ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 28/11/2021 ರಂದು ಪಿರ್ಯಾದಿದಾರರಾದ ಸಂತೋಷ್ ಆಚಾರ್ಯ ರವರು ಅವರ ಬಾಬ್ತು KA.20.MB.1564 ನೇ  i10 ಗ್ರ್ಯಾಂಡ್‌ ಕಾರಿನಲ್ಲಿ ಅವರ ಹೆಂಡತಿ, ಮಗಳು ಹಾಗೂ ತಮ್ಮ ರಾಜೇಶ್ ಆಚಾರ್ಯ ರವರೊಂದಿಗೆ ವಡ್ಡರ್ಸೆಯಿಂದ ಹಿರಿಯಡ್ಕದಲ್ಲಿರುವ ಮನೆಗೆ ಹೋಗುವಾಗ ಚೇರ್ಕಾಡಿ ಗ್ರಾಮದ ಮಡಿ ಎಂಬಲ್ಲಿ ಕಾರಿನ ಫ್ಯಾನ್‌ ಬೆಲ್ಟ್‌ ಕಟ್ಟಾಗಿದ್ದು, ಅದರ ರಿಪೇರಿ ಬಗ್ಗೆ ಅವರ ತಮ್ಮ ರಾಜೇಶ್ ಆಚಾರ್ಯರವರು ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊಂಡು ತುಂಡಾದ ಫ್ಯಾನ್‌  ಬೆಲ್ಟ್‌ ಅನ್ನು ರಿಪೇರಿ ಬಗ್ಗೆ ಮಾತು ಕತೆ ಮಾಡುತ್ತಿದ್ದಾಗ ಸಮಯ ರಾತ್ರಿ 7:30 ಗಂಟೆಯ ಸಮಯಕ್ಕೆ ಹಿರಿಯಡಕ ಕಡೆಯಿಂದ ಪೇತ್ರಿ ಕಡೆಗೆ ಆರೋಪಿ ವಿಜಯ್ ಕುಲಾಲ್ ಎಂಬವರು ಅವರ ಬಾಬ್ತು KA.20.D.8872 ನೇ ಆಟೋ ರಿಕ್ಷಾ  ವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೀರಾ ಬಲ ಭಾಗಕ್ಕೆ ಚಲಾಯಿಸಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಕಾರಿನ ಮುಂಭಾಗದಲ್ಲಿ ನಿಂತುಕೊಂಡಿದ್ದ ರಾಜೇಶ್ ಆಚಾರ್ಯ ರವರಿಗೆ ಡಿಕ್ಕಿ ಹೊಡೆದು ಬಳಿಕ ಪಿರ್ಯಾದಿದಾರರ ಕಾರಿಗೆ ತಾಗಿರುತ್ತದೆ. ಈ ಅಪಘಾತದ ಪರಿಣಾಮ ರಾಜೇಶ್ ಆಚಾರ್ಯ ರವರ ಸೊಂಟದ ಎಡ ಭಾಗಕ್ಕೆ ಒಳ ಜಖಂ ಉಂಟಾಗಿರುತ್ತದೆ. ಗಾಯಗೊಂಡ ರಾಜೇಶ್ ಆಚಾರ್ಯ ರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ  ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 195/2021 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 29/11/2021 ರಂದು ಬೆಳಿಗ್ಗೆ  ಸುಮಾರು 10:20 ಗಂಟೆಗೆ, ಕುಂದಾಪುರ  ತಾಲೂಕಿನ, ಕಾಳಾವರ ಗ್ರಾಮದ   ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಹಾಲು ಡೈರಿ ಹತ್ತಿರ ಕಾಂಕ್ರೀಟ್  ರಸ್ತೆಯಲ್ಲಿ ಆಪಾದಿತ ಚರಣ್ ರಾಜ್  ಎಂಬವರು KA 20 EN 0507  ನೇ ಬುಲೇಟ್ ಬೈಕನ್ನು ಕಾಳಾವರ ಜಂಕ್ಷನ್  ಕಡೆಯಿಂದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ರಸ್ತೆಯ ತೀರಾ ಬಲ ಬದಿಗೆ ಸವಾರಿ ಮಾಡಿಕೊಂಡು ಬಂದು ಕಾಳಾವರ ಶ್ರೀ ಸುಬ್ರಹ್ಮಣ್ಯ  ದೇವಸ್ಥಾನದ  ಕಡೆಯಿಂದ ಕುಂದಾಪುರ ಕಡೆಗೆ  ನಾಗೇಂದ್ರ ಆಚಾರ್ಯ ಎಂಬುವರು ಮಹಾಬಲ ಆಚಾರ್ಯ ಎಂಬುವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿದ್ದ   KA19EJ5605 ನೇ ಬೈಕಿಗೆ ಮುಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎರಡೂ ಬೈಕಿನವರು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ನಾಗೇಂದ್ರ ರವರಿಗೆ  ಬಲಕೈ ಬೆರಳುಗಳಿಗೆ ಹಾಗೂ ಸೊಂಟಕ್ಕೆ ಒಳನೋವಾಗಿದ್ದು ಕೋಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು ಮಹಾಬಲ ಆಚಾರ್ಯ ಎಂಬುವರಿಗೆ ತಲೆಗೆ ರಕ್ತಗಾಯವಾಗಿದ್ದು ಸದ್ರಿಯವರಿಗೆ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಕೆ ಎಂ ಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು  ಹೋಗಿರುತ್ತಾರೆ ಹಾಗೂ ಆಪಾದಿತ ಚರಣ್ ರಾಜ್ ಎಂಬುವರಿಗೆ  ಎರಡು ಕೈಗಳಿಗೆ  ಗಾಯ ನೋವು ಉಂಟಾಗಿ  ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ  ಬಗ್ಗೆ ಕುಂದಾಪುರ ಸಂಚಾರ  ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 98/2021 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಲ್ಪೆ: ಸಕ್ತಿವೇಲು ಈ, ಪಿಎಸ್‌ಐ ಮಲ್ಪೆ ಪೊಲೀಸ್ ಠಾಣೆ ರವರಿಗೆ ದಿನಾಂಕ:28-11-2021 ರಂದು ರಾತ್ರಿ 10:30 ಗಂಟೆಗೆ ಸಾರ್ವಜನಿಕರೊಬ್ಬರು  ಕರೆ ಮಾಡಿ ಹೂಡೆ ಕಡೆಯಿಂದ ಒಂದು ಅಕ್ರಮ ಮರಳು ತುಂಬಿದ ಲಾರಿಯ ಚಾಲಕನು ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಅಪಾಯಕಾರಿಯಾಗಿ  ಹಂಪನಕಟ್ಟೆ ಜಂಕ್ಷನ್‌ ನಲ್ಲಿ ನಮ್ಮ ಜೀವಕ್ಕೆ ಹಾನಿ ಆಗುವ ರೀತಿಯಲ್ಲಿ ಭಯದ ವಾತಾವರಣ ಸೃಷ್ಠಿಸಿ ಲಾರಿಯನ್ನು ಚಲಾಯಿಸಿಕೊಂಡು ಹೋಗಿರುವುದಾಗಿ ಹಾಗೂ ಹಂಪನಕಟ್ಟೆ ಆಟೋ ರಿಕ್ಷಾ ನಿಲ್ದಾಣದ ಹತ್ತಿರ ತುಂಬಾ ಸಾರ್ವಜನಿಕರು ಸೇರಿರುವುದಾಗಿ  ಕರೆ ಮಾಡಿ ತಿಳಿಸಿದ್ದು, ಠಾಣಾ ಸಿಬ್ಬಂದಿಯವರೊಂದಿಗೆ ಹಂಪನಕಟ್ಟೆ ಸ್ಥಳಕ್ಕೆ ರಾತ್ರಿ 11:00 ಗಂಟೆಗೆ  ಹೋದಾಗ ಸ್ಥಳದಲ್ಲಿದ್ದ ಕೆಲವು  ಸಾರ್ವಜನಿಕರು ಹೂಡೆಯ ಖದೀಮಿ ಜಾಮೀಯಾ ಮಸೀದಿಯ ಬಳಿ ಇರ್ಷಾದ್ ಕಡೆಯವರು ಅಕ್ರಮವಾಗಿ ಮರಳು ತೆಗೆಯುತ್ತಿರುವುದಾಗಿ ಮಾಹಿತಿ ತಿಳಿಸಿದ್ದು  ಪರಿಶೀಲನೆಗಾಗಿ ಸಿಬ್ಬಂದಿಯವರೊಂದಿಗೆ ಹೂಡೆಯ ಖದೀಮಿ ಜಾಮೀಯಾ ಮಸೀದಿಯ ಎದುರುಗಡೆ ರಾತ್ರಿ 11:15 ಗಂಟೆ ಸಮಯಕ್ಕೆ ಹೋಗುತ್ತಿರುವಾಗ ರಸ್ತೆಯ ಎರಡು ಬದಿಗಳಲ್ಲಿ  ಸೇರಿದ್ದ ಸುಮಾರು 10 ರಿಂದ 12 ಜನರ ಗುಂಪು ಸೇರಿ ಕೂಗಾಡುತ್ತಾ ಕಲ್ಲುಗಳನ್ನು ಪಿಎಸ್‌ಐ ಮಲ್ಪೆ ಪೊಲೀಸ್ ಠಾಣೆ ಇವರ ಮತ್ತು ಸಿಬ್ಬಂದಿಯವರ ಕಡೆಗೆ ತೂರಿದ ಪರಿಣಾಮ ಪಿಎಸ್‌ಐ ಮಲ್ಪೆ ಪೊಲೀಸ್ ಠಾಣೆ ಇವರ  ಖಾಸಗಿ ವಾಹನದ  ಮೇಲೆ ಕಲ್ಲುಗಳು ಬಿದ್ದು ವಾಹನದ ಎಡಭಾಗ ಜಖಂಗೊಂಡು ಹಾನಿಯಾಗಿರುತ್ತದೆ. ಪಿಎಸ್‌ಐ ಮಲ್ಪೆ ಪೊಲೀಸ್ ಠಾಣೆ ಇವರು ಮತ್ತು ಸಿಬ್ಬಂದಿಗಳು ವಾಹನದಿಂದ ಕೆಳಗೆ ಇಳಿದು ನೋಡಲಾಗಿ ಹೂಡೆ ನಿವಾಸಿಗಳಾದ ಇದಾಯತ್ , ಅಹಾದ್, ಅಲ್ಫಾಜ್, ಶಾಹಿಲ್, ಇರ್ಫಾನ್, ಇರ್ಷಾದ್ ಹಾಗೂ ಇತರ 3-4 ಜನರು ಆ ಗುಂಪಿನಲ್ಲಿ ಇದ್ದುದ್ದನ್ನು ಗುರುತಿಸಿದ್ದು ಸದರಿಯವರನ್ನು ಹಿಡಿಯಲು ಪ್ರಯತ್ನಿಸಲಾಗಿ ಅವರೆಲ್ಲರೂ ದಿಕ್ಕಾಪಾಲಾಗಿ ಓಡಿ ಹೋಗಿರುತ್ತಾರೆ. ನಂತರ ಸ್ಥಳದಲ್ಲಿ ಹೂಡೆಯ ಉರ್ದು ಶಾಲೆಯ ಹತ್ತಿರ ಗಸ್ತು ಮಾಡುತ್ತಿರುವಾಗ ರಾತ್ರಿ 12:45 ಗಂಟೆಗೆ ಪುನಃ ವಾಹನದ ಮೇಲೆ ಹಾಗೂ ಗಸ್ತು ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ಮಾಡಿದ್ದವರನ್ನು ವಾಹನದಿಂದ ಇಳಿದು ನೋಡಲಾಗಿ ಕತ್ತಲಲ್ಲಿ ಓಡಿ ಹೋಗಿರುತ್ತಾರೆ ಅಲ್ಲದೆ ಕೋಡಿಬೇಂಗ್ರೆಯ ಸಾರ್ವಜನಿಕರು ಕರೆ ಮಾಡಿ ಮಸೀದಿಯ ಹತ್ತಿರ ಯಾರೋ ದುಷ್ಕರ್ಮಿಗಳು ನಮ್ಮ   ವಾಹನದ ಮೇಲೆ ಕಲ್ಲು ತೂರಾಟ ಮಾಡಿರುತ್ತಾರೆ ಹಾಗೂ ರಸ್ತೆಯ ಮೇಲೆ ಹೋಗುವ ಸಾರ್ವಜನಿಕರ ಮೇಲೂ ಕಲ್ಲು ತೂರುತ್ತಿದ್ದಾರೆ ಎಂದು ಮಾಹಿತಿ ನೀಡಿರುತ್ತಾರೆ . ಆದ್ದರಿಂದ ಆರೋಪಿತ 1.