ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಸುಧಾಕರ ಪೂಜಾರಿ (54), ತಂದೆ: ದಿ.ಮಂಜಪ್ಪ ಕುಂದರ್‌, ವಾಸ: ಕಂಬಳಿಬೆಟ್ಟು, ಉಜಂಗಾರು,ಹಾವಂಜೆ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರ ಮಗ ಶರತ್‌ (29) ರವರು ವಿಪರೀತ ಮದ್ಯಪಾನ ಮಾಡಿಕೊಂಡಿದ್ದವರು ಯಾವುದೋ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28/12/2021ರಂದು ಮಧ್ಯಾಹ್ನ 3:30ಗಂಟೆಯಿಂದ ಸಂಜೆ 6:00 ಗಂಟೆಯ ಮಧ್ಯಾವಧಿಯಲ್ಲಿ ಬ್ರಹ್ಮಾವರ ತಾಲೂಕು ಹಾವಂಜೆ ಗ್ರಾಮದ ದೇವಸ್ಥಾನಬೆಟ್ಟು ಚಿತ್ತಾರಿ ಎಂಬಲ್ಲಿನ ಸರಕಾರಿ ಹಾಡಿಯಲ್ಲಿದ್ದ ಮಾವಿನ ಮರದ ಕೊಂಬೆಗೆ ನೈಲಾನ್‌ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 75/2021 ಕಲಂ: 174 ಸಿ.ಅರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸಂತೊಷ ಬಿ (52), ತಂದೆ: ದಿ. ಬಾಬು ಪಿ,  ವಾಸ: 5-55 ‘ಬಾಬು ನಿವಾಸ’, ನಿಟ್ಟೂರು, ಪುತ್ತೂರು ಗ್ರಾಮ, ಉಡುಪಿ ಇವರು ಸುಜುಕಿ ಸ್ವಿಷ್‌ಸ್ಕೂಟರ್‌ ನಂಬ್ರ: KA-20-EE-0339 (Chassis No: MB8CF4CBBD8166691, Engine No: F4862247203) ನೇದರ ಆರ್‌.ಸಿ ಮಾಲಕರಾಗಿದ್ದು, ದಿನಾಂಕ 26/12/2021 ರಂದು ರಾತ್ರಿ 08:30 ಗಂಟೆಗೆ ಮನೆಯ ಎದುರುಗಡೆ ನಿಲ್ಲಿಸಿದ್ದು, ದಿನಾಂಕ 27/12/2021 ರಂದು ರಾತ್ರಿ 01:20 ಗಂಟೆಗೆ ಎದ್ದು ನೋಡಿದಾಗ ಮನೆಯ ಎದುರು ನಿಲ್ಲಿಸಿದ ಸ್ಕೂಟರ್‌ ಇಲ್ಲದೇ ಇದ್ದು, ಪಿರ್ಯಾದಿದಾರರು ಮನೆಯ ಎದುರು ನಿಲ್ಲಿಸಿದ ಸ್ಕೂಟರ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಎಲ್ಲಾ ಕಡೆ ಹುಡುಕಿದಲ್ಲಿ ಪತ್ತೆಯಾಗದೇ ಇದ್ದು, ಕಳವಾದ ಸ್ಕೂಟರ್‌ನ ಮೌಲ್ಯ ರೂಪಾಯಿ 30,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 196/2021, ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ದಿನಾಂಕ 28/12/2021 ರಂದು 08:30 ಗಂಟೆಗೆ ಪಿರ್ಯಾದಿದಾರರಾದ ವಿನು (18), ತಂದೆ: ಮಂಜುನಾಥ, ವಾಸ: 4ನೇ ಕ್ರಾಸ್ ನೇತಾಜಿ ನಗರ 80 ಬಡಗುಬೆಟ್ಟು ಗ್ರಾಮ ಉಡುಪಿ ತಾಲೂಕು ಇವರು ಮನೆಯ ಬಳಿ ನಿಂತ್ತಿದ್ದಾಗ 1ನೇ ಆರೋಪಿ ಗಣೇಶ ರಸ್ತೆಯಲ್ಲಿ ನಡೆದುಕೊಂಡು ಹೊಗುತ್ತಾ ಪಿರ್ಯಾದಿದಾರರ ಮನೆಯ ಬಳಿ ಇದ್ದ ನಾಯಿಗೆ ಕಲ್ಲು ಹೊಡೆದಿದ್ದು ಆಗ ಪಿರ್ಯಾದಿದಾರರು ಪ್ರಶ್ನಿಸಿದಾಗ 1ನೇ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದಾಗ ಪಿರ್ಯಾದಿದಾರರ ತಂದೆ ಮಂಜುನಾಥ ರವರು ಆರೋಪಿ 1ನೇಯವರಿಗೆ ಜೋರು ಮಾಡಿದ್ದು ಆಗ 2ನೇ ಆರೋಪಿ ವಿಜಯ ಕತ್ತಿಯನ್ನು ತಂದು ಪಿರ್ಯಾದಿದಾರ ತಲೆಯ ಎಡಭಾಗಕ್ಕೆ  ಹೊಡೆದಿರುತ್ತಾನೆ. 2ನೇ ಆರೋಪಿಯು ಬಂದು ಕಬ್ಬಿಣದ ರಾಡನ್ನು ತಂದು ಪಿರ್ಯಾದಿದಾರರ ತಲೆಯ ಎಡಭಾಗಕ್ಕೆ ಮತ್ತು ಬೆನ್ನಿಗೆ ಹೊಡೆದಿರುತ್ತಾನೆ, ಅಲ್ಲದೆ ಹೊಡೆದಾಟವನ್ನು ಬಿಡಿಸಲು ಬಂದ ಪಿರ್ಯಾದಿದಾರ ತಾಯಿ ಮಂಜುಳಾ ರವರ ಕೈಯನ್ನು ಹಿಡಿದು ಆರೋಪಿ 1 ಮತ್ತು 2ನೇಯವರು ಎಳೆದಾಡಿ ಮತ್ತು ಬೆನ್ನಿಗೆ ಗುದ್ದಿರುತ್ತಾರೆ.  ಜೀವ ಬೆದರಿಕೆ ಹಾಕಿರುತ್ತಾರೆ. ಈ ಹಲ್ಲೆಯಿಂದ ಪಿರ್ಯದಿದಾರರಿಗೆ ತಲೆಯ ಎಡಭಾಗಕ್ಕೆ ರಕ್ತಗಾಯವುಂಟಾಗಿರುತ್ತದೆ. ಮಂಜುನಾಥ ಹಾಗೂ ಮಂಜುಳಾ ರವರಿಗೆ ಮೈಕೈಗೆ ನೋವುಂಟಾಗಿರುತ್ತದೆ ಪಿರ್ಯಾದಿದಾರರು, ಮಂಜುನಾಥ ಹಾಗೂ ಮಂಜುಳಾ ರವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 173/2021 ಕಲಂ: 504, 323, 324, 354, 506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 28/12/2021 ರಂದು 08:30 ಗಂಟೆಗೆ ಪಿರ್ಯಾದಿದಾರರಾದ ಆಶಾ (23), ಗಂಡ: ಗಣೇಶ, ವಾಸ: ನೇತಾಜಿ ನಗರ 4ನೇ ಕ್ರಾಸ್ 80 ಬಡಗುಬೆಟ್ಟು ಗ್ರಾಮ ಉಡುಪಿ ತಾಲೂಕು ಇವರ ಗಂಡ ಗಣೇಶ ಎಂಬುವರೊಂದಿಗೆ ಆರೋಪಿಗಳಾದ 1) ವಿನು ಮತ್ತು 2) ಮಂಜುನಾಥ  