ಅಭಿಪ್ರಾಯ / ಸಲಹೆಗಳು

ವಂಚನೆ ಪ್ರಕರಣ

 • ಉಡುಪಿ: ದಿನಾಂಕ 29/03/2023 ರಂದು ಪಿರ್ಯಾದಿದಾರರಾದ ಸದಾಶಿವ ಹೆಗ್ಡೆ ಇವರ ಹೆಂಡತಿ ಪ್ರತಿಭಾ ಎಸ್. ಹೆಗ್ಡೆ ಇವರಿಗೆ ಅಪರಿಚಿತ ವ್ಯಕ್ತಿ  ಕರೆ ಮಾಡಿ, ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಡೆಬಿಟ್ ಕಾರ್ಟ್ ಬ್ಲಾಕ್ ಆಗಿದೆ ಈ ಕೂಡಲೇ ರಿನಿವಲ್ ಮಾಡುವಂತೆ ತಿಳಿಸಿ, ಪಿರ್ಯಾದಿದಾರರ ಹೆಂಡತಿಯವರಿಂದ ಕಾರ್ಡ್ ನಂಬ್ರ ಹಾಗೂ OTP ಯನ್ನು ಪಡೆದು, ಪಿರ್ಯಾದಿದಾರರ ಹೆಂಡತಿ ಕೆನರಾ ಬ್ಯಾಂಕ್ ಬ್ರಹ್ಮಾವರ ಶಾಖೆಯಲ್ಲಿ ಹೊಂದಿದ್ದ ಖಾತೆಯಿಂದ ಕ್ರಮವಾಗಿ, ರೂಪಾಯಿ 50,000/-, 50,000/-, 2,000/- ಮತ್ತು 2,500/- ರಂತೆ ಒಟ್ಟು 1,04,500/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2023  ಕಲಂ: 66(C), 66(D)   ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.   

ಮಟ್ಕಾ ಜುಗಾರಿ ಪ್ರಕರಣ

 • ಉಡುಪಿ: ದಿನಾಂಕ: 29/03/2023 ರಂದು ಮಹೇಶ್‌ ಟಿ.ಎಂ, ಪೊಲೀಸ್‌ ಉಪನಿರೀಕ್ಷಕರು( ಕಾ.ಸು-1), ಉಡುಪಿ ನಗರ ಪೊಲೀಸ್‌ ಠಾಣೆ ಇವರು  ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಪುತ್ತೂರು ಗ್ರಾಮದ  ಗ್ರಾಮದ ಅಂಬಾಗಿಲು ಮೀನು ಮಾರುಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಪ್ರವೀಣ್ ಪೂಜಾರಿ (45), ತಂದೆ:ದಿ: ಸೋಮಯ್ಯ ,ವಾಸ: ಕೊಪ್ಪಲತೋಟ, ಕೋರ್ನೆಟ್ ಐಸ್ ಪ್ಲಾಂಟ್ ಹತ್ತಿರ, ಕೊಡವೂರು ಗ್ರಾಮ, ಮಲ್ಪೆ, ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಆಪಾದಿತನ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂಪಾಯಿ 3,200/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ-1, ಬಾಲ್‌ಪೆನ್‌ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2023 ಕಲಂ: 78 (i) (iii) ಕರ್ನಾಟಕ ಪೊಲೀಸ್ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 29/03/2023 ರಂದು ಮಹೇಶ್‌ ಟಿ.