ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ದಿನಾಂಕ 28/01/2022 ರಂದು ಸಂಜೆ ಸುಮಾರು 07:30 ಗಂಟೆಯ ಸಮಯಕ್ಕೆ KA-20 EU-6271 ಸ್ಕೂಟರ್ ನ ಸವಾರೆ ಸದ್ರಿ ಸ್ಕೂಟರನ್ನು ಲಕ್ಷೀಂದ್ರ ನಗರದ ನಕ್ಷತ್ರ ಕಾಂಪ್ಲೆಕ್ಸ್ ಬಳಿ ಹಾದು ಹೋಗಿರುವ NH 169(A) ರಲ್ಲಿ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬಾಗಕ್ಕೆ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಾದ ಹನುಮಂತಪ್ಪ ಬಂಡಿವಡ್ಡರ (47) ತಂದೆ: ದಿ. ಶಿವಪ್ಪ ವಾಸ: ಸ್ಪಟಿಕಾ ಅಪಾರ್ಟಮೆಂಟ್, ಕಾಮಾಕ್ಷಿ ದೇವಸ್ಥಾನ ಹತ್ತಿರ, ವಿ ಪಿ ನಗರ, ಶಿವಳ್ಳಿ ಗ್ರಾಮ, ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಇವರು ಹಾಗೂ ಸ್ಕೂಟರ್ ನ ಸವಾರೆ ತನ್ನ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಎಡಕಾಲಿನ ಮೂಳೆ ಮುರಿತ,ಎಡಕೈಗೆ ತರಚಿದ ಗಾಯ ಹಾಗೂ ಸ್ಕೂಟರ್ ಸವಾರೆಯ ಕೈ ಕಾಲಿಗೂ ತರಚಿದ ಗಾಯ ಉಂಟಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 12/2022 ಕಲಂ:279.337.338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಸವಿತಾ ಕ್ವಾಡ್ರಸ್‌ (37) ಗಂಡ: ರಾಬರ್ಟ ಕ್ವಾಡ್ರಸ್ ವಾಸ: ಕೋಡಿ ರೋಡ್‌, ಹಂಗಳೂರು ಗ್ರಾಮ ಕುಂದಾಪುರ ತಾಲೂಕು, ಇವರು ದಿನಾಂಕ 01/01/2022 ರಂದು ಬೆಳಿಗ್ಗೆ 11:10 ಗಂಟೆಯ ಸಮಯಕ್ಕೆ ತಮ್ಮ KA-20 ES-1017 ನೇ ಹೊಂಡಾ ಆಕ್ಟಿವಾ ಸ್ಟೂಟರ್‌ನಲ್ಲಿ ಮಗಳಾದ ಸೋನಲ್‌ ಸಿಕ್ವೀರಾ (14) ಸಹಸವಾರಳನ್ನಾಗಿ ಕುಳ್ಳರಿಸಿಕೊಂಡು NH 169(A) ರಲ್ಲಿ ಈಶ್ವರ ನಗರ ದಿಂದ ಮಣಿಪಾಲಕ್ಕೆ ಹೊಗುತ್ತಿದ್ದಾಗ ಕೆನರಾ ಮಾಲ್‌ ಬಳಿ ತಲುಪಿದಾಗ ರಸ್ತೆ ಬದಿಯಲ್ಲಿ ನಿಲ್ಲಿಸಿದ KA-01 MD-6393 ನೇ ಕಾರ್‌ನ್ನು ಅದರ ಚಾಲಕನು ನಿರ್ಲಕ್ಷತನದಿಂದ ಹಿಮ್ಮುಖವಾಗಿ ಚಲಾಯಿಸಿದ ಕಾರಣ ಸದರಿ ಕಾರು ಪಿರ್ಯಾದಿದಾರರ ಸ್ಟೂಟರ್‌ಗೆ ಡಿಕ್ಕಿ ಹೊಡೆದಿರುತ್ತದೆ ಪರಿಣಾಮ ಸವಿತಾ ರವರು ಹಾಗೂ ಇವರ ಮಗಳು ಸ್ಕೂಟರ್‌ ಸಮೇತ ನೆಲಕ್ಕೆ ಬಿದ್ದು ಸವಿತಾ ರವರ ಎಡಕೈ ಮೂಳೆ ಮುರಿತ ಹಾಗೂ ಎಡಕಾಲಿಗೆ ತರಚಿದ ಗಾಯ ಹಾಗೂ ಇವರ ಮಗಳಿಗೆ ತರಚಿದ ಗಾಯವಾಗಿರುತ್ತದೆ, ಪಿರ್ಯಾದಿದಾರರು