ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾಧ ಪ್ರದೀಪ್ (27) ತಂದೆ: ರಾಘು ಪೂಜಾರಿ ವಾಸ: ಮನೆ ನಂ 5-69 ಗುಡ್ಡಯಂಗಡಿ ಅಲೆವೂರು ಗ್ರಾಮ, ಉಡುಪಿ ತಾಲೂಕು ಇವರ ತಂದೆ ರಾಘು ಪೂಜಾರಿಯವರು ದಿನಾಂಕ 27/12/2022 ರಂದು ರಾತ್ರಿ 8.00 ಗಂಟೆಗೆ ಕೆಲಸ ಮುಗಿಸಿ ಬಸ್ಸಿನಿಂದ ಇಳಿದು ಗುಡ್ಡೆಯಂಗಡಿಯ ಬಳಿ ಮನೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಅಲೆವೂರು ಕಡೆಯಿಂದ ಉಡುಪಿ ಕಡೆಗೆ KA-20 EU-4391 ನೇ ಸ್ಕೂಟರನ್ನು ಅದರ ಸವಾರನು ಹಿಂಬದಿಯಲ್ಲಿ  ಓರ್ವ ಮಹಿಳೆಯನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರದೀಪ ರವರ ತಂದೆಗೆ ಹಿಂದಿನಿಂದ ಡಿಕ್ಕಿ ಹೊಡೆದ, ಪರಿಣಾಮ ಪ್ರದೀಪ ರವರ ತಂದೆ ರಸ್ತೆಗೆ ಬಿದ್ದು, ತಲೆ ಹಾಗೂ ಸೊಂಟಕ್ಕೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ, ಅಲ್ಲಿನ ವೈದ್ಯರ ಸೂಚನೆಯಂತೆ, ಹೆಚ್ಚಿನ ಚಿಕಿತ್ಸೆಯ ಕುರಿತು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಹಾಗೂ ಸ್ಕೂಟರು ಸವಾರ ಆದಿತ್ಯ ಪ್ರಭು ಹಾಗು ಸಹಸವಾರೆಗೂ ಸಾದಾ ಸ್ವರೂಪದ ರಕ್ತಗಾಯವಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 234/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾಫು: ಪಿರ್ಯಾದಿದಾರರಾಧ ಅನಿಲ್ ಕುಮಾರ್ (32) ತಂದೆ: ಜಯ  ವಾಸ: ಜಯಶೀಲ ನಿಲಯ ಶಿವಾನಂದ ನಗರ ಮೂಡಬೆಟ್ಟು ಗ್ರಾಮ ಶಂಕರಪುರ ಅಂಚೆ ಮತ್ತು ಗ್ರಾಮ ಕಾಪು ತಾಲೂಕು, ಇವರು  ದಿನಾಂಕ 28/12/2022 ರಂದು ತನ್ನ ಮೋಟಾರು ಸೈಕಲ್ ನಂಬ್ KA-20 L-3526 ನೇದರಲ್ಲಿ ತನ್ನ ಮನೆಯಿಂದ ಹೊರಟು ಉಡುಪಿ ಮಂಗಳೂರು ರಾ ಹೆ 66 ಲ್ಲಿ ಪಣಿಯೂರಿಗೆ ಹೋಗುತ್ತಾ ಸಮಯ ಸುಮಾರು 11:05 ಗಂಟೆಗೆ ಕಾಪು ತಾಲೂಕು ಕಾಪು ಪಡು ಗ್ರಾಮದ ಕಾಫು ಚಿತ್ರಾ ಕಲೆಕ್ಷನ್ ಬಟ್ಟೆ ಅಂಗಡಿ ಎದುರು ತಲುಪಿದಾಗ ಉಡುಪಿ ಮಂಗಳೂರು ರಾಹೆ 66 ರಸ್ತೆಯ ಪ್ಲೈಓವರ್‌ನಲ್ಲಿ, ಮಂಗಳೂರು ಉಡುಪಿ ರಾ ಹೆ 66ರ ಕಾಮಗಾರಿ ನಡೆಯುತ್ತಿದ್ದುದರಿಂದ ಮಂಗಳೂರಿನಿಂದ ಬರುವ ವಾಹನಗಳು ಕೂಡಾ ಉಡುಪಿ ಮಂಗಳೂರು ರಸ್ತೆಯಲ್ಲೆ ಉಡುಪಿ ಕಡೆಗೆ ಬರುತ್ತಿದ್ದು,  KL-13 AU-9646 ನೇ ಕಾರು ಚಾಲಕ  ಸುಭಾಷ್ ಎಂಬವರು ತನ್ನ ಕಾರನ್ನು  ಉಡುಪಿ ಮಂಗಳೂರು ರಾ ಹೆ 66 ರಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಅನಿಲ್‌ ಕುಮಾರ್‌ ರವರ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದು ಪರಿಣಾಮ ಿವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಬಲಕಾಲಿನ ಮೂಳೆ ಮುರಿತ  ಹಾಗೂ ತಲೆಗೆ ಗುದ್ದಿದ ಗಾಯವಾಗಿರುತ್ತದೆ. ಈ ಬಗ್ಗೆ ಅನಿಲ್‌ ಕುಮಾರ್‌ ರವರು ಉಡುಪಿ ಹೈಟೆ ಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈ ಅಪಘಾತಕ್ಕೆ . KL-13 AU-9646 ನೇ ಕಾರು ಚಾಲಕ  ಸುಭಾಷ್ ರವರ ಅತೀವೇಗ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 147/2022 ಕಲಂ : 279, 337,338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾಧ ಇಸಾಕ್ (22) ತಂದೆ: ಕಾಸಿಂ, ವಾಸ: ಶ್ರೀಲತಾ ಪ್ಯಾಕ್ಚರಿ ಕಟಪಾಡಿ, ಅಚ್ಚಡ, ಏಣಗುಡ್ಡೆ ಕಾಪು ತಾಲೂಕು ಇವರ ಚಿಕ್ಕಪ್ಪನಾದ ತಿಕಿಡಿ ಮಾಭಾಷ (48) ಎಂಬುವರು ಲಾರಿಯಲ್ಲಿ ಲೋಡ್ ಕೆಲಸ ಮಾಡಿಕೊಂಡಿದ್ದು ಅವರಿಗೆ ವಿಪರೀತ ಶರಾಬು ಕುಡಿಯುವ ಅಭ್ಯಾಸ ಇದ್ದಿತ್ತು. ಶರಾಬು ಕುಡಿದರೆ ಅವರು ಕೆಲವೊಮ್ಮ ಮನೆಗೆ ಬರುತ್ತಿರಲ್ಲಿಲ್ಲ. ದಿನಾಂಕ 27/12/2022 ರಂದು ಅವರು ಕೆಲಸ ಮುಗಿಸಿ ಕಟಪಾಡಿ ಪೇಟೆಯಲ್ಲಿದ್ದವರು ಮನೆಗೆ ಬಂದಿರಲಿಲ್ಲ. ದಿನಾಂಕ 28/12/2022 ರಂದು ಬೆಳಗಿನ ಜಾವ ಸುಮಾರು 7:00 ಗಂಟೆ ಹೊತ್ತಿಗೆ ಇಸಾಕ್‌ ರವರಿಗೆ ಮಹೊಮ್ಮದ್ ರವರು ಪೋನ್ ಮಾಡಿ ತಿಕಿಡಿ ಮಾಭಾಷರವರು ಕಟಪಾಡಿ ಮಾದೇಶ್ವರ ಪೆಟ್ರೋಲ್ ಬಂಕ್ ನ  ಮರದ ಕೆಳಗೆ ಮಲಗಿಕೊಂಡಿದ್ದು ಏಳುದಿಲ್ಲವಾಗಿ ತಿಳಿಸಿದ್ದು ಕೂಡಲೇ ಹೋಗಿ ನೋಡಿದಾಗ ಇಸಾಕ ರವರ ಚಿಕಪ್ಪನಾದ ತಿಕಿಡಿ ಮಾಭಾಷರವರು ಮಲಗಿಕೊಂಡ ಸ್ಥಿತಿಯಲ್ಲಿದ್ದು ಮೃತ ಪಟ್ಟವರಂತೆ ಕಂಡು ಬಂದಿರುತ್ತಾರೆ. ಕೂಡಲೇ ಒಂದು ಆ್ಯಂಬುಲೆನ್ಸ್ ನಲ್ಲಿ ಉಡುಪಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ತಿಕಿಡಿ ಮಾಭಾಷರವರು ದಿನಾಂಕ 27/12/2022 ರಂದು ರಾತ್ರಿ 9:00 ಗಂಟೆಯ ನಂತರ  ಊಟ ಮಾಡಿ ಮರದ ಕೆಳಗೆ ಮಲಗಿದವರು ದಿನಾಂಕ 28/12/2022 ರ ಬೆಳಿಗ್ಗೆ 7:00 ಗಂಟೆಯ ನಡುವಿನ ಅವದಿಯಲ್ಲಿ ಯಾವುದೋ ಕಾರಣದಿಂದ ಮೃತ ಪಟ್ಟಿರುವುದಾಗಿದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿಆರ್‌ ಕ್ರಮಾಂಕ 40/2022 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಫುರ: ಪಿರ್ಯಾದಿದಾರರಾಧ ಶರತ್ ಕುಲಾಲ್ (35) ತಂದೆ: ಮಹಾಬಲ ಕುಲಾಲ್ ವಾಸ: ಗುಳ್ಳಾಡಿ, ಬೇಳೂರು ಗ್ರಾಮ, ಕುಂದಾಪುರ ಇವರ ಮಾವ ಸೀತಾರಾಮ (47) ಎಂಬುವವರು ವಿಪರೀತ ಶರಾಬು ಕುಡಿತದ ಅಭ್ಯಾಸ ಹೊಂದಿದ್ದು ದಿನಾಂಕ 28/12/2022 ರಂದು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸಗೆಂದು ಬಂದಿದ್ದು, ಮದ್ಯಾಹ್ನ 13:05 ರ ಸಮಯಕ್ಕೆ ಕುಸಿದುಬಿದ್ದು ಕುಂದಾಪುರ ಸರ್ಕಾರಿ ಆಸ್ಪತ್ರೆಯ ಒಳಗಡೆ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾರೆ.  ವಿಪರೀತ ಕುಡಿತದ ಅಭ್ಯಾಸವಿರುವ  ನಮ್ಮ ಮಾವನವರು ಯಾವುದೋ ಕಾಯಿಲೆ ಉಲ್ಬಣಗೊಂಡು ದಿನಾಂಕ 28/12/2022 ಮದ್ಯಾಹ್ನ 13:05 ಗಂಟೆಗೆ ಕುಂದಾಪುರ ಸರ್ಕಾರಿಆಸ್ಪತ್ರೆಯ ಒಳಗಡೆ ಮೃತಪಟ್ಟಿರುವ  ಸಾಧ್ಯತೆ ಇದ್ದು ಮೃತರ ಮರಣದಲ್ಲಿ  ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಯು.ಡಿಆರ್‌ ಕ್ರಮಾಂಕ 48/2022 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-12-2022 10:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080