ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ:  ದಿನಾಂಕ: 29.11.2022 ರಂದು ಪಿರ್ಯಾದಿ: ಸೌರವ್‌ ಪೂಜಾರಿ, ಪ್ರಾಯ: 22 ವರ್ಷ, ತಂದೆ: ದಿನಕರ ಪೂಜಾರಿ, ವಾಸ: ಕಾರೋಲ್ ಗುಡ್ಡೆ, ಮಿಯಾರು ಅಂಚೆ ಮತ್ತು ಗ್ರಾಮ,ಇವರು ಮಿಯಾರು ಗ್ರಾಮದ ಕಾರೋಲುಗುಡ್ಡೆಯಲ್ಲಿರುವ ಮನೆಯಿಂದ ನಿಟ್ಟೆ ಕಾಲೇಜಿಗೆ  ಮೋಟಾರ್  ಸೈಕಲ್‌ನಲ್ಲಿ  ಹೋಗುತ್ತಿರುವಾಗ, ಎದುರಿನಿಂದ ಹತ್ತಿರದ ಮನೆಯ ಪಂಚಮ್ (22) ಎಂಬಾತನು ಮೋಟಾರ್ ಸೈಕಲ್‌KA20EV6553 ರಲ್ಲಿ  ಮನೆಯಿಂದ ನಿಟ್ಟೆ ಕಾಲೇಜಿಗೆ ಹೋಗುತ್ತಿದ್ದು ಬೆಳಿಗ್ಗೆ  08:00 ಗಂಟೆಗೆ ಕಾರ್ಕಳ ತಾಲೂಕು ಸಾಣೂರು  ಗ್ರಾಮದ ಕರಿಯಕಲ್ಲು ಶ್ರೀ ಲಕ್ಷ್ಮಿದೇವಿ ಕಲ್ಯಾಣ ಮಂಟಪದ ಬಳಿ ತಲುಪುವಾಗ ಲಕ್ಷ್ಮಿದೇವಿ ಕಲ್ಯಾಣ ಮಂಟಪದ ಕಂಪೌಂಡ್ ಒಳಗಿನಿಂದ  KA20M5107 ನ್ನು ಅದರ  ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ  ಮುಖ್ಯ ರಸ್ತೆಗೆ ಚಲಾಯಿಸಿಕೊಂಡು ಬಂದು ಪಂಚಮ್‌ಸವಾರಿ ಮಾಡುತ್ತಿದ್ದ  ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ  ಪರಿಣಾಮ ಮೋಟಾರ್ ಸೈಕಲ್‌ನೊಂದಿಗೆ  ರಸ್ತೆಗೆ  ಬಿದ್ದು ಎರಡೂ  ಕೈಗಳಿಗೆ ತರಚಿದ ಗಾಯಗಳಾಗಿದ್ದು ಎಡಕಾಲಿನ ಮೂಳೆ  ಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 143/2022 ಕಲಂ  279, 338 ಐಪಿಸಿ.  ಯಂತೆ  ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ:ದಿನಾಂಕ 28.11.2022 ರಂದು ಪಿರ್ಯಾದಿ: ಭಾರತೀಶ್‌ ಉಪಾಧ್ಯಾಯ (28). ತಂದೆ: ಶ್ರೀಪತಿ ಉಪಾಧ್ಯಾಯ, ವಾಸ: ಅಣ್ಣ ಹತ್ವಾರ್‌ ಬೆಟ್ಟು, ಕೊರವಾಡಿ ಕ್ರಾಸ್‌, ಕುಂಭಾಶಿ ಗ್ರಾಮ ರವರು ಮಂಗಳೂರಿನಲ್ಲಿ ಹೊಸ ರೋಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಮೋಟಾರ್‌ ಸೈಕಲನ್ನು ( ಇಂಜಿನ್‌ ನಂ: D4A5F1NK206856, ಚಾಸೀಸ್‌ ನಂ. ME3D4B5F1NK000452) ಖರೀದಿಸಿ, ಅದನ್ನು ಸವಾರಿ ಮಾಡಿಕೊಂಡು ಮಂಗಳೂರಿನಿಂದ ಮನೆಗೆ ಹೊರಟು ರಾಹೆ 66 ರಲ್ಲಿ ಕುಂದಾಪುರ ಕಡೆಗೆ ಹೋಗುತ್ತಾ ಮಧ್ಯಾಹ್ನ 3:30 ಗಂಟೆಯ ಸಮಯಕ್ಕೆ ವಾರಂಬಳ್ಳಿ ಗ್ರಾಮದ, ಬ್ರಹ್ಮಾವರ ಹೈಡ್ರೋಟೆಕ್‌ ಇಂಜಿನಿಯರಿಂಗ್‌ ಶಾಪ್‌ ಎದುರುಗಡೆ ತಲುಪುವಾಗ ಅವರ ಮುಂದುಗಡೆ ರಾಷ್ಟ್ರೀಯ ಹೆದ್ದಾರಿಯ ಎಡಬದಿ ದಕ್ಷಿಣ ದಿಕ್ಕಿನ ಮಣ್ಣು ರಸ್ತೆಯಲ್ಲಿ KA.04.MH.2651ನೇ ಸ್ವೀಪ್ಟ್‌ ಕಾರನ್ನು ಚಲಾಯಿಸುತ್ತಿದ್ದ ಆರೋಪಿ ಅಕ್ಬರ್‌  ಅಹಮ್ಮದ್‌ ರವರು ಯಾವುದೇ ಸೂಚನೆ ನೀಡದೇ ನಿರ್ಲಕ್ಷತನದಿಂದ ಒಮ್ಮೇಲೆ ಕಾರನ್ನು ರಾಷ್ಟ್ರೀಯ ಹೆದ್ದಾರಿಗೆ ಚಲಾಯಿಸಿದ ಪರಿಣಾಮ ಫಿರ್ಯಾದುದಾರರು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ ಆರೋಪಿಯ ಕಾರಿನ ಬಲ ಹಿಂಭಾಗಕ್ಕೆ ತಾಗಿ ಫಿರ್ಯಾದುದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಯ ಮೇಲೆ ಬಿದ್ದರು. ಈ ಅಪಘಾತದಿಂದ ಪಿರ್ಯಾದುದಾರರ ಎಡಕೈ ಮಣಿಗಂಟು ಮೂಳೆ ಮುರಿತ, ಭುಜಕ್ಕೆ ಒಳ ಜಖಂ ಹಾಗೂ ಎಡಕಾಲಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ  201/2022 ಕಲಂ : 279, 338 ಐಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.
 • ಕೋಟ :ಪಿರ್ಯಾದಿ ಹರ್ಷ ಶೆಟ್ಟಿ  (37),   ತಂದೆ  ಪ್ರಭಾಕರ  ಶೆಟ್ಟಿ,  ವಾಸ: ನಾಗರಮಠ  ಹೆಬ್ಬಾಗಿಲು ಮನೆ, ಬಾರ್ಕೂರು,  ಹೇರಾಡಿ  ಗ್ರಾಮ ಇವರು ದಿನಾಂಕ  25/11/2022  ರಂದು  ಮಧ್ಯಾಹ್ನ ತನ್ನ  ಅಗತ್ಯದ  ಕೆಲಸದ  ಬಗ್ಗೆ  ಶಿರೂರು ಮೂರುಕೈ  ಕಡೆಯಿಂದ  ಸಾಬ್ರಕಟ್ಟೆ  ಕಡೆಗೆ  ಹೋಗುತ್ತಿರುವಾಗ  ಬಂಡಾರ್ತಿ ಬಸ್‌‌‌ಸ್ಟಾಪ್‌‌‌‌‌‌ನ  ಸ್ವಲ್ಪ ಹಿಂದೆ  ತಲುಪಿದಾಗ  ಪಿರ್ಯಾದಿದಾರರ   ಹಿಂದಿನಿಂದ    ಕೆ.