯದ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿರುವುದಾಗಿದೆ. ಈ ಅಪಘಾತಕ್ಕೆ ನಂ. KA 20 MD 6413 ನೇ ಕಾರಿನ ಚಾಲಕ ಅರ್ಜುನ್‌‌‌‌‌‌ಶೆಣೈ ಎಂಬಾತನ ಅತೀವೇಗ ಹಾಗೂ ನಿರ್ಲಕ್ಷತನ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 72/2023 ಕಲಂ: 279 304 (ಎ)   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಫಿರ್ಯಾದಿದಾರರಾಧ ಮಹಾದೇವ (37) ತಂದೆ: ಕಾಳಯ್ಯ ಪೂಜಾರಿ  ವಾಸ: ಕಳಿಪಟ್ಟಿ ಮನೆ, ಕಾಲ್ತೋಡು ಅಂಚೆ ಮತ್ತು ಗ್ರಾಮ, ಬೈಂದೂರು ಇವರ ದೊಡ್ಡಮ್ಮನ ಮಗ ಸತೀಶ್ ಪೂಜಾರಿಯು ದಿನಾಂಕ28/04/2023 ರಂದು ಫಿರ್ಯಾದುದಾರರ KA-20 EF-4880 ನೇ Hero Super Splendor ಮೋಟಾರು ಸೈಕಲ್  ನಲ್ಲಿ ಅಕ್ಕನಾದ ಸುಶೀಲಾ ಪೂಜಾರ್ತಿ ಎಂಬವರನ್ನು ಹಿಂಬದಿ ಸಹ ಸವಾರಳಾಗಿ ಕುಳಿರಿಸಿಕೊಂಡು ಉಪ್ಪುಂದ ಶಾಲೆಬಾಗಿಲು ಆರಾಧ್ಯ ಕ್ಲಿನಿಕ್  ಗೆ ಕರೆದು ಕೊಂಡು ಹೋಗಿ ಚಿಕಿತ್ಸೆ  ಕೊಡಿಸಿ  ವಾಪಾಸ್ಸು ಅಂಬಾಗಿಲಿನಿಂದ ಕಾಲ್ತೋಡು ಮನೆ ಕಡೆಗೆ ಹೊಸ್ಕೋಟೆ – ಮಾಣಿಯಾಡಿ ರಸ್ತೆಯಲ್ಲಿ ಮೋಟಾರು ಸೈಕಲ್ ನ್ನು ಸವಾರಿ ಮಾಡಿಕೊಂಡು  ಬರುತ್ತಿರುವಾಗ ಸಮಯ ಸುಮಾರು 18:00 ಗಂಟೆಗೆ ಬಿಜೂರು ಗ್ರಾಮದ ಮಾಣಿಯಾಡಿ ಎಂಬಲ್ಲಿ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ  ಪರಿಣಾಮ ಮೋಟಾರು ಸೈಕಲ್ ಸವಾರನ ನಿಯಂತ್ರಣ ತಪ್ಪಿ ಬಿದ್ದು ಸಹ ಸವಾರಳಾಗಿ ಕುಳಿತಿದ್ದ ಸುಶೀಲಾ ರವರು ರಸ್ತೆ ಗೆ ಬಿದ್ದಿದ್ದು  ಅವರ ತಲೆಗೆ ತೀವ್ರ ಸ್ವರೂಪದ  ಒಳ ಜಖಂ  ಆಗಿ ಕಿವಿಯಿಂದ & ಮೂಗಿನಿಂದ ರಕ್ತ ಬಂದಿದ್ದು ಬಲ ಭುಜದ ಹಿಂಭಾಗ  ರಕ್ತಗಾಯವಾಗಿದ್ದು, ವಿಷಯ ತಿಳಿದ ಫಿರ್ಯಾದಿದಾರರು ಅಪಘಾತವಾದ ಸ್ಥಳಕ್ಕೆ ಹೋಗಿ ಸತೀಶ್ ಪೂಜಾರಿಯವ ರೊಂದಿಗೆ ಗಾಯಾಳು ಸುಶೀಲಾ ಪೂಜಾರ್ತಿ ಯವರನ್ನು   ಚಿಕಿತ್ಸೆ ಬಗ್ಗೆ  108 ಅಂಬುಲೆನ್ಸ್ ನಲ್ಲಿ  ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಅಲ್ಲಿನ ವೈದ್ಯರು  ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ  ಕರೆದುಕೊಂಡು ಹೋಗಲು ಸೂಚಿಸಿದ ಮೇರೆಗೆ  ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ  ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿ  ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 66/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಜೆಕಾರು: ಪಿರ್ಯಾದಿದಾರರಾದ .