ಎಂ, ಪೊಲೀಸ್‌ ಉಪನಿರೀಕ್ಷಕರು( ಕಾ.ಸು-1), ಉಡುಪಿ ನಗರ ಪೊಲೀಸ್‌ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಐರೋಡಿಕರ್‌ ಜಂಕ್ಷನ್‌ ಬಳಿ ಅರಳಿ ಮರದ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ರಾಮರಾಜ್‌ ಅರಸ್‌ (43), ತಂದೆ: ದೇವರಾಜ್‌ ವಾಸ:ಗುಲಾಬಿ ಶೆಟ್ಟಿ ರವರ ಬಾಡಿಗೆ ಮನೆ, ನಾಗ ದೇವಸ್ದಾನದ ಹತ್ತಿರ, ಮಠದಬೆಟ್ಟು, ಶಿರಿಬೀಡು, ಮೂಡನಿಡಬೂರು ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು , ಆಪಾದಿತನ ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂಪಾಯಿ 2,800/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ-1, ಬಾಲ್‌ಪೆನ್‌-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42/2023  ಕಲಂ: 78 (i) (iii) ಕರ್ನಾಟಕ ಪೊಲೀಸ್ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ದಿನಾಂಕ 29/04/2023 ರಂದು ನಂದಕುಮಾರ.ಎಂ.ಎಂ, ಪೊಲೀಸ್‌ ಉಪ ನಿರೀಕ್ಷಕರು, ಹೆಬ್ರಿ ಪೋಲೀಸ್‌ ಠಾಣೆಗೆ ಇವರಿಗೆ ಬಂದ ಮಾಹಿತಿಯಂತೆ ಮುದ್ರಾಡಿ ಗ್ರಾಮದ ಮುದ್ರಾಡಿಪೇಟೆಯ ಅಟೋರಿಕ್ಷಾ ನಿಲ್ದಾಣದ ಬಳಿಗೆ ಮದ್ಯಾಹ್ನ  ಬಂದು ನೋಡಿದಾಗ ಆರೋಪಿತ ದಿನೇಶ ದೇವಾಡಿಗ (42), ತಂದೆ:ದಿ.ದೇವು ಶೇರಿಗಾರ, ವಾಸ; ಶ್ರೀ ಸನ್ನಿಧಿ ಮೇಲಡ್ಕ ವರಂಗ ಗ್ರಾಮ ಹೆಬ್ರಿ ತಾಲೂಕು ಎಂಬಾತ ಅಟೋರಿಕ್ಷಾ ನಿಲ್ದಾಣ ಬದಿಯಲ್ಲಿ  ನಿಂತುಕೊಂಡು ಒಂದು ರೂಪಾಯಿಗೆ 70 ಎಂದು ಮಟ್ಕಾ ಜೂಜಾಟಕ್ಕೆ ಜನರನ್ನು ಕರೆದು ಚೀಟಿಯ ಮೇಲೆ ಪೆನ್ನಿನಿಂದ ಅಂಕಿಗಳನ್ನು ಬರೆಯುತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ  ಅತನ ಬಳಿಯಿದ್ದ 1,520 /-ರೂಪಾಯಿ ನಗದು, ಮಟ್ಕಾ ನಂಬ್ರ ಬರೆದ ಚೀಟಿ ಹಾಗೂ ಬಾಲ್ ಪೆನ್ನನ್ನುಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 15/2023 78 (i) (iii) ಕರ್ನಾಟಕ ಪೊಲೀಸ್ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಅಜೆಕಾರು : ಪಿರ್ಯಾದಿದಾರರಾದ ಮೊಯ್ದಿನಬ್ಬ (44), ತಂದೆ : ಅಹಮ್ಮದ್‌ ಬ್ಯಾರಿ, ವಾಸ: ಸೂರೊಳ್‌ ಮನೆ ಶಿರ್ಲಾಲು ಗ್ರಾಮ ಕಾರ್ಕಳ ತಾಲೂಕು ಇವರ ತಾಯಿ ಸೊಲ್ಮಾ (77) ರವರು ಕಾರ್ಕಳ ತಾಲೂಕು ಶಿರ್ಲಾಲು ಗ್ರಾಮದಲ್ಲಿ ಪಿರ್ಯಾದಿದಾರರ ಮನೆ ಪಕ್ಕದಲ್ಲಿ ಸುಮಾರು 200 ಮೀಟರ್‌ ದೂರಲ್ಲಿ ವಾಸ ಮಾಡಿಕೊಂಡಿದ್ದು, ಅವರು ದಿನಾಂಕ 29/03/2023 ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ದನಗಳನ್ನು ಮೇಯಲು ಕಟ್ಟಿದವರು ವಾಪಾಸ್ಸು ಬದಲಿಸಿ ಕಟ್ಟಲು ಹೋದವರು ಮಧ್ಯಾಹ್ನ ಊಟದ ಸಮಯವಾದರೂ  ಮನೆಗೆ ಬಾರದನ್ನು ಕಂಡು ಪಿರ್ಯಾದಿದಾರರ  ತಂದೆ ಅಹಮ್ಮದ್‌ ಬ್ಯಾರಿಯವರು ಪಿರ್ಯಾದಿದಾರರಿಗೆ ವಿಷಯ ತಿಳಿಸಿದಾಗ ಪಿರ್ಯಾದಿದಾರರು ಬಂದು ಹುಡುಕಿ ತೋಟದಲ್ಲಿರುವ ಕೆರೆಯನ್ನು ನೋಡಿದಾಗ ಸೊಲ್ಮಾ ರವರು ಕೆರೆಗೆ ಬಿದ್ದು ಮೇಲೆ ಕೆಳಗೆ ಹೋಗುತ್ತಿದ್ದನ್ನು ಕಂಡು ಕೊಡಲೇ ನೆರೆಕರೆಯವರನ್ನು ಕರೆದು ಸ್ಥಳೀಯರ ಸಹಾಯದಿಂದ ಕೆರೆಯಿಂದ ಮೇಲೆ ತೆಗೆದು ಚಿಕಿತ್ಸೆಗೆ ಕರೆದುಕೊಂಡು ಹೋಗಲು ತಯಾರಿ ನಡೆಸಿ ನೋಡಲಾಗಿ ಸೊಲ್ಮಾರವರು ಮೃತ ಪಟ್ಟಿದ್ದು, ಅವರು ದಿನಾಂಕ 29/03/2023 ರಂದು 11:00 ಗಂಟೆಗೆ ಮೇಯಲು ಕಟ್ಟಿದ ದನಗಳನ್ನು ಬದಲಿಸಿ ಕಟ್ಟಲು ಹೋದವರು ಆಕಸ್ಮಿಕವಾಗಿ ತೋಟದಲ್ಲಿರುವ ಕೆರೆಯ ನೀರಿಗೆ ಬಿದ್ದು ಚಡಪಡಿಸುತ್ತಿದ್ದವರನ್ನು ಮೇಲಕ್ಕೆ ತೆಗೆದು ಉಪಚರಿಸಿ ಚಿಕಿತ್ಸೆಗೆ ಕರೆದುಕೊಂಡು ಹೋಗಲು ನೋಡಲಾಗಿ ಸಮಯ ಸುಮಾರು  12:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆ ಯುಡಿಅರ್‌  ಕ್ರಮಾಂಕ  12/2023 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾಪು: ದಿನಾಂಕ 25/03/2023 ರಂದು ಸುಮಾ ಬಿ , ಪೊಲೀಸ್‌ ಉಪನಿರೀಕ್ಷಕರು(ಕಾ&ಸು), ಕಾಪು ಪೊಲೀಸ್ ಠಾಣೆ ಇವರು ರೌಂಡ್ಸ್‌ಕರ್ತವ್ಯದಲ್ಲಿರುವಾಗ ಠಾಣಾ ವ್ಯಾಪ್ತಿಯ ಉದ್ಯಾವರ ಗ್ರಾಮದ ಸಂಪಿಗೆನಗರ ಕ್ರಾಸ್‌ ಬಳಿ ಅನುಮಾನಾಸ್ಪದವಾಗಿ ಓರ್ವ ವ್ಯಕ್ತಿ ಕಂಡು ಬಂದಿದ್ದು, ಆತನನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದುಕೊಂಡು ಆತನ ಹೆಸರು, ವಿಳಾಸ ವಿಚಾರಿಸಿಲಾಗಿ ಆತನ ಹೆಸರು ಮಹಮ್ಮದ್ ಅನಸ್ ಸಾಹೇಬ (25)  ಎಂದು ತಿಳಿಸಿದ್ದು, ವೈದ್ಯಕೀಯ ಪರೀಕ್ಷೆಯ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್ ಕೆ.