ಎ-20-ಇಝಡ್‌‌‌-7857  ನೇ ಸ್ಕೂಟರ್‌‌‌‌ನ್ನು  ಅದರ ಸವಾರನು  ಹಿಂಬದಿ  ಒಬ್ಬರನ್ನು  ಕುಳ್ಳಿರಿಸಿಕೊಂಡು  ಅತೀವೇಗ,  ಅಜಾಗರೂಕತೆ  ಹಾಗೂ  ನಿರ್ಲಕ್ಷತನದಿಂದ  ಸವಾರಿ  ಮಾಡಿಕೊಂಡು ಬಂದು ಪಿರ್ಯಾದಿದಾರರ   ಮೋಟಾರು  ಸೈಕಲ್‌‌‌‌‌‌‌‌ನ್ನು  ಓವರ್‌‌‌‌‌‌ಟೇಕ್‌‌‌‌‌‌ ಮಾಡಿ  ಮುಂದೆ  ಹೋಗಿ ಹಂಪ್‌‌‌‌ನ್ನು  ನೋಡಿ  ಒಮ್ಮೆಲೇ  ಬ್ರೇಕ್‌‌‌‌  ಹಾಕಿದ  ಪರಿಣಾಮ ಹತೋಟಿ  ತಪ್ಪಿ  ಮೋಟಾರು  ಸೈಕಲ್‌‌‌‌‌‌ ಸಮೇತ ರಸ್ತೆಗೆ  ಬಿದ್ದರು.  ಆಗ  ಸಮಯ  ಮಧ್ಯಾಹ್ನ ಸುಮಾರು  2:45  ಗಂಟೆಯಾಗಿರುತ್ತದೆ.  ಸ್ಕೂಟರ್‌‌‌ನ   ಹಿಂಬದಿ ಸವಾರರಾಗಿದ್ದ  ಗಾಯಾಳು  ಪರಿಚಯದ  ಶೇಖರ  ಶೆಟ್ಟಿಯಾಗಿದ್ದು,  ಅವರ  ಮುಖಕ್ಕೆ ತೀವ್ರ  ತರದ  ಗಾಯ  ಹಾಗೂ  ಇತರ  ಭಾಗಗಳಿಗೆ  ಗಾಯವಾಗಿರುತ್ತದೆ.  ಸ್ಕೂಟರ್‌‌‌ನ್ನು  ಸವಾರಿ  ಮಾಡುತ್ತಿದ್ದ ವ್ಯಕ್ತಿಯನ್ನು  ವಿಚಾರಿಸಿದಾಗ  ಅವರ   ಹೆಸರು  ರಾಮಯ್ಯ  ಶೆಟ್ಟಿ  ಎಂಬುದಾಗಿ  ತಿಳಿಯಿತು.  ಅವರ  ಕೈಗೆ  ತರಚಿದ  ಗಾಯವಾಗಿರುತ್ತದೆ.      ಹಿಂಬದಿ  ಸವಾರ  ಶೇಖರ  ಶೆಟ್ಟಿಯನ್ನು    ಮಣಿಪಾಲ  ಕೆ.ಎಂ.ಸಿ.  ಆಸ್ಪತ್ರೆಗೆ ಕರೆದುಕೊಂಡು  ಹೋಗಿ  ಒಳರೋಗಿಯಾಗಿ  ದಾಖಲಿಸಿದ್ದಾಗಿದೆ. ಈ  ದಿನ  ಅವರ  ಸಂಬಂಧಿಕರು  ಪಿರ್ಯಾದಿದಾರರ ಮೊಬೈಲ್‌‌ಗೆ  ಕರೆ  ಮಾಡಿ  ಶೇಖರ  ಶೆಟ್ಟಿ  ಮಾತನಾಡುವ  ಸ್ಥಿತಿಯಲ್ಲಿ  ಇಲ್ಲದೇ  ಇದ್ದು,  ಪಿರ್ಯಾದಿ  ನೀಡಬೇಕಾಗಿ  ಕೇಳಿಕೊಂಡ ಮೇರೆಗೆ ಪಿರ್ಯಾದಿ  ನೀಡಿರುವುದಾಗಿದೆ.  ಈ ಬಗ್ಗೆ ಕೋಟ ಠಾಣಾ ಅ.ಕ್ರ  210/2022 ಕಲಂ: 279,  338 ಯಂತೆ ಪ್ರಕರಣ ದಾಕಲಿಸಲಾಗಿದೆ. 