ಸಿ ಚೇತನ್ (36) ತಂದೆ: ಕೆ ಚಂದ್ರರಾಜ ಹೆಗ್ಡೆ, ವಾಸ: ಮೇಗಿನ ಮನೆ, ಕೆರ್ವಾಶೆ ಅಂಚೆ, ಕಾರ್ಕಳ ರವರು ದಿನಾಂಕ 29/4/2023 ರಂದು ತನ್ನ ಕೆಎ-20 ಇಎಫ್-4116 ನೇ ಮೋಟಾರ್ ಸೈಕಲಿನಲ್ಲಿ ಕಾರ್ಕಳದಿಂದ ತನ್ನ ಮನೆ ಕಡೆಗೆ ಬರುತ್ತಿರುವಾಗ ಕೆರ್ವಾಶೆ ಗ್ರಾಮದ  ಮುಗ್ಗೇರ್ಕಳ ಬಳಿ ಮದ್ಯಾಹ್ನ 2:40 ಗಂಟೆಗೆ, ಪಿರ್ಯಾದಿದಾರರ ಎದುರುಗಡೆ ಕೆರ್ವಾಶೆ ಕಡೆ ರಸ್ತೆಯಿಂದ ಒಂದು ಟಿಪ್ಪರ್ ಲಾರಿಯನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ರಸ್ತೆಯ ಎಡಬದಿಯಲ್ಲಿ ಬರುತ್ತಿದ್ದ ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ, ಇವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಬಲಕೈ ಕಿರುಬೆರಳು, ಬಲಗಾಲಿನ ಕಿರು ಬೆರಳು ಮೂಳೆ ಮುರಿತವಾಗಿದ್ದು, ಹಾಗೂ ಹಣೆಯ ಎಡಬದಿ, ಎಡಕೈ ಮೊಣಗಂಟಿನ ಬಳಿ ಗಾಯವಾಗಿರುತ್ತದೆ. ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಟಿಪ್ಪರ್ ಚಾಲಕನು, ಅಪಘಾತದಿಂದ ಗಾಯಗೊಂಡ ಸಿ ಚೇತನ್‌ ರವರನ್ನು ಉಪಚರಿಸದೇ,  ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 12/2023  ಕಲಂ 279, 337, 338 ಐ.ಪಿ.ಸಿ ಮತ್ತು ಕಲಂ:134 (ಎ)(ಬಿ)ಐ.ಎಂ.ವಿ ಕಾಯ್ದೆ 1988  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಫುರ: ಫಿರ್ಯಾದಿದಾರರಾಧ ನವೀನ್‌ (30) ತಂದೆ: ದ್ಯಾವ ವಾಸ: ಹಟ್ಟಿಯಂಗಡಿ ಕ್ರಾಸ್‌, ಕನ್ಯಾನ ಗ್ರಾಮ, ಕುಂದಾಪುರ ತಾಲೂಕು. ಇವರು ಅಕ್ಕ ಸಾಕು (38) ರವರು ದಿನಾಂಕ 29/04/2023 ರಂದು ಬೆಳಿಗ್ಗೆ ಬಸ್ರೂರು ಗ್ರಾಮದ ಹಟ್ಟಿಕುದ್ರು ಎಂಬಲ್ಲಿರುವ ಅನಿಲ ಶೆಟ್ಟಿ ರವರ ತೋಟಕ್ಕೆ ಕೃಷಿ ಕೆಲಸಕ್ಕೆ ಹೋಗಿದ್ದವರು ಮದ್ಯಾಹ್ನ ಸಮಯ ಸುಮಾರು 01:15 ಗಂಟೆಗೆ ಅಲ್ಲೆ ಪಕ್ಕದಲ್ಲಿ ಹರಿಯುತ್ತಿರುವ ನದಿ ನೀರಿಗೆ ಆಕಸ್ಮಿಕ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದವರನ್ನು ಅಗ್ನಿಶಾಮಕ ದಳದವರು ಮತ್ತು ಪಿರ್ಯಾದಿದಾರರು ಹಾಗೂ ಇತರರು ಹುಡುಕಾಡುತ್ತಿರುವಾಗ 17:30 ಗಂಟೆಗೆ ದೇಹವು ದೊರೆತಿದ್ದು ಕೂಡಲೇ ಚಿಕಿತ್ಸೆಯ ಬಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆದರೆ ಸಾಕುರವರು ಅದಾಗಲೇ ಮೃತಪಟ್ಟಿದ್ದು ಆಕೆಯ ಸಾವಿನಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಫುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 