ಅಭಿಪ್ರಾಯ / ಸಲಹೆಗಳು

ಜುಗಾರಿ ಪ್ರಕರಣ

  • ಮಣಿಪಾಲ: ನವೀನ್ ಎಸ್ ನಾಯ್ಕ್ ಪಿ ಎಸ್ ಐ ಮಣಿಪಾಲ ಪೊಲೀಸ್ ಠಾಣೆ ರವರಿಗೆ ದಿನಾಂಕ 29/03/2023 ರಂದು ಬೆಳಿಗ್ಗೆ 16.00 ಗಂಟೆಗೆ ಉಡುಪಿ ತಾಲೂಕು ಮಣಿಪಾಲ ಶಿವಳ್ಳಿ ಗ್ರಾಮದ ಸಿಂಡಿಕೇಟ್ ಸರ್ಕಲ್ ಬಳಿ  ಆರೋಪಿ ಯತೀಶ್ ಎಂಬಾತನು ತನ್ನ ಸ್ವಂತ ಲಾಭಕೋಸ್ಕರ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದಾಗಿ ಭಾತ್ಮಿದಾರರಿಂದ ಖಚಿತಪಡಿಸಿಕೊಂಡು 16:30 ಗಂಟೆಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಹಾಗೂ ಆರೋಪಿ ಬಳಸುತ್ತಿದ್ದ ಮಟ್ಕಾ ಚೀಟಿ, ಬಾಲ್‌ ಪೆನ್‌,  ನಗದು ರೂಪಾಯಿ 985/- ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 81/2023 ಕಲಂ: 78(I)(III) KP ಯಾಕ್ಟ್‌ ರಂತೆ ಪ್ರಕರಣ ದಾಖಲಿಸಿರುವುದಾಗಿದೆ.
  • ಮಲ್ಪೆ: ಗುರುನಾಥ ಬಿ.ಹಾದಿಮನಿ ಪಿ.ಎಸ್.ಐ ಮಲ್ಪೆ ಪೊಲೀಸ್ ಠಾಣೆ ರವರು  ದಿನಾಂಕ 29/03/2023 ರಂದು ಠಾಣೆಯಲ್ಲಿ ಇರುವಾಗ  18:30 ಗಂಟೆಗೆ ಬಾತ್ಮೀದಾರರು ಕರೆ ಮಾಡಿ ಕೊಡವೂರು  ಗ್ರಾಮದ ಮಲ್ಪೆ ಬಸ್ ನಿಲ್ದಾಣದ  ಬಳಿ ಸಾರ್ವಜನಿಕ  ಸ್ಥಳದಲ್ಲಿ ಯಾರೋ  ಒಬ್ಬ ಆಸಾಮಿ ಕಾನೂನು ಬಾಹಿರವಾಗಿ  ಮಟ್ಕಾ ಜುಗಾರಿ ಆಟ ಆಡಿಸುತ್ತಿರುವುದಾಗಿ ಮಾಹಿತಿ ನೀಡಿದ ಮೇರೆಗೆ ಠಾಣಾ ಎನ್ ಸಿ ನಂಬ್ರ 29/2023 ರಂತೆ  ದಾಖಲಿಸಿಕೊಂಡು  ಮಟ್ಕಾ ಜುಗಾರಿ ಆಟ ಆಡುವಲ್ಲಿಗೆ ದಾಳಿ ನಡೆಸುವರೇ  ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು  19.15 ಗಂಟೆಗೆ  ಸಿಬ್ಬಂದಿಯವರಾದ , ಹೆಚ್ ಸಿ 62 ಲೊಕೇಶ್ ಪಿಸಿ 2507 ರವಿರಾಜ್ ಹಾಗೂ ಪಂಚರೊಂದಿಗೆ  ಇಲಾಖಾ ಜೀಪು ನಂಬ್ರ ಕೆಎ.20.ಜಿ.449 ನೇದರಲ್ಲಿ 19.30 ಗಂಟೆಗೆ ಕೊಡವೂರು ಗ್ರಾಮದ ಮಲ್ಪೆ ಬಸ್ ನಿಲ್ದಾಣ ಬಳಿ  ಜನರನ್ನು ಸೇರಿಸಿಕೊಂಡು ಅವರಿಂದ ಹಣ ಪಡೆದುಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿರುವುದು ಕಂಡು ಖಚಿತಪಡಿಸಿಕೊಂಡು ಸಿಬ್ಬಂದಿಗಳೊಂದಿಗೆ 19:35 ಗಂಟೆಗೆ ದಾಳಿ ನಡೆಸಿ ಮಟ್ಕಾ ಚೀಟಿ ಪಡೆದು ಹಣ ಸಂಗ್ರಹಿಸುತ್ತಿದ್ದ ಆರೋಪಿ   ಮಿಥುನ್ ಪೂಜಾರಿ ತಾನು ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಟವನ್ನು ನಡೆಸುತ್ತಿರುವುದಾಗಿ  ತಪ್ಪೋಪ್ಪಿಕೊಂಡಿರುತ್ತಾನೆ. ಆತನಿಂದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಒಟ್ಟು 1200 /- ರೂಪಾಯಿ ,ಮಟ್ಕಾ ಚೀಟಿ-1 ಹಾಗೂ ಬಾಲ್ ಪೆನ್ನು  -1  ನ್ನು ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ   ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 30/2023 ಕಲಂ: 78(I)(III) KP ಯಾಕ್ಟ್‌ ರಂತೆ ಪ್ರಕರಣ ದಾಖಲಿಸಿರುವುದಾಗಿದೆ.
  • ಬ್ರಹ್ಮಾವರ: ದಿನಾಂಕ 30/03/2023 ರಂದು ಬ್ರಹ್ಮಾವರ ತಾಲೂಕು ಚಾಂತಾರು ಗ್ರಾಮದ ಕುಂಜಾಲು ರೋಷನ್‌ಬಾರ್‌ ಎಂಡ್‌ ರೆಸ್ಟೋರೆಂಟ್‌‌ ಸಮೀಪದ ಗೂಡಂಗಡಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಜಯ ನಾಯ್ಕ್‌ ‌ಎಂಬವರು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಪಡೆದು ಮಟ್ಕಾ ಜುಗಾರಿ ನಡೆಸುತ್ತಿದ್ದುದಾಗಿ ಮಹಾಂತೇಶ್‌ ಉದಯ ನಾಯಕ್‌‌ ಪಿ.ಎಸ್.ಐ-1. ಬ್ರಹ್ಮಾವರ ಪೊಲೀಸ್ ಠಾಣೆ  ರವರಿಗೆ ಪಿಸಿ 2567ನೇ ರವರು ನೀಡಿದ ಖಚಿತ ಮಾಹಿತಿಯನ್ನು ಇಲಾಖಾ ಮೇಲಾಧಿಕಾರಿಯವರಿಗೆ ತಿಳಿಸಿ, ಮಾನ್ಯ ಘನ ನ್ಯಾಯಾಲಯದಿಂದ ಅನುಮತಿ ಪಡೆದು ಸಿಬ್ಬಂದಿಗಳ ಜೋತೆ ಸದ್ರಿ ಸ್ಥಳಕ್ಕೆ ಹೋದಾಗ ಅಲ್ಲಿ ಆರೋಪಿಯು  ಸಾರ್ವಜನಿಕರು ಸೇರಿಕೊಂಡು 00 ರಿಂದ 99 ರ ಒಳಗೆ ನೀವು ಬರೆಯಿಸಿದ ಯಾವುದೇ ನಂಬರ್ ಬಂದರೆ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸಂಗ್ರಹಿಸಿ, ಮಟ್ಕಾ ಚೀಟಿ ಬರೆದು ಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಬೆಳಿಗ್ಗೆ 11.25 ಗಂಟೆಗೆ  ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಆತನು ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣವನ್ನು ತಾನು  ಸ್ವಂತ ಲಾಭಕ್ಕಾಗಿ ಉಪಯೋಗಿಸುತ್ತಿದ್ದುದಾಗಿ ಒಪ್ಪಿಕೊಂಡಿರುತ್ತಾನೆ. ನಂತರ ಸದ್ರಿ ಆರೋಪಿತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣ ರೂ 650/- , ಮಟ್ಕಾ ಬರೆದ ಚೀಟಿ-1, ಹಾಗೂ ಬಾಲ್ ಪೆನ್ನು -1 ಸ್ವತ್ತುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 68/2023 ಕಲಂ: 78(I)(III) KP ಯಾಕ್ಟ್‌ ರಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಉಡುಪಿ: ಪಿರ್ಯಾದಿ: ಚೇತನ್ ಕುಮಾರ್, ಪ್ರಾಯ 39 ವರ್ಷ, ತಂದೆ: ಧರ್ಮರಾಜ್ ಹೆಗಡೆ, ವಾಸ: ನಂಬ್ರ 2-14, ನಾರ್ಲ ಹೌಸ್, ಕಾಂತಾವರ, ಉಡುಪಿ ಇವರು ಬೆಂಗಳೂರಿನ ಜೀವನ ಭೀಮ ಎಂಬಲ್ಲಿನ ICICI ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿರುತ್ತಾರೆ. ದಿನಾಂಕ 28.03.2023 ರಂದು ಅವರ ಮೇಲಿನ ಖಾತೆಯಿಂದ ಕ್ರಮವಾಗಿ ರೂ. 