ಎಂ.ಸಿ ಪೊರೆನ್ಸಿಕ್ ವಿಭಾಗ ಮಣಿಪಾಲ ಇವರ ಮುಂದೆ ಹಾಜರುಪಡಿದ್ದು, ಪರೀಕ್ಷಿಸಿದ ವೈದ್ಯರು ದಿನಾಂಕ 29/03/2023 ರಂದು ಗಾಂಜಾ ಸೇವಿಸಿರುವ ಬಗ್ಗೆ ದೃಢಪತ್ರ ನೀಡಿರುತ್ತಾರೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2023 ಕಲಂ: 27 (b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಮಾಸೆಬೈಲು:  ದಿನಾಂಕ 29/03/2023 ರಂದು ಸದಾಶಿವ ಆರ್‌ ಗವರೋಜಿ, ಪೊಲೀಸ್ ಉಪನಿರೀಕ್ಷಕರು‌, ಅಮಾಸೆಬೈಲು ಪೊಲೀಸ್ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಅಮಾಸೆಬೈಲು ಗ್ರಾಮದ ಕೆಲಾ ಸಾಲಿಮಕ್ಕಿ ಎಂಬಲ್ಲಿ  ಸಾರ್ವಜನಿಕ ರಸ್ತೆ ಬದಿಯಲ್ಲಿ ಒಬ್ಬ ವ್ಯಕ್ತಿಯು  ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದಾಗಿ  ಬಂದ ಮಾಹಿತಿ ಮೇರೆಗೆ ಸಾಲಿಮಕ್ಕಿ ಎಂಬಲ್ಲಿ ಸಾರ್ವಜನಿಕ ರಸ್ತೆಯ ಬಳಿ ಹೋದಾಗ ಆಪಾದಿತ ರವಿ (43) ಎಂಬಾತ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಕುಳಿತು  MYSORE LANCER WHISKY ಯ ರಟ್ಟಿನ ಪ್ಯಾಕೇಟ್‌ ಅನ್ನು  ಹಿಡಿದುಕೊಂಡು ಅದರಲ್ಲಿನ ಮದ್ಯವನ್ನು ಒಂದು ಪ್ಲಾಸ್ಟಿಕ್‌ ಲೋಟದಲ್ಲಿ ಹಾಕಿಕೊಂಡು ಅದಕ್ಕೆ ಒಂದು ಪ್ಲಾಸ್ಟಿಕ್‌ ಬಾಟಲಿಯಿಂದ ನೀರು ಬೆರಸಿ ಕುಡಿಯುತ್ತಿರುವುದು ಕಂಡು ಬಂದಿದ್ದು.  MYSORE LANCER WHISKY ಯ 90 ML ನ ಖಾಲಿ ಸರಾಯಿ ಪ್ಯಾಕೇಟು ಮದ್ಯ ಸೇವಿಸಲು ಉಪಯೋಗಿಸಿ ಖಾಲಿ ಪ್ಲಾಸ್ಟಿಕ್‌ ಲೋಟ ಮತ್ತು ಅರ್ಧ ಲೀಟರ್‌ ನೀರಿನ ಖಾಲಿ ಪ್ಲಾಸ್ಟಿಕ್‌  ಬಾಟಲಿಯನ್ನು ಸ್ವಾಧಿನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 06/2023  ಕಲಂ: 15(ಎ) ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-03-2023 09:45 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080