ಅಪಘಾತದಿಂದ ಗಾಯಗೊಂಡು ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ವಿಶ್ರಾಂತಿಯಲ್ಲಿದ್ದ ಕಾರಣ ದೂರ ನೀಡಲು ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 13/2022 ಕಲಂ:279.337.338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರ ನಿಷ್ಯಲ್‌ ರೆಬೆಲ್ಲೋ (29) ತಂದೆ: ಸ್ಟ್ಯಾನಿ ರೆಬೆಲ್ಲೋ ವಾಸ: ಮನೆ ನಂಬ್ರ: 2-114-101ಎ, ಅವೆಮರಿಯಾ ಗೋಪಾಲಪುರ, ಸಂತೆಕಟ್ಟೆ ಪುತ್ತೂರು ಗ್ರಾಮ, ಉಡುಪಿ ಇವರೊಂದಿಗೆ ವಾಸವಿದ್ದ ಇವರ ತಂದೆಯಾದ ಸ್ಯಾನಿ ರೆಬೆಲ್ಲೋ. (71)ರವರು ಕೃಷಿಕರಾಗಿದ್ದು, ದಿನಾಂಕ 29/01/2022 ರಂದು ಮಧ್ಯಾಹ್ನ 01:00 ಗಂಟೆಯ ಸುಮಾರಿಗೆ ತೋಟದಲ್ಲಿ ಅಡಿಕೆ ಮರಕ್ಕೆ ಹಬ್ಬಿಸಿದ ಕಾಳು ಮೆಣಸನ್ನು ಏಣಿಯ ಮುಖೇನ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲುಜ್ಯಾರಿ ಕೆಳಗೆ ಬಿದ್ದು, ತಲೆಯ ಹಿಂಬದಿಗೆ ಗಂಭೀರ ಸ್ವರೂಪದ ಗಾಯವಾಗಿ ಕೂಡಲೇ ಅವರನ್ನು ಚಿಕಿತ್ಸೆಯ ಬಗ್ಗೆ ಹೈಟೆಕ್‌ ಆಸ್ಪತ್ರೆಗೆ ಕರೆತಂದಲ್ಲಿ ಮದ್ಯಾಹ್ನ 1:20 ಗಂಟೆಗೆ ವೈದ್ಯರು ಪರೀಕ್ಷಿಸಿ ಸ್ಯಾನಿ ರೆಬೆಲ್ಲೋ ಇವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಯು.ಡಿ. ಆರ್ ಕ್ರಮಾಂಕ 9/2022 ಕಲಂ: 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಚಂದ್ರ ಪೂಜಾರಿ (46)ತಂದೆ: ನಾಗು ಪೂಜಾರಿ ವಾಸ:ಗರಡಿ ಮನೆ ಅಸೋಡು ಗ್ರಾಮ ಕುಂದಾಪುರ ಇವರ ತಾಯಿಯಾದ ಸಾಧು ಪೂಜಾರ್ತಿ(70) ಇವರು ಪ್ರತಿದಿನ ಮನೆಯ ಕೊಟ್ಟಿಗೆಯಿಂದ ದನವನ್ನು ಹಗ್ಗದೊಂದಿಗೆ ಕರೆದುಕೊಂಡು ಹೋಗಿ ಹತ್ತಿರದ ಬಯಲಿಗೆ ಮೇಯಲು ಕಟ್ಟಿ ಹಾಕಿ ಬರುವುದು ಸಾಮಾನ್ಯವಾಗಿರುತ್ತದೆ. ದಿನಾಂಕ 29/01/2022 ರಂದು ಬೆಳಿಗ್ಗೆ 08:30 ಗಂಟೆಗೆ ಪಿರ್ಯಾಧಿದಾರರು ಕಾಳವಾರದಲ್ಲಿ ಇರುವಾಗ ತಾಯಿ ಮನೆಯಲ್ಲಿ ಕಾಣುತ್ತಿಲ್ಲವಾಗಿ ಪಿರ್ಯಾದಿದಾರರ ತಮ್ಮನು ಕರೆ ಮಾಡಿ ತಿಳಿಸಿದ್ದು.