ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

  • ಮಣಿಪಾಲ: ದಿನಾಂಕ: 27.04.2022 ರಂದು 17:30 ಗಂಟೆಗೆ ಪಿರ್ಯಾದಿ ದಾರ್ವಿನ್‌ಗ್ಯಾಬ್ರೀಯಲ್‌ಫೆರ್ನಾಂಡೀಸ್‌, ಪ್ರಾಯ: 33 ವರ್ಷ, ತಂದೆ: ಅಂತೋನಿಯೋ ಫೆರ್ನಾಂಡೀಸ್‌, ವಾಸ: ಹೆಚ್‌ನಂ: 118/ ಗ್ರ್ಯಾಂಡ್‌ ವೇನಿಲಿಯೋ ಕೋಲ್ವಾ  , ಗೋವಾ,403708 ಇವರು ಅವರ ತಾಯಿ ಮರೀಯಾ ರೋಸಾಲಿನ ಫೆರ್ನಾಂಡೀಸ್‌ ಹಾಗೂ ಚಿಕ್ಕಮ್ಮ ಮರಿಯಾ ಕೋನ್ಸೇಸಾ ವಾಜ್‌ರವರೊಂದಿಗೆ ತಾವು ತಂಗಿದ್ದ ಉಡುಪಿ ತಾಲೂಕು ಹೆರ್ಗಾ  ಗ್ರಾಮದ ಜನನಿ ಲಾಡ್ಜ್‌ನಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಹೋಗುವರೇ ಲಾಡ್ಜ್  ಎದುರುಗಡೆ  ರಾ.ಹೆ 169(ಎ) ರಲ್ಲಿ ರಸ್ತೆ ದಾಟುತ್ತಿರುವಾಗ ಮಣಿಪಾಲ ಕಡೆಯಿಂದ ಪರ್ಕಳ ಕಡೆಗೆ ಮಿಲ್ಕ್‌ವ್ಯಾನ್‌ ನಂಬರ್ KA 20 AA 2633 ನೇದನ್ನು ಅದರ ಚಾಲಕನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಾಯಿ ಹಾಗೂ ಚಿಕ್ಕಮ್ಮನಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ತಾಯಿಯ ತಲೆಗೆ ಹಾಗೂ ಚಿಕ್ಕಮ್ಮನ ಸೊಂಟಕ್ಕೆ ತೀವ್ರ ಸ್ವರೂಪದ ಗಾಯ ಉಂಟಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ,  ಅಪರಾಧ .ಕ್ರಮಾಂಕ 62/2022 ಕಲಂ: 279, 338 IPC ಯಂತೆ ಪ್ರಕರಣ ದಾಖಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಹಿರಿಯಡ್ಕ: ಪಿರ್ಯಾದಿ  ಸತೀಶ್ ಕುಲಾಲ್ (50), ತಂದೆ:ದಿ. ಧೂಮ ಕುಲಾಲ್, ವಾಸ: ಬೆದ್ರ ಹಿಂಡ್ಲು ಮನೆ, ಸಾಂತ್ಯಾರು, ಇವರ ತಾಯಿ ಅಪ್ಪಿ ಹಾಂಡ್ತಿ ರವರು ಸುಮಾರು 10 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಅಲ್ಲದೇ ಅವರಿಗೆ ಕಾಲು ನೋವಿನ ತೊಂದರೆ ಇರುತ್ತದೆ. ಅವರಿಗೆ ರಾತ್ರಿ ನಿದ್ದೆ ಬಾರದೇ ಇರುವ ಸಮಸ್ಯೆ ಕೂಡ ಇರುತ್ತದೆ. ಈ ಕಾರಣಗಳಿಂದ ತಲೆ ಬಿಸಿ ಮಾಡಿಕೊಂಡಿದ್ದು, ಇದೇ ವಿಚಾರದಲ್ಲಿ ಮನ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 30/04/2022 ರಂದು ಬೆಳಿಗ್ಗೆ 7:30 ಗಂಟೆಯಿಂದ 9:15 ಗಂಟೆಯ ಮದ್ಯಾವಧಿಯಲ್ಲಿ ಮನೆಯ ಪಡಸಾಲೆಯ ಮರದ ಜಂತಿಗೆ ನೈಲಾನ್ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ. ಯುಡಿಆರ್ ನಂಬ್ರ: 22/2022 ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಿರ್ವ: ಪಿರ್ಯಾದಿ ಉಸ್ಮಾಣ, (43) ತಂದೆ: ಕುಂಜಿ ಅಹಮ್ಮದ್‌, ವಾಸ: ಭೂತೊಟ್ಟು ಹೌಸ್‌, ಶಿರ್ವ ಅಂಚೆ ಮತ್ತು ಗ್ರಾಮ, ಕಾಪು ಇವರೊಂದಿಗೆ ಉತ್ತರ ಪ್ರದೇಶದ ನಿವಾಸಿ SHTRUN CHAUHAN (40) ಈತನು ಕಳೆದ ಒಂದು ವರ್ಷದಿಂದ ಹೆಲ್ಪರ್‌ಆಗಿ ಕೆಲಸ ಮಾಡಿಕೊಂಡಿರುತ್ತಾನೆ. ಈತನು ಪ್ರಸ್ತುತ ಶಿರ್ವ ತೊಟ್ಲಗುರಿ ಎಂಬಲ್ಲಿರುವ ಜುಲಿಯಾನ ಮೆನೆಜಸ್‌ಎಂಬುವವರ ಮನೆಯಲ್ಲಿ ಬಾಡಿಗೆಗೆ ಒಬ್ಬನೆ ವಾಸ್ತವ್ಯ ಇರುತ್ತಾನೆ. SHTRUN CHAUHAN ನು ವಿಪರೀತ ಅಮಲು ಪದಾರ್ಥ ಸೇವನೆ ಮಾಡುತ್ತಿದ್ದನು. ಇದೇ ಕಾರಣದಿಂದ ದಿನಾಂಕ 29.04.2022 ರಂದು ಬೆಳಿಗ್ಗೆ 10:30 ಗಂಟೆಯಿಂದ ದಿನಾಂಕ 30.04.2022 ರಂದು ಬೆಳಿಗ್ಗೆ 7:30 ಗಂಟೆಯ ನಡುವಿನ ಅವಧಿಯಲ್ಲಿ ಮೃತಪಟ್ಟಿದ್ದು ಈತನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯುಡಿಆರ್ ನಂಬ್ರ 09 /2022   ಕಲಂ: 174 ಸಿಆರ್ ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಕಾರ್ಕಳ: ಫಿರ್ಯಾದಿ ಯೋಗೀಶ್ ನಾಯಕ್, ಪ್ರಾಯ: 47 ವರ್ಷ, ತಂದೆ: ದಿ. ಸದಾನಂದ ನಾಯಕ್, ವಾಸ: ಶ್ರೀಶಾಂತೇರಿ ಹೌಸ್, ಪರಂದಾಡಿ, ನಕ್ರೆ, ಕುಕ್ಕುಂದೂರು ಎಂಬವರು ಕಾರ್ಕಳ ಜೋಡುರಸ್ತೆಯಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ 29-04-2022 ರಂದು ತನ್ನ ಮೋಟಾರ್ ಸೈಕಲ್  KA 20EM5728 ನಂಬ್ರದ ಹೀರೋ ಪ್ಯಾಶನ್ ಪ್ರೋ ಬೈಕಿನಲ್ಲಿ  ಜೋಡುರಸ್ತೆ ಪೂರ್ಣಿಮಾ ಸಿಲ್ಕ್ ಅಂಗಡಿಯಿಂದ  ಮಾಲಿಕರ ಇನ್ನೊಂದು ಅಂಗಡಿಯಾದ ಪ್ರೈಮ್ ಮಾಲ್ ಎಂಬ ಅಂಗಡಿಗೆ ಕೆಲಸದವರಿಗೆ ತಿಂಡಿ ಕೊಡಲು ಹೋಗುತ್ತಿರುವಾಗ  ಅಪಾದಿತರಾದ ರಿಕ್ಷಾ ಚಾಲಕರಾದ  ಪದ್ಮನಾಭ ಶೆಟ್ಟಿಗಾರ್ , ಮನೋಜ್ ಮತ್ತು ಫಾಸ್ಕಲ್ ಎಂಬವರು ಫಿರ್ಯಾದುದಾರರನ್ನುದ್ದೇಶಿ ಅವಾಚ್ಯ ಶಬ್ದಗಳಿಂದ ಬೈದಿದ್ದು ಫಿರ್ಯಾದುದಾರರು ಪ್ರೈಮ್ ಮಾಲಿಗೆ ಹೋಗಿ ವಾಪಾಸು ಬರಲು ತನ್ನ ಬೈಕ್ ಸ್ಟಾರ್ಟ್ ಮಾಡಿ ಹೊರಡುತ್ತಿದ್ದಾಗ ಸಂಜೆ 18-00 ಗಂಟೆಗೆ  ಅಪಾದಿತ ಪದ್ಮನಾಭ ಶೆಟ್ಟಿಗಾರ್ ಅಟೋರಿಕ್ಷಾ KA20D3624 ರಲ್ಲಿ , ಅಪಾದಿತ ಮನೋಜ ಅಟೋರಿಕ್ಷಾ KA20D8185 ಮತ್ತು ಅಪಾದಿತ ಫಾಸ್ಕಲ್ ಅಟೋ ರಿಕ್ಷಾ KA20 AA 8065 ರಲ್ಲಿ ಬಂದು ಮೂವರು ಸೇರಿ ಬೈಕನ್ನು ತಡೆದು ನಿಲ್ಲಿಸಿ ಫಿರ್ಯಾದಾರರನ್ನು ಬೈಕಿನಿಂದ ಕೆಳಗೆ ದೂಡಿಹಾಕಿ ರಿಕ್ಷಾ ಬಾಡಿಗೆಗೆ ತಮಗೆ ನೀಡದೇ ಬೇರೆಯವರಿಗೆ ಕರೆಯುತ್ತೀ ಎಂದು ಹೇಳುತ್ತಾ ಮೂರು ಜನರೂ ಕೈಯಿಂದ ಮುಖಕ್ಕೆ, ಗಲ್ಲಕ್ಕೆ ಮುಷ್ಟಿಯಿಂದ ಹೊಡೆದ ಪರಿಣಾಮ  ಫಿರ್ಯಾದುದಾರರ ಬಾಯಿಯಲ್ಲಿ ರಕ್ತ ಬಂದು ಎದುರಿನ ಹಲ್ಲುಗಳು ಒಳಜಖಂಗೊಂಡಿದ್ದು ಮುಂದಕ್ಕೆ ನಮಗೆ ಬಾಡಿಗೆ ನೀಡದಿದ್ದರೆ ಕೊಲ್ಲದೇ ಬಿಡುವುದಿಲ್ಲ ಎಂದು  ಜೀವ ಬೆದರಿಕೆ ಹಾಕಿದ್ದು , ಗಾಯಗೊಂಡ ಫಿರ್ಯಾದುದಾರರನ್ನು ರಾಧಾಕೃಷ್ಣ ಕಾಮತ್ ಎಂಬವರು ಕಾರ್ಕಳ ಸರಕಾರಿ ದಾಖಲಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣಾ  ಅಪರಾಧ ಕ್ರಮಾಂಕ 65/2022 ಕಲಂ 323, 341, 504, 506, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 30-04-2022 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080