ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 27/11/2021 ರಂದು 17:30 ಗಂಟೆಗೆ ಕಾರ್ಕಳ ತಾಲೂಕು, ನಲ್ಲೂರು ಗ್ರಾಮದ ಪುಚ್ಚೆ ಬೆಟ್ಟು ಶಾಲೆಗೆ ಹತ್ತಿರವಿರುವ ಮೂಡುಮನೆ ಎಂಬಲ್ಲಿ ಹಾದು ಹೋಗುವ ಪುಚ್ಚೆಬೆಟ್ಟು-ಚೆಂಡೆ ಕ್ರಾಸ್ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪ್ರಶಾಂತ್ ನಾಯಕ್ ಎಂಬವರು  ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನ ನಂಬ್ರ KA20AB1335 ನೇಯದನ್ನು ಪುಚ್ಚೆಬೆಟ್ಟು ಶಾಲೆ ಕಡೆಯಿಂದ ಚೆಂಡೆ ಕ್ರಾಸ್ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ತನ್ನ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಪಿರ್ಯಾದುದಾರರಾದ ಕಿರಣ್ ಶೆಟ್ಟಿಯವರು ಚೆಂಡೆ ಕ್ರಾಸ್ ಕಡೆಯಿಂದ ಪುಚ್ಚೆಬೆಟ್ಟು ಕ್ರಾಸ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ KA20W0229 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಿರಣ್ ಶೆಟ್ಟಿಯವರ ಎಡಕಾಲಿನ ಮೊಣಗಂಟಿಗೆ ಗುದ್ದಿದ ರೀತಿಯ ನೋವು ಹಾಗೂ ಬಲಕಾಲಿನ ಮೊಣಗಂಟಿನ ಬಳಿ ತರಚಿದ ರೀತಿಯ ರಕ್ತ ಗಾಯ ಆಗಿರುತ್ತದೆ. ಈ  ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 136/2021 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ 28/11/2021 ರಂದು ಪಿರ್ಯಾದಿ ಮಂಜುನಾಥ ಇವರು ತನ್ನ ಬಾಬ್ತು KA-11-B-4618 ನೇ SWIFT ಕಾರಿನಲ್ಲಿ ವೀರಭದ್ರಗೌಡ ಮತ್ತು ದಿನೇಶ್ ರವರನ್ನು ಕುಳ್ಳಿರಿಸಿಕೊಂಡು ಸೋಮೇಶ್ವರ ಮುಖೇನ ಹಾಲಾಡಿ ಕಡೆಗೆ ಹೋಗುತ್ತಿರುವುವಾಗ ಅವರು ಸಮಯ ಸುಮಾರು ಬೆಳಿಗ್ಗೆ 10-00 ಗಂಟೆಗೆ ನಾಡ್ಪಾಲು ಗ್ರಾಮದ ದುಳ್ಳಿ ಎಂಬಲ್ಲಿಗೆ ತಲುಪಿದಾಗ ಅವರ ಎದುರುಗಡೆಯಿಂದ ಅಂದರೆ ಹಾಲಾಡಿ ಕಡೆಯಿಂದ ಸೋಮೇಶ್ವರ ಕಡೆಗೆ KA-19-MJ-5543 ನೇ ಕಾರನ್ನು ಅದರ ಚಾಲಕ ಶಿವಪ್ರಸಾದ್ ಇವರು ಕಾರಿನಲ್ಲಿ ತನ್ನ ಸಂಬಂಧಿಕರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಕಾರು ಜಖಂ ಅಗಿರುವುದಲ್ಲದೇ KA-11-B-4618 ನೇ SWIFT ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ, ವೀರಭದ್ರಗೌಡ ಮತ್ತು ದಿನೇಶ್ ರವರಿಗೆ ಹಾಗೂ ಅಪಘಾತ ಪಡಿಸಿದ  KA-19-MJ-5543 ನೇ ಕಾರಿನಲ್ಲಿದ್ದ ಹರಿಶ್ಚಂದ್ರ, ರಶ್ಮಿ, ಚಾಯಂಕ್, ವಿಯಾಂಕ್, ಭುವನ್, ನಿಹಾನ್  ಇವರುಗಳಿಗೆ ಮೂಳೆ ಮುರಿತದ ಮತ್ತು ತರಚಿದ ಗಾಯವಾಗಿರುವುದಲ್ಲದೇ ಅಪಾದಿತ ಶಿವಪ್ರಸಾದ್ ಇವರಿಗೂ ಗಾಯವಾಗಿದ್ದು. ಈ ಅಪಘಾತವು KA-19-MJ-5543 ನೇ ಕಾರಿನ ಚಾಲಕ ಶಿವಪ್ರಸಾದ್ ಇವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಅಗಿರುವುದಾಗಿರುತ್ತದೆ.  ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 69/2021 ಕಲಂ:  279  337  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ ರೆವರೆಂಡ್‌ ಕಿಶೋರ್‌ ಇವರು ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಮಿಶನ್‌ ಕಂಪೌಂಡ್‌ ಸಿ.ಎಸ್‌.ಐ ಜುಬಿಲಿ ಚರ್ಚ್‌ನ ಫಾದರ್‌ ಆಗಿದ್ದು, ದಿನಾಂಕ 28/11/2021 ರಂದು 13:00 ಗಂಟೆಗೆ ಒಬ್ಬ ವ್ಯಕ್ತಿ ಸದ್ರಿ ದೇವಾಲಯದ ಹಂಚುಗಳನ್ನು ತೆಗೆದು ಒಳಪ್ರವೇಶಿಸಿ, ದೇವಾಲಯದಲ್ಲಿದ್ದ ನಗದು ರೂ. 9,500/- ಹಾಗೂ ಒಂದು ಟ್ಯಾಬ್‌ ಅನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಟ್ಯಾಬ್‌ ನ ಮೌಲ್ಯ ರೂ. 10,000/-  ಆಗಬಹುದು. ಈ  ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 174/2021 ಕಲಂ 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ದಿನಾಂಕ: 28/11/2021 ರಂದು ಪಿರ್ಯಾದಿ ಯೊಗೀಶ ವಿ ಸಾಲಿಯಾನ ಇವರು ತನ್ನ ಸ್ನೇಹಿತ ಸಂದೀಪ್‌ ರವರೊಂದಿಗೆ ಮೊಟಾರು ಸೈಕಲ್‌ ನಲ್ಲಿ ಹಿರಿಯಡ್ಕದಿಂದ ಉಡುಪಿಕಡೆಗೆ ಹೊಗುತ್ತಿದ್ದಾಗ ಮಧ್ಯಾಹ್ನ 3:00 ಗಂಟೆ ಸಮಯಕ್ಕೆ ಪರ್ಕಳ ತಲುಪಿದಾಗ ಅರ್ಷದ್‌ ಎಂಬಾತನು ಅಪಘಾತಪಡಿಸಿದ ಕಾರಿಗೆ ತನ್ನ ಕಾರನ್ನು ಅಡ್ಡನಿಲ್ಲಿಸುವ ಭರದಲ್ಲಿ ಪಿರ್ಯಾದಿದಾರರ ಮೊಟಾರು ಸೈಕಲ್‌ ಅಪಘಾತವಾಗುವುದು ಸ್ವಲ್ಪದರಲ್ಲಿ ತಪ್ಪಿರುತ್ತದೆ ಆಗ ಪಿರ್ಯಾದಿದಾರರ ಅರ್ಷದ್‌ ನಲ್ಲಿ ಪ್ರಶ್ನಿಸಿದಾಗ ಮಾತಿನ ಚಕಮುಕಿ ಉಂಟಾಗಿದ್ದು ಆಗ ಅರ್ಷದ್‌ ಆತನ ಸಂಗಡಿಗರನ್ನು ಸ್ಥಳಕ್ಕೆ ಕರೆಯಿಸಿ ಎಲ್ಲರು ಸೇರಿ ಪಿರ್ಯಾದಿದಾರರನ್ನು ಉದ್ದೇಶಿಸಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಆಗ ಸಾರ್ವಜನಿಕರು ಸಮಾಧಾನ ಪಡಿಸಿ ಕಳುಹಿಸಿಕೊಟ್ಟಿದ್ದು ಪಿರ್ಯಾದಿದಾರರು ಮಣಿಪಾಲ ಕಡೆ ಬರುತ್ತಿದ್ದಾಗ ಅರ್ಷದ್‌ ಹಾಗೂ ಸಾರ್ವಜನಿಕರು ಪಿರ್ಯಾದಿದಾರರನ್ನು ಹಿಂಬಾಲಿಸಿಕೊಂಡು ಬಂದು ಮಣಿಪಾಲದ ಬಬ್ಬುಸ್ವಾಮಿ ದೇವಸ್ಥನದ ಬಳಿ ಅಡ್ಡಗಟ್ಟಿ ನಿಲ್ಲಿಸಿ 7 ರಿಂದ 8 ಜನ ಯುವಕರು ಪಿರ್ಯಾದಿದಾರರನ್ನು ಕಾಲಿನಿಂದ ತುಳಿದು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿರುತ್ತಾರೆ. ಈ  ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 154/2021 ಕಲಂ: 143, 147, 341, 323, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 28/11/2021 ರಂದು ಪಿರ್ಯಾದಿ ಅರ್ಷದ್ ಇವರು ತಮ್ಮ ಸಂಬಂದಿಕರೊಂದಿಗೆ ಮದುವೆ ಕಾರ್ಯ ಕ್ರಮದ ನಿಮಿತ್ತ ತಮ್ಮ ಬಲೆನೋ ಕಾರಿನಲ್ಲಿ ಉದ್ಯಾವರಕ್ಕೆ ಹೋಗಿ ವಾಪಾಸ್ ಬರುತ್ತಿದ್ದಾಗ ಮಧ್ಯಾಹ್ನ ಸುಮಾರು 3 ಗಂಟೆ ಸಮಯಕ್ಕೆ ಪರ್ಕಳದಲ್ಲಿ ಅವರ ಕಾರಿನ ಹಿಂದಿನಿಂದ ಒಂದು ಕಾರು ಆಕಸ್ಮಿಕವಾಗಿ ಡಿಕ್ಕಿ  ಹೊಡೆದಿರುತ್ತದೆ., ಆಗ ಪಿರ್ಯಾದಿದಾರರು ಅಪಘಾತ ಎಸಗಿದ ಕಾರಿಗೆ ತನ್ನ  ಕಾರನ್ನು ಅಡ್ಡ  ಇರಿಸಲು ಹೋದಾಗ ಆತ್ರಾಡಿ ಕಡೆಯಿಂದ ಬಂದ ಮೋಟಾರ್‌ ಸೈಕಲ್‌ ಸಹಸವಾರ ಯೊಗೀಶ ರವರು ಪಿರ್ಯಾದಿದಾರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ನೋಡಿ ಕಾರನ್ನು ಚಲಾಯಿಸಲು ಆಗುವುದಿಲ್ಲವಾ ಎಂದು ಹೇಳಿರುತ್ತಾನೆ. ಆಗ ಪಿರ್ಯಾದಿದಾರರು ಕಾರಿನಿಂದ ಇಳಿದು ಹೋದಾಗ ಆತನು ಅಡ್ಡಗಟ್ಟಿ ಕೈಯಿಂದ ಕುತ್ತಿಗೆಗೆ ಹೊಡೆದಿರುತ್ತಾನೆ, ಈ  ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 155/2021 ಕಲಂ: 341, 504, 323, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-11-2021 10:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080