11/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಫುರ: ಪಿರ್ಯಾದಿದಾರರಾಧ ಮನೋಹರ ಕೆ (56), ತಂದೆ:ರಾಮಪುತ್ರನ್‌  ವಾಸ: ಅಯೋದ್ಯ ಸರಕಾರಿ ಆಸ್ಪತ್ರೆ ಹಿಂದುಗಡೆ ಕಸಬಾ ಗ್ರಾಮ, ಕುಂದಾಪುರ ಇವರ ತಂಗಿಯ ಮಗ ರೋಚನಕುಮಾರ್ (18) ಈತನು ಬ್ರಹ್ಮಾವರದ ಲಿಟ್ಟಲ್‌ ರಾಕ್‌ ಕಾಲೇಜಿನಲ್ಲಿ ದ್ವೀತಿಯ PUC ಪರೀಕ್ಷೆ ಬರೆದಿದ್ದು. ಇತನ ತಾಯಿಯು ತನ್ನ ಮಕ್ಕಳೋಂದಿಗೆ ಮನೋಹರ ಕೆ ರವರ ಮನೆಗೆ ತನ್ನ ವಯಸ್ಸಾದ ತಾಯಿಯ ಆರೈಕೆ ಮಾಡಲು ಬಂದಿದ್ದು, ರೋಚನಕುಮಾರನು ದಿನಾಂಕ 29/04/2023 ರಂದು ಬೆಳಿಗ್ಗೆ 09:00 ಗಂಟೆಗೆ ಮನೋಹರ ಕೆ ರವರಲ್ಲಿ ಡೈವಿಂಗ್‌ ಕ್ಲಾಸ್‌ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಸಂಜೆ 06:00 ಗಂಟೆಯಾದರು ವಾಪಾಸು ಬಾರದೇ ಇದ್ದು ಈ ಬಗ್ಗೆ ಹುಡುಕಲಾಗಿ ರೋಚನಕುಮಾರ್‌ನು ತನ್ನ ಸ್ವಂತ ಮನೆಯಾದ ಕಸಬಾ ಗ್ರಾಮದ ಫೇರಿ ರಸ್ತೆಯ ಸಾಯಿ ಕೋರ್ಟ ಅಪಾರ್ಟಮೆಂಟ್‌ ನ 2ನೇ ಮಹಡಿಯ ರೂಮ್‌ ನಂಬ್ರ 204ರಲ್ಲಿ ಇರಬಹುದೆಂದು ಮನೋಹರ ಕೆ ರವರು ತನ್ನ ತಮ್ಮನಾದ ಬಾಸ್ಕರ ರವರ ಬಳಿ  ನೋಡಲು ಹೇಳಿದ್ದು, ಬಾಸ್ಕರನು ತನ್ನ ಬಳಿ ಇರುವ ಇನ್ನೊಂದು ಕೀ ಯಿಂದ ಬಾಗಿಲನ್ನು ತೆರೆದು ನೋಡಿದಾಗ ರೋಚನಕುಮಾರನು ಮನೆಯ ಹಾಲ್‌ನ ಸೋಪಾದ ಪಕ್ಕದಲ್ಲಿ ಹಾಸಿರುವ ಜಮಖಾನೆಯಲ್ಲಿ ಅಂಗಾತನೆ ಮಲಗಿದ ಸ್ಥಿತಿಯಲ್ಲಿ ಇರುವುದನ್ನು ಕಂಡು ಆತನನ್ನು ಎಬ್ಬಿಸಲು ಮೈ ಮುಟ್ಟಿದಾಗ ಉಸಿರಾಟ ಚಲನವಲನ ಕಂಡು ಬಾರದೆ ಇರುವುದನ್ನು ನೋಡಿ ಮನೆಯವರಿಗೆ ಮಾಹಿತಿ ತಿಳಿಸಿದ್ದು, ಮನೋಹರ ಕೆ ರವರು ಕೂಡಲೆ ಬಂದು ನೋಡಲಾಗಿ ರೋಚನಕುಮಾರ್‌ ಮೃತ ಪಟ್ಟಿದ್ದು, ಬಾಯಿಯಿಂದ ಕಂದು ಬಣ್ಣದ ದ್ರವ ಹೊರಗೆ ಬಂದಿರುತ್ತದೆ. ಸದ್ರಿಯವರು ಮಾನಸಿಕ ಖಿನ್ನತೆಯಿಂದ ಬಳಲುತಿದ್ದು ಸರಿಯಾಗಿ ಯಾರೊಂದಿಗೂ ಮಾತನಾಡದೆ ಮೌನಿಯಾಗಿರುತಿದ್ದು, ಈ ಬಗ್ಗೆ ಆತನಿಗೆ ಕೌನ್ಸಲಿಂಗ್‌ ಮಾಡಲಾಗಿತ್ತು. ಮೃತನ ಮರಣದ ಬಗ್ಗೆ ವೈದ್ಯಕೀಯ ಶವ ಪರೀಕ್ಷೆಗೆ ಒಳಪಡಿಸಿರುವುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 22/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಪಡುಬಿದ್ರಿ: ಪಿರ್ಯಾದಿದಾರರಾಧ ನಿತಿನ್ ವಾಸುದೇವ ದೇವಾಡಿಗ, ಪ್ರಾಯ: 36 ವರ್ಷ, ತಂದೆ: ವಾಸುದೇವ ದೇವಾಡಿಗ, ವಾಸ: ಇ1602, ಗುರುವಾಲ್‌ಮನ್, ಗೌರಿಪಾಡ್, ಪುದಾವನ ರೆಸಿಡೆನಿಸಿ ಎದುರು, ಕಲ್ಯಾಣ್ ವೆಸ್ಟ್‌, ಥಾಣೆ, ಮಹಾರಾಷ್ಟ್ರ ಇವರ ತಂದೆ ವಾಸುದೇವ ದೇವಾಡಿಗ (69) ರವರು ಮಹಾರಾಷ್ಟ್ರ ಸರ್ಕಾರದ ಜಿ.