ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ದಿನಾಂಕ 29/01/2022 ರಂದು ರಾತ್ರಿ 8:15 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಶೋಭಾ (53)ಗಂಡ:ಗಣೇಶ್.ಟಿ. ಮೊಯಿಲಿ, ವಾಸ: ಆದರ್ಶ ನಿಲಯ ನಿಟ್ಟೂರು  ಹೈಸ್ಕೂಲ್ ಹತ್ತಿರ ನಿಟ್ಟೂರು ಅಂಚೆ, ಪುತ್ತೂರು ಗ್ರಾಮ ಉಡುಪಿ ರವರು ತಂಗಿಯ ಮಗ ಆಶೀಶ್ ನೊಂದಿಗೆ ಸಂತೆಕಟ್ಟೆ ಜಂಕ್ಷನ್ ನಿಂದ ಕರಾವಳಿ ಕಡೆಗೆ ವಾಹನಗಳು ಸಂಚರಿಸುವ ರಸ್ತೆಯನ್ನು ದಾಟಿ ನಂತರ ಕರಾವಳಿ ಕಡೆಯಿಂದ ಸಂತೆಕಟ್ಟೆ ಕಡೆಗೆ ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯನ್ನು ದಾಟಿ ರಸ್ತೆಯ ಅಂಚಿನಲ್ಲಿರುವಾಗ ಕರಾವಳಿ ಜಂಕ್ಷನ್ ಕಡೆಯಿಂದ ಸಂತೆಕಟ್ಟೆ ಜಂಕ್ಷನ್ ಕಡೆಗೆ KA-20 EN-3149 ನೇ ಮೋಟಾರು ಸೈಕಲ್ ಸವಾರ ಆದಿತ್ಯ.ಆರ್.ಪೂಜಾರಿ ಎಂಬಾತ ದುಡುಕುತನ ಮತ್ತು ನಿರ್ಲಕ್ಷತನದಿಂದ ತೀರಾ ಎಡಬದಿಗೆ ಚಲಾಯಿಸಿ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ಬಲಕಾಲಿಗೆ  ಮೂಳೆ ಮುರಿತ ಉಂಟಾಗಿ ಗಂಭೀರ ಸ್ವರೂಪದ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ೦8/2022 ಕಲಂ; 279,338 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಸುರೇಂದ್ರ ನಾಯ್ಕ್‌‌‌(80), ತಂದೆ: ದಿ. ಸಿದ್ದ ನಾಯ್ಕ್‌‌, ವಾಸ: ಮುಳ್ಳುಗುಡ್ಡೆ ಮನೆ, ಚೇರ್ಕಾಡಿ ಅಂಚೆ ಮತ್ತು ಗ್ರಾಮ ಗ್ರಾಮ ಬ್ರಹ್ಮಾವರ ಇವರೊಂದಿಗೆ ವಾಸವಾಗಿರುವ ಅವರ ಮಗ ಕೃಷ್ಣ ನಾಯ್ಕ್‌‌(34) ಎಂಬವರು ಕೂಲಿ ಕೆಲಸಮಾಡಿಕೊಂಡಿದ್ದು ಅವಿವಾಹಿತರಾಗಿರುತ್ತಾರೆ. ಕೃಷ್ಣ ನಾಯ್ಕ್‌ ‌ರವರು ವಿಪರೀತ ಶರಾಬು ಕುಡಿತದ ಚಟ ಹೊಂದಿದ್ದು, ದಿನಾಂಕ 29/01/2022 ರಂದು ರಾತ್ರಿ ಕೃಷ್ಣ ನಾಯ್ಕ್‌‌‌ ವಿಪರೀತ ಕುಡಿದು ಬಂದಿದ್ದು, ಅಡುಗೆ ಮನೆಯಲ್ಲಿ ಊಟ ಹಾಕಿಕೊಳ್ಳುತ್ತಿದ್ದವನು  ರಾತ್ರಿ 9:30 ಗಂಟೆಯಿಂದ ದಿನಾಂಕ 30/01/2022 ರಂದು ಬೆಳಿಗ್ಗೆ 6:00 ಗಂಟೆಯ ಮದ್ಯಾವಧಿಯಲ್ಲಿ  ಕೃಷ್ಣ ನಾಯ್ಕ್‌‌‌‌‌‌ನು ಮಲಗಿದ ಕೋಣೆಯಿಂದ ಬೆಳಿಗ್ಗೆ ಏಳದೇ ಇದ್ದು, ಮೇಲೆಬ್ಬಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಇಲ್ಲದೇ ಮೈಮರಗಟ್ಟಿದ್ದು, ಬಾಯಲ್ಲಿ ಮತ್ತು ಮೂಗಲ್ಲಿ ನೀರು ಬರುತ್ತಿದ್ದು,  ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾಗಿದೆ. ಕೃಷ್ಣ ನಾಯ್ಕ್‌‌‌‌ನು ವಿಪರೀತ ಶರಾಬು ಕುಡಿಯುವ ಹವ್ಯಾಸದಿಂದಲೋ ಅಥವಾ ಬೇರೆ ಯಾವುದೋ ದೈಹಿಕ ಕಾಯಿಲೆಯಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾಗಿದೆ. ಕೃಷ್ಣ ನಾಯ್ಕ್‌‌‌‌‌ನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 06/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ರತ್ನಾಕರ ಆಚಾರ್ಯ, (54) ತಂದೆ: ದಿ. ಸೀನ ಆಚಾರ್ಯ, ವಾಸ: ಮುರಮೇಲು ಮನೆ ಹೊಸ್ಮಾರು ಅಂಚೆ, ಈದು ಗ್ರಾಮ, ಕಾರ್ಕಳ ಇವರ ತಮ್ಮ ಸುಧಾಕರ ಆಚಾರ್ಯ(48)  ಎಂಬುವರು ಕಾಪು ತಾಲೂಕು ಹೆಜಮಾಡಿ ಗ್ರಾಮದ ಬೋರುಗುಡ್ಡೆ ಎಂಬಲ್ಲಿ ಮರದ ಕೆಲಸ ಮಾಡುತ್ತಾ ಅವರ ಹೆಂಡತಿ ಮಗಳೊಂದಿಗೆ ವಾಸವಾಗಿದ್ದು. ದಿನಾಂಕ 29/01/2022 ರಂದು ರಾತ್ರಿ 21:00 ಗಂಟೆ ವೇಳೆಗೆ ಅವರ ಮನೆಯಲ್ಲಿ ಕುರ್ಚಿಯಲ್ಲಿ ಕುಳಿತವರು ಒಮ್ಮೆಲೇ ಕುಸಿದು ಬಿದ್ದಿದ್ದು, ನಂತರ ಅವರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ 22:10 ಗಂಟೆಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ, ಸದ್ರಿ ಸುಧಾಕರ ಆಚಾರ್ಯರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಸದ್ರಿಯವರಿಗೆ ಎರಡು ದಿನಗಳ ಹಿಂದೆ ಕೆಲಸ ಮಾಡುವಾಗ ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿದ್ದಾಗಿ ತಿಳಿದಿದ್ದು, ಅದೇ ರೀತಿ ತೀವ್ರ ಹೃದಯಾಘಾತದಿಂದ ಅಥವಾ ಇನ್ನಾವುದೋ ಖಾಯಿಲೆಯಿಂದ ಮೃತಪಟ್ಟಿದ್ದು, ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 03/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ತೇಜಸ್ವಿ ಟಿ.