ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಗಣೇಶ್‌ ಭಟ್‌ (34), ತಂದೆ: ಮೋಹನ್ ಕೆ ಭಟ್‌, ವಾಸ: ಭುವನೇಂದ್ರ ಕಾಲೇಜ್‌ ಬಳಿ, ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 28/01/2023 ರಂದು ರಾತ್ರಿ ಬೈಲೂರು ಉತ್ಸವವನ್ನು ನೋಡಿಕೊಂಡು ಬರಲು ತನ್ನ ಮೋಟಾರ್‌ ಸೈಕಲ್‌ ನ್ನು ಸವಾರಿ ಮಾಡಿಕೊಂಡು ಕಾರ್ಕಳ ಜೋಡುರಸ್ತೆ ಕಡೆಯಿಂದ ಬೈಲೂರು ಕಡೆಗೆ ಹಾದುಹೋಗಿರುವ ರಸ್ತೆಯಲ್ಲಿ ಹೊರಟು ರಾತ್ರಿ 11:30 ಕ್ಕೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಅಣ್ಣುಶೆಟ್ಟಿ ಪಾದೆ ಬಳಿ ತಲುಪುವಾಗ ಪಿರ್ಯಾದಿದಾರರ ಎದುರಿನಲ್ಲಿ KA-20-EL-4963 ನೇ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಸತೀಶ್‌ ಶೆಟ್ಟಿ ರವರು ಹೆಲ್ಮೆಟ್‌ ಧರಿಸಿಕೊಂಡು ಸಹಸವಾರರಾಗಿ ರಾಜು ಹಾಂಡರವರನ್ನು ಕುಳ್ಳಿರಿಸಿಕೊಂಡು ಬೈಲೂರು ಕಡೆಗೆ ಹೋಗುತ್ತಿದ್ದು, ಅದೇ ವೇಳೆಗೆ ಬೈಲೂರು ಕಡೆಯಿಂದ ಕಾರ್ಕಳ ಕಡೆಗೆ KA-20-MD-6809 ನೇ ನೋಂದಣಿ ಸಂಖ್ಯೆಯ ಮಾರುತಿ ಕಂಪೆನಿಯ ಈಕೋ ವಾಹನವನ್ನು ಚಾಲಕ ಯೋಗೇಂದರ್‌ ಸಿಂಗ್‌ ಅತಿ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಎದುರುಗಡೆಯಲ್ಲಿ ಸತೀಶ್‌ ಶೆಟ್ಟಿ ರವರು ಸವಾರಿ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಹಾಗೂ ಸಹಸವಾರನು ದ್ವಿಚಕ್ರವಾಹನದೊಂದಿಗೆ ಡಾಂಬಾರು ರಸ್ತೆಗೆ ಬಿದ್ದಿದ್ದು ದ್ವಿಚಕ್ರ ವಾಹನ ಹಿಂಬದಿ ಸವಾರ ರಾಜು ಹಾಂಡನ ಬಲಕಾಲಿನ ಮೂಳೆ ಮುರಿತಗೊಂಡು, ತಲೆಗೆ ರಕ್ತಗಾಯವಾಗಿದ್ದು ದ್ವಿಚಕ್ರ ವಾಹನ ಸವಾರ ಸತೀಶ್‌ ಶೆಟ್ಟಿ ರವರಿಗೆ ಯಾವುದೇ ಗಾಯ ನೋವು ಆಗಿರುವುದಿಲ್ಲ ಹಾಗೂ KA-20-MD-6809 ವಾಹನದಲ್ಲಿ ಸಹ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಮಾಲದೇವ್‌ ಸಿಂಗ್‌ ರವರಿಗೆ ಹಣೆಗೆ ಹಾಗೂ ಕಣ್ಣಿನ ಬಳಿ ಗುದ್ದಿದ ಒಳ ಜಖಂ ಗಾಯವಾಗಿದ್ದು ಹಾಗೂ ವಾಹನದಲ್ಲಿದ್ದ ಇತರರಿಗೆ ಯಾವುದೇ ಗಾಯ ನೋವು ಆಗಿರುವುದಿಲ್ಲ. ನಂತರ ಗಾಯಗೊಂಡ ರಾಜು ಹಾಂಡ ರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ.  ಗಾಯಗೊಂಡ ಮಾಲದೇವ್‌ ಸಿಂಗ್‌ ರನ್ನು ಚಿಕಿತ್ಸೆಯ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 11/2023 ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಮಹೇಶ್ (36), ತಂದೆ: ಜಟ್ಟ ನಾಯ್ಕ, ವಾಸ:ಕೊಡ್ಸೂಳ್ ಮನೆ, ದಿವಗೇರಿ, ಮಾವಳ್ಳಿ-2 , ಮಾವಳ್ಳಿ  ಗ್ರಾಮ , ಮೂರ್ಡೆಶ್ವರ  ತಾಲೂಕು ಉತ್ತರ ಕನ್ನಡ ಜಿಲ್ಲೆ ಇವರು ದಿನಾಂಕ 26/01/2023 ರಂದು ಬೆಳಿಗ್ಗೆ 11:30 ಗಂಟೆಗೆ ಅವರ ಹೆಂಡತಿಯ ಹೊಸದಾಗಿ ಖರೀಧಿಸಿದ ಹಿರೋ ಕಂಪೆನಿಯ ಸೂಪರ್  ಸ್ಪ್ಲೆಂಡರ್  ಮೋಟಾರು ಸೈಕಲ್ ನಲ್ಲಿ ಹೆಂಡತಿಯ ಸಂಬಂದಿ ಆನಂದ ನಾಯ್ಕ ರವರ ಜೊತೆಯಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು  ಮನೆಯಿಂದ ಬೈಂದೂರಿನ ಒತ್ತಿನಕಟ್ಟೆ ಮಹಾಸತಿ ಅಮ್ಮನವರ  ದೇವಸ್ಥಾನಕ್ಕೆ  ಪೂಜೆಗೆಂದು ಬಂದು  ಪೂಜೆ ಮುಗಿಸಿ ವಾಪಾಸ್ಸು ಬೈಂದೂರಿನಿಂದ ಮನೆಗೆ  ಮೋಟಾರು ಸೈಕಲ್ ನಲ್ಲಿ ಹೊರಟು ಆನಂದ ನಾಯ್ಕ ರವರು  ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಾಷ್ಟ್ರೀಯ ಹೆದ್ದಾರಿ  66 ರ  ಕುಂದಾಪುರ ಭಟ್ಕಳ ರಸ್ತೆಯಲ್ಲಿ  ಹೋಗುತ್ತಿರುವಾಗ  ಶಿರೂರು ಗ್ರಾಮದ  ಶಿರೂರು ತೌಹಿದ್ ಶಾಲೆಯಿಂದ  ಸ್ವಲ್ಪ  ಮುಂದೆ ಆಲ್ –ಕಪ್ ಹೊಟೇಲ್ ಎದುರು ಮಧ್ಯಾಹ್ನ  4:40 ಗಂಟೆಗೆ  2 ನಾಯಿಗಳು ರಸ್ತೆಗೆ ಓಡಿ ಬಂದ ಕಾರಣ ಆನಂದ ನಾಯ್ಕ ರವರು  ಗಲಿಬಿಲಿಗೊಂಡು  ಮೋಟಾರು ಸೈಕಲ್ ಗೆ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ  ಮೋಟಾರು ಸೈಕಲ್ ಆನಂದ ನಾಯ್ಕ ರವರ ನಿಯಂತ್ರಣ ತಪ್ಪಿ ಪಿರ್ಯಾದಿದಾರರು  ಹಾಗೂ ಮೋಟಾರು ಸೈಕಲ್ ಸವಾರ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ  ಪರಿಣಾಮ ಪಿರ್ಯಾದಿದಾರರ ಬಲ ಕಾಲಿನ ಪಾದದ ಬಳಿ, ಮೊಣಗಂಟಿಗೆ ,ಬಲ  ಕೈಗೆ ಹಾಗೂ  ಅಂಗೈಗೆ ರಕ್ತಗಾಯವಾಗಿದ್ದು ಎಡ ಕೈ ತೋಳಿಗೆ ತೀವ್ರ  ಒಳ ಜಖಂ ಉಂಟಾಗಿದ್ದು , ಮೋಟಾರು ಸೈಕಲ್ ಸವಾರ ಆನಂದ ನಾಯ್ಕ ರವರಿಗೆ ಬಲ ಕಾಲಿಗೆ ತೀವ್ರ ತರಹದ ರಕ್ತಗಾಯ ಹಾಗೂ ಬಲಕೈಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡವರನ್ನು ರಾಜೇಶ್ ರವರು ಚಿಕಿತ್ಸೆ ಬಗ್ಗೆ ಒಂದು ಅಂಬುಲೆನ್ಸ್ ವಾಹನದಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ಕರೆದು ಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 