ಎ.ಡಿ. ಇಲಾಖೆಯ ನಿವೃತ್ತ ನೌಕರರಾಗಿದ್ದು, ಕಳೆದ 3 ವರ್ಷಗಳಿಂದ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಪಡುಬಿದ್ರಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌‌ನಲ್ಲಿ ವಾಸವಾಗಿದ್ದು, ಅವರು ಕಿಡ್ನಿ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಂಗಳೂರಿನ ಕೊಲಾಸೊ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸುತ್ತಿರುವುದಾಗಿದೆ. ಸದ್ರಿಯವರು ದಿನಾಂಕ 29/04/2023 ರಂದು ಮಧ್ಯಾಹ್ನ 15:45 ಗಂಟೆಯ ವೇಳೆಗೆ ಪಡುಬಿದ್ರಿಯ ಮನೆಯಲ್ಲಿ ಮೂತ್ರ ವಿಸರ್ಜನೆಗೆಂದು ಹೋದವರು ಒಮ್ಮಲೇ ಕುಸಿದು ಬಿದ್ದು ಮಾತನಾಡದ ಸ್ಥಿತಿಯಲ್ಲಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ಸಮಯ ಸುಮಾರು 16:47 ಗಂಟೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ವಾಸುದೇವ ದೇವಾಡಿಗ ರವರು ಆದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದು, ಸದ್ರಿ ವಾಸುದೇವ ದೇವಾಡಿಗ ರವರು ಅನಾರೋಗ್ಯ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದಾಗಿದ್ದು, ಸದ್ರಿಯವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 14/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಕಾಪು: ಪಿರ್ಯಾದಿದಾರರಾಧ ರಾಘವ ಶೆಟ್ಟಿ (43) ಎಫ್.ಎಸ್.ಟಿ.  1, 2ನೇ ತಂಡ 121 ಕಾಪು ವಿಧಾನ ಸಭಾ ಕ್ಷೇತ್ರ ಉಡುಪಿ ಇವರು ದಿನಾಂಕ 29/04/2023 ರಂದು 121-ಕಾಪು ವಿಧಾನ ಸಭಾ ವ್ಯಾಪ್ತಿಯ ಎಫ್ ಎಸ್ ಟಿ 1 ರಲ್ಲಿ ಪಿರ್ಯಾದಿದಾರರು ಜಯಂತ ಎ.ಎಸ್‌ಐ ಮತ್ತು ಚಾಲಕ ಶ್ರೀ ಸುನಿಲ್‌ರವರೊಂದಿಗೆ ಕರ್ತವ್ಯಕ್ಕೆ ಒದಗಿಸಿದ ವಾಹನ ನಂಬ್ರ: ಕೆಎ-20 ಝಡ್‌-5562 ಇದರಲ್ಲಿ ಬೆಳಿಗ್ಗೆ 6 ಗಂಟೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಬೆಳಿಗ್ಗೆ ಸುಮಾರು 10:40 ಗಂಟೆಗೆ ರೌಂಡ್ಸ್ ನಲ್ಲಿ ಇದ್ದ ಸಮಯ 121 ಕಾಪು ವಿಧಾನ ಸಭಾ ಕ್ಷೇತ್ರದ  ಎಂ ಸಿ ಸಿ ನೋಡಲ್ ಅಧಿಕಾರಿಯಾದ ನವೀನ್ ಕುಮಾರ್  ಇಓ ತಾಲೂಕು ಪಂಚಾಯತ್ ಕಾಪು ಇವರು ಪಿರ್ಯಾದಿದಾರರಿಗೆ  ದೂರವಾಣಿ ಮೂಲಕ ಕರೆ ಮಾಡಿ ನಿರ್ದೇಶನ ನೀಡಿದಂತೆ ಉದ್ಯಾವರ ಎನ್‌ ಎಚ್‌ಬಳಿ ಬಂದಾಗ ಅಲ್ಲಿ ಯಾವುದೇ ಪಕ್ಷದ ಬ್ಯಾನರ್‌ಯಾ ಬಂಟಿಂಗ್ಸ್‌ಗಳನ್ನುಕಟ್ಟಿರುವುದು ಕಂಡುಬಂದಿರುವುದಿಲ್ಲ. ಅಲ್ಲಿ ಸಾರ್ವಜನಿಕರನ್ನು ವಿಚಾರಿಸಿದಾಗ ಅಲ್ಲಿ ಕಟ್ಟಿರುವ ಕಟೌಟ್‌‌ಗಳನ್ನು ಉದ್ಯಾವರ ಗ್ರಾಮ ಪಂಚಾಯತ್‌ಪಿ.