ಐ ಪೊಲೀಸ್ ಉಪ ನಿರೀಕ್ಷಕರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಇವರು ದಿನಾಂಕ 29/01/2022 ರಂದು ರಂಜಿತ್ ಕುಮಾರ್ ರವರೊಂದಿಗೆ ಇಲಾಖಾ ಜೀಪು ನಂಬ್ರ KA-20-G-162 ನೇದರಲ್ಲಿ ಚಾಲಕನಾಗಿ ಸತೀಶ್ ನಾಯ್ಕ ಇವರೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇದ್ದು ಠಾಣಾ ವ್ಯಾಪ್ತಿಯ ಪದವು, ಲೆಮಿನಾ ಕ್ರಾಸ್,ನಿಟ್ಟೆ, ಬೆಳ್ಮಣ್, ಬಜಗೊಳಿ ಕಡೆಗಳಲ್ಲಿ ರೌಂಡ್ಸ್ ಮಾಡಿ ದಿನಾಂಕ 30/01/2022 ರಂದು ಬೆಳಗಿನ ಜಾವ 03:15 ಗಂಟೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮ ಹೆಪೆಜಾರು ಎಂಬಲ್ಲಿ ಬೀದಿ ದೀಪದ ಕೆಳಗಡೆ ಈ ಮೊದಲೇ ಹಾಕಿದ ಬ್ಯಾರಿಕೇಡ್ ಗಳ ಕೆಳಗಡೆ ಅನುಮಾನಾಸ್ಪದ ವ್ಯಕ್ತಿಗಳನ್ನು ಹಾಗೂ ವಾಹನಗಳನ್ನು ಚೆಕ್ ಮಾಡುತ್ತಿದ್ದು ಬೆಳಗಿನ ಜಾವ 03:50 ಗಂಟೆಗೆ ಬಜಗೊಳಿ ಕಡೆಯಿಂದ ಮಾಳ ಕಡೆಗೆ ಓರ್ವ ಬೈಕ್ ಸವಾರ ಹಾಗೂ ಓರ್ವ ಕಾರು ಚಾಲಕ ಒಂದರ ಹಿಂದೆ ಒಂದರಂತೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು ತೇಜಸ್ವಿ ಟಿ.ಐ ಪೊಲೀಸ್ ಉಪ ನಿರೀಕ್ಷಕರು ರವರ ಸೂಚನೆಯಂತೆ ಸತೀಶ್ ನಾಯ್ಕ ಇವರು ಸದ್ರಿ ವಾಹನಗಳನ್ನು ನಿಲ್ಲಿಸುವಂತೆ ಕೈಅಡ್ಡ ಇಟ್ಟು ತಡೆದರೂ ಕೂಡಾ ಬೈಕ್ ಸವಾರ ಹಾಗೂ ಕಾರಿನ ಚಾಲಕ ವಾಹನಗಳನ್ನು ನಿಲ್ಲಿಸದೇ ಪೊಲೀಸರ ಸೂಚನೆಯನ್ನು ಉಲ್ಲಂಘಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೇ ಕಾರನ್ನು ಬ್ಯಾರಿಕೇಡ್ ಗಳಿಗೆ ಹೊಡೆದು ಪೋಲೀಸರ ಮೇಲೆ ವಾಹನವನ್ನು ಹತ್ತಿಸಲು ಪ್ರಯತ್ನಿಸಿದ್ದು ಪೋಲೀಸರು ಹಾರಿ ರಸ್ತೆಗೆ ಬಿದ್ದು ತಪ್ಪಿಸಿಕೊಂಡಿದ್ದು, ರಸ್ತೆಗೆ ಬಿದ್ದ ಪರಿಣಾಮ ತೇಜಸ್ವಿ ಟಿ.