18/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕೋಟ: ಪಿರ್ಯಾದಿದಾರರಾದ ಗಣೇಶ್ ಪೂಜಾರಿ (35), ತಂದೆ: ಅಣ್ಣಪ್ಪ ಪೂಜಾರಿ, ವಾಸ: ಚೋಕೋಡಿ ಮನೆ ಕಾರ್ಕಡ ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 22/01/2023 ರಂದು 00:30 ಗಂಟೆಗೆ ತನ್ನ ಮಾವ ಸಂಜೀವ ಪೂಜಾರಿ ರವರ KA-20-EH-6767 ನೇ ಸ್ಕೂಟಿಯಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಕಾರ್ಕಡ  ಗ್ರಾಮದ ಗೋಳಿಕಟ್ಟೆ ಕೆರೆ ಬಳಿ ಅಂಚೆ ಕಛೇರಿಯ ಹತ್ತಿರ ತಲುಪುವಾಗ ಒಂದು ನಾಯಿ ಅಡ್ಡ ಬಂದು ಪಿರ್ಯಾದಿದಾರರ ಮಾವ ಸಂಜೀವ ಪೂಜಾರಿ ರವರು ಒಮ್ಮೆಲೇ ಬ್ರೇಕ್ ಹಾಕಿದ ಕಾರಣ ಸ್ಕೂಟರ್ ಸ್ಕಿಡ್ ಆಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕಾಲು ಸ್ಕೂಟಿಯ ಅಡಿಗೆ ಬಿದ್ದು ಎಡಕಾಲು ಮೂಳೆ ಮುರಿತದ ತೀವ್ರ ತರಹದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 15/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ದಿನಾಂಕ 29/01/2023 ರಂದು ಸಂಜೆ 5:30 ಗಂಟೆಗೆ ಪಿರ್ಯಾದಿದಾರರಾದ ಸುಧಾಕರ ದೇವಾಡಿಗ (45),  ತಂದೆ:ತಮ್ಮಯ್ಯ,  ವಾಸ: ಹುಣ್ಸೆ ಮನೆ , ಯಡ್ತರೆ ಗ್ರಾಮ, ಬೈಂದೂರು  ತಾಲೂಕು ಇವರು ಉಪ್ಪುಂದದಿಂದ ತನ್ನ ಮನೆ ಕಡೆಗೆ  ಮೋಟಾರು ಸೈಕಲ್ ನಲ್ಲಿ  ಬರುತ್ತಿರುವಾಗ ಯಡ್ತರೆ ಗ್ರಾಮದ ಯಡ್ತರೆ ಸೊಸೈಟಿಯ ಹೊರಗಿನ  ಜಗಲಿಯಲ್ಲಿ ಸುಮಾರು 60 ರಿಂದ 65 ವರ್ಷ ಪ್ರಾಯದ  ಅಪರಿಚಿತ  ಗಂಡಸು ಮಲಗಿದ ಸ್ಥಿತಿಯಲ್ಲಿ  ಮೃತಪಟ್ಟಿರುವುದು ಕಂಡು ಬಂದಿದ್ದು  ಮೃತರು   ನಾಲ್ಕೈದು ದಿನಗಳಿಂದ  ಯಡ್ತರೆ ಪರಿಸರದಲ್ಲಿ  ಬಿಕ್ಷೆ ಬೇಡುತ್ತಾ ಸೊಸೈಟಿ ಜಗುಲಿಯಲ್ಲಿ ಮಲಗಿಕೊಂಡಿದ್ದವರು  ವಯೋಸಹಜ  ಖಾಯಿಲೆಯಿಂದ ಅಥವಾ  ಇನ್ನಾವುದೋ  ಖಾಯಿಲೆಯಿಂದ  ಬಳಲುತ್ತಿದ್ದವರು  ಆರೋಗ್ಯದಲ್ಲಿ ಏರುಪೇರಾಗಿ ದಿನಾಂಕ 28/01/2023 ರಂದು  ರಾತ್ರಿಯಿಂದ ದಿನಾಂಕ 29/012023 ರಂದು 17:30 ಗಂಟೆಯ ಮಧ್ಯಾವಧಿಯಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 06/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    

ಇತ್ತೀಚಿನ ನವೀಕರಣ​ : 30-01-2023 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080