ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ 27/03/2022 ರಂದು ಪಿರ್ಯಾದಿದಾರರಾದ ರಶೀದ್‌, (38), ತಂದೆ: ರಜಾಕ್‌ವಾಸ: ಕೆಳನೇಜಾರು ಕಲ್ಯಾಣಪುರ ಅಂಚೆ ಮೂಡುತೋನ್ಸೆ ಗ್ರಾಮ, ಉಡುಪಿ ಇವರು ಉಪ್ಪೂರು ರಿಕ್ಷಾ ನಿಲ್ದಾಣದ ಬಳಿ ಅವರ ರಿಕ್ಷಾ ನಿಲ್ಲಿಸಿಕೊಂಡಿರುವಾಗ ಸಮಯ ಸುಮಾರು ಸಂಜೆ 7:00 ಗಂಟೆಗೆ ಉಪ್ಪೂರು ಗ್ರಾಮದ  ಉಪ್ಪೂರು ರಿಕ್ಷಾ ನಿಲ್ದಾಣದ ಎದುರು ಇರುವ ಮಧ್ಯಸ್ಧರ ಕಾಂಪ್ಲೆಕ್ಸ್‌ಕಡೆಗೆ ಕೃಷ್ಣ ದೇವಾಡಿಗರವರು ಬ್ರಹ್ಮಾವರ- ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರನ್ನು ದಾಟುವ ಸಮಯದಲ್ಲಿ ಆರೋಪಿಯು ಅವರ KA-04 HM-0153 ನೇ ಮೋಟಾರ್ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಕೃಷ್ಣ ದೇವಾಡಿಗರವರಿಗೆ ಡಿಕ್ಕಿ ಹೊಡೆದು ಸ್ವಲ್ಪ ಮುಂದಕ್ಕೆ ಹೋಗಿ ಸ್ಕಿಡ್‌ಆಗಿ ರಸ್ತೆಯ ಮೇಲೆ ಬಿದ್ದಿರುತ್ತಾರೆ.  ಈ ಅಪಘಾತದ ಪರಿಣಾಮ ಕೃಷ್ಣ ದೇವಾಡಿಗರಿಗೆ ತಲೆಯ ಬಲಬದಿಗೆ ರಕ್ತಗಾಯ ಹಾಗೂ ಎಡ ಬದಿಯ ಕೋಲು ಕಾಲಿಗೆ ತೀವೃ ಸ್ವರೂಪದ ಒಳ ಜಖಂ ಆಗಿರುತ್ತದೆ. ಅಲ್ಲದೇ ಅರೋಪಿಯ ಕೈಗೆ ಸ್ವಲ್ಪ ತರಚಿದ ಗಾಯವಾಗಿ ಆತನು ಮೋಟಾರ ಸೈಕಲ್‌ನ್ನು ಅಲ್ಲಿಯೇ ಬಿಟ್ಟು ಗಾಯಾಳುವಿಗೆ ಚಿಕಿತ್ಸೆಗೆ ನೆರವಾಗದೇ ಅಲ್ಲಿಂದ ಹೋಗಿರುತ್ತಾನೆ. ನಂತರ ಗಾಯಗೊಂಡ ಕೃಷ್ಣ ದೇವಾಡಿಗರವರನ್ನು 108 ನೇ ವಾಹನದಲ್ಲಿ  ಚಿಕಿತ್ಸೆಯ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಗಾಯಾಳುವಿನ ಮನೆಯವರು ಅವರ ಅರೈಕೆಯಲ್ಲಿ ಇದ್ದುದರಿಂದ  ಅವರ ಮನೆಯವರಲ್ಲಿ ವಿಚಾರಿಸಿ ದೂರು  ನೀಡುವಾಗ ವಿಳಂಭವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 53/2022 ಕಲಂ: 279, 338 ಐಪಿಸಿ ಮತ್ತು ಸೆಕ್ಷನ್‌137(ಎ)(ಬಿ)  ಜೊತೆಗೆ 187 ಐಎಂವಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 29/03/2022 ರಂದು ಪಿರ್ಯಾದಿದಾರರಾದ ಶರವಣ, (39) ಪಳನಿಸ್ವಾಮಿ, ವಾಸ: ಸುರೇಖಾನಗರ, ಮಿಯಾರು ಗ್ರಾಮ, ಕಾರ್ಕಳ ಇವರು ಕಾರ್ಕಳಕ್ಕೆ ಹೋಗಲು ಪುಲ್ಕೇರಿ ಬಸ್ ತಂಗುದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ಇರುವ ಸಮಯ ಶರವಣ ಇವರ ತಂಗಿ ನಿರ್ಮಲಾರವರ ಮಗ ತೇಜಸ್ (13) ಎಂಬಾತನು ಟ್ಯೂಷನ್ ಕ್ಲಾಸ್ ಮುಗಿಸಿ ಪುಲ್ಕೇರಿ ಬೈಪಾಸ್‌ನ ಬಜಾಜ್ ಶೋರೂಮ್ ಹತ್ತಿರ ತನ್ನ ಮನೆಯಾದ ಸಾಣೂರು ಗ್ರಾಮದ ಕೆಂಚಬೆಟ್ಟು ಎಂಬಲ್ಲಿಗೆ ಹೋಗಲು ಕಾರ್ಕಳ ಕಡೆಯಿಂದ ಪುಲ್ಕೇರಿ ಬೈಪಾಸ್ ಕಡೆಗೆ ನಡೆದುಕೊಂಡು ಬರುತ್ತಿರುವ ಸಮಯ ಸಂಜೆ 16:30 ಗಂಟೆಗೆ ಕಾರ್ಕಳ ಕಡೆಯಿಂದ ಪುಲ್ಕೇರಿ ಕಡೆಗೆ ಮಾರುತಿ ಸುಜುಕಿ ಕಾರು KA-22 B-5046 ನೇದನ್ನು ಅದರ ಚಾಲಕ ಜನಾರ್ಧನ ಎಂಬಾತನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೇಜಸ್‌ಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ತೇಜಸ್‌ನು ಸುಮಾರು ದೂರ ಎಸೆಯಲ್ಪಟ್ಟು ಆತನ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ಒಳಜಖಂ ಆಗಿದ್ದು ಕೈಕಾಲುಗಳಿಗೆ ರಕ್ತಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ತೇಜಸ್‌ನನ್ನು ಡಿಕ್ಕಿ ಹೊಡೆದ ಕಾರಿನಲ್ಲಿಯೇ ಕಾರ್ಕಳ ಸಿಟಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 44/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಪಡುಬಿದ್ರಿ: ದಿನಾಂಕ 28/03/2022 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀಮತಿ ಸಮೀನಾ (27) ಗಂಡ ಫಕೀರ್ ಮೊಹಮ್ಮದ್ ಸುಲೈಮಾನ್ ವಾಸ: ನಿಯರ್ ಉರ್ದು ಶಾಲೆ ಅಬ್ಬ ಸಾಲಾಂ ಕಾಂಪೌಂಡ್, ಹೂಡೆ, ಮಲ್ಪೆ ಕಾಪು ಇವರ ಗಂಡ ಫಕೀರ್ ಮೊಹಮ್ಮದ್ ಸುಲೈಮಾನ್ (39) ಎಂಬವರೊಂದಿಗೆ ಉಡುಪಿಯಿಂದ  ಮಂಗಳೂರು ಕಡೆಗೆ ಅವರ ಗಂಡನ ಸ್ಕೂಟಿ ನಂಬ್ರ KA-20 EH-9873 ರಲ್ಲಿ ಹೊರಟು ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ-ಮಂಗಳೂರು ಏಕಮುಖ ರಸ್ತೆಯಲ್ಲಿ ಬರುತ್ತಾ ಬೆಳಿಗ್ಗೆ 6:30 ಗಂಟೆಗೆ  ಕಾಪು ತಾಲೂಕು  ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಯ ಕಾರ್ಕಳ ಜಂಕ್ಷನ್ ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA-20 Y-3533 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ಚೇತನ್ ಪೂಜಾರಿ ಎಂಬವನು  ತನ್ನ ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀಮತಿ ಸಮೀನಾ ರವರ ಗಂಡ ಸವಾರಿ ಮಾಡಿಕೊಂಡಿದ್ದ ಸ್ಕೂಟಿಯ ಮುಂದೆ ಬಂದು ಯಾವುದೇ ಸೂಚನೆ ನೀಡದೇ ಒಮ್ಮೆಲೇ ಕಾರ್ಕಳ ಕಡೆಗೆ ಹೋಗಲು ಬಲಕ್ಕೆ ತಿರುಗಿಸಿದ ಪರಿಣಾಮ ಎರಡೂ ವಾಹನಗಳು ಡಿಕ್ಕಿಯಾಗಿದ್ದು, ಸ್ಕೂಟಿ ಸವಾರ ಮತ್ತು ಸಹಸವಾರೆ ಶ್ರೀಮತಿ ಸಮೀನಾ ರವರು ರಸ್ತೆಗೆ ಬಿದ್ದು ಅವರಲ್ಲಿ ಶ್ರೀಮತಿ ಸಮೀನಾ ರವರ ಗಂಡನ ಬಲ ಕಾಲಿನಮೂಳೆ ಮುರಿತ ಹಾಗೂ ಎಡಕಾಲು ತೋರು ಬೆರಳಿಗೆ ತರಚಿದ ಗಾಯವಾಗಿದ್ದು, ಶ್ರೀಮತಿ ಸಮೀನಾ ರವರ ಮುಖದ ಬಲಬದಿ ಹಾಗೂ ಬಲಕೈಗೆ ತರಚಿದ ಗಾಯವಾಗಿರುತ್ತದೆ. ಅಪಘಾತದಿಂದ ಗಾಯಗೊಂಡ ಶ್ರೀಮತಿ ಸಮೀನಾ ರವರು ಮತ್ತು ಅವರ ಗಂಡನನ್ನು  ಸ್ಥಳೀಯರು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ   ಕಳುಹಿಸಿಕೊಟ್ಟಿದ್ದು, ಶ್ರೀಮತಿ ಸಮೀನಾ ರವರು ಹೊರರೋಗಿ ಚಿಕಿತ್ಸೆ ಪಡೆದಿದ್ದು, ಅವರ ಗಂಡನನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ.ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 36/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಗಂಡಸು ಕಾಣೆ ಪ್ರಕರಣ

 • ಕಾಫು: ಪಿರ್ಯಾದಿದಾರರಾದ ರಜೀಯಾ.ಬಿ (60) ಗಂಡ:ಶೇಖ್ ಅಕ್ಬರ್ ಸಾಹೇಬ ವಾಸ: ದರ್ಗಾದ ಬಳಿ  ಕೊಂಬುಗುಡ್ಡೆ ಮಲ್ಲಾರು ಗ್ರಾಮ. ಕಾಪು ಇವರ ಮಗ ಪವಾಜ್ ಅಹಮ್ಮದ್‌ (37) ವಿದ್ಯಾಭ್ಯಾಸದ ಬಳಿಕ ಸುಮಾರು 12 ವರ್ಷದಿಂದ ಮಾನಸಿಕವಾಗಿ ಆಘಾತಗೊಂಡಿದ್ದು, ಅವಿವಾಹಿತನಾಗಿರುತ್ತಾನೆ. ರಜೀಯಾ.ಬಿ ರಜೀಯಾ.ಬಿ ಇವರ ಮಗ ಆಗಾಗ ಮನೆ ಬಿಟ್ಟು ಹೋಗಿ 4-6 ದಿನ ಬಿಟ್ಟು ಮರಳಿ ಮನೆಗೆ ಬರುತ್ತಿದ್ದು. ದಿನಾಂಕ 22/03/2022 ರಂದು ರಜೀಯಾ.ಬಿ ಇವರ ಮಗ ಪವಾಜ್ ಅಹಮ್ಮದ್ ನು ಮಣಿಪಾಲದ  ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಬರುವುದಾಗಿ ರಜೀಯಾ.