ಜಗಳವಾಡುತ್ತಿದ್ದಾಗ ಪಿರ್ಯಾದಿದಾರರು ಬಿಡಿಸಲು ಹೋಗಿದ್ದು ಆಗ 2ನೇ ಆರೋಪಿಯು ಕತ್ತಿಯಿಂದ ಪಿರ್ಯಾದಿದಾರರ ತಲೆಗೆ ಹೊಡೆದಿರುತ್ತಾರೆ, ಪಿರ್ಯಾದಿದಾರರ ಗಂಡ ತಡೆಯಲು ಬಂದಾಗ 2ನೇ ಆರೋಪಿಯು ಪಿರ್ಯಾದಿದಾರರ ಗಂಡನಿಗೂ ತಲೆಗೆ ಕತ್ತಿಯಿಂದ ಹೊಡೆದಿರುತ್ತಾರೆ 1ನೇ ಆರೋಪಿಯು ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ಗಂಡನ ತಲೆ ಮತ್ತು ಕೈಗೆ ಹೊಡೆದಿರುತ್ತಾನೆ, ಈ ಹಲ್ಲೆಯಿಂದ ಪಿರ್ಯಾದಿದಾರರಿಗೆ ಮತ್ತು ಅವರ ಗಂಡ ಗಣೇಶರವರಿಗೆ ತಲೆಗೆ ರಕ್ತ ಗಾಯವಾಗಿರುತ್ತದೆ ಗಾಯಾಳುಗಳು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 174/2021 ಕಲಂ: 354, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಶ್ರೀಮತಿ ಪ್ರಮೀಳಾ (40), ಗಂಡ: ಭಾಸ್ಕರ ಶೆಟ್ಟಿ, ವಾಸ: ಬಾಲಗಣಪತಿ ದೇವಸ್ಥಾನದ ಬಳಿ, ನಡ್ಸಾಲು ಗ್ರಾಮ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರು 15 ವರ್ಷಗಳ ಹಿಂದೆ ಭಾಸ್ಕರ ಶೆಟ್ಟಿ ಎಂಬುವವರನ್ನು ಮದುವೆಯಾಗಿದ್ದು,,  ಈ ಹಿಂದೆ ಬೆಂಗಳೂರು ಮತ್ತು ತೀರ್ಥಹಳ್ಳಿಯಲ್ಲಿ ವಾಸವಾಗಿದ್ದರು.  ಮದುವೆ ಆದ ತರುವಾಯದಿಂದ ಆರೋಪಿ ಭಾಸ್ಕರ ಶೆಟ್ಟಿಯು ಪಿರ್ಯಾದಿದಾರರಿಗೆ ಅನಾವಶ್ಯಕವಾಗಿ ಅನುಮಾನಪಡುತ್ತಾ ಕೈಗಳಿಂದ ಹೊಡೆದು, ಕಾಲುಗಳಿಂದ ತುಳಿದು ಹಿಂಸಿಸುತ್ತಿದ್ದು, ಪ್ರಸ್ತುತ ಪಡುಬಿದ್ರಿಯಲ್ಲಿ ದಿನಸಿ ಅಂಗಡಿಯನ್ನು ನಡೆಸಲು ಪಿರ್ಯಾದಿದಾರರ ತಂದೆ ಧನಸಹಾಯ ಮಾಡಿರುತ್ತಾರೆ. ಪಿರ್ಯಾದಿದಾರರು ಕೂಡ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದು ಆ ಸಮಯದಲ್ಲಿ ಕೂಡ ಪಿರ್ಯಾದಿದಾರರಿಗೆ ಹೊಡೆಯುವುದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವುದಲ್ಲದೆ, ಪಿರ್ಯಾದಿದಾರರಿಗೆ ಮದುವೆ ಸಮಯ ಹಾಕಿದ 25 ಪವನ್ ಬಂಗಾರವನ್ನು 5 ವರ್ಷಗಳ ಹಿಂದೆ ಮಾರಾಟ ಮಾಡಿ ಕಾಪು