ಇರ್ಷಾದ್ 2. ಅಹಾದ್ 3. ಅಲ್ಫಾಜ್ 4. ಶಾಹಿಲ್ 5.ಇರ್ಪಾನ್ 6.ಇದಾಯತ್  7, ಇತರ 4 ಜನರುಗಳು ಅಕ್ರಮ ಕೂಟ ಸೇರಿ ಕೈಯಲ್ಲಿ ಮಾರಕವಾದ ಕಲ್ಲುಗಳನ್ನು ಹಿಡಿದು ಸಮವಸ್ತ್ರ ಧರಿಸಿದ ಪಿಎಸ್‌ಐ ಮಲ್ಪೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ಮೇಲೆ ಹಾಗೂ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ಮಾಡಿ ಹಲ್ಲೆ ಮಾಡಿರುತ್ತಾರೆ ಮತ್ತು ಅಕ್ರಮ ಮರಳು ಗಣಿಗಾರಿಕೆ ನಡೆಸುವ ಸ್ಥಳಕ್ಕೆ ಪರಿಶೀಲನೆಗಾಗಿ  ಹೋಗದಂತೆ ಕಲ್ಲು ತೂರಿ ತಡೆದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಮತ್ತು ಪಿಎಸ್‌ಐ ಮಲ್ಪೆ ಪೊಲೀಸ್ ಠಾಣೆ ಇವರ ಖಾಸಗಿ ವಾಹನವನ್ನು ಜಖಂಗೊಳಿಸಿ ಹಾನಿ ಉಂಟು ಮಾಡಿರುತ್ತಾರೆ, ಈ  ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/2021  ಕಲಂ 427,341,143,144,147,148,149,152,279,336,353 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಕಾರ್ಕಳ: ಪಿರ್ಯಾದಿ ಶ್ರೀಮತಿ ವಸಂತಿ ಇವರ ತಮ್ಮ ಶೇಖರ ಪ್ರಾಯ 40 ವರ್ಷ ಈತನು ಪಿರ್ಯಾದುದಾರರ ಮನೆಯಾದ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿಯ ಶಿವಾನುಗ್ರಹ ಮನೆಯಿಂದ ದಿನಾಂಕ 24/11/2021 ರಂದು 08:45 ಗಂಟೆಗೆ ಕೆಲಸಕ್ಕೆಂದು ಬಟ್ಟೆಯ ಚೀಲ ತೆಗೆದುಕೊಂಡು ಹೋದವನು ಆತನ ಮನೆಯಾದ ರೆಂಜಾಳ ಗ್ರಾಮದ ನೆಲ್ಲಿದಡ್ಕಕ್ಕೂ ಹೋಗದೇ  ಸಂಬಂಧಿಕರ ಮನೆಗೂ ಹೋಗದೇ, ಇದುವರೆಗೆ ಮನೆಗೆ ವಾಪಾಸು ಬಾರದೇ ಕಾಣೆಯಾಗಿರುತ್ತಾನೆ. ಈ  ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 137/2021 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿ ರಾಮ ಇವರ ಅಣ್ಣ  ವಸಂತ ಪ್ರಾಯ : 44 ವರ್ಷ ರವರು ಪೆಂಟಿಂಗ್ ಕೆಲಸ ಮಾಡಿಕೊಂಡಿದ್ದು ಕೆಲವು ವರ್ಷಗಳಿಂದ ಕುಡಿತದ ಚಟವಿದ್ದು ಸರಿಯಾಗಿ ಕೆಲಸ ಮಾಡದೇ ಇದ್ದು ದಿನಾಂಕ 28-11-2021 