98,500/- ಮತ್ತು ರೂ. 500/- ಮತ್ತು ದಿನಾಂಕ 30.03.2023 ರಂದು ರೂ. 99,500/- ರಂತೆ ಒಟ್ಟು ರೂ. 1,98,500/- ಹಣವನ್ನು ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಗಮನಕ್ಕೆ ಬಾರದೇ ಅವರ ಅನುಮತಿ ಇಲ್ಲದೇ ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ, ನಷ್ಟ ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2023  ಕಲಂ 66(C),   ಐ.ಟಿ. ಆಕ್ಟ್. ರಂತೆ ಪ್ರಕರಣ ದಾಖಲಿಸಲಾಗಿದೆ.  
      

ಹಲ್ಲೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಪ್ರಶಾಂತ (27) ತಂದೆ: ಜಗನ್ನಾಥ ವಾಸ: ಕಸ್ತೂರಿಬಾಗ್‌, ಎಪಿಎಂಸಿ ಮಾರ್ಕೇಟ್‌ನ ಹಿಂಬದಿ, ಆದಿ ಉಡುಪಿ, ಉಡುಪಿ ತಾಲೂಕು ಇವರು ದಿನಾಂಕ 30/03/2023 ರಂದು ಬೆಳಗಿನ ಜಾವ 01:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಆದಿಉಡುಪಿ ಎಪಿಎಂಸಿ ಮಾರ್ಕೇಟ್‌ನ ಹಿಂಬದಿಯಲ್ಲಿರುವ ಪ್ರಶಾಂತ ರವರ ಮನೆಯಲ್ಲಿರುವಾಗ 4 ಜನ ಆರೋಪಿತರಾದ 1) ಪ್ರಶಾಂತ 2) ಸಂತೋಷ ಮತ್ತು ಇತರ ಇಬ್ಬರುರು ಸಮಾನ ಉದ್ದೇಶದಿಂದ ಪ್ರಶಾಂತ ರವರ ಮನೆಯ ಮುಂದಿನ ಬಾಗಿಲನ್ನು ಬಲವಂತವಾಗಿ ದೂಡಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಇವರನ್ನು ಉದ್ದೇಶಿಸಿ, ನೀನು ಬಾರಿ ಮಾತನಾಡುತ್ತೀಯಾ, ಎಂದು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಲ್ಲದೆ, ಆರೋಪಿತರಲ್ಲಿ ಓರ್ವನು ಪ್ರಶಾಂತ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಕ್ಷೌರಿಕರು ಉಪಯೋಗಿಸುವ ಲೇಸರ್‌ ಬ್ಲೇಡ್‌ ನಿಂದ ಇವರ ಬಲಭಾಗದ ಎದೆ ಹಾಗೂ ಹೊಟ್ಟೆಗೆ ಗೀರಿದ ಪರಿಣಾಮ ಪ್ರಶಾಂತ ರವರಿಗೆ ಗಂಭೀರ ಸ್ವರೂಪದ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 43/2023 ಕಲಂ: 448, 504, 506, 323, 324, 307 Rw 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಬೈಕಾಡಿ ಗ್ರಾಮದ ಗಾಂಧಿನಗರ ಎಂಬಲ್ಲಿ ಫಿರ್ಯಾಧಿ: ಶೆಟ್ಟಿಗಾರ್‌ (58) ಗಂಡ:ಗೋಪಾಲ ಶೆಟ್ಟಿಗಾರ್‌, ವಾಸ:ಗಾಂಧಿನಗರ ಬೈಕಾಡಿ ಗ್ರಾಮ ಇವರ ಜೊತೆಯಲ್ಲಿ ವಾಸವಾಗಿರುವ ಅವರ  ಮಗಳನ್ನು ಅವಳ ಪರಿಚಯದ ಆರೋಪಿ ಅಕ್ಷಯನು ಪ್ರೀತಿ ಮಾಡುವಂತೆ ಪದೇ ಪದೇ ತೋಂದರೆ ಕೊಡುತ್ತಿದ್ದು, ಈ ಬಗ್ಗೆ ಫಿರ್ಯಾಧಿದಾರರು ಆರೋಪಿಗೆ ಬುದ್ದಿವಾದ ಹೇಳಿ ಅವರಿಬ್ಬರು ಪರಸ್ಪರ ಮಾತನಾಡುವುದನ್ನು ನಿಲ್ಲಿಸಿದ್ದರು. ನಂತರ ನೀರಿಕ್ಷಳು ಬೆಂಗಳೂರಿಗೆ ಕೆಲಸದ ಬಗ್ಗೆ ಹೊಗಿರುತ್ತಾಳೆ. ಆ ಬಳಿಕವು ಆರೋಪಿಯು ನೀರಿಕ್ಷಳನ್ನು  ಮದುವೆ ಮಾಡಿಸಿಕೊಡುವಂತೆ  ಫಿರ್ಯಾಧಿದಾರರಿಗೆ ಯಾವಾಗಲು ತೊಂದರೆ ಕೊಡುತ್ತಿದ್ದನು. ದಿನಾಂಕ:-27/03/2023 ರಂದು ಫಿರ್ಯಾಧಿದಾರರು ಮತ್ತು ಅವಳ ಗಂಡ ಮನೆಯಲ್ಲಿರುವಾಗ ಮಧ್ಯಾಹ್ನ 02:30 ಗಂಟೆ ಸುಮಾರಿಗೆ ಆರೋಪಿಯು ಏಕಾಏಕಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾಧಿದಾರರನ್ನು ಉದ್ದೇಶಿಸಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಿಯಾ ನನಗೆ ಮದುವೆ ಮಾಡಿಸಿ ಕೊಡುತ್ತಿಯಾ ಇಲ್ಲವಾ ಎಂದು ಅವಾಚ್ಯವಾಗಿ ಬೈದು ಫಿರ್ಯಾಧಿದಾರರಿಗೆ ಕೈಯಿಂದ ಕೆನ್ನೆಗೆ ಹೊಡೆದು ತಲೆಕೂದಲನ್ನು ಎಳೆದು ದೂಡಿದ್ದು, ಆಗ ಅವರು ಬಿದ್ದಾಗ ತಪ್ಪಿಸಲು ಬಂದ ಅವರ ಗಂಡ ಗೋಪಾಲ ಶೆಟ್ಟಿಗಾರ್‌ ರವರಿಗೆ ಬಾಯಿಗೆ ಬಂದಂತೆ ಬೈದು ನೀವು ಮಗಳನ್ನು ನನಗೆ ಮದುವೆ ಮಾಡಿಸಿಕೊಡದಿದ್ದರೆ ನಿಮ್ಮನ್ನು ಜೀವ ಸಹಿತ ಬೀಡುವುದಿಲ್ಲವೆಂದು ಜೀವಬೆದರಿಕೆ ಹಾಕಿ ಹೋಗಿರುತ್ತಾನೆ. ಫಿರ್ಯಾಧಿದಾರರು ಮರ್ಯಾದೆಗೆ ಅಂಜಿ ದೂರು ನೀಡದೆ ಇದ್ದು, ಆದರೆ ಆರೋಪಿಯು ಮುಂದಕ್ಕೂ ತೊಂದರೆ ಮಾಡುವ ಇರಾದೆಯವನಾಗಿರುವುದರಿಂದ  ಹಿರಿಯವರಲ್ಲಿ ಚರ್ಚಿಸಿ ದೂರು ನೀಡುವಲ್ಲಿ ವಿಳಂಬವಾಗಿದೆ ಈ ಬಗ್ಗೆ ಬ್ರಹ್ಮಾವರ ಠಾಣೆ  ಅಪರಾಧ ಕ್ರಮಾಂಕ 67/2023 : ಕಲಂ 448,323,354,504 ಜೊತೆಗೆ 506  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

 

ಇತ್ತೀಚಿನ ನವೀಕರಣ​ : 30-03-2023 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080