ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ:  ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಮಾವಿನಕಟ್ಟೆ 5 ಸೆಂಟ್ಸ್ ನಿವಾಸಿ ಪ್ರಕರಣದ ಪಿರ್ಯಾದಿ ರಂಜಿತ್ ನಾಯ್ಕ್ ಇವರ ಅಣ್ಣ ಹರೀಶ್ ನಾಯ್ಕ್, ಪ್ರಾಯ 34 ವರ್ಷ ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯಪಾನ ಮಾಡುವವರಾಗಿದ್ದು ಅಲ್ಲದೆ ತಮ್ಮ ತಂಗಿ ರೂಪಾ ಇವರ ಮದುವೆ ಕಾರ್ಯಕ್ರಮಕ್ಕೆ ಬೆಳ್ಮಣ್ ಸೊಸೈಟಿಯಿಂದ ತೆಗೆದ ಸಾಲವನ್ನು ಮರು ಪಾವತಿಸುವ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜುಗುಪ್ಸೆ ಹೊಂದಿ ದಿನಾಂಕ 28/12/2022 ರಂದು 15:30 ಗಂಟೆಯಿಂದ 19:00 ಗಂಟೆಯ ಮಧ್ಯೆ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಒಳಗೆ ಚಾವಡಿಯಲ್ಲಿ ಮನೆಯ ಮಾಡಿಗೆ ಅಳವಡಿಸಿದ ಮರದ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ  ಯು,ಡಿ,ಆರ್ ನಂಬ್ರ: 47/2022 ಕಲಂ: 174 ಸಿ,ಆರ್,ಪಿ,ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಹೆಬ್ರಿ: ಪಿರ್ಯಾದಿ ಶೇಖರ ನಾಯ್ಕ  ಪ್ರಾಯ 30 ವರ್ಷ ತಂದೆ:ಕೃಷ್ಣ ನಾಯ್ಕವಾಸ: ಅಂಕ್ರಾಲು ಮೇಲ್ಮನೆ ನಾಲ್ಕೂರು ಗ್ರಾಮ ಇವರ ತಂದೆ ಕೃಷ್ಣ ನಾಯ್ಕ ಪ್ರಾಯ 71ವರ್ಷ ರವರು  ಕೂಲಿ ಕೆಲಸವನ್ನು ಮಾಡಿಕೊಂಡಿದ್ದು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿರುತ್ತಾರೆ. ಕೃಷ್ಣ ನಾಯ್ಕ ರವರು ವಿಪರೀತ ಮದ್ಯಪಾನ ಮಾಡುವ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ: 28/12/2022 ರಂದು ಸಂಜೆ 05:00 ಗಂಟೆಯಿಂದ 07:00 ಗಂಟೆಯ ಮದ್ಯಾವಧಿಯಲ್ಲಿ ಬ್ರಹ್ಮಾವರ ತಾಲೂಕು ನಾಲ್ಕೂರು ಗ್ರಾಮದ ಅಂಕ್ರಾಲು ಮೇಲ್ಮನೆ ಎಂಬಲ್ಲಿರುವ ಅವರ ಮನೆಯ ಬಳಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ  ಅಸ್ವಸ್ಥರಾದವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಉಡುಪಿಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲು ಮಾಡಲಾಗಿರುತ್ತದೆ. ದಿನಾಂಕ; 29/12/2022 ರಂದು ಮುಂಜಾನೆ 01: 45 ಗಂಟೆಗೆ ಕೃಷ್ಣ ನಾಯ್ಕ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯು,ಡಿ,ಆರ್ ನಂಬ್ರ: 36/2022 ಕಲಂ: 174 ಸಿ,ಆರ್,ಪಿ,ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಮಣಿಪಾಲ: ಪಿರ್ಯಾದಿ: ಗಾಯತ್ರಿ ಪ್ರಾಯ: 45 ವರ್ಷ ತಂದೆ: ರಮೇಶ್‌ವಿ ವಾಸ: ಶ್ರೀ ಸತ್ಯನಾರಾಯಣ ನಿಲಯ ಮರ್ಣೆ ಸರ್ಕಲ್‌ಹತ್ತಿರ ಮೂಡುಬೆಳ್ಳೆ ಗ್ರಾಮ ಇವರ ಗಂಡ ರಮೇಶ್‌ ವಿಶ್ವಕರ್ಮ ರವರಿಗೆ ದಿನಾಂಕ: 28.12.2022 ರಂದು ರಾತ್ರಿ 10:00 ಗಂಟೆಗೆ  ಎದೆ ನೊವು ಉಂಟಾಗಿದ್ದು ಪಿರ್ಯಾದಿದಾರರು ಕೂಡಲೇ ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕೆರೆದುಕೊಂಡುಹೊಗಿದ್ದು ರಾತ್ರಿ 11:00 ಗಂಟೆಗೆ ಪರೀಕ್ಷಿಸಿದ ವೈದ್ಯರು ರಮೇಶ್‌ವಿಶ್ವಕರ್ಮ ರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ   ಈ  ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ ನಂಬ್ರ 46/2022 ಕಲಂ: 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

 • ಕುಂದಾಫುರ: ಪಿರ್ಯಾದಿ ಗಿರಿಧರ್  ಫ್ರಭುವಾಸ: ಲಕ್ಷ್ಮೀ ದಾಮೋದ್ರ್ ಟ್ರೆಡಿಂಗ್ ಕಂಪನಿ, ತಿರುಮಲ ಕಾಂಪ್ಲೆಕ್ಸ್ ಎನ್ ಎಚ್ 66 , ಕುಂದಾಪುರ ಇವರು ಕುಂದಾಪುರ  ಕಸಬಾ ಗ್ರಾಮದ ಬಿ ಎಚ್ ಎಮ್ ರೊಡ್ ಕ್ರಾಸ್ ರಾ.ಹೆ 66 ರಲ್ಲಿ ಲಕ್ಷ್ಮೀ ದಾಮೋದರ್  ಟ್ರೇಡಿಂಗ್‌ ಕಂಪನಿ ಎಂಬ ಹೆಸರಿನ ಆಟೋ ಮೋಬೈಲ್ ಬಿಡಿ ಭಾಗ ಮಾರಾಟದ ವ್ಯವಹಾರವನ್ನು ಆಪಾದಿತ ಸುರೇಶ್ ಪೂಜಾರಿ ಅವರೊಂದಿಗೆ 2015 ರಿಂದ  ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸಿಕೊಂಡು ಬಂದಿದ್ದು, ನಂತರ  ಸಂಸ್ಥೆಯಿಂದ ಬಂದ ಲಾಭಾಂಶ ಕಡಿಮೆ ಆಗುವುದು ಕಂಡು ಆರೋಪಿತನನ್ನು ವಿಚಾರಿಸಿದಾಗ ಆತನು ಸರಿಯಾಗಿ  ವಿವರಣೆ ನೀಡದೆ ಇದ್ದು,  ಬಳಿಕ ಆಪಾದಿತನು ಪಿರ್ಯಾದುದಾರರ  ಗಮನಕ್ಕೆ ತರದೆ ಸಂಸ್ಥೆಯು  ಉರ್ಜಿತದಲ್ಲಿ ಇರುವಾಗಲೇ  ಸುಳ್ಳು ದಾಖಲೆಯನ್ನು  ಸೃಷ್ಟಿಸಿ ದಾಮೋದರ ಟ್ರೆಡಿಂಗ್ ಕಂ. ಎಂಬ ಸಂಸ್ಥೆಯನ್ನು  ಅಕ್ರಮವಾಗಿ ಹುಟ್ಟುಹಾಕಿ ವ್ಯವಹಾರ ಮಾಡಿದ್ದು,  ಬಳಿಕ  ಆಪಾದಿತನು ಕುಂದಾಪುರ ಮೀನು ಮಾರ್ಕೆಟ್ ರಸ್ತೆಯಲ್ಲಿ ಹೊಸ ಸಂಸ್ಥೆಯನ್ನು ಪ್ರಾರಂಭಿಸಿದ್ದು,  ನಂತರ ಪಿರ್ಯಾದಿ ದಾರರು ತಮ್ಮ ಸಂಸ್ಥೆಯನ್ನು ಆಡಿಟ್ ಮಾಡಿಸಲಾಗಿ ರೂ 26,95,950 ಬೆಲೆ ಬಾಳುವ ಸರಕುಗಳನ್ನು  ಆರೋಪಿತನು ತನ್ನ ಸ್ವಂತಕ್ಕೆ ಬಳಸಿಕೊಂಡಿರುವುದು ತಿಳಿದುಬಂದಿದ್ದು,  ಬಳಿಕ ದಿನಾಂಕ 06/06/2022 ರಂದು ಆಪಾದಿತನು ಸಂಸ್ಥೆಯ ಪಾಲುದಾರಿಕೆಯಿಂದ ನಿವೃತ್ತಿ ಆಗುವುದಾಗಿ ತಿಳಿಸಿ ಆ ಬಾಬ್ತು ರೂ 12,38,759/- ಹಣ ನೀಡುವಂತೆ ಒತ್ತಾಯಿಸಿ    ಹಣ ನೀಡದಿದ್ದಲ್ಲಿ ಅಂಗಡಿ ಮುಚ್ಚಿಸುವು ದಾಗಿಯೂ , ಜನ ಕಳುಹಿಸಿ ಕೈ ಕಾಲು ಮುರಿದು ಹಾಕುವುದಾಗಿ ಜೀವ ಬೆದರಿಕೆ ಹಾಕಿ ರೂ 12,38,759/-  ರೂಪಾಯಿ ಮೊತ್ತದ ಕರ್ನಾಟಕ ಬ್ಯಾಂಕ್ ಕುಂದಾಪುರ ಶಾಖೆಯ ಚೆಕ್ ನಂಬ್ರ 545415, 545418, 545419, 545420, ಚೆಕ್ ನನ್ನುಪಡೆದಿರುತ್ತಾನೆ.  ಬಳಿಕ ಆತನು ಈ ಮೇಲಿನ 4  ಚೆಕ್ ಗಳಲ್ಲಿ 2 ಚೆಕ್ ಮುಖೇನ ಸದ್ರಿ ಹಣವನನ್ನು  ಪಡೆದುಕೊಂಡಿರುತ್ತಾನೆ.,  ಉಳಿದ 2ಚೆಕ್ ನ್ನು ಪಿರ್ಯಾದಿದಾರರು ಸ್ಟಾಪ್ ಪೇಮೆಂಟ್ ಮಾಡಿದ್ದು,  ಆದರೂ  ಆಪಾದಿತನು ಪಿರ್ಯಾದಾರರಿಂದ ಪಡೆದ ಉಳಿದ 2 ಚೆಕ್ ಮುಖೇನ ರೂ 6,75,000/- ಹಣಕ್ಕೆ   ಬ್ಯಾಂಕಿಗೆ ಹಾಕಿ ಚೆಕ್ ಅಮಾನ್ಯ ಗೊಂಡ ನೋಟಿಸನ್ನು ದಿನಾಂಕ 27/09/2022 ರಂದು ಪಿರ್ಯಾದುದಾರರಿಗೆ ನೀಡಿರುತ್ತಾನೆ.  ಆಪಾದಿತನು ಪಿರ್ಯಾದುದಾರರ ವ್ಯವಹಾರದಲ್ಲಿ ಪಾಲುದಾರನಾಗಿದ್ದು ಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ,  ಬೆದರಿಕೆ ಒಡ್ಡಿ  ಚೆಕನ್ನು ಪಡೆದು ರೂ 20 ಲಕ್ಷಕ್ಕೂ  ಅಧಿಕ ಹಣವನನ್ನು ಅಕ್ರಮ ಲಾಭ ಪಡೆದು, ಪಿರ್ಯಾದಿದಾರರಿಗೆ  ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 139/2022 ಕಲಂ: 384, 406, 417,418,420,424, 465,471,  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಮನುಷ್ಯ ಕಾಣೆ

 • ಕಾರ್ಕಳ: ಕಾರ್ಕಳ ತಾಲೂಕು, ಮುಂಡ್ಕೂರು ಗ್ರಾಮದ ಅರದಾಳ್ ವರಮಹಾಲಕ್ಷ್ಮೀ ಮನೆಯಲ್ಲಿ ವಾಸವಾಗಿರುವ ಪಿರ್ಯಾದಿ ಜಾನಕಿ (64), ಗಂಡ: ರಮೇಶ್@ಕುಟ್ಟಿ ಸಫಲಿಗ, ವಾಸ: ವರ ಮಹಾಲಕ್ಷ್ಮೀ ಅರದಾಳ್ ಇನ್ನಾ ಕ್ರಾಸ್ ಮುಂಡ್ಕೂರು  ಇವರ ಗಂಡ ರಮೇಶ್@ಕುಟ್ಟಿ ಸಫಲಿಗ  ಪ್ರಾಯ 70 ವರ್ಷ ಇವರಿಗೆ ಮಾನಸಿಕ ಕಾಯಿಲೆ ಇದ್ದು ಈ ಬಗ್ಗೆ ನಿಟ್ಟೆ ಮಾನಸಿಕ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು, ದಿನಾಂಕ 27/12/2022 ರಂದು ಮಧ್ಯಾಹ್ನ 2:30 ಗಂಟೆಗೆ ಮನೆಯಿಂದ ಹೋದವರು  ಇದುವರೆಗೆ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ  ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 154/2022 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 29-12-2022 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080