ಐ ಪೊಲೀಸ್ ಉಪ ನಿರೀಕ್ಷಕರು ಇವರ ಬಲಕೈ ಮಣಿಗಂಟಿನ ಬಳಿ ಹಾಗೂ ರಂಜಿತ್ ಕುಮಾರ್ ರವರ ಬಲಕೈ ಮಣಿಗಂಟಿನ ಬಳಿ ಒಳನೋವು ಆಗಿದ್ದು ಆ ಸಮಯ ಇವರು ಕಾರನ್ನು ನೋಡಿದ್ದು ಸದ್ರಿ ಕಾರು ಮಾರುತಿ ರಿಡ್ಜ್ ಕಾರು ಆಗಿದ್ದು ಕಾರಿನಲ್ಲಿ ಚಾಲಕನನ್ನು ಹೊರತು ಪಡಿಸಿ ಇನ್ನೋರ್ವ ವ್ಯಕ್ತಿ ಇದ್ದು ಕಾರಿನ ಒಳಗಡೆ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದು ಕಂಡು ಬಂದಿದ್ದು ಕಾರಿನ ಚಾಲಕ ಕಾರನ್ನು ಅತೀವೇಗದಿಂದ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿದ್ದು, ಕೂಡಲೇ ಜೀಪಿನಲ್ಲಿ ಕಾರನ್ನು ಹಾಗೂ ಬೈಕ್ ನ್ನು ಹಿಂಬಾಲಿಸಿಕೊಂಡು ಹೋಗಿದ್ದು, ಸುಮಾರು 3 ರಿಂದ 4 ಕಿ. ಮೀ. ದೂರ ಹುಕ್ರಟ್ಟೆ ಕ್ರಾಸ್ ದಾಟಿ ಹೋಗುತ್ತಿರುವಾಗ ಬೈಕ್ ಸವಾರನು ಜೀಪಿನಲ್ಲಿ ಹಿಂಬಾಲಿಸುತ್ತಿರುವುದನ್ನು ಗಮನಿಸಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ಬೈಕ್ ನ್ನು ಅತಿವೇಗದಿಂದ ರಸ್ತೆ ತೀರಾ ಎಡಭಾಗಕ್ಕೆ ಚಲಾಯಿಸಿ ಬೈಕ್ ಸಮೇತ ರಸ್ತೆಯ ಬದಿಯ ಚರಂಡಿಗೆ ಬಿದ್ದು ಬೈಕ್ ನ್ನು ಅಲ್ಲಿಯೇ ಬಿಟ್ಟು ಓಡಲು ಪ್ರಯತ್ನಿಸಿದಾಗ ಬೈಕ್ ಸವಾರ ಸಯ್ಯದ್ ಜುಹಾದ್ ಈತನನ್ನು ಹಿಡಿದು ಆತನ ಬೈಕನ್ನು ಪರಿಶೀಲಿಸಲಾಗಿ KA19-HF-9683 ನೇ ನಂಬ್ರದ ಟಿ,ವಿ,ಎಸ್ REDION ಬೈಕ್ ಆಗಿದ್ದು ಬೈಕ್ ಕೂಡಾ ಭಾಗಶಃ ಜಖಂಗೊಂಡಿದ್ದು ಆತನನ್ನು ವಿಚಾರಿಸಲಾಗಿ ಮಾಳ ಚೌಕಿಯ ಸುರೇಶ ಎಂಬಾತನು ಆತನ ಮೊಬೈಲ್ ನಿಂದ ಫೋನ್ ಮಾಡಿ ನಲ್ಲೂರು, ಬಜಗೋಳಿ. ಮಾಳ  ಕಡೆ ರಸ್ತೆ ಬದಿಯಲ್ಲಿ ದನಗಳು ಮಲಗುತ್ತಿದ್ದ ಬಗ್ಗೆ ಹೇಳುತ್ತಿದ್ದು ಸೈಯದ್ ಜುಹಾದ್ ನು ತನ್ನ ಸಂಬಂಧಿ ಫೀರೋಜ್ ಹಾಗೂ ಮೈಯದ್ದಿ ಜೊತೆ ಸೇರಿ ದನಗಳನ್ನು ಕಡಿದು ಮಾಂಸ ಮಾಡುವ ಉದ್ದೇಶದಿಂದ ದನಗಳನ್ನು ಕಳ್ಳತನ ಮಾಡುವ ಬಗ್ಗೆ ದಿನಾಂಕ 30/01/2022 ರಂದು ಬೆಳಗ್ಗಿನ ಜಾವ ಸೈಯದ್ ಜುಹಾದ್ ನು ಬೈಕ್ KA-19 HF-9683 ನೇಯದರಲ್ಲಿಯೂ, ಫಿರೋಜ್ ಹಾಗೂ ಮಯ್ಯದಿಯವರು ರಿಡ್ಜ್ ಕಾರಿನಲ್ಲಿ ಹೊರಟಿದ್ದು ಫೀರೋಜ್ ಕಾರನ್ನು ಚಲಾಯಿಸುತ್ತಿದ್ದು ನಲ್ಲೂರಿನಲ್ಲಿ ರಸ್ತೆಯಲ್ಲಿ ಮಲಗಿದ್ದ ದನಗಳನ್ನು ಕಳ್ಳತನ ಮಾಡಿ ಕಾರಿನಲ್ಲಿ ತುಂಬಿಸಿಕೊಂಡು ದನಗಳನ್ನು ಕಳವು ಮಾಡಲು ಮಾಳ ಚೌಕಿ ಕಡೆಗೆ ಹೋಗುತ್ತಿರುವುವಾಗ ಪೊಲೀಸರು ತಡೆದು ನಿಲ್ಲಿಸಿದಾಗ ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿರುವುದಾಗಿ ಹೇಳಿದ್ದು, ಆರೋಫಿತರುಗಳು ದನಗಳನ್ನು ಕಡಿದು ಮಾಂಸ ಮಾಡುವ ಉದ್ದೇಶದಿಂದ KA-19 HF-9683 ನೇ ನಂಬ್ರದ ಬೈಕ್ ಹಾಗೂ ಮಾರುತಿ ರಿಡ್ಜ್ ಕಾರಿನಲ್ಲಿ ಬಂದು ನಲ್ಲೂರಿನಲ್ಲಿ ದನಗಳನ್ನು ಕಳ್ಳತನ ಮಾಡಿ ಕಾರಿನೊಳಗೆ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಮಾಳ ಚೌಕಿ ಕಡೆಗೆ ಅತೀವೇಗದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ವಾಹನ ತಪಾಸಣೆ ಮಾಡುತ್ತಿದ್ದ  ಪೊಲೀಸರ ಸೂಚನೆಯನ್ನು ಉಲ್ಲಂಘಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸರ ಮೇಲೆ ವಾಹನವನ್ನು ಹತ್ತಿಸಲು ಪ್ರಯತ್ನಿಸಿದಾಗ ತಪ್ಪಿಸಿಕೊಂಡು ರಸ್ತೆಗೆ ಬಿದ್ದ ಪಿರ್ಯಾದುದಾರರಿಗೆ ಹಾಗೂ ಸಿ,ಪಿ,ಸಿ, 1148 ನೇರವರಿಗೆ ಸಾಮಾನ್ಯ ಸ್ವರೂಪದ ಗಾಯ ಉಂಟಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 11/2022 ಕಲಂ:279, 353, 308, 332 ಜೊತೆಗೆ 34 ಐ.ಪಿ.ಸಿ ಮತ್ತು ಕಲಂ: 11(1)(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಹಾಗೂ ಕಲಂ: 4, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ 2020 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಜೆಕಾರು: ದಿನಾಂಕ 29/01/2022 ರಂದು ಅಜೆಕಾರು ಪೊಲೀಸ್ ಠಾಣಾ ಪಿ.ಎಸ್.ಐ-1 ಸುದರ್ಶನ ದೊಡಮನಿರರು  ಠಾಣಾ ಸಿಬ್ಬಂದಿ ಸಿದ್ದೇಶಿ ಜಿ.