ಬಿ ಇವರಲ್ಲಿ ಹೇಳಿ ಬೆಳಿಗ್ಗೆ 05:30  ಗಂಟೆ ಸಮಯಕ್ಕೆ ಮನೆಯಿಂದ ಹೋಗಿದ್ದು ನಂತರ ಬೆಳಿಗ್ಗೆ 07:30 ಗಂಟೆ ಸುಮಾರಿಗೆ ರಜೀಯಾ.ಬಿ ರವರ  ಮೊಬೈಲ್ ಗೆ ಕರೆ ಮಾಡಿ ನಾನು ಉದ್ಯೋಗ ಹುಡುಕಿಕೊಂಡು ದೂರ ಹೋಗುತ್ತಿರುವುದಾಗಿ ತಿಳಿಸಿದ್ದು.  ಬಳಿಕ ರಜೀಯಾ.ಬಿ ರವರಿಗೆ ಆಗಾಗ ಕರೆ ಮಾಡಿ ಊಟ ಮಾಡಿದೆಯಾ? ಎಂಬಿತ್ಯಾದಿಯಾಗಿ ಕೇಳುತ್ತದ್ದು.  ರಾತ್ರಿ 10 ಗಂಟೆ ಸುಮಾರಿಗೆ ರಜೀಯಾ.ಬಿ ರವರಿಗೆ  ಕರೆ ಮಾಡಿ  ಈಗ  ನಾನು  ಗೋವಾದಲ್ಲಿದ್ದು,  ಬಾಂಬೆಗೆ ಹೋಗುವ ರೈಲಿಗಾಗಿ ಕಾಯುತ್ತಿದ್ದು, ಬಾಂಬೆ ತಲುಪಿದ ಮೇಲೆ ಕರೆ ಮಾಡಿ ತಿಳಿಸುವುದಾಗಿ ಹೇಳಿದ್ದು. ಬಳಿಕ  ಆತನು ರಜೀಯಾ.ಬಿ ರವರಿಗೆ ಕರೆ ಮಾಡಿರುವುದಿಲ್ಲ. ರಜೀಯಾ.ಬಿ ರವರು ಕರೆ ಮಾಡಿದರೆ, ಮೊಬೈಲ್  ಸ್ವಿಚ್ ಆಪ್ ಎಂಬುದಾಗಿ ಬಂದಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 31/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ವಿಶ್ವಜೀತ್ ಸಾವಂತ್ (34) ತಂದೆ: ದಿ. ಅಶೋಕ್ ದಾಜಿ ಸಾವಂತ್   ವಾಸ: ಶಶಿಕಾಂತ್ ಆಕೇರ್ಡ್, CHS ರುಶ್ವವಂತೆ ನಗರ, ದೊಂಬೆಲಿ ರಸ್ತೆ, ಥಾಣೆ ಇವರ ಅಣ್ಣನಾದ ಅಭಿಜೀತ್ ಸಾಮಂತ್ ರವರಿಗೆ ಮಧ್ಯಪಾನ ಹಾಗೂ ಸಿಗರೇಟ್ ಸೇವನೆಯಂತಹ ದುಚ್ಚಟಗಳಿದ್ದು, ಅವರಿಗೆ ಮದುವೆಯಾಗಿರುವುದಿಲ್ಲ, ಮಣಿಪಾಲದಲ್ಲಿ ಕೆಲಸದಲ್ಲಿದ್ದವರು ಯಾವುದೋ ಆರೋಗ್ಯ ಸಮಸ್ಯೆ ಅಥವಾ ಮಾನಸಿಕ ಖಿನ್ನತೆಯಿಂದ ಅಥವಾ ಇನ್ಯಾವುದೋ ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28/01/2022 ರಂದು ಮಣಿಪಾಲದ ಹೋಟೇಲ್ ಹೀಲ್ ವ್ಯೂ ನ 4 ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಗೆ ಪ್ರಯತ್ನಿಸಿದ್ದು,  ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಸಾರ್ವಜನಿಕರು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು ICU – 1 ಚಿಕಿತ್ಸೆಪಡೆಯುತ್ತಿದ್ದರು, ದಿನಾಂಕ 25/03/2022 ರಂದು ಬೆಳಿಗ್ಗೆ 7:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 10/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಶಿವರಾಜ್ ಆಚಾರ್ಯ, (34) ತಂದೆ: ಶ್ರೀನಿವಾಸ್ ಆಚಾರ್ಯ, ವಾಸ: ಜೈನ ಬಸದಿ ಬಳಿ, ಬೀಡು, ನಡ್ಸಾಲು ಗ್ರಾಮ, ಪಡುಬಿದ್ರಿ ಅಂಚೆ,  ಕಾಪು ಎಂಬವರು ಹಾಗೂ ಅವರ ಅತ್ತೆ ಮಮತಾ ಪ್ರಭಾಕರ ಆಚಾರ್ಯ ಎಂಬವರು ದಿನಾಂಕ 30/07/2014 ರಂದು ಅಭಿಕ್ಷಾ ಗ್ರಾಫಿಕ್ಸ್‌ ಎಂಬ ಸಂಸ್ಥೆಯನ್ನು ಪಡುಬಿದ್ರಿಯ ಅಮೃತ ಟವರ್ಸ್‌ಕಟ್ಟಡದಲ್ಲಿ ನಿರ್ವಹಿಸಿಕೊಂಡು ಬಂದಿರುತ್ತಾರೆ. ದಿನಾಂಕ 25/04/2016 ರಂದು ತನ್ನ ಮಾವ ಪ್ರಭಾಕರ ಆಚಾರ್ಯರವರ ಮರಣಾ ನಂತರ ಶಿವರಾಜ್ ಆಚಾರ್ಯ ಇವರೇ ಸಂಸ್ಥೆಯ ವ್ಯವಹಾರಗಳನ್ನು ಮುಂದುವರಿಸಿಕೊಂಡು ಹೋಗಿದ್ದು, ಈ ಸಂಸ್ಥೆಗೆ ಮಾರ್ಕೇಟಿಂಗ್‌ ಕೆಲಸದ ಬಗ್ಗೆ ದಿನಾಂಕ 5/10/2014 ರಂದು ಆರೋಪಿ ಗುರುಪ್ರಸಾದ್‌ ಆಚಾರ್ಯ ಎಂಬವನನ್ನು ತಿಂಗಳ ಸಂಬಳ ರೂಪಾಯಿ 6,000.00 ರಂತೆ ಕೆಲಸಕ್ಕೆ ಸೇರಿಸಿಕೊಂಡಿದ್ದು, ನಂತರ ಆರೋಪಿಯ ಒತ್ತಾಯಕ್ಕೆ ಪಾಲುದಾರನಾಗಿ ಸೇರಿಸಿಕೊಂಡು ದಿನಾಂಕ 30/12/2016ರಂದು ಪಾಲುದಾರಿಕೆ ಸಂಸ್ಥೆಯ ಹೆಸರಿನಲ್ಲಿ ಶಿವರಾಜ್ ಆಚಾರ್ಯ ಇವರ ಗಮನಕ್ಕೆ ಬಾರದೇ ಕರ್ನಾಟಕ ಬ್ಯಾಂಕ್‌ ಪಡುಬಿದ್ರಿ ಶಾಖೆಯಲ್ಲಿ ರೂಪಾಯಿ 4,60,000.00 ಸಾಲವನ್ನು ವಿ.ಕೆ.ಟೆಕ್ನೋಲಾಜೀಸ್‌ ಕಂಪ್ಯೂಟರ್ಸ್‌ ಮತ್ತು ಶ್ರೀ ಗಣೇಶ್‌ ಟ್ರೇಡರ್ಸ್‌ ಎಂಬ ನಕಲಿ ಸಂಸ್ಥೆಯ ಬಿಲ್ ತಯಾರಿಸಿ ಬ್ಯಾಂಕಿಗೆ ನೀಡಿರುತ್ತಾನೆ. ಆ ಹಣದಿಂದ ತನ್ನ ಅಕ್ಕ ಸುಷ್ಮಾ ವೇಣುಗೋಪಾಲ್‌ ಆಚಾರ್ಯರಿಗೆ ಉಚ್ಚಿಲ ಬಡಾ ಗ್ರಾಮದ ಸರ್ವೇ ನಂ. 54 ರಲ್ಲಿ ಮನೆಕಟ್ಟಲು ಹಣ ನೀಡಿರುತ್ತಾನೆ. ಅಲ್ಲದೇ 6 ಸೆಂಟ್ಸ್‌ಭೂಮಿಯನ್ನು ತನ್ನ ಸ್ವಂತ ಹೆಸರಿನಲ್ಲಿ ಖರೀಧಿಸಿ ಶಿವರಾಜ್ ಆಚಾರ್ಯ ಇವರಿಗೆ ವಂಚನೆ, ನಂಬಿಕೆ ದ್ರೋಹ ಮಾಡಿರುತ್ತಾನೆ. ಈ ವಿಚಾರದಲ್ಲಿ ಶಿವರಾಜ್ ಆಚಾರ್ಯ ರವರು ವಿಚಾರಿಸಿದಾಗ ತಪ್ಪಾಯಿತು ಎಂದು ತಿಳಿಸಿರುತ್ತಾನೆ. ದಿನಾಂಕ 28/03/2018 ರಂದು ಶಿವರಾಜ್ ಆಚಾರ್ಯ ಇವರ ಫೋರ್ಜರಿ ಸಹಿಯನ್ನು ಮಾಡಿ ಕೆನರಾ ಬ್ಯಾಂಕ್‌ ಪಡುಬಿದ್ರಿ ಶಾಖೆಯಿಂದ ರೂಪಾಯಿ 50,000.00 ನ್ನು ತೆಗೆದು ವಂಚಿಸಿರುತ್ತಾನೆ. ಕೆನರಾ ಬ್ಯಾಂಕ್‌ ಪಡುಬಿದ್ರಿ ಶಾಖೆಯ O.D. ಖಾತೆಯಿಂದ ಶಿವರಾಜ್ ಆಚಾರ್ಯ ರವರ ಗಮನಕ್ಕೆ ಬಾರದೆ 15/06/2018 ರಿಂದ 07/09/2018 ರ ನಡುವೆ ರೂಪಾಯಿ 6,25,000-00 ನ್ನು ಲಪಟಾಯಿಸಿದ್ದು, ದಿನಾಂಕ 11/09/2020 ರಂದು ಶಿವರಾಜ್ ಆಚಾರ್ಯ ರವರ ಸಂಸ್ಥೆಯ SCDCC Bank ಪಡುಬಿದ್ರಿ ಶಾಖೆಯಿಂದ  ಶಿವರಾಜ್ ಆಚಾರ್ಯ ಇವರ ಫೋರ್ಜರಿ ಸಹಿ ಮಾಡಿ ಚೆಕ್‌ ಮುಖಾಂತರ ರೂಪಾಯಿ 1,00,000.00 ನ್ನು ಪಡೆದಿರುತ್ತಾನೆ. ಆರೋಪಿಯು ತನ್ನ ಸ್ವಂತ ಲಾಭಕ್ಕೋಸ್ಕರ ಸಂಸ್ಥೆಯ ಹೆಸರಿನಲ್ಲಿ ಕೆನರಾ ಬ್ಯಾಂಕ್‌ ಮತ್ತು ಕರ್ನಾಟಕ ಬ್ಯಾಂಕಿನಲ್ಲಿ ಸಾಲ ಮಾಡಿದಲ್ಲದೇ ಸಂಸ್ಥೆಯ ಲೆಟರ್‌ಹೆಡ್‌, ವರ್ಕ್‌ಆರ್ಡರ್‌ ದಾಖಲಾತಿ ಪೇಪರ್‌ ಶಿವರಾಜ್ ಆಚಾರ್ಯ ರವರಿಗೆ ತಿಳಿಯದಂತೆ ದುರುಪಯೋಗಪಡಿಸಿ ಸೈಂಟ್‌ಮಿಲಾಗ್ರೀಸ್‌ ಕ್ರೆಡಿಟ್‌ಕೊ ಟಪರೇಟಿವ್‌ ಸೊಸೈಟಿ ಮತ್ತು  ಅಡ್ವೆ ಸಹಕಾರಿ ಬ್ಯಾಂಕ್‌ನಲ್ಲಿ ಸಾಲಪಡೆಯಲು ಯತ್ನಿಸಿ ಶಿವರಾಜ್ ಆಚಾರ್ಯ ಇವರನ್ನು ಬೆದರಿಸಿ ಸಾಲದ ಜಾಮೀನಿನ ಪತ್ರಕ್ಕೆ ಸಹಿ ಪಡೆದಿರುತ್ತಾರೆ. ದಿನಾಂಕ 15/03/2020 ರಂದು  ಆರೋಪಿತನು ಶಿವರಾಜ್ ಆಚಾರ್ಯ ರವರು ಸಂಸ್ಥೆಯಲ್ಲಿ ಇಲ್ಲದ ಸಮಯ ಸಂಸ್ಥೆಯ ವ್ಯವಹಾರದ, ವೈಯಕ್ತಿಕ ದಾಖಲಾತಿಗಳನ್ನು ಮತ್ತು ಸಹಿ ಮಾಡಿಟ್ಟ ಚೆಕ್‌ಗಳನ್ನು ಕಳವು ಮಾಡಿರುತ್ತಾನೆ, ಈ ಬಗ್ಗೆ ಶಿವರಾಜ್ ಆಚಾರ್ಯ ಇವರು ಆರೋಪಿಯಲ್ಲಿ ದಿನಾಂಕ 24/12/2021 ರಂದು ಪಡುಬಿದ್ರಿಯಲ್ಲಿ  ವಿಚಾರಿಸಿದಾಗ ಆರೋಪಿಯು ಇನ್ನೊಮ್ಮೆ ವಿಚಾರಿಸಿರೆ ರೌಡಿಗಳ ತಂಡದಿಂದ ಕೊಲೆ ಮಾಡುವುದಾಗಿ  ಶಿವರಾಜ್ ಆಚಾರ್ಯ ಇವರಿಗೆ ಬೆದರಿಕೆ ಹಾಕಿರುತ್ತಾನೆ., ತನಗೆ ನಂಬಿಕೆ ದ್ರೋಹ, ವಂಚನೆ ಮತ್ತು  ಜೀವಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 35/2022, ಕಲಂ: 406, 417, 420, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 30-03-2022 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080