ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಯೋಗೀಶ ಆಚಾರ್ಯ (60), ತಂದೆ: ದಿ.ಚಂದ್ರಯ್ಯ ಆಚಾರ್ಯ, ವಿಳಾಸ:ಪಕ್ಕಾಲು ಹೌಸ್,ಪೆರ್ಡೂರುಗ್ರಾಮ ಮತ್ತು ಪೋಸ್ಟ್,ಉಡುಪಿ ತಾಲೂಕು ಇವರು ದಿನಾಂಕ 26/11/2022 ರಂದು ಮಧ್ಯಾಹ್ನ 1:30 ಗಂಟೆ ಸಮಯಕ್ಕೆ ತನ್ನ KA-20-L- 2643 ನೇ TVS MAX 100  ದ್ವಿ ಚಕ್ರ ವಾಹನದಲ್ಲಿ  ಸವಾರನಾಗಿ  ತಮ್ಮ  ದೇವರಾಜನನ್ನು  ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು  ರಾಷ್ಟ್ರೀಯ ಹೆದ್ದಾರಿ 169(ಎ) ರಸ್ತೆಯಲ್ಲಿ ಪೆರ್ಡೂರಿನಿಂದ ಪಕ್ಕಾಲಿನಲ್ಲಿರುವ ಮನೆಯ ಕಡೆಗೆ ಹೋಗುತ್ತಿದ್ದಾಗ ಚೌಂಡಿ ನಗರ ಎಂಬಲ್ಲಿನ ನಾರಾಯಣ ಎಂಬ ಟಾರೇಸ್ ಮನೆಯ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ  ಹಿಂದಿನಿಂದ KA-34-M-6366ನೇ ಕಾರನ್ನು ಅದರ ಚಾಲಕನು ಪಿರ್ಯಾದಿದಾರರ ದ್ವಿ ಚಕ್ರ ವಾಹನವನ್ನು  ಓವರ್‌ಟೇಕ್ ಮಾಡುವ ಭರದಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿ ಚಕ್ರ ವಾಹನದ  ಮುಂಭಾಗದ  ಬಲ ಭಾಗದ ಗಾರ್ಡ್ ಗೆ ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರು  ಮತ್ತು ಸಹಸವಾರ ದ್ವಿ-ಚಕ್ರ  ವಾಹನ ಸಮೇತ  ನೆಲಕ್ಕೆ ಬಿದ್ದ ಪರಿಣಾಮ  ತಲೆ, ಮುಖಕ್ಕೆ ರಕ್ತ ಗಾಯ ಹಾಗೂ ಕೈ ಕಾಲುಗಳಿಗೆ  ತರಚಿದ ಗಾಯ ಹಾಗೂ ಬೆನ್ನಿಗೆ ಗುದ್ದಿದ  ನೋವು ಉಂಟಾಗಿರುತ್ತದೆ. ಸಹಸವಾರನಿಗೆ ಮೈಕೈಗೆ ಸ್ವಲ್ಪ ಗುದ್ದಿದ ನೋವು  ಉಂಟಾಗಿರುತ್ತದೆ.  ನಂತರ  ಸ್ಥಳಕ್ಕೆ ಬಂದ ಪಿರ್ಯಾದಿದಾರರ ಮಗ ಮತ್ತು  ದೇವರಾಜರವರು ಆಂಬುಲೆನ್ಸ್ ನಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಅಪಘಾತ ಎಸಗಿದ  ಕಾರಿನ  ಚಾಲಕನು  ಅಪಘಾತದ ನಂತರ  ಸ್ಥಳದಿಂದ ಪರಾರಿಯಾಗಿರುತ್ತಾನೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/2022 ಕಲಂ : 279, 337 ಐಪಿಸಿ  & 134(A)(B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಹಿರಿಯಡ್ಕ: ದಿನಾಂಕ 26/11/2022 ರಂದು ಮಧ್ಯಾಹ್ನ 1:05 ಅಂಜಾರು ಬಸ್ ನಿಲ್ದಾಣದ ಬಳಿಯಲ್ಲಿ ಪ್ರಯಾಣಿಕರನ್ನು ಡ್ರಾಪ್ ಹಾಗೂ ಪಿಕ್‌ಅಪ್ ಮಾಡುವ ಸಲುವಾಗಿ  KA-20-B-9945 ನೇ ಎಸ್‌ವಿಟಿ ಬಸ್ ನಿಂತಿದ್ದು,  ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ  ಪ್ರಥಮ್ (11) ಈತನು ಬಸ್‌ನಿಂದ ಇಳಿಯುತ್ತಿದ್ದಾಗ  ಬಸ್ಸಿನ  ಚಾಲಕ ಸಂಶುದ್ದೀನ್  ಬಸ್‌ನ್ನು ನಿರ್ಲಕ್ಷ್ಯತನದಿಂದ ಒಮ್ಮೇಲೆ ಮುಂದಕ್ಕೆ ಚಲಾಯಿಸಿರುತ್ತಾನೆ. ಪರಿಣಾಮ ಪ್ರಥಮ್ ಬಸ್ಸಿನ ಬಾಗಿಲಿನಿಂದ ಹೊರಕ್ಕೆ ಎಸೆಯಲ್ಪಟ್ಟು ಕೆಳಕ್ಕೆ ಬಿದ್ದಿರುತ್ತಾನೆ. ಅಪಘಾತದಿಂದ  ಪ್ರಥಮ್‌ನ ತಲೆ ಹಣೆ ಮುಖಕ್ಕೆತೀವೃ ಸ್ವರೂಪದ ಗಾಯ ,ಹಲ್ಲುಗಳು ಉದುರಿ ಹೋಗಿರುತ್ತದೆ. ಮತ್ತು ಕೈ ಬೆರಳಿಗೆ ತರಚಿದ ಗಾಯ ಉಂಟಾಗಿರುತ್ತದೆ. ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಸಲಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 81/2022 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶಿವರಾಮ (51), ತಂದೆ: ಹಾವಳಿ, ವಾಸ:ಹಳಗೇರಿ , ಕಂಬದಕೋಣೆ ಗ್ರಾಮ , ಬೈಂದೂರು ತಾಲೂಕು ಉಡುಪಿ ಜಿಲ್ಲೆ ಇವರು  ದಿನಾಂಕ 28/11/2022 ರಂದು ಬೆಳಿಗ್ಗೆ  9:30 ಗಂಟೆಗೆ ದೇವರಿಗೆ ಪೂಜೆ ಮಾಡಿಸಲು ಹಣ್ಣುಕಾಯಿ, ಹೂವು ಹಾಗೂ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಮಗನೊಂದಿಗೆ  ಕಂಬದಕೋಣೆ ಗ್ರಾಮದ ಕೊಕ್ಕೇಶ್ವರ ದೇವಸ್ಥಾನಕ್ಕೆ ಹೋಗಿದ್ದು, ದೇವಸ್ಥಾನದ ಗರ್ಭಗುಡಿಯ ಬಳಿ ಆಪಾದಿತರಾದ ದೇವಸ್ಥಾನದ ಅರ್ಚಕರಾದ ಶೇಷಗಿರಿ ಕಾರಂತರು ಇದ್ದು,  ಪಿರ್ಯಾದಿದಾರರು ಹಾಗೂ ಅವರ ಮಗನನ್ನು ತಡೆದು ನಿಲ್ಲಿಸಿದ್ದು, ಪಿರ್ಯಾದಿದಾರರು ಶೇಷಗಿರಿ ಕಾರಂತ ರವರಲ್ಲಿ  ದೇವರಿಗೆ ಪೂಜೆ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದು ಅದಕ್ಕೆ ಆಪಾದಿತ ಶೇಷಗಿರಿ ಕಾರಂತರು ಒಪ್ಪದೇ ಇದ್ದು . ಆಪಾದಿತರು ಪಿರ್ಯಾದಿದಾರರು ಹಾಗೂ ಅವರ ಮಗನಿಗೆ  ಜಾತಿನಿಂದನೆ ಮಾಡಿ ದೇವಸ್ಥಾನಕ್ಕೆ ಪ್ರವೇಶ ಹಾಗೂ ಪೂಜೆಗೆ ನಿರಾಕರಿಸಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 231/2022 ಕಲಂ: 3 (1)(r), (s), (y), (za), (C) SC/ST ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 29-11-2022 09:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080