ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 26/04/2021ರಂದು ರಾತ್ರಿ 8:45 ಗಂಟೆಗೆ ಪಿರ್ಯಾದಿದಾರರಾದ ಶರತ್‌ ಪ್ರಭು(21), ತಂದೆ: ಮಂಜುನಾಥ, ವಾಸ: ಶ್ರೀ ಹರಿ  ರುಕ್ಮಿಣಿ ನಿಲಯ  ಗುಡ್ಡೆ ಮನೆ, ಕುಕ್ಕೆ ಹಳ್ಳಿ , ಉಡುಪಿ ಇವರು ತನ್ನ ಮಾವ ಮನೋಹರ ನಾಯಕ್‌‌‌‌ರವರನ್ನು ತನ್ನ KA-20-EF -0735 ನೇ ಮೋಟಾರು ಸೈಕಲಿನಲ್ಲಿ ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು  ಅಲೆವೂರು - ಮಣಿಪಾಲ ರಸ್ತೆಯಲ್ಲಿ ಆದರ್ಶನಗರ ಕಡೆಯಿಂದ ಮಣಿಪಾಲದ ಕಡೆಗೆ ಹೋಗುತ್ತಿದ್ದಾಗ ಮಣಿಪಾಲ ಮಾಧವ ಕೃಪಾ ಶಾಲೆಯ ಬಳಿ  ತಲುಪುತ್ತಿದ್ದಂತೆ ರಸ್ತೆಯಲ್ಲಿ ಮಣಿಪಾಲ ಅಂಚೆ ಕಚೇರಿ ಕಡೆಯಿಂದ  KA-20-ES-1714ನೇ ಮೊಟಾರು ಸೈಕಲನ್ನು  ಅದರ ಸವಾರ ನಾಗೇಶ್ ನಾಯಕ್‌ ಎಂಬುವವರು ಇನ್ನೊಂದು ವಾಹನವನ್ನು ಓವರ್‌ಟೇಕ್‌ ಮಾಡಿಕೊಂಡು ರಸ್ತೆಯ ಬಲಕ್ಕೆ ಬಂದು ಹತೋಟಿ  ತಪ್ಪಿ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೊಟಾರ್ ಸೈಕಲ್‌‌ಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ  ಮಾವ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಮಾವನ  ತಲೆಗೆ ,ಎಡಕಾಲಿಗೆ ತೀವ್ರ ಗಾಯ, ಪಿರ್ಯಾದಿದಾರರ ಎಡ ಕಣ್ಣಿಗೆ ರಕ್ತಗಾಯವಾಗಿರುತ್ತದೆ. ಹಾಗೂ ಆರೋಪಿ ನಾಗೇಶ್ ನಾಯಕ್‌‌ ರವರಿಗೂ ಸಮಾನ್ಯ ಸ್ವರೂಪದ ಗಾಯ ಉಂಟಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ:279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಕಾರ್ಕಳ: ದಿನಾಂಕ 29/04/2021 ರಂದು ಮಧು ಬಿ.ಇ, ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ನಗರ ಪೊಲೀಸ್ ಠಾಣೆ ಇವರಿಗೆ ಕಾರ್ಕಳ ತಾಲೂಕು ಮಿಯಾರು ಗ್ರಾಮದ ಜೋಡುಕಟ್ಟೆಯಲ್ಲಿರುವ ಸಾರ್ವಜನಿಕ ಬಸ್ಸು ನಿಲ್ದಾಣದ ಹಿಂಬದಿ ಸಾರ್ವಜನಿಕ ಪ್ರದೇಶದಲ್ಲಿ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಸ್ಥಳದಲ್ಲಿ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದ ಆಪಾದಿತರ ಪೈಕಿ 1) ಸಮರ್ಥ್ (22), , ತಂದೆ: ಸುರೇಶ ಶೆಟ್ಟಿ, ವಾಸ: ಸಮೃದ್ದಿ ನಿವಾಸ, ಎನ್.ಆರ್ ರೋಡ್, ಪೆರ್ವಾಜೆ, ಕಸಬ ಗ್ರಾಮ, ಕಾರ್ಕಳ, 2) ಸುಧೀರ್ (30), ತಂದೆ: ಸುಕುಮಾರ ಪೂಜಾರಿ, ವಾಸ: ಬಲಿಪರಪಾಡಿ, ಜೋಡುಕಟ್ಟೆ ಅಂಚೆ, ಮಿಯಾರು ಗ್ರಾಮ, ಕಾರ್ಕಳ ತಾಲೂಕು ಇವರನ್ನು ದಸ್ತಗಿರಿ ಮಾಡಿದ್ದು, 3 ಜನ ಅಪಾದಿತರು ಓಡಿ ಪರಾರಿಯಾಗಿದ್ದು,  ಆಪಾದಿತರು ಇಸ್ಪೀಟ್‌ ಜುಗಾರಿ ಆಟಕ್ಕೆ ಬಳಸಿದ್ದ ನಗದು 3130/- ರೂಪಾಯಿ, 52 ಇಸ್ಪೀಟ್‌ ಎಲೆಗಳು, ಹಳೆಯ ದಿನಪತ್ರಿಕೆ -1 ಹಾಗೂ ಸ್ಥಳದಲ್ಲಿದ್ದ KA-05-MK-9273 ಮತ್ತು KA-51-MC-8883 ನೇ ನೊಂದಣಿ ಸಂಖ್ಯೆಯ ಕಾರುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. KA-05-MK-9273 ನೇ ನೊಂದಣಿ ಸಂಖ್ಯೆಯ ಕಾರಿನ ಮೌಲ್ಯ 3,00,000/- ಹಾಗೂ KA-51-MC-8883 ನೇ ನೊಂದಣಿ ಸಂಖ್ಯೆಯ ಕಾರಿನ ಮೌಲ್ಯ 7,00,000/- ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2021 ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-04-2021 09:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