ತಾಲೂಕು,   ನಡ್ಸಾಲು ಗ್ರಾಮದ ಬಾಲಗಣಪತಿ ದೇವಸ್ಥಾನದ ಬಳಿ ನಾಗರಾಜನಗರ ಎಂಬಲ್ಲಿ ಮನೆ ಕಟ್ಟಿರುತ್ತಾರೆ. ಅಲ್ಲದೆ ಜೊತೆಯಲ್ಲಿ ಪಿರ್ಯಾದಿದಾರರ ತಂದೆ ತಾಯಿ ವಾಸಿಸುತ್ತಿದ್ದು, ತಂದೆಯ ಪೆನ್‌ಷನ್‌ ಹಣವನ್ನು ಕೂಡ ಖರ್ಚಿಗೆ ವ್ಯಯ ಮಾಡಿರುತ್ತಾರೆ. ಆದರೂ ಕೂಡ ಹೊಡೆಯುವುದು ಬೈಯುವುದು, ಮಾನಸಿಕ ಹಿಂಸೆ ಮಾಡುತ್ತಿದ್ದುದಲ್ಲದೆ, ದಿನಾಂಕ 18/12/2021 ರಂದು ರಾತ್ರಿ 10:00 ಗಂಟೆಗೆ ಆರೋಪಿ ಮದ್ಯಪಾನ ಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ನೀಡಿದಂತೆ ಭಾಸ್ಕರ ಶೆಟ್ಟಿಯವರನ್ನು ಠಾಣೆಗೆ ಕರೆಯಿಸಿ ತಿಳಿವಳಿಕೆ ನೀಡಿರುತ್ತಾರೆ. ದಿನಾಂಕ 20/12/2021 ರಂದು 10:30 ಗಂಟೆಗೆ ಪಿರ್ಯಾದಿದಾರರು ತನ್ನ ತಾಯಿ ಹಾಗೂ ಮಗನ ಜೊತೆ ಮನೆಯಲ್ಲಿ ಊಟ ಮಾಡಿ ಮನೆಯಲ್ಲಿರುವ ಸಮಯ ಆರೋಪಿ ಭಾಸ್ಕರ ಶೆಟ್ಟಿ ಮದ್ಯಪಾನ ಮಾಡಿ ಮನೆಗೆ ಬಂದು ಮಗನಿಗೂ ಕೂಡ ಅವರು ತಂದ ಮದ್ಯವನ್ನು ಕುಡಿಯುವಂತೆ ಒತ್ತಾಯಿಸಿರುತ್ತಾರೆ, ಇದಕ್ಕೆ ಪಿರ್ಯಾದಿದಾರರು ಆಕ್ಷೇಪಿಸಿದಾಗ ಅದೇ ಕಾರಣಕ್ಕೆ ಅವಾಚ್ಯವಾಗಿ ಬೈದುದಲ್ಲದೆ ಕಾಲಿಗೆ ಹೊಟ್ಟೆಗೆ ತುಳಿದು ಮನೆಯಲ್ಲಿದ್ದ ಮಂತ್ರದೇವತೆ ಬೆತ್ತದಿಂದ ಪಿರ್ಯಾದಿದಾರರ ತಲೆಗೆ ಎದೆಗೆ ಸಿಕ್ಕಿದಲ್ಲಿ ಹೊಡೆದು ನೋವು ಉಂಟು ಮಾಡಿರುತ್ತಾರೆ. ಪಿರ್ಯಾದಿದಾರರು ಆರೋಪಿ ಭಾಸ್ಕರ ಶೆಟ್ಟಿಯ ಕಿರುಕುಳದಿಂದ ಮಾನಸಿಕವಾಗಿ ಬೇಸತ್ತು ದಿನಾಂಕ 27/12/2021 ರಂದು ಸಂಜೆ 6:30 ಗಂಟೆಗೆ ಮನೆಯಲ್ಲಿ ತಂದಿರಿಸಿದ ನಿದ್ರೆಮಾತ್ರೆಯನ್ನು ಸೇವಿಸಿ, ಅಸ್ವಸ್ಥಗೊಂಡವರನ್ನು ಪಿರ್ಯಾದಿದಾರರ ತಾಯಿ ಎ.ಜೆ. ಆಸ್ಪತ್ರೆಗೆ ಒಳರೋಗಿಯಾಗಿ ಚಿಕಿತ್ಸೆ ಬಗ್ಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 122/2021 ಕಲಂ: 504, 506, 323, 324, 498(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ದಿನಾಂಕ 28/12/2021 ರಂದು ಸುಬ್ಬಣ್ಣ ಬಿ, ಪೊಲೀಸ್ ಉಪನಿರೀಕ್ಷಕರು, ಅಮಾಸೆಬೈಲು ಪೊಲೀಸ್ ಠಾಣೆ ಇವರು ಸಿಬ್ಬಂದಿಗಳೊಂದಿಗೆ ಹೊಸಂಗಡಿ ಘಾಟಿ ತಿರುವಿನಲ್ಲಿ ವಾಹನ ತಪಾಸಣೆ ಮಾಡಿಕೊಂಡಿರುವಾಗ ಹೊಸನಗರ ಕಡೆಯಿಂದ ಹುಲಿಕಲ್ ಮಾರ್ಗವಾಗಿ ನೀಲಿ  ಬಣ್ಣದ  KA-20-MB-1023 ನೇ ಮಾರುತಿ ಒಮಿನಿ ವಾಹನವೊಂದು ಅನುಮನಾಸ್ಪದವಾಗಿ ಬರುತ್ತಿದ್ದುದಾಗಿ ದೊರೆತ ಮಾಹಿತಿಯಂತೆ ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಕಡೆಗೆ ಬರುತ್ತಿದ್ದ ನೀಲಿ ಬಣ್ಣದ KA-20-MB-1023 ನೇ ಮಾರುತಿ ಒಮಿನಿ ಕಾರನ್ನು  ನಿಲ್ಲಿಸುವಂತೆ ಸೂಚನೆ ನೀಡಿದ್ದು ಕಾರಿನಲ್ಲಿ  ಚಾಲಕನಲ್ಲದೆ ಮತ್ತೊಬ್ಬ ವ್ಯಕ್ತಿ ಇದ್ದು ಒಮಿನಿ ಕಾರು ಚಾಲಕನು ಇಲಾಖಾ ಜೀಪನ್ನು ಕಂಡು  ಕಾರನ್ನು ನಿಲ್ಲಿಸಿದಂತೆ ನಿಧಾನಿಸಿ ನಂತರ ನಿಲ್ಲಿಸದೆ ಹೊಸಂಗಡಿ ಕಡೆಗೆ ಹೋಗಿದ್ದು ಕಾರನ್ನು ಬೆನ್ನಟ್ಟಿಕೊಂಡು ಹೋಗುವಾಗ  ಹುಲಿಕಲ್ ಘಾಟಿಯ ತಿರುವಿನಲ್ಲಿ ಕಾರಿನಲ್ಲಿದ್ದ ವ್ಯಕ್ತಿಯು ಕಾರಿನೊಳಗಿದ್ದ ಯಾವುದೋ ಗೋಣಿಯ ಕಟ್ಟನ್ನು ರಸ್ತೆ ಬದಿಯ ಹಾಡಿಯಲ್ಲಿ ಬಿಸಾಡಿ ಮುಂದಕ್ಕೆ ವೇಗವಾಗಿ ಚಲಾಯಿಸಿಕೊಂಡು ವಾಹನವನ್ನು ಸಿದ್ದಾಪುರದಲ್ಲಿ ಬಿಟ್ಟು ಓಡಿ ಹೋಗಿದ್ದು ವಾಹನದಲ್ಲಿ ರಕ್ತದ ಕಲೆಗಳಿದ್ದು ನಂತರ ಹೊಸಂಗಡಿ ಹುಲಿಕಲ್ ಘಾಟಿ ತಿರುವಿನಲ್ಲಿ ಆರೋಪಿತರು ಕಾರಿನಿಂದ ಬಿಸಾಕಿದ ಗೋಣಿಯ ಕಟ್ಟನ್ನು ಪರಿಶೀಲಿಸಲಾಗಿ ಅದರ  ಒಳಗಡೆ  ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಲಕೋಟೆಯಲ್ಲಿ ಕಟ್ಟಿದ ಒಂದುವರೆ ಕೆ ಜಿ ತೂಕದ ಮೇಲ್ನೋಟಕ್ಕೆ ದನದ ಮಾಂಸದಂತೆ ಕಂಡು ಬರುವ 20 ಮಾಂಸದ ಪ್ಯಾಕೆಟು ಇರುವುದು ಕಂಡು ಬಂತು ಅದರ  ಮೌಲ್ಯ 6,000/- ರೂಪಾಯಿ ಆಗಿದ್ದು, ವಾಹನದ ಮೌಲ್ಯ 2 ಲಕ್ಷ ರೂಪಾಯಿಗಳಾಗಿರುತ್ತದೆ. ದನದ ಮಾಂಸವನ್ನು ಆರೋಪಿತರು ಎಲ್ಲಿಯೋ ಜಾನುವಾರುಗಳನ್ನು ಕಳವು ಮಾಡಿ ಮಾಂಸಕ್ಕಾಗಿ ಜಾನುವಾರನ್ನು ವಧೆ ಮಾಡಿ ಮಾಂಸವನ್ನು ಪರವಾನಿಗೆಯಿಲ್ಲದೆ ಸಾಗಾಟ ಮಾಡುತ್ತಿದ್ದು ತಪಾಸಣೆ ನಡೆಸಿದಾಗ ತನ್ನ ಆರೋಪವನ್ನು ಮುಚ್ಚಿ ಹಾಕಲುಮಾಂಸವನ್ನುಕಾಡಿನಲ್ಲಿ ಬಿಸಾಡಿ ಓಡಿ ಹೋಗಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ: 4 , 5, 7, 12 The Karnataka prevention of slaughter and preservation of cattle ordinance Act 2020 ಕಲಂ 379 , 201 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬೈಂದೂರು: ದಿನಾಂಕ 27/12/2021 ರಂದು ಚಂದ್ರ, ಹೆಡ್ ಕಾನ್ಸಟೇಬಲ್, ಬೈಂದೂರು  ಪೊಲೀಸ್ ಠಾಣೆ ಇವರು ರಾತ್ರಿ ರೌಂಡ್ಸ್  ಕರ್ತವ್ಯದ ಬಗ್ಗೆ  ತೆರಳಿದ್ದು, ದಿನಾಂಕ 28/12/2021 ರಂದು ಬೆಳಿಗ್ಗೆ 04:00 ಗಂಟೆಗೆ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್  ಕಾರು ನಂಬ್ರ KA-20-Z-7184 ನೇಯದು ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದು ಕಾರು ನಾವುಂದ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿರವುದಾಗಿ ಬಂದ ಮಾಹಿತಿಯಂತೆ   ಸಿಬ್ಬಂದಿಯವರೊಂದಿಗೆ ನಂದನವನ ಗ್ರಾಮದ ಕಟ್ಗೇರಿ ಕಾಸ್ ಬಳಿಯ ಯೂ-ಟರ್ನ್ ಬಳಿ ಹೋದಾಗ ನಾವುಂದ ಕಡೆಯಿಂದ ಒಂದು ಬಳಿ ಬಣ್ಣದ ಕಾರು ಬೈಂದೂರು ಕಡೆಗೆ ವೇಗವಾಗಿ ಬರುತ್ತಿದ್ದು ಅದರ ನಂಬ್ರ ನೋಡಲಾಗಿ KA-20-Z-7184 ಆಗಿದ್ದು ಕಾರಿನಲ್ಲಿ 2-3 ಮಂದಿ ಇದ್ದು ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ್ಯೂ ಕಾರನ್ನು ಅದರ ಚಾಲಕ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದು  ಕಾರನ್ನು ಹಿಂಬಾಲಿಸಿದಾಗ ಕಾರಿನ ಚಾಲಕನು ಕಾರನ್ನು ಉಪ್ಪುಂದ ಅಂಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿ 66 ನೇದರಿಂದ ಸರ್ವೀಸ್ ರಸ್ತೆಗೆ ತಿರುಗಿಸಿದ ಪರಿಣಾಮ ಕಾರು ರಸ್ತೆಯ ತಡೆಗೋಡೆಗೆ ಢಿಕ್ಕಿ ಹೊಡೆದು ನಂತರ ಬಲಬದಿಗೆ ಡೋರ್ ಬಳಿ ಢಿಕ್ಕಿ ಹೊಡೆದು ಸರ್ವೀಸ್ ರಸ್ತೆಯಿಂದ  ಕಟ್ಗೇರಿ ಕ್ರಾಸ್ ಬಳಿ ಯೂ ಟರ್ನ್ ನಲ್ಲಿ ಕಾರನ್ನು ತಿರುಗಿಸಿಕೊಂಡು ವೇಗವಾಗಿ ಬೈಂದೂರು ಕಡೆಗೆ ಚಲಾಯಿಸಿಕೊಂಡು ಹೋಗಿದ್ದು, ಸಿಬ್ಬಂದಿಗಳೊಂದಿಗೆ ಹುಡುಕಾಡುತ್ತಿರುವಾಗ ಬೆಳಿಗ್ಗೆ 08:00 ಗಂಟೆಗೆ ಮದ್ದೋಡಿ ರಸ್ತೆಯ ಬದಿಯ ಗೇರು ಫ್ಲಾಟ್ ನಲ್ಲಿ ನಿಲ್ಲಿಸಿದ್ದ ಬಳಿ ಬಣ್ಣದ ಕಾರನ್ನು ಪರಿಶೀಲಿಸಲಾಗಿ KA-20-Z-7184 ನಂಬ್ರದ  ಮಾರುತಿ ಸ್ವಿಪ್ಟ್ ಕಾರು ಆಗಿದ್ದು ಒಳಗಡೆ ಪರಿಶೀಲಿಸಲಾಗಿ  ಆರೋಪಿತರು ಒಂದು ಗಂಡು ಕರುವನ್ನು ಹಿಂಸಾತ್ಮಕವಾಗಿ ಉಸಿರುಗಟ್ಟುವ ರೀತಿಯಲ್ಲಿ ಕಾಲುಗಳನ್ನು ಹಾಗೂ ಕುತ್ತಿಗೆಯನ್ನು ಕಟ್ಟಿರುವುದು ಕಂಡು ಬಂದಿದ್ದು  ಅಲ್ಲದೇ ಕಾರಿನಲ್ಲಿ 3 ರೋಪ್ ಹಗ್ಗಗಳು ಇರುವುದು ಕಂಡು ಬಂದಿದ್ದು ಕಾರಿನ ಮೌಲ್ಯ ರೂಪಾಯಿ 3 ಲಕ್ಷ ಆಗಿದ್ದು, ಗಂಡು ಕರುವಿನ ಮೌಲ್ಯ ರೂಪಾಯಿ 1000/-  ಆಗಿರುತ್ತದೆ.  ಆರೋಪಿತರು ಠಾಣಾ ಪರಿಸರದಲ್ಲಿ ಗಂಡು ಕರುವನ್ನು ಎಲ್ಲಿಯೋ ಕಳ್ಳತನ ಮಾಡಿ ಮಾಂಸಮಾಡುವ ಉದ್ದೇಶದಿಂದ ಅಕ್ರಮವಾಗಿ ಪರವಾನಿಗೆ ಇಲ್ಲದೇ ಅವುಗಳಿಗೆ ಯಾವುದೇ ಮೇವು, ನೀರು ನೀಡದೇ, ಹಿಂಸೆಯಿಂದ ಉಸಿರುಗಟ್ಟುವ ರೀತಿಯಲ್ಲಿ ಕಾಲುಗಳನ್ನು ಕಟ್ಟಿ  ಮಾರುತಿ ಸ್ವಿಪ್ಟ್ ಕಾರು ನಂಬ್ರ KA-20-Z-7184 ವಾಹನದ ಪರವಾನಿಗೆಯನ್ನು ಉಲ್ಲಂಘಿಸಿ ಸಾಗಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 213/2021 ಕಲಂ: 379 ಐಪಿಸಿ ಮತ್ತು ಕಲಂ: 4, 5, 7, 12  ಕರ್ನಾಟಕ ಗೋ  ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧಿನಿಯಮ 2020 & 11(1) (ಡಿ) ಪ್ರಾಣಿಹಿಂಸೆ ನಿಷೇಧ ಕಾಯಿದೆ.ಮತ್ತು ಕಲಂ 66,192(ಎ) ಐ ಎಮ್ ವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.  
     

ಇತ್ತೀಚಿನ ನವೀಕರಣ​ : 29-12-2021 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080