ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕುಂದಾಪುರ: ದಿನಾಂಕ  29/03/2021  ರಂದು ಸಂಜೆ 6:30  ಗಂಟೆಗೆ ಕುಂದಾಪುರ  ತಾಲೂಕು ಹೆಮ್ಮಾಡಿ ಗ್ರಾಮದ ಕಾಶಿಮಠ  ಎಂಬಲ್ಲಿ NH 66 ರಸ್ತೆಯಲ್ಲಿ ಆಪಾದಿತ ಸಿಬ್‌‌‌ಗ್ಯಾತುಲ್ಲಾ KA-15-M-5760 ನೇ ಕಾರನ್ನು ಭಟ್ಕಳ ಕಡೆಯಿಂದ  ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಕಾರಿನ ಮುಂದುಗಡೆಯಲ್ಲಿ ಹೋಗುತ್ತಿದ್ದ ವಾಹನವನ್ನು  ಓವರ್‌ಟೇಕ್  ಮಾಡಲು  ಕಾರನ್ನು  ರಸ್ತೆಯ  ತೀರ  ಬಲಬದಿಗೆ  ಚಲಾಯಿಸಿದಾಗ  ಕಾರು NH 66  ರಸ್ತೆ ಮಧ್ಯೆ  ಇರುವ ಡಿವೈಡರ್‌‌‌ ಕಟ್ಟೆಗೆ ಡಿಕ್ಕಿ  ಹೊಡೆದು  ಬಳಿಕ ಮಗುಚಿ  ಉರುಳಿ  ಪಕ್ಕದ  NH 66  ರಸ್ತೆಯಲ್ಲಿ ಬಿದ್ದು, ಕಾರಿನಲ್ಲಿ  ಪ್ರಯಾಣಿಸುತ್ತಿದ್ದ  ಸಿಬ್‌‌‌ಗ್ಯಾತುಲ್ಲಾ ರವರ  ಹೆಂಡತಿ ಸುಹಾನಾ (30) ರವರಿಗೆ  ತಲೆಗೆ ಹಾಗೂ ದೇಹದ ಅಂಗಾಂಗಗಳಿಗೆ  ಒಳ ಜಖಂ ಉಂಟಾಗಿ  ಪ್ರಜ್ಞೆ ತಪ್ಪಿದ್ದು, ಸುಹಾನಾರವರನ್ನು  ಚಿಕಿತ್ಸೆ  ಬಗ್ಗೆ  ಕುಂದಾಪುರ  ಸರಕಾರಿ ಆಸ್ಪತ್ರೆಗೆ ಅಂಬುಲೆನ್ಸ್  ವಾಹನದಲ್ಲಿ ಕರೆದುಕೊಂಡು ಬಂದಾಗ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಸುಹನಾ ರವರು ಮೃತಪಟ್ಟಿದ್ದಾಗಿ  ತಿಳಿಸಿರುತ್ತಾರೆ . ಸಿಬ್‌‌‌ಗ್ಯಾತುಲ್ಲಾ  ಹಾಗೂ  ಅವರ  ಮಕ್ಕಳಾದ ಸಾಹಿಮ್‌‌‌, ಸಿದ್ರಾ, ಮನಹ  ಹಾಗೂ ಮರಿಯಮ್‌‌ ರವರು  ಯಾವುದೇ  ಚಿಕಿತ್ಸೆ  ಪಡೆದುಕೊಂಡಿರುವುದಿಲ್ಲ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ : 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 29/03/2021 ರಂದು ಸಂಜೆ 17:15 ಗಂಟೆಗೆ ಪಿರ್ಯಾದಿದಾರರಾದ ಸತೀಶ್‌ (25), ತಂದೆ:ಸುರೇಶ್‌ ಶೆಟ್ಟಿ, ವಾಸ:ಅಡಕರ ಪಲ್ಕೆ ನಲ್ಲೂರು ಗ್ರಾಮ ಕಾರ್ಕಳ ಇವರು ಕಾರ್ಕಳ ತಾಲೂಕು ಸಾಣೂರು ಗ್ರಾಮದ ಲಕ್ಷ್ಮೀ ದೇವಿ ಕಲ್ಯಾಣ ಮಂಟಪದ ಬಳಿ ರಸ್ತೆಯಲ್ಲಿ KA-03-C-5377 ನೇ ಮಾರುತಿ ಓಮಿನಿ ಕಾರನ್ನು ಕಾರ್ಕಳ ಬಸ್‌ನಿಲ್ಧಾಣದ ಕಡೆಯಿಂದ ರೆಂಜಾಳ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಮಿಯ್ಯಾರು ಕಡೆಯಿಂದ ಪುಲ್ಕೇರಿ ಕಡೆಗೆ KA-70-3231 ನೇ ಟಿಪ್ಪರ್‌ನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಅದೇ ದಿಕ್ಕಿನಲ್ಲಿ ಬರುತ್ತಿದ್ದ KA-20-AA-3658 ನೇ ನಂಬ್ರದ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾವು ಅಪಘಾತದ ರಭಸಕ್ಕೆ ಪಿರ್ಯಾದಿದಾರರು ಚಲಾಯಿಸಿಕೊಂಡಿದ್ದ ಓಮಿನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಎರಡು ಕಾಲ ಮೊಣ ಗಂಟಿಗೆ ರಕ್ತಗಾಯ ಹಾಗೂ ರಿಕ್ಷಾ ಚಾಲಕನಿಗೆ ಎಡಕೈ ಬೆರಳಿಗೆ ತರಚಿದ ಗಾಯ ಹಾಗೂ ತಲೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: : ಪಿರ್ಯಾದಿದಾರರಾದ ಜೋಸೆಫ್‌ ಡಿ’ಸೋಜ (66), ತಂದೆ: ದಿ: ಫಿಲಿಪ್‌ ಡಿ’ಸೋಜ, ವಾಸ: ಮನೆ  ನಂಬ್ರ 1-24  ಪಿಲಾರ್‌ ತೋಟ ಹೌಸ್‌,   ಪೆರ್ನಾಲ್‌ ಪೋಸ್ಟ್‌, ಪಿಲಾರು ಗ್ರಾಮ ಇವರ ಮಗ ಜೋಯ್‌ ಡಿ’ಸೋಜ (25) ರವರು ಈ ಹಿಂದೆ ಕ್ಯಾನ್ಸರ್‌ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಮಾಡಿ ಗುಣಮುಖ ಹೊಂದಿರುತ್ತಾರೆ. ಅಲ್ಲದೆ ತಂದೆ ಅಂಗವೈಪಲ್ಯ ಹೊಂದಿದ್ದು, ಹಾಗೂ ತಾಯಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇದೇ ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28/03/2021 ರಂದು ರಾತ್ರಿ 9:30 ಗಂಟೆಯಿಂದ  ದಿನಾಂಕ 29/03/2021 ರಂದು ಬೆಳಗ್ಗೆ 9:30 ಗಂಟೆಯ ನಡುವಿನ  ಅವಧಿಯಲ್ಲಿ  ಪಿಲಾರು ಗ್ರಾಮದ ಪಿಲಾರು ತೋಟ ಹೌಸ್‌ ಎಂಬಲ್ಲಿರುವ  ವಾಸದ ಮನೆಯ ಎದುರುಗಡೆ ಇರುವ ಕೊಟ್ಟಿಗೆಯ ಒಳಗಡೆ ಜೀನವದಲ್ಲಿ ಮನನೊಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2021 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಭಾಸ್ಕರ.ಕೆ ನಾಯಕ್, ವಾಸ: ದಿ. ಕೊಗ್ಗ ಯಾನೆ ವಾಸುದೇವ ನಾಯಕ್, ವಾಸ: ‘’ವಾಮನ ನಿಲಯ’’ ಎಲ್‌ವಿಟಿ ದೇವಸ್ಥಾನ ಹಿಂಭಾಗ , ಪುತ್ತೂರು ಗ್ರಾಮ, ಸಂತೆಕಟ್ಟೆ  ಅಂಚೆ , ಉಡುಪಿ ಇವರ ತಂದೆಯವರು ಜೀವಿತಾವಧಿಯಲ್ಲಿ ವೀಲುನಾಮೆ ದಸ್ತಾವೇಜು ನಂಬ್ರ 178/1997-98 ದಿನಾಂಕ 07/08/1997  ನ್ನು ಬರೆದಿಟ್ಟು ಅದನ್ನು ಸಬ್‌ ರಿಜಿಸ್ಟರ್ ಕಚೇರಿಯಲ್ಲಿ ನೊಂದಾವಣೆ ಮಾಡಿಸಿರುತ್ತಾರೆ. ವೀಲುನಾಮೆಯಲ್ಲಿ  ತನ್ನ ಸಹೋದರ ಶಂಕರ್‌ ನಾಯಕ್ ರವರಿಗೆ ಸ್ಥಿರಾಸ್ತಿಯ ಬದಲು ಹಣವನ್ನು ನೀಡಿದ್ದು ಅವರಿಗೆ ಯಾವುದೇ ಸ್ಥಿರಾಸ್ತಿಯ ಹಕ್ಕು ಇರುವುದಿಲ್ಲ. ತಂದೆಯವರು ತೀರಿಕೊಂಡ ಬಳಿಕ ಸ್ಥಿರಾಸ್ತಿಗಳು ಪಿರ್ಯಾದಿದಾರರ ತಾಯಿಯವರಿಗೆ ಬಂದಿರುತ್ತದೆ. ಶಂಕರ್‌ ನಾಯಕ್ ತಮ್ಮ ತಾಯಿಯಿಂದ ತಮಗೆ ಬರಬೇಕಾದ ಅಸ್ತಿಯನ್ನು ಅವರೊಬ್ಬರ ಹೆಸರಿಗೆ ನೊಂದಾವಣೆ ಮಾಡಿಕೊಂಡಿರುವುದಲ್ಲದೆ ತಂದೆಯವರು ಮೃತರಾಗಿದ್ದು ಯಾವುದೇ ವೀಲುನಾಮೆ ವಗೈರೆ ಮಾಡಿಸಿರುವುದಿಲ್ಲ ಎಂಬುದಾಗಿ ಸುಳ್ಳು ದಸ್ತವೇಜು ನೊಂದಾಯಿಸಿ ಪಿರ್ಯಾದಿದಾರರ ತಾಯಿಯ ಬಂದಿರುವ ಸ್ಥಿರಾಸ್ತಿಯನ್ನು ಅಕ್ರಮವಾಗಿ ಕಬಳಿಸುವ ಉದ್ದೇಶದಿಂದ  ತನ್ನ ಹೆಂಡತಿಯಾದ ಅಶ್ವಿನಿಯೊಂದಿಗೆ ಸೇರಿ ಸುಳ್ಳು ದಾಖಲಾತಿ ಸೃಷ್ಠಿಸಿ ವಂಚನೆ ಎಸಗಿ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ: 406, 417, 420, 464, 465, 468, 471 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 30-03-2021 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080