ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಉಡುಪಿ: ಫಿರ್ಯಾದಿ ನೊವೆಲ್ ಲೋಬೋ ಇವರಿಗೆ ಯಾರೋ ಅಪರಿಚಿತರು ಬಜಾಜ್ ಫೈನಾನ್ಸ್ ಎನ್ನುವ ಹೆಸರಿನಲ್ಲಿ ಫೇಸ್‌ಬುಕ್ ಮುಖಾಂತರ ಸಂಪರ್ಕಿಸಿ, ಸುಲಭವಾಗಿ ಕಡಿಮೆ ಬಡ್ಡಿದರದಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ, ಫಿರ್ಯಾದಿದಾರರಿಂದ ಸರ್ವಿಸ್ ಚಾರ್ಜ ರೂಪದಲ್ಲಿ ದಿನಾಂಕ: 17/03/2021 ರಂದು ಬಜಾಜ್ ಫೈನಾನ್ಸ್ ಎಂಬ ಹೆಸರಿನಲ್ಲಿ ಐ.ಸಿ.ಐ.ಸಿ.ಐ ಬ್ಯಾಂಕ್ ಖಾತೆಗೆ ರೂ. 14,650/-  ವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಲ್ಲದೆ ದಿನಾಂಕ: 18/03/2021 ರಂದು ಸ್ಟೇಟ್  ಸ್ಟೇಟ್ ಬ್ಯಾಂಕ್ ಖಾತೆ ಗೆ ರೂ 2,500/- ನ್ನು ಫಿರ್ಯಾದಿದಾರರ ಗೂಗಲ್ ಪೇ ಮುಖಾಂತರ ಒಟ್ಟು ರೂ. 17,150/- ನ್ನು   ವರ್ಗಾವಣೆ ಮಾಡಿಸಿಕೊಂಡು, ಪಿರ್ಯಾದಿದಾರರಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27-2021  ಕಲಂ : 66(ಸಿ), 66(ಡಿ) ಐ.ಟಿ. ಆಕ್ಟ್ ಮತ್ತು ಕಲಂ 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹೆಂಗಸು ಕಾಣೆ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ವಿನ್ಸೆಂಟ್ ರೋಶನ್ ಡಿಸೋಜಾ ಇವರು ಉಡುಪಿ ಜಿಲ್ಲೆ ಕಾಪು ತಾಲೂಕು ಸಾಂತೂರ ಗ್ರಾಮದ ಬಾಳೆಗುಂಡಿ ಹೌಸ್ ಎಂಬಲ್ಲಿಯ  ನಿವಾಸಿಯಾಗಿದ್ದು, ಪಿರ್ಯಾದಿದಾರರ ತಾಯಿ ಹೆಲೆನ್ ಡಿಸೋಜ (65) ಎಂಬುವವರು  ಸ್ವಲ್ಪ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಕೃಷಿ ತೋಟ ಕೆಲಸ ಮಾಡಿಕೊಂಡಿದ್ದವರು ದಿನಾಂಕ 15/04/2021 ರಂದು ಬೆಳಿಗ್ಗೆ 08:30 ಗಂಟೆಗೆ ತೋಟಕ್ಕೆ ಹೋಗಿ ಮನೆಗೆ ಬಂದವರು ಮನೆಯಿಂದ ಹೇಳದೇ ಎಲ್ಲಿಗೋ ಹೋಗಿದ್ದು ಅದೇ ದಿನ 10:10 ಗಂಟೆಗೆ ಪಿರ್ಯಾದಿದಾರರ ಮನೆಯಿಂದ ಅರ್ಧಕಿ.ಮೀ ದೂರದಲ್ಲಿರುವ ಗ್ರೇಟ್ಟಾ ಅಲ್ಮೇಡ ರವರು ಪಿರ್ಯಾದಿದಾರರ ತಾಯಿಯನ್ನು ಬ್ಯಾಗ್ ಹಿಡಿದುಕೊಂಡು ಸಾಂತೂರು ಬಸ್‌ನಿಲ್ದಾಣದ ಕಡೆಗೆ ಹೋಗುವುದನ್ನು ನೋಡಿರುವುದಾಗಿ ತಿಳಿಸಿರುತ್ತಾರೆ.  ಪಿರ್ಯಾದಿಯ ತಾಯಿ ಹೆಲೆನ್ ಡಿಸೋಜಾರವರು  ಈವರೆಗೂ ವಾಪಾಸ್ಸು ಬಾರದೇ ಇದ್ದು, ಕಾಣೆಯಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021 ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಪ್ರಾಣೇಶ್ (45), ತಂದೆ: ದಿ. ಸದಾಶಿವ, ವಾಸ: ಪರಪಟ್ಟ, ಹೆಜಮಾಡಿ  ಕೋಡಿ, ಹೆಜಮಾಡಿ ಅಂಚೆ ಮತ್ತು ಗ್ರಾಮ, ಕಾಪು ತಾಲೂಕು ಇವರು  ಹೆಜಮಾಡಿ  ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದು, ದಿನಾಂಕ 30/04/2021ರಂದು 10:00 ಗಂಟೆಗೆ ಹೆಜಮಾಡಿ ಕಡವಿನ ಬಾಗಿಲು ವಾಸಿ ಸಚಿನ್ ಜಿ ನಾಯಕ್‌ ಎಂಬುವವರು  ಕರೆ ಮಾಡಿ  ಕಾಪು ತಾಲೂಕು ಹೆಜಮಾಡಿ  ಗ್ರಾಮದ ಶಾಂಭವಿ ನದಿಯ ನೀರಿನಲ್ಲಿ ಒಂದು ಅಪರಿಚಿತ  ಗಂಡಸಿನ ಮೃತದೇಹ ತೇಲುತ್ತಿದ್ದು ಮೃತದೇಹ ಅರೆ ಕೊಳೆತಿರುವುದಾಗಿ  ತಿಳಿಸಿದ ಮಾಹಿತಿಯಂತೆ, ಸ್ಥಳಕ್ಕೆ ಹೋಗಿ ನೋಡಲಾಗಿ  ಶಾಂಭವಿ ನದಿಯ ನೀರಿನಲ್ಲಿ ಗಂಡಸಿನ ಮೃತದೇಹ ಕವುಚಿ ಬಿದ್ದು ತೇಲುತ್ತಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದು ಸಚಿನ್ ನಾಯಕ್‌ ಮತ್ತು ಸ್ಥಳೀಯರ ಸಹಕಾರದಿಂದ ಮೃತದೇಹವನ್ನು ದಡಕ್ಕೆ ಎಳೆದು ತಂದು ನದಿಯ ದಡದಲ್ಲಿ ಮಲಗಿಸಿ ನೋಡಿದಾಗ ಸುಮಾರು 40-45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವಾಗಿದ್ದು ನೀರಿಗೆ ಬಿದ್ದು 3-4 ದಿನ ಕಳೆದಂತೆ ಕಂಡು ಬಂದಿದ್ದು ಮೃತದೇಹ ಅರೆ ಕೊಳೆತು ದುರ್ವಾಸನೆ ಬೀರುತ್ತಿದ್ದು ಅಲ್ಲದೆ ಜಲಚರಗಳು ತಿಂದು ದೇಹದ ಅಲ್ಲಲ್ಲಿ ಗಾಯವಾಗಿರುತ್ತದೆ.  ವ್ಯಕ್ತಿಯ ಗುರುತು ಪರಿಚಯ ಸ್ಥಳೀಯರಿಗೆ ಸಿಕ್ಕಿರುವುದಿಲ್ಲ.  ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 30-04-2021 06:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080