ಆರ್ ಹಾಗೂ ಇಲಾಖಾ ಜೀಪು ಚಾಲಕ ಸತೀಶ್ ಕುಮಾರ್ ರವರೊಂದಿಗೆ ಕೆಎ-20 ಜಿ-374 ನೇ ಇಲಾಖಾ ಜೀಪಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಅಜೆಕಾರು, ಗುಡ್ಡೆಯಂಗಡಿ, ಕಡ್ತಲ ಕಡೆಗಳಲ್ಲಿ ಸಂಚರಿಸುತ್ತಾ ಬೆಳಿಗಿನ ಜಾವ 04:00 ಗಂಟೆಯ ಸುಮಾರಿಗೆ ದೊಂಡೆರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ತಲುಪಿದಾಗ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ರಸ್ತೆ ಬದಿಯಲ್ಲಿ ನೀಲಿ ಬಣ್ಣದ ತರ್ಪಾಲ್ ಹೊದಿಸಿದ್ದ, ಹಿಂಬದಿಯಲ್ಲಿ ಹಸಿರು, ಕಂದು, ಬಿಳಿ ಬಣ್ಣದ ಆಕೃತಿಗಳಿರುವ ತರ್ಪಾಲ್ ನ್ನು ಹಾಕಿದ್ದ, ಒಂದು 407 ಸರಕು ಸಾಗಾಣಿಕ ಟೆಂಪೋ ಚಾಲನೆಯ ಸ್ಥಿತಿಯಲ್ಲಿ ನಿಂತಿದ್ದು, ಪಿ.ಎಸ್.ಐ ರವರು ಟೆಂಪೋ ಪಕ್ಕದಲ್ಲಿ ಜೀಪನ್ನು ನಿಲ್ಲಿಸಿ ಅದರ ಚಾಲಕನಲ್ಲಿ ಎಲ್ಲಿಂದ ಬಂದದ್ದು ಎಂಬ ಬಗ್ಗೆ ವಿಚಾರಿಸಿದಾಗ ಅದರ ಚಾಲಕನು ಟೆಂಪೋ ವನ್ನು ಒಮ್ಮೇಲೆ ಮುಂದಕ್ಕೆ ಚಲಾಯಿಸಿದ್ದು, ಪಿ.ಎಸ್.ಐ ರವರು ಅವನಿಗೆ ಟೆಂಪೋವನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿಯೂ ನಿರ್ಲಕ್ಷಿಸಿ ವಾಹನವನ್ನು ನಿಲ್ಲಿಸದೆ ಅತೀ ವೇಗವಾಗಿ ಮುಂದಕ್ಕೆ ಚಲಾಯಿಸಿದ್ದನ್ನು ಕಂಡು ಅನುಮಾನಗೊಂಡು ಪಿ.ಎಸ್.ಐ ರವರು ಹಿಂದಿನಿಂದ ಇಲಾಖಾ ಜೀಪಿನಲ್ಲಿ ಸದ್ರಿ ಟೆಂಪೋವನ್ನು ಬೆನ್ನಟ್ಟಿದ್ದು, ಅದರ ಸವಾರನು ಟೆಂಪೋವನ್ನು ಹರಿಖಂಡಿಗೆ, ಪೆರ್ಡೂರು, ಕುಕ್ಕೆಹಳ್ಳಿ, ಕೆ.ಜಿ. ರೋಡ್, ಸಂತೆಕಟ್ಟೆ, ಕಿನ್ನಿಮುಲ್ಕಿ, ಸಂಪಿಗೆನಗರ, ಪಿತ್ರೋಡಿ, ಉದ್ಯಾವರ ತಲುಪಿ ಅಲ್ಲಿನ ಒಳ ರಸ್ತೆಗಳಲ್ಲಿ ತಿರುಗುತ್ತಾ ಉದ್ಯಾವರ ಹೈವೆಗೆ ಬಂದು ಅಲ್ಲಿಂದ ಕರಾವಳಿ ಜಂಕ್ಷನ್ ಮೂಲಕ ಉಡುಪಿ, ಮಣಿಪಾಲ, ಪರ್ಕಳದ ಮೂಲಕ ಹಿರಿಯಡ್ಕದ ಪೆಟ್ರೋಲ್ ಪಂಪ್ ಬಳಿಯ ರಸ್ತೆಯ ಬದಿಯಲ್ಲಿ ಟೆಂಪೋವನ್ನು ನಿಲ್ಲಿಸಿ ಅದರಲ್ಲಿದ್ದ ಓರ್ವ ವ್ಯಕ್ತಿಯು ಲಾರಿಯನ್ನು ಇಳಿದು ರಸ್ತೆ ಬದಿಯಲ್ಲಿ ಓಡಿ ಹೋಗಿದ್ದು, ಆಗ ಸಮಯ ಸುಮಾರು ಬೆಳಿಗ್ಗೆ 05:45 ಗಂಟೆಯಾಗಿತ್ತು. ಹಿಂದೆ ಜೀಪಿನಲ್ಲಿದ್ದ ಪಿ.