ಕಳವು ಪ್ರಕರಣ

 • ಕುಂದಾಪುರ: ಪಿರ್ಯಾದಿ ರಾಮದಾಸ ಬುದ್ ವಂತ ಗಾವಂಕರ್, (50)  ವಾಸ: ಕಸಬ ಕೇಣಿ, ಅಂಕೋಲ ಇವರು ಕರ್ನಾಟಕ ರಾಜ್ಯ ತೆಂಗು ನಾರಿನ ಅಭಿವೃದ್ದಿ ನಿಗಮ ನಿಯಮಿತದ ವಿಭಾಗೀಯ ವ್ಯವಸ್ಥಾಪಕರಾಗಿದ್ದು ಕಳೆದ 4 ವರ್ಷದಿಂದ ಕುಂದಾಪುರ ತಾಲೂಕು ವಕ್ವಾಡಿಯಲ್ಲಿರುವ ತೆಂಗು ಮತ್ತು ನಾರಿನ ಘಟಕದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ತೆಂಗಿನ ಸಿಪ್ಪೆಯ ಬೆಲೆ ಹೆಚ್ಚಳದಿಂದ ಸದ್ರಿ ಘಟಕವು ಕಳೆದ 2 ವರ್ಷಗಳಿಂದ ಬಂದ್ ಮಾಡಿದ್ದು, ಮೋಹನ್ ಶೆಟ್ಟಿ ಎನ್ನುವವರನ್ನು ಸೆಕ್ಯೂರಿಟಿ ಕೆಲಸಕ್ಕೆ ನೇಮಿಸಿಕೊಂಡಿ ರುವುದಾಗಿದೆ. ದಿನಾಂಕ 22-11-2022 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 23/11/2022 ರಂದು ಬೆಳಿಗ್ಗೆ 08:00 ಗಂಟೆಯ ಮದ್ಯಾವಧಿಯಲ್ಲಿ  ಸದ್ರಿ ಘಟಕದ ಶೆಡ್ ನಲ್ಲಿ ಅಳವಡಿಸಿದ ತೆಂಗು ಮತ್ತು ನಾರಿನ ಉತ್ಪಾದನಾ ಕೇಂದ್ರಕ್ಕೆ ಸಂಬಂದಿಸಿದ ಕೊಳವೆ ಬಾವಿಯ ಸ್ಟಾರ್ಟರ್, ಮತ್ತು ಕೇಬಲ್ ವಯರ್, ಹಾಗೂ ಬೀಟರ್ ಯಂತ್ರದ ಕವರ್ ಮತ್ತು ಬಿಡಿ ಭಾಗಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ಅಂದಾಜು  50000/- ಆಗಬಹುದು. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 126-2022 ಕಲಂ: 379 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಬ್ರಹ್ಮಾವರ:  ಬ್ರಹ್ಮಾವರ ತಾಲೂಕು ಆರೂರು ಗ್ರಾಮ, ಕುಂಜಾಲು ಅಂಚೆ, ಮೇಲಡ್ಪು, ಶ್ರೀ ಗಣೇಶ ಕೃಪಾ ಮನೆಯಲ್ಲಿ ವಾಸವಾಗಿರುವ  ಪಿರ್ಯಾದಿ ಎ. ಭಾಸ್ಕರ ಶೆಟ್ಟಿ (61), ತಂದೆ: ದಿ. ಭುಜಂಗ ಶೆಟ್ಟಿ ಯವರು ಹಾಗೂ ಅವರ ಹೆಂಡತಿ  ದಿನಾಂಕ 28.11.2022 ರ ರಾತ್ರಿ 7:00 ಗಂಟೆಯಿಂದ ರಾತ್ರಿ 10:00 ಗಂಟೆಯ ಮಧ್ಯಾವಧಿಯಲ್ಲಿ ಮನೆಗೆ ಬೀಗ ಹಾಕಿ ಬ್ರಹ್ಮಾವರಕ್ಕೆ ಫಿರ್ಯಾದುದಾರರ ತಂಗಿಯ ಮೊಮ್ಮಗನ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ  ಹೋಗಿದ್ದಾಗ, ಸದ್ರಿ ಸಮಯ  ಯಾರೋ ಕಳ್ಳರು ಫಿರ್ಯಾದುದಾರರ ಮನೆಯ ಹಿಂಬಂದಿಯ ಕಂಪೌಂಡಿನ ಗೇಟ್‌ ತೆಗೆದು, ಮನೆಯ ಪೂರ್ವ ದಿಕ್ಕಿನ ಬಾಗಿಲಿಗೆ ಒಳಗಿನಿಂದ ಹಾಕಿದ ಚಿಲಕವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಮನೆಯ ಒಳಗಡೆ ಹೋಗಿ,  ಡೈನಿಂಗ್‌ ಹಾಲ್‌ ನಲ್ಲಿ ಇರಿಸಿದ್ದ ಗೊಡ್ರೇಜ್‌ ನ ಬೀಗ ಮುರಿದು ಬಟ್ಟೆಯನ್ನೆಲ್ಲಾ ಚೆಲ್ಲಾ ಪಿಲ್ಲಿ ಮಾಡಿ ಪರ್ಸ್‌ನೊಳಗಡೆ ಇರಿಸಿದ್ದ ಸುಮಾರು 3 ಗ್ರಾಂ. ತೂಕದ ರೂ. 10000/- ಮೌಲ್ಯದ ಚಿನ್ನದ ಉಂಗುರ, ತಲಾ 10 ಗ್ರಾಂ. ತೂಕದ ರೂ. 2080/- ಮೌಲ್ಯದ  4 ಬೆಳ್ಳಿಯ ಕಾಯಿನ್‌ , ರೂ. 5000/- ನಗದು ಅಲ್ಲದೇ ಬೆಡ್‌ ರೂಮ್‌ ನಲ್ಲಿದ್ದ ಕಪಾಟನ್ನು ತೆರೆದು ರೂ 9000/- ಬೆಲೆಯ ಹೊಸ ಸೀರೆಯನ್ನು ಕಳವು ಮಾಡಿ  ಕೊಂಡು ಹೋಗಿರುವುದಾಗಿದೆ. ಕಳವಾದ ಒಟ್ಟು ಸ್ವತ್ತಿನ ಬೆಲೆ ರೂ. 26,080/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ  199/2022 ಕಲಂ : 457, 380  IPC ಯಂತೆ ಪ್ರಕರಣ ದಾಕಲಿಸಲಾಗಿದೆ.
 • ಬ್ರಹ್ಮಾವರ: ದಿನಾಂಕ: 27/11/2022 ರಂದು  ಫಿರ್ಯಾದಿ ವಿರೇಶ್‌ (25೦, ತಂದೆ: ಸುಧಾಕರ ಪೂಜಾರಿ, ವಾಸ: ಅಂಜಾಲು, ಮೇಲ್ಮನೆ, ಮಟಪಾಡಿ ಗ್ರಾಮ ಇವರು ತನ್ನ ಕೆಎ.20.ಇಇ.1252ನೇ ಯಮಾಹಾ ಮೋಟಾರ ಸೈಕಲ್‌ಯನ್ನು ರಾತ್ರಿ 11:30 ಗಂಟೆಗೆ ವಾರಂಬಳ್ಳಿ ಗ್ರಾಮದ ಸಿಟಿ ಸೆಂಟರ್‌ ಎದುರುಗಡೆಯಿರುವ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿ ಸಿಟಿ ಸೆಂಟರ್‌ ಒಳಗೆ ಇರುವ ಕುಂಕುಮ ಹಾಲ್‌ನಲ್ಲಿ ಡೆಕೋರೇಟ್‌ ಕೆಲಸ ಮುಗಿಸಿಕೊಂಡು ದಿನಾಂಕ: 28/11/2022ರಂದು ಬೆಳಿಗ್ಗೆ 8:30 ಗಂಟೆಗೆ ಬಂದು ನೋಡಿದಾಗ ಅವರ ಮೋಟಾರ ಸೈಕಲ್‌ಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಕಳವಾದ ಮೋಟಾರ ಸೈಕಲ್‌ನ ಬೆಲೆ ರೂ. 35,000/- ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ  200/2022 ಕಲಂ : 379 ಐಪಿಸಿ ಯಂತೆ ಪ್ರಕರಣ ದಾಕಲಿಸಲಾಗಿದೆ.

ಇತ್ತೀಚಿನ ನವೀಕರಣ​ : 29-11-2022 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080