ಡಿ.ಒ. ರವರು ಅವರ ಸಿಬ್ಬಂದಿಯವರ ಸಹಾಯದಿಂದ ತೆರವುಗೊಳಿಸಿ ಕೊಂಡು ಹೋಗಿರುವುದಾಗಿ ಮಾಹಿತಿ ದೊರೆತ ಮೇರೆಗೆ ಉದ್ಯಾವರ ಗ್ರಾಮ ಪಂಚಾಯತ್‌ಕಛೇರಿಗೆ ಹೋಗಿ ಪಿ.ಡಿ.ಒ. ರವರನ್ನು ವಿಚಾರಿಸಿದಾಗ ಅವರು ತನಗೆ  ದಿನಾಂಕ 29/04/2023 ರಂದು ಬೆಳಿಗ್ಗೆ ಬಂದ ಖಚಿತ ಮಾಹಿತಿಯಂತೆ  ತಾನು ಬೆಳಿಗ್ಗೆ 10:15 ಗಂಟೆಗೆ ಉದ್ಯಾವರ ಗ್ರಾಮದ ಎನ್‌.ಹೆಚ್‌66 ರಲ್ಲಿಗೆ ಹೋಗಿ ನೋಡಿದಾಗ ಕಟಪಾಡಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟುರವರು ಆಯೋಜಿಸಿದ ಕಾರ್ಯಕರ್ತರ ಸಬೆಗೆ ಸಂಬಂದಿಸಿದ ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಉದ್ಯಾವರ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಶುಭ ಕೋರುವ 3 ದೊಡ್ಡ ಫೆಕ್ಸ್ ಗಳನ್ನು ಅಲ್ಲಿಲ್ಲಿ ಕಟ್ಟಿರುವುದು ಕಂಡು ಬಂದಿದ್ದು . ಇವುಗಳ ಛಾಯಾಚಿತ್ರಗಳನ್ನು ಮಾಡಿ  ಪಂಚಾಯತ್‌ ಸಿಬ್ಬಂದಿಯವರ ಸಹಾಯದಿಂದ ತೆರವುಗೊಳಿಸಿ ತಂದು ಪಂಚಾಯತ್‌ನಲ್ಲಿಇರಿಸಿರುವುದಾಗಿ ತಿಳಿಸಿದ್ದು,  ಇದನ್ನು ಮುಂದಿನ ಕ್ರಮದ ಬಗ್ಗೆ ಹಾಜರುಪಡಿಸಿರುವುದನ್ನು ಪಂಚರ ಸಮಕ್ಷಮ ಮಹಜರು  ಮುಖೇನ ಸ್ವಾಧೀನ ಪಡಿಸಿ, ಈ ಕಾರ್ಯಕ್ರಮಕ್ಕೆ ಪ್ರಕಾಶ್ ಶೆಟ್ಟಿ ಪಾದಬೆಟ್ಟು ಬಿಜೆಪಿ ಚುನಾವಣಾ ಏಜೆಂಟ್‌ರವರು ಚುನಾವಣಾಧಿಕಾರಿ ಕಾಪು ವಿಧಾನ ಸಭಾ ಕ್ಷೇತ್ರರವರಿಂದ ಯಾವುದೇ ಅಧಿಕೃತ ಅನುಮತಿಯನ್ನು ಪಡೆಯದೆ. ಅಳವಡಿಸಿರುವುದರಿಂದ ಇದು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಈ ಬಗ್ಗೆ  ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ಸ್ವೀಕರಿಸಿದ ಕಾಪು ಠಾಣಾಧೀಕಾರಿಯವರು ಠಾಣಾ ಎನ್ ಸಿ ನಂಬ್ರ 82/ಪಿಟಿಎನ್/ಕಾಪು/2023 ರಂತೆ ರಂತೆ ಸ್ವೀಕರಿಸಿಕೊಂಡು ತಾವು ನೀಡಿದ ದೂರು ಅರ್ಜಿಯಲ್ಲಿನ ವಿಚಾರವು ಅಸಂಜ್ಞೆಯ ಸ್ವರೂಪದ ಪ್ರಕರಣವಾಗಿದ್ದು, ಈ ಬಗ್ಗೆ ಸಂಬಂಧಿಸಿದ ಮಾನ್ಯ ನ್ಯಾಯಾಲಯದಲ್ಲಿ ವ್ಯವಹರಿಸಿಕೊಳ್ಳುವಂತೆ ಹಿಂಬರಹ ನೀಡಿದ್ದು  ಅದರಂತೆ ಪಿಯಾ೯ದಿದಾರರು ಪ್ರಥಮ ವತ೯ಮಾನ ವರದಿ ದಾಖಲಿಸಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು, ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 75/2023 ಕಲಂ: 171(ಹೆಚ್) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಫು: ಪಿರ್ಯಾದಿದಾರರಾಧ ಅರುಣೇಶ್ ಕೆ ಬಿ ಎಫ್.ಎಸ್.ಟಿ.  2, 121 ಕಾಪು ವಿಧಾನ ಸಭಾ ಕ್ಷೇತ್ರ ಉಡುಪಿ ಇವರು ದಿನಾಂಕ 29/04/2023 ರಂದು 121-ಕಾಪು ವಿಧಾನ ಸಭಾ ವ್ಯಾಪ್ತಿಯ ಎಫ್ ಎಸ್ ಟಿ 2 ರಲ್ಲಿ ಶ್ರೀ ಉದಯ ಕುಮಾರ್ ಹೆಚ್ ಸಿ 106 ಮತ್ತು ಚಾಲಕ ಶ್ರೀ ಬಸವರಾಜ್‌ರವರೊಂದಿಗೆ ಕರ್ತವ್ಯಕ್ಕೆ ಒದಗಿಸಿದ ಕಾರು ನಂಬ್ರ ಕೆಎ-20 ಎಬಿ-5044 ಇದರಲ್ಲಿ ಬೆಳಿಗ್ಗೆ 6 ಗಂಟೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಅರುಣೇಶ್ ಕೆ ಬಿ ರವರು ಬೆಳಿಗ್ಗೆ ಸುಮಾರು 09:40 ಗಂಟೆಗೆ ರೌಂಡ್ಸ್ ನಲ್ಲಿ ಇದ್ದ ಸಮಯ 121 ಕಾಪು ವಿಧಾನ ಸಭಾ ಕ್ಷೇತ್ರದ ಎಂ ಸಿ ಸಿ ನೋಡಲ್ ಅಧಿಕಾರಿಯಾದ ನವೀನ್ ಕುಮಾರ್ ಇಓ ತಾಲೂಕು ಪಂಚಾಯತ್ ಕಾಪು ಇವರು ಪಿರ್ಯಾದಿದಾರರಿಗೆ  ದೂರವಾಣಿ ಮೂಲಕ ಕರೆ ಮಾಡಿ ನಿರ್ದೇಶನ ನೀಡಿದಂತೆ  ಕಟಪಾಡಿ ಜಂಕ್ಷನ್ ಬಳಿ ಬಂದಾಗ ಅಲ್ಲಿ ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪಕ್ಷದ ಚಿಹ್ನೆ ಇರುವ ಬಾವುಟವನ್ನು ಪಿ ವಿ ಸಿ ಪೈಪ್ ನ ಮುಖಾಂತರ ರಾಷ್ಟ್ರೀಯ ಹೆದ್ದಾರಿ 66ರ ಮಧ್ಯ ಹಾಗೂ ಪೂರ್ವ ಬದಿಯಲ್ಲಿ ಅಲ್ಲಲ್ಲಿ ಕಟ್ಟಿರುವುದು ಹಾಗೂ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರ ಸಣ್ಣ ಸಣ್ಣ ಕಟೌಟ್ ಗಳನ್ನು ಅಲ್ಲದೆ ರಾಷ್ಟ್ರೀಯ ಹೆದ್ದಾರಿಯ ಪೂರ್ವದ ಬದಿಯಲ್ಲಿ ಶುಭ ಕೋರುವ 3 ದೊಡ್ಡ ಫೆಕ್ಸ್ ಗಳನ್ನು ಅಲ್ಲಿಲ್ಲಿ ಕಟ್ಟಿರುವುದು ಕಂಡು ಬಂದಿರುತ್ತದೆ. ಇವುಗಳನ್ನು ವಿಡಿಯೋ ಮಾಡಿದ್ದು, ಅಲ್ಲದೇ ಛಾಯಾಚಿತ್ರಗಳನ್ನು ತೆಗೆಸಲಾಗಿದೆ.  ಸಮಾರಂಭ ನಡೆಯಲಿರುವ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಗ್ರೀನ್ ವ್ಯಾಲಿ ಮೈದಾನದಲ್ಲಿ ಬಿ ಜೆ ಪಿ ಪಕ್ಷದ ವತಿಯಿಂದ ಕರ್ನಾಟಕ ವಿಧಾನ ಸಭಾ ಚುನಾವಣಾ  2023 ಪ್ರಯುಕ್ತ ಚುನಾವಣಾ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವರು ಬರುವರಿದ್ದು, ಈ ಕಾರ್ಯಕ್ರಮಕ್ಕೆ ಪ್ರಕಾಶ್ ಶೆಟ್ಟಿ ಪಾದಬೆಟ್ಟು ಬಿಜೆಪಿ ಚುನಾವಣಾ ಏಜೆಂಟ್‌ರವರು ಚುನಾವಣಾಧಿಕಾರಿ ಕಾಪು ವಿಧಾನ ಸಭಾಕ್ಷೇತ್ರರವರಿಂದ ಅನುಮತಿಯನ್ನು ಪಡೆದಿರುತ್ತಾರೆ. ವಿಚಾರಿಸಿದಲ್ಲಿ ಸದ್ರಿ ಬಾವುಟ, ಕಟೌಟ್ಸ್, ಫೆಕ್ಸ್ ಗಳನ್ನು ಅಳವಡಿಸಲು ಚುನಾವಣಾ ಅಧಿಕಾರಿಗಳಿಂದ ಯಾವುದೇ ಅಧಿಕೃತ ಅನುಮತಿಯನ್ನು ಪಡೆದಿರುವುದಿಲ್ಲ. ಇದು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಕಟಪಾಡಿ ಪಂಚಾಯತ್ ಪಿ ಡಿ ಒ ರವರಿಗೆ ಮಾಹಿತಿ ನೀಡಲಾಗಿ ಅವರು ಅವುಗಳನ್ನು ತೆರವುಗೊಳಿಸುವರೇ ಕಟಪಾಡಿ ಪಂಚಾಯತ್ ಸಿಬ್ಬಂದಿಗಳನ್ನು ಕಳುಹಿಸಿಕೊಟ್ಟಿದ್ದು ಅವರುಗಳ ಸಹಾಯದಿಂದ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿರುವ ಫ್ಲೆಕ್ಸ್ ಕಟೌಟ್ಸ್, ಬಾವುಟಗಳನ್ನು ತೆರವುಗೊಳಿಸಿ ಪಂಚಾಯತ್ ಬಳಿ ಶೇಖರಿಸಿ ಪರಿಶೀಲಿಸಿದಲ್ಲಿ 3 ದೊಡ್ಡ ಫೆಕ್ಸ್ ಗಳಿದ್ದು, ಅವುಗಳಲ್ಲಿ ಬಿಜೆಪಿಯ ಕೇಂದ್ರದ ಹಾಗೂ ರಾಜ್ಯದ ಬಿಜೆಪಿ ನಾಯಕರ ಪೋಟೋಗಳಿದ್ದು, ಅಲ್ಲದೇ ಬಿಜೆಪಿಯ ರಾಷ್ಟ್ರೀಯ ಚಿಹ್ನೆಯಾದ ಕಮಲದ ಚಿತ್ರಗಳಿದ್ದು, ಮಧ್ಯದಲ್ಲಿ ಉಡುಪಿ ಜಿಲ್ಲೆಗೆ ಆಗಮಿಸುತ್ತಿರುವ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವರಿಗೆ ಹಾರ್ದಿಕ ಸ್ವಾಗತ ಬಯಸುವ ಎಂದು ಬರೆದು ಒಂದರಲ್ಲಿ ಮಹೇಶ್ ಠಾಕೂರ್ ಮಂಡಲ ಅಧ್ಯಕ್ಷರು ಉಡುಪಿ ನಗರ ಮಂಡಲ, ಎರಡನೇಯದರಲ್ಲಿ ಕುಯಿಲಾಡಿ ಸುರೇಶ್ ನಾಯಕ್ ಜಿಲ್ಲಾಧ್ಯಕ್ಷರು ಬಿಜೆಪಿ ಉಡುಪಿ ಜಿಲ್ಲೆ, ಮೂರನೇಯದರಲ್ಲಿ ಶ್ರೀಕಾಂತ್ ನಾಯಕ್ ಮಂಡಲ ಅಧ್ಯಕ್ಷರು ಕಾಪು ಮಂಡಲ ಎಂದು ಬರೆದಿರುವುದು ಇರುತ್ತದೆ. ಫ್ಲೆಕ್ಸ್ ಗಳು 10x8 ಉದ್ದಗಲದ್ದಾಗಿರುತ್ತದೆ. ಅಲ್ಲದೆ ಒಟ್ಟು 62 ಕೇಸರಿ ಮತ್ತು ಹಸಿರು ಬಣ್ಣದ  4 ಅಡಿ ಉದ್ದ 3 ವರೆ ಅಗಲದ ಬಾವುಟದಲ್ಲಿ ಬಿ ಜೆ ಪಿಯ ಕಮಲದ  ಚಿಹ್ನೆ ಹಾಗೂ BJP ಎಂದು ಆಂಗ್ಲ ಬಾಷೆಯಲ್ಲಿ ಬರೆದಿರುವುದು ಇರುತ್ತದೆ. ಅಲ್ಲದೆ ಸುಮಾರು 5 ವರೆ ಅಡಿ ಎತ್ತರದ ಪ್ಲಾಸ್ಟಿಕ್ ನ ಬಿ ಜೆ ಪಿಯ ನಾಯಕರವರ 6 ಕಟೌಟ್ಸ್ ಗಳು ಇರುತ್ತವೆ. ಈ ಎಲ್ಲಾ 3 ಫೆಕ್ಸ್, 62 ಬಾವುಟ, 38 ಕಟೌಟ್ಸ್ ಗಳನ್ನು ಪಂಚಾಯತುದಾರರ ಸಮಾಕ್ಷಮ ಮಹಜರು ಮುಖಾಂತರ ಸ್ವಾಧೀನ ಪಡಿಸಿಕೊಳ್ಳಲಾಯ್ತು ದಿನಾಂಕ 29/04/2023 ರಂದು ಕಟಪಾಡಿ ಗ್ರೀನ್ ವ್ಯಾಲಿ ಮೈದಾನದಲ್ಲಿ  ಬಿಜೆಪಿ ಪಕ್ಷದ ವತಿಯಿಂದ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ಪ್ರಯುಕ್ತ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ರವರ ಕಾರ್ಯಕ್ರಮದ ಪೂರ್ವ ಭಾವಿಯಾಗಿ ಯಾವುದೇ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ಕಾರ್ಯಕ್ರಮ ನಡೆಯುವ ಸ್ಥಳದ ಆಸುಪಾಸಿನಲ್ಲಿ ಅಂದರೆ ಕಾರ್ಯಕ್ರಮದ ಸ್ಥಳದಿಂದ ಕಟಪಾಡಿ ಜಂಕ್ಷನ್ ವರೆಗೆ ರಾ.ಹೆ.66 ರಲ್ಲಿ ಭಾರತೀಯ ಜನತಾ ಪಾರ್ಟಿಯ ಪಕ್ಷದ ಬಾವುಟ, ಪ್ಲೆಕ್ಸ್, ಕಟೌಟ್ ಗಳನ್ನು ಅಳವಡಿಸಿ ಅದರ ಪ್ರಾಯೋಜಕರು ಹಾಗೂ ಸಂಬಂಧಪಟ್ಟವರು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ್ದು, ಈ ಬಗ್ಗೆ  ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ಸ್ವೀಕರಿಸಿದ ಕಾಪು ಠಾಣಾಧೀಕಾರಿಯವರು ಸ್ವೀಕರಿಸಿಕೊಂಡು ತಾವು ನೀಡಿದ ದೂರು ಅರ್ಜಿಯಲ್ಲಿನ ವಿಚಾರವು ಅಸಂಜ್ಞೆಯ ಸ್ವರೂಪದ ಪ್ರಕರಣವಾಗಿದ್ದು, ಈ ಬಗ್ಗೆ ಸಂಬಂಧಿಸಿದ ಮಾನ್ಯ ನ್ಯಾಯಾಲಯದಲ್ಲಿ ವ್ಯವಹರಿಸಿಕೊಳ್ಳುವಂತೆ ಹಿಂಬರಹ ನೀಡಿದ್ದು  ಅದರಂತೆ ಪಿಯಾ೯ದಿದಾರರು ಪ್ರಥಮ ವತ೯ಮಾನ ವರದಿ ದಾಖಲಿಸಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು, ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 74/2023 ಕಲಂ: 171(ಹೆಚ್) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾಧ ಅಲ್ಫೋನ್ಸ್ ಡಿಸೋಜ, (65) ತಂದೆ ಅಲ್ಬರ್ಟ್ ಡಿಸೋಜ, ವಾಸ: 4-26, ಕೆಳಮನೆ,  ಬಾವಗುತ್ತು ಬಳಿ,  ಸಾಣೂರು  ಗ್ರಾಮ, ಕಾರ್ಕಳ ಇವರು  ಮೇಲಿನ  ವಿಳಾಸದಲ್ಲಿ ವಾಸವಾಗಿದ್ದು  ಕೃಷಿ  ಕೆಲಸ  ಮಾಡಿಕೊಂಡಿರುತ್ತಾರೆ. ದಿನಾಂಕ 29/04/2023 ರಂದು 18:00 ಗಂಟೆಗೆ ಅಲ್ಫೋನ್ಸ್ ಡಿಸೋಜ ರವರು ಸಾಣೂರು  ಗ್ರಾಮದ ಬಾವಗುತ್ತು ಎಂಬಲ್ಲಿ  ತನ್ನ ಮನೆಯಲ್ಲಿ ಇರುವಾಗ ಅಪಾದಿತನಾದ ಅಲ್ಫೋನ್ಸ್ ಡಿಸೋಜ ರವರ ನೆರೆಮನೆಯ ಸೀತಾರಾಮ ಆಚಾರ್ಯ ಎಂಬಾತನು ಫಿರ್ಯಾದುದಾರರ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಹಿತ್ತಿಲಿನಲ್ಲಿರುವ  ಮರವನ್ನು ಕಡಿಯಲು ಮುಂದಾದಾಗ ಅಲ್ಫೋನ್ಸ್ ಡಿಸೋಜ ರವರು ಆತನನ್ನು ವಿಚಾರಿಸಲು ಹೋದಾಗ ಅಪಾದಿತನು ತುಳು ಬಾಷೆಯಲ್ಲಿ ಅವಾಚ್ಯವಾಗಿ ಬೈದು ಕೈಯಲ್ಲಿ ಇರುವ ಕತ್ತಿಯಿಂದ ಕಡಿದು ಕೊಲ್ಲುತ್ತೇನೆ ನನ್ನನ್ನು ಯಾರು ಕೇಳುವವರು ಬರಲಿ ನಿನಗೆ ಯಾರು ಇದ್ದಾರೆ ಜನ ಸೇರಿಸಿ ನಿನ್ನನ್ನು ಕೊಂದು ಹಾಕುತ್ತೇನೆಂದು ಜೀವ ಬೆದರಿಕೆ  ಹಾಕಿ  ಕತ್ತಿಯಿಂದ  ಕಡಿಯಲು ಮುಂದೆ ಬಂದಾಗ  ಅಲ್ಫೋನ್ಸ್ ಡಿಸೋಜ ರವರು  ಆತನಿಂದ ತಪ್ಪಿಸಿಕೊಂಡು ಓಡುವಾಗ ಅಪಾದಿತನು ಕಲ್ಲಿನಿಂದ ಅಲ್ಫೋನ್ಸ್ ಡಿಸೋಜ ರವರಿಗೆ ಎಸೆದಿದ್ದು ಕಲ್ಲು ತಲೆಗೆ ತಾಗಿ ಗಾಯವಾಗಿರುತ್ತದೆ. ಆಗ ನೆರೆಹೊರೆಯವರು ಬಂದು ರಕ್ಷಣೆ  ಮಾಡಿ ಆಸ್ಪತ್ರೆಗೆ  ದಾಖಲು  ಮಾಡಿದ್ದು   ಅಲ್ಫೋನ್ಸ್ ಡಿಸೋಜ ರವರು  ಹೊರ ರೋಗಿಯಾಗಿ  ಚಿಕಿತ್ಸೆ ಪಡೆದಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 57/2023  ಕಲಂ: 324,447,504,506(2)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-04-2023 11:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080