ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

 • ಬೈಂದೂರು: ಪಿರ್ಯಾದಿದಾರರಾದ ರೂಬನ್ ನಜ್ರೇತ್ (25), ತಂದೆ: ವೇನತ್ ನಜ್ರೇತ್, ವಾಸ: ಚರ್ಚ ರೋಡ್ ಪಡುವರಿ ಗ್ರಾಮ ಬೈಂದೂರು ತಾಲೂಕು ಇವರ ದೊಡ್ಡಮ್ಮ ಇಮಿಲಿಯಾ ನಜ್ರೇತ್ (75) ರವರು ದಿನಾಂಕ 29/04/2022 ರಂದು 13:45 ಗಂಟೆಗೆ ಪಿರ್ಯಾದಿದಾರರ ಮನೆಯ ಕಂಪೌಂಡ್ ನ ಒಳಗೆ ಇರುವ ಬಾವಿಯಿಂದ ನೀರನ್ನು ಸೇದುತ್ತಿರುವಾಗ ಆಯತಪ್ಪಿ ಬಾವಿಯ ನೀರಿಗೆ ಬಿದ್ದು, ಬಾವಿಯ ನೀರಿನಲ್ಲಿ ಮುಳುತ್ತಿದ್ದವರನ್ನು ಪ್ರದೀಪರವರು ಬಾವಿಗೆ ಇಳಿದು, ಬಾವಿಯಿಂದ ಮೇಲಕ್ಕೆ ಎತ್ತಿದ್ದು, ಪಿರ್ಯಾದಿದಾರರು ಅವರನ್ನು ಉಪಚರಿಸಿ, ಚಿಕಿತ್ಸೆ ಬಗ್ಗೆ ಒಂದು ವಾಹನದಲ್ಲಿ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 22/2022 ಕಲಂ: 174 ಸಿ.ಆರ್.ಪಿ.ಸಿಯಂತ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ನಾಗೇಶ್ (30), ತಂದೆ:ಭಾಸ್ಕರ ಶೇರುಗಾರ, ವಾಸ: ಸೌಕೂರು , ಕೆತ್ತೆಮಕ್ಕಿ , ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ಅಕ್ಕ  ಶ್ರೀಲತಾ (36) ರವರು  ತನ್ನ ಗಂಡ ರಾಘವೇಂದ್ರ ಹಾಗೂ  ಮಕ್ಕಳಾದ ವರ್ಣಿತಾ ಮತ್ತು ಚಾರ್ವಿಕ್ ರವರೊಂದಿಗೆ ಗಂಡನ ಮನೆಯಾದ ಯಡ್ತರೆ ಗ್ರಾಮದ ನವೀನ್  ನಿಲಯ ಎಂಬಲ್ಲಿ ವಾಸಮಾಡಿಕೊಂಡಿರುತ್ತಾರೆ.  ಶ್ರೀಲತಾ ರವರು ಗ್ಯಾಸ್ಟ್ರಿಕ್  ಸಮಸ್ಯೆಯಿಂದ ಬಳಲುತ್ತಿದ್ದು ಈ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.  ಶ್ರೀಲತಾ ರವರಿಗೆ ಆಗಾಗ ಹೊಟ್ಟೆ  ನೋವು ಬರುತ್ತಿದ್ದು  ಗ್ಯಾಸ್ಟ್ರಿಕ್ ತೊಂದರೆಯೂ ಇದ್ದು  ಅದರಿಂದ ಮನಸ್ಸಿನಲ್ಲಿ ನೊಂದುಕೊಂಡಿದ್ದು ತನಗಿರುವ  ಗ್ಯಾಸ್ಟ್ರಿಕ್ ತೊಂದರೆಯಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 29/04/2022 ರಂದು  ಸಂಜೆ 5:15  ಗಂಟೆಯಿಂದ 5:45 ಗಂಟೆಯ ಮಧ್ಯಾವಧಿಯಲ್ಲಿ  ತಾನು  ವಾಸವಾಗಿರುವ ಯಡ್ತರೆ ಗ್ರಾಮದ  ನವೀನ್ ನಿಲಯ ಎಂಬಲ್ಲಿನ  ಮನೆಯ ರೂಮ್ ನ ಫ್ಯಾನ್ ಗೆ ಚೂಡಿದಾರ್ ವೇಲ್ ನಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರನ್ನು ಚಿಕಿತ್ಸೆಯ ಬಗ್ಗೆ  ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ  ಕರೆದುಕೊಂಡು ಹೋಗಿ ವೈದ್ಯರಲ್ಲಿ ಪರೀಕ್ಷೀಸಿದಲ್ಲಿ ವ್ಯೆದ್ಯಾಧಿಕಾರಿಯವರು ಶ್ರೀಲತಾ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 23/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಪ್ರಭಾಕರ (57), ತಂದೆ: ಅನಂತ ಆಚಾರ್ಯ, ವಾಸ: ಶ್ರೀ ವಿಘ್ನೇಶ, ಕಾಳಾವರ ಶಾಲೆ ಹತ್ತಿರ, ಅಸೋಡು ಕುಂದಾಪುರ ತಾಲೂಕು ಇವರು ದಿನಾಂಕ 28/04/2022 ರಂದು KA-20-EV-3741 ನೇ ನೋಂದಣಿ ಸಂಖ್ಯೆಯ ಹೊಂಡಾ ಡಿಯೋ ಡಿಎಲ್ಎಕ್ಸ್ ಸ್ಕೂಟರ್ ನಲ್ಲಿ ಕಾರ್ಕಳಕ್ಕೆ ಬಂದು ಕಾರ್ಕಳ ಪುರಸಭೆ ಎದುರು ಇರುವ ಶ್ರೀನಿವಾಸ ಗ್ಲಾಸ್ ಹತ್ತಿರ ಬೆಳಗ್ಗೆ 10:40 ಗಂಟೆಗೆ  ನಿಲ್ಲಿಸಿ ಸ್ಕೂಟರ್ ಕೀಯನ್ನು ಅದರಲ್ಲಿಯೇ ಬಿಟ್ಟು ಗ್ಲಾಸ್ ಅಂಗಡಿಗೆ ಹೋಗಿ 10:55 ಗಂಟೆಗೆ ವಾಪಾಸು ಬಂದು ನೋಡಿದಾಗ ಕಾಣೆಯಾಗಿದ್ದು, ಆಸುಪಾಸಿನಲ್ಲಿ ಹುಡುಕಿದಾಗ ಕಾಣಿಸದೇ ಇದ್ದು ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸ್ಕೂಟರ್ ನ ಮೌಲ್ಯ 40,000/- ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಶೋಭಾ (45), ಗಂಡ: ಪ್ರಕಾಶ, ವಾಸ: ನಾವುಡ್ರ ಕೇರಿ. ಬರೆಕಟ್ಟು, ವಡೇರಹೋಬಳಿ ಗ್ರಾಮ, ಕುಂದಾಪುರ ತಾಲೂಕು ಇವರ ಮಗ ಪ್ರದೀಪ್ ಎಂಬಾತನಿಗೆ ಆರೋಪಿತರಾದ ಅಶೋಕರಾಜ್ ಎಂಬಾತನು ಮದ್ಯಪಾನ ಮಾಡಲು ಹಣ ಕೊಡುತ್ತಿದ್ದುದಲ್ಲದೇ ಮದ್ಯಪಾನ ಮಾಡುಲು ಕರೆದುಕೊಂಡು ಹೋಗುತ್ತಿದ್ದು, ವಿಚಾರವನ್ನುಕೇಳಲು ಪಿರ್ಯಾದಿದಾರರು ಹಾಗೂ ಅವರ ಗಂಡ ಪ್ರಕಾಶ ಕುಂದೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ  ಆರೋಪಿತರ ಮನೆಗೆ ಹೋಗಿ ಅಲ್ಲಿದ್ದ ಆರೋಪಿತನಲ್ಲಿ ಪಿರ್ಯಾದಿದಾರರು ಇನ್ನು ಮುಂದೆ ಪ್ರದೀಪನನ್ನು ದುಶ್ಚಟಕ್ಕೆ ಕರೆದುಕೊಂಡು ಹೋಗಬೇಡಿ ಎಂಬುದಾಗಿ ಕೇಳಿಕೊಳ್ಳುತ್ತಿದ್ದಾಗ ಆರೋಪಿತನು ಏಕಾಏಕಿಯಾಗಿ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು  ಬೆನ್ನಿಗೆ ಕೈಯಿಂದ ಹೊಡೆದು ನಂತರ ಮನೆಯಿಂದ ಹೊರಗೆ ಬಂದು  ಜೀವ ಬೆದರಿಕೆ ಹಾಕಿರುವುದಾಗಿದೆ. ಆರೋಪಿತ ಮಾಡಿದ ಹಲ್ಲೆಯಿಂದಾಗಿ ಪಿರ್ಯಾದಿದಾರು ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2022 ಕಲಂ: 504, 323, 354, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಬೇಬಿ ಪೂಜಾರ್ತಿ (48), ಗಂಡ: ಕ್ರಷ್ಣ ಪೂಜಾರಿ, ವಾಸ: ಅಡಿಗಳ್ತಾ ಗುಂಡ್ಮಿ ಗ್ರಾಮ ಬ್ರಹ್ಮಾವರ ಇವರ ಗಂಡನ ಅಕ್ಕ ಬುಡ್ಕ ಎಂಬುವವರ ಮಗ ದಿನೇಶ ಜಾಗದ ವಿಚಾರವಾಗಿ ಆಗಾಗ ಪಿರ್ಯಾದಿದಾರರ ಗಂಡನೊಂದಿಗೆ ತಕರಾರೂ ಮಾಡುತ್ತಿದ್ದು, ದಿನಾಂಕ 28/04/2022 ರಂದು ಮದ್ಯಾಹ್ನ ಸೀಮಂತದ ಮನೆಯಲ್ಲಿ ಪಿರ್ಯಾದಿದಾರರೊಂದಿಗೆ ಜಗಳ ಮಾಡಿ ದೂಡಿದ್ದು ನಂತರ ರಾತ್ರಿ 10:00 ಗಂಟೆಯ ಸಮಯಕ್ಕೆ ದಿನೇಶನು ಪಿರ್ಯಾದಿದಾರರ ಮನೆಯ ಬಳಿ ಬಂದು ಅವಾಚ್ಯವಾಗಿ ಬೈದು, ಕಾಲಿನಿಂದ ಬಾಗಿಲನ್ನು ಒದ್ದು ಒಳಗೆ ಬಂದು ಪಿರ್ಯಾದಿದಾರರಿಗೆ ಮತ್ತು ಮಗಳು ರೇಷ್ಮಾಳಿಗೆ ಕೈಯಿಂದ ದೂಡಿ ಹಾಕಿ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2022  ಕಲಂ: 448, 354, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-04-2022 09:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080