ರಂದು ತನ್ನ ತಮ್ಮ ವಾಸುವಿನ ಮನೆಯಲ್ಲಿ ಮನೆ ಕೆಲಸಕ್ಕೆ ಹೋಗಿದ್ದು, ಸಂಜೆ 7.30 ಗಂಟೆಯ ಸಮಯಕ್ಕೆ ಕುಡಿದುಕೊಂಡು ಮನೆಗೆ ಬಂದು ಊಟ ಮಾಡಿ ರಾತ್ರಿ 8.00 ಗಂಟೆಗೆ ತನ್ನ ರೂಮಿಗೆ ಹೋಗಿ ಬಾಗಿಲ್ಲನ್ನು ಹಾಕಿಕೊಂಡು ಮಲಗಿದ್ದು ದಿನಾಂಕ 29-11-2021 ರಂದು ಬೆಳಗ್ಗೆ ಸುಮಾರು 07.30 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ  ತಾಯಿ ಜಲಜ ರವರು ವಸಂತನಿಗೆ ಎಬ್ಬಿಸಲು ಬಾಗಿಲು ಬಡಿದು ಕರೆದರೂ ಏಳದೇ ಇದ್ದು. ರೂಮಿನ ಕಿಟಕಿಯಿಂದ ನೋಡಿದಾಗ ವಸಂತನು ತನ್ನ ರೂಮಿನ ಫ್ಯಾನ್‌ಗೆ  ನೈಲಾನ್‌ ಹಗ್ಗದ ಒಂದು ತುದಿಯನ್ನು ಬೀಗಿದು ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಹಾಕಿಕೊಂಡು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 45/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಮೃತ ಜಾನ್‌ ಕೈಲೆಬ್ ಪ್ರಾಯ 78 ವರ್ಷ ರವರು  ಮಂಡ್ಯ  ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೋರಾಪುರ ಗೇಟ್‌ ಬಳಿಯ ಆಶ್ರಯಧಾತ ಚಾರಿಟೇಬಲ್‌ ಟ್ರಸ್ಟ್‌ ವೃದ್ಧಾಶ್ರಮದ ನಿವಾಸಿಯಾಗಿದ್ದವರು ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ:  28/11/2021 ರಂದು ವೃದ್ಧಾಶ್ರಮದ  ಇತರರೊಂದಿಗೆ  ಬ್ರಹ್ಮಾವರದ  ಸ್ನೇಹಾಲಯ  ವೃದ್ಧಾಶ್ರಮಕ್ಕೆ ಸೇರ್ಪಡೆಯಾಗುವ  ಸಲುವಾಗಿ  ಉಡುಪಿಗೆ  ಬರುವಾಗ  ರಾತ್ರಿ  10:00  ಗಂಟೆಯ ಸುಮಾರಿಗೆ  ಉಡುಪಿಯ  ಬಲಾಯಿಪಾದೆಯ  ಬಳಿ ತೀವ್ರ ಅಸ್ವಸ್ಥಗೊಂಡವರನ್ನು  ಚಿಕಿತ್ಸೆಯ ಬಗ್ಗೆ  ಅಜ್ಜರಕಾಡು ಜಿಲ್ಲಾಸ್ಪತ್ರೆಗೆ  ಕರೆ ತಂದಲ್ಲಿ  ರಾತ್ರಿ 11:00  ಗಂಟೆಯ ಸುಮಾರಿಗೆ ಪರೀಕ್ಷಿಸಿದ ವೈದ್ಯರು ಜಾನ್‌ ಕೈಲೆಬ್‌ ರವರು ಅದಾಗಲೇ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 50/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 29-11-2021 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080