ಎಸ್.ಐ ಹಾಗೂ ಪಿಸಿ 2686 ನೇ ಸಿದ್ದೇಶಿ ಜಿ.ಆರ್ ರವರು ಆತನನ್ನು ಹಿಡಿಯಲು ಓಡಿದ್ದು, ಆತ ಸ್ವಲ್ಪ ದೂರದಲ್ಲಿನ ರಸ್ತೆ ಬದಿಯ ಹಾಡಿಯೊಳಗೆ ಓಡಿ ಹೋಗಿದ್ದು ಸಿಕ್ಕಿರುವುದಿಲ್ಲ. ಬಳಿಕ ವಾಪಾಸ್ಸು ಟೆಂಪೋ ನಿಂತಿದ್ದ ಸ್ಥಳಕ್ಕೆ ಬಂದು ಪರಿಶೀಲಿಸಲಾಗಿ ಸದ್ರಿ ಲಾರಿಯ ಮುಂಭಾಗದಲ್ಲಿಯಾಗಲಿ, ಹಿಂಬಂದಿಯಲ್ಲಾಗಲಿ ಯಾವುದೇ ನಂಬ್ರ ಪ್ಲೇಟ್ ಕಂಡು ಬಂದಿರುವುದಿಲ್ಲ. ಹಿಂಬಂದಿಯಲ್ಲಿ ಹೊದಿಸಿದ್ದ ತರ್ಪಾಲನ್ನು ಮೇಲಕ್ಕೆ ಎತ್ತಿ ನೋಡಲಾಗಿ ಒಳಗೆ ಕಪ್ಪು ಬಣ್ಣದ ಹೆಣ್ಣು ದನ-1, ಕಂದು ಬಣ್ಣದ ಗಂಡು ಹೋರಿ-1 ಹಾಗೂ ಕಂದು ಬಣ್ಣದ ಗಂಡು ಕರು -1 ಇದ್ದು, ಇವುಗಳನ್ನು ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದು ಕಂಡುಬಂದಿದ್ದು, ಇವುಗಳ ಅಂದಾಜು ಮೌಲ್ಯ 20,000/- ರೂಪಾಯಿಗಳಾಗಬಹುದು. ವಾಹನದ ಮುಂಭಾಗದ ಕ್ಯಾಬಿನಲ್ಲಿ ನೋಡಲಾಗಿ ಕಪ್ಪು ಬಣ್ಣದ ಪರ್ಸ್ ಇರುವುದು ಕಂಡು ಬರುತ್ತದೆ. ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ 407 ಟೆಂಪೋದ ಅಂದಾಜು ಮೌಲ್ಯ 4,00,000/- ರೂಪಾಯಿಗಳಾಗಬಹುದು. ಆರೋಪಿಯು ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿಕೊಂಡು ಬಂದು ಕಸಾಯಿ ಖಾನೆಗೆ ಇಲ್ಲವೇ ಮಾಂಸ ಮಾಡಿ ಮಾರಾಟ ಮಾಡುವರೇ 407 ಟೆಂಪೋದಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವುದಾಗಿದೆ.ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 02/2022  ಕಲಂ: 279, 379 ಐ.ಪಿ.ಸಿ ಮತ್ತು ಕಲಂ 4,5,7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ-2020 ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 30-01-2022 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080