ಈ ಬಗ್ಗೆ ಅಸೋಡಿಗೆ ಹೋಗಿ ಅಕ್ಕಪಕ್ಕದವರಲ್ಲಿವಿಚಾರಿಸಿ ಹುಡುಕುತ್ತಿರುವಾಗ ಪಿರ್ಯಾದಿದಾರರ ಚಿಕ್ಕಮ್ಮನ ಮಗನಾದ ಸಂತೋಷನು ಸಾಧು ಪೂಜಾರ್ತಿ ಇವರು ಮನೆಯ ಹತ್ತಿರದ ಸವಿತಾ ಶೆಡ್ತಿಯವರ ಆವರಣವಿಲ್ಲದ ಸಣ್ಣ ಕೆರೆಯ ನೀರಿನಲ್ಲಿ ತೇಲುತ್ತಿರುವುದಾಗಿ ತಿಳಿಸಿರುತ್ತಾನೆ ದಿನಾಂಕ 29/01/2022 ಬೆಳಿಗ್ಗೆ 06:00 ಗಂಟೆಯಿಂದ ಮಧ್ಯಾಹ್ನ 14:00 ಗಂಟೆಯ ಮಧ್ಯಾವಧಿಯಲ್ಲಿ ಎಂದಿನಂತೆ ಮನೆಯ ಕೊಟ್ಟಿಗೆಯಿಂದ ದನವನ್ನು ಬಯಲಿಗೆ ಮೇಯಲು ಬಿಡುವ ಬಗ್ಗೆ ಹಗ್ಗದೊಂದಿಗೆ ಕರೆದುಕೊಂಡು ಹೋಗುವಾಗ ಮನೆಯ ಹತ್ತಿರದ ಸವಿತಾ ಶೆಡ್ತಿಯವರ ಆವರಣವಿಲ್ಲದ ಸಣ್ಣ ಕೆರೆಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಕುಂದಾಪುರ ಗ್ರಾಮಾತರ ಪೊಲೀಸ್ ಠಾಣಾ ಯು.ಡಿ. ಆರ್ ಕ್ರಮಾಂಕ 3/2022 ಕಲಂ: 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಪಿರ್ಯಾದಿದಾರರಾದ ದಿನೇಶ್ ಪೂಜಾರಿ (30) ತಂದೆ:ಸೂಲ್ಯ ಪೂಜಾರಿ ವಾಸ:ಬಿಡಾರದ ಮನೆ, ಹೆರಂಜಾಲು ಗ್ರಾಮ ಬೈಂದೂರು ತಾಲೂಕು ಇವರು ಭಾರತೀಯ ಜನತಾ ಪಾರ್ಟಿಯ ಸಕ್ರೀಯ ಕಾರ್ಯಕರ್ತರು ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರದ ಫಲಾನುಭವಿಗಳ ಪ್ರಕೊಷ್ಟದ ಸಹ ಸಂಚಾಲಕರು ಆಗಿದ್ದು ಮತ್ತು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಿ.ಎಮ್ ಸುಕುಮಾರ್ ಶೆಟ್ಟಿಯವರ ಅಭಿಮಾನಿಯಾಗಿದ್ದು ದಿನಾಂಕ 22/01/2022 ರಂದು ಸಂಜೆ ಸಮಯ 7:00 ಗಂಟೆಗೆ ಬೈಂದೂರು ಪೇಟೆಯಲ್ಲಿ ಇವರು ಮೊಬೈಲ್ ನ್ನು ವೀಕ್ಷಿಸುತ್ತಿರುವಾಗ ಪ್ರಸಾದ್ ಬೈಂದೂರು ಎಂಬುವವರ ಪೇಸ್ ಬುಕ್ ಲೈವ್ ವಿಡಿಯೋ ಒಂದಕ್ಕೆ ಆರೋಪಿ ಉದಯ ಬಿಜೂರು ಎಂಬುವವರು M.L.A ಇವರಿಗೆ ಅವಾಚ್ಯವಾಗಿ ಕೆಟ್ಟದಾಗಿ ಕಮೆಂಟ್ ಮಾಡಿ, ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಿ.ಎಮ್ ಸುಕುಮಾರ್ ಶೆಟ್ಟಿಯವರ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಾಗೂ ಮಾನ ಹಾನಿಯಾಗುವಂತೆ ಅವಾಚ್ಯ ಶಬ್ದಗಳನ್ನು ಉಪಯೋಗಿಸಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿರುವುದರಿಂದ ಪಿರ್ಯಾದುದಾರರಿಗೆ ನೋವುಂಟಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 28/2022 ಕಲಂ: 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 30-01-2022 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080