ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ  ಮರಣ ಪ್ರಕರಣ

 • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ  ಲತಾ  ಹೆಗ್ಡೆ (36), ಗಂಡ: ಹರೀಶ  ಹೆಗ್ಡೆ, ವಾಸ: ಮಾಂಡಿ ಮೂರುಕೈ  ಮಡಾಮಕ್ಕಿ  ಗ್ರಾಮ ಹೆಬ್ರಿ  ತಾಲೂಕು ಇವರ  ತಂದೆ ರಾಜೀವ ಹೆಗ್ಡೆ (66) ಇವರು ವಿಪರೀತ ಮದ್ಯ ಸೇವನೆ  ಮಾಡುವ  ಚಟ  ಹೊಂದಿದ್ದು, ಅಲ್ಲದೆ   26 ವರ್ಷದಿಂದ  ಮನೆ  ಬಿಟ್ಟು  ಯಾವುದೇ  ಒಂದೆ  ಕಡೆ  ವಾಸವಿರದೇ   ಬೇರೆ  ಬೇರೆ  ಕಡೆ  ತಿರುಗಾಡಿಕೊಂಡಿದ್ದರು,  ಇದೇ  ವಿಷಯಗಳಲ್ಲಿ  ಜೀವನದಲ್ಲಿ  ಜಿಗುಪ್ಸೆ ಗೊಂಡು  ದಿನಾಂಕ  28/10/2022 ರಂದು  21:00 ಗಂಟೆಯಿಂದ  ದಿನಾಂಕ 29/10/2022 ರಂದು  ಬೆಳಿಗ್ಗೆ6:00 ಗಂಟೆಯ   ಮದ್ಯದ  ಅವಧಿಯಲ್ಲಿ ಕುಂದಾಪುರ ತಾಲೂಕು  ಸಿದ್ದಾಪುರ ಗ್ರಾಮದ ಸಿದ್ದಾಪುರ ಮಾರ್ಕೇಟ್‌ನ ಒಳಗಡೆ ಮಾರ್ಕೆಟ್‌ನ ಕಟ್ಟಡದ  ಪಕ್ಕಾಸಿಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 36/2022  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಚಂದ್ರ ಕುಂದರ್ (44), ತಂದೆ: ದಿ. ಬಸವ ಮರಕಾಲ, ವಾಸ: ಕುಸುಮ ನಿಲಯ ಕೋಟ ತಟ್ಟು ಪಡುಕೆರೆ ಕೋಟ ತಟ್ಟು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಮ್ಮ ಮೃತ ಸಂತೋಷ (38) ರವರು ಮನೆಯಲ್ಲಿ ತಂದೆ ಮೃತ ಪಟ್ಟ ನಂತರ ಒಬ್ಬರೇ ವಾಸ  ಮಾಡಿಕೊಂಡಿದ್ದು ತಾಯಿ ಅಸೌಖ್ಯದಿಂದ ಅಕ್ಕನ ಮನೆಯಲ್ಲಿದ್ದು ಅಲ್ಲದೇ ಇತ್ತೀಚೆಗೆ  ವಿಪರೀತ ಮದ್ಯಪಾನ ಕುಡಿತದ ಅಭ್ಯಾಸ ಇದ್ದವರು ಮದ್ಯಪಾನ ಕುಡಿಯುವ ಅಬ್ಯಾಸವನ್ನು ಬಿಟ್ಟಿದ್ದು ಈ ಎಲ್ಲಾ  ವಿಚಾರದಿಂದ ಮನನೊಂದು ಎಂದಿನಂತೆ  ಮನೆಯಲ್ಲಿ ಒಬ್ಬರೆ ಮಲಗಿದ್ದವರು  ದಿನಾಂಕ 29/10/2022 ರಂದು ಬೆಳಿಗ್ಗೆ 07:00 ಗಂಟೆಯಿಂದ 08:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಬೆಡ್ ರೂಮಿನ ಪಕ್ಕಾಸಿಗೆ ನೈಲಾನ್ ರೋಪ್ ಕಟ್ಟಿ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ . ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 46/2022  ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿದಾರರಾದ ಜೋಯಲ್ ಡಿಸೋಜಾ (21), ತಂದೆ: ಜೋಕಿಮ್ ಡಿಸೋಜಾ ವಾಸ: ಮೇಲ್ ಕೋಡಿ ಪಟ್ಲ ಹೌಸ್ , ಕುಂಜಿಬೆಟ್ಟು ಪೋಸ್ಟ್ ಪೆರಂಪಳ್ಳಿ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ  ತಂದೆ ಜೋಕಿಮ್ ಡಿಸೋಜಾ(61) ಅವರು ಟಿ ಬಿ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರು, ಅಲ್ಲದೇ ಅವರಿಗೆ ಹರ್ನಿಯಾ ಖಾಯಿಲೆ ಬಗ್ಗೆ ಶಸ್ತ್ರ ಚಿಕಿತ್ಸೆ ಕೂಡಾ ಆಗಿರುತ್ತದೆ, ನಂತರ ಸಕ್ಕರೆ ಖಾಯಿಲೆಯಿಂದ ಅವರಿಗೆ ಬಲಗೈ ನೋವು ಕಾಣಿಸಿಕೊಂಡಿರುತ್ತದೆ, ಜೋಕಿಮ್ ಡಿಸೋಜಾ  ರವರು ಅನಾರೋಗ್ಯದಿಂದ ಉಂಟಾದ  ನೋವನ್ನು ಸಹಿಸಲಾರದೆ ದಿನಾಂಕ 08/10/2022 ರಂದು ಸಂಜೆ ಸುಮಾರು 04:30 ಗಂಟೆಯಿಂದ 05:30 ಗಂಟೆಯ ಮಧ್ಯಾವಧಿಯಲ್ಲಿ  ಅವರ ವಾಸದ ಮನೆಯಲ್ಲಿ ಕೀಟನಾಶಕವನ್ನು ಸೇವಿಸಿ ಅಸ್ವಸ್ಥರಾದವರನ್ನು ಪಿರ್ಯಾದಿದಾರರು ಹಾಗೂ ಇತರರು ಸೇರಿ ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯ ICU-2  ವಿಭಾಗದಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದವರು ದಿನಾಂಕ 28/10/2022 ರಂದು ಸಂಜೆ 07:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುವುದಾಗದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 40/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ  ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಪುಷ್ಪಾವತಿ (51) ಇವರು ಕಾಪು ತಾಲೂಕು ಸಾಂತೂರು ಗ್ರಾಮ ಮುದರಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾದ್ಯಾಯಿನಿ ಆಗಿರುತ್ತಾರೆ. ದಿನಾಂಕ 28/10/2022 ರಂದು ಸಂಜೆ 17:00 ಗಂಟೆಗೆ ತರಗತಿ ಮುಗಿಸಿ ಎಲ್ಲಾ ಕೊಠಡಿ ಮತ್ತು ಶಾಲಾ ಕಛೇರಿಗೆ ಬೀಗ ಹಾಕಿ ಹೋಗಿದ್ದು,  ಯಾರೋ ಕಳ್ಳರು 28/10/2022 ರಂದು ಸಂಜೆ 17:00 ಗಂಟೆಯಿಂದ ದಿನಾಂಕ 29/10/2022 ರಂದು ಬೆಳಿಗ್ಗೆ 08:30 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ಆಯುಧದಿಂದ ಶಾಲಾ ಕಛೇರಿಯ ಎದುರಿನ ಬಾಗಿಲಿನ  ಬೀಗವನ್ನುಯಾವುದೊ ಆಯುದ ಮುರಿದು ಬಾಗಿಲನ್ನು ತೆರೆದು ಒಳ ಪ್ರವೇಶಿಸಿ, ಒಳಗಿದ್ದ ಕಪಾಟುಗಳ ಬೀಗವನ್ನು  ಮುರಿದಿದ್ದು, ಬಾಗಿಲು ತೆರೆದು  ಜಾಲಾಡಿಸಿ ಕಪಾಟಿನಲ್ಲಿದ್ದ ದಾಖಲೆಗಳು ಕಾಗದಪತ್ರ ಮತ್ತು ಸ್ವತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳವಿಗೆ ಪ್ರಯತ್ನಿಸಿರುವುದಾಗಿದೆ ಯಾವುದೇ ವಸ್ತುಗಳು ಕಳವಾಗಿರುವುದಿಲ್ಲ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 136/2022, ಕಲಂ:  457,  511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .   
 • ಬೈಂದೂರು: ಪಿರ್ಯಾದಿದಾರರಾದ .ಕೆ ನಾಗೇಶ ನಾಯ್ಕ (85), ತಂದೆ: ಡಿ.ಕೆ ರಾಮಯ್ಯ  ನಾಯ್ಕ,  ವಾಸ: ದೊಡ್ಡ ನಾಯ್ಕರಮನೆ ಪಡುವರಿ ಗ್ರಾಮ, ಬೈಂದೂರು ತಾಲೂಕು ಇವರಿಗೆ ಬೈಂದೂರು ತಾಲೂಕು  ಪಡುವರಿ ಗ್ರಾಮದ ಸರ್ವೆ ನಂಬ್ರ 128/11 ಬಿ ರಲ್ಲಿ 0.55 ಸೆಂಟ್ಸ್ ಮತ್ತು ಸರ್ವೆ ನಂಬ್ರ  128/11ಪಿ 3 ರಲ್ಲಿ 0.05 ಸೆಂಟ್ಸ್  ಸ್ಥಳವಿರುತ್ತದೆ. ಒಟ್ಟು 0.60 ಸೆಂಟ್ಸ್ ಜಾಗ ಇರುತ್ತದೆ. ಸ್ಥಳವು ಭೂ ಮಸೂದೆ ಮಂಜೂರಾತಿ ಆದೇಶದಂತೆ ಪಿರ್ಯಾದಿದಾರರಿಗೆ ಬಂದ ಸ್ಥಳವಾಗಿರುತ್ತದೆ. ಸ್ಥಳದಲ್ಲಿ ಪಿರ್ಯಾದಿದಾರರು  ಭತ್ತದ ಕೃಷಿ ಮಾಡಿದ್ದು ಭತ್ತದ ಪಸಲು ಕಟಾವಿಗೆ ಬಂದಿರುತ್ತದೆ. ದಿನಾಂಕ 23/10/2022 ರಂದು ಬೆಳಿಗ್ಗೆ 7:30 ಗಂಟೆಗೆ ಪಿರ್ಯಾದಿದಾರರು ಗದ್ದೆಗೆ ಹೋದಾಗ  ಯಾರೋ ಕಳ್ಳರು  ಭತ್ತದ ಪಸಲನ್ನು  ಕಳವು ಮಾಡಿಕೊಂಡು  ಹೋಗಿರುವುದು ಪಿರ್ಯಾದಿದಾರರ ಗಮನಕ್ಕೆ ಬಂದಿರುತ್ತದೆ. ದಿನಾಂಕ 22/10/2022 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಸುಮಾರು 60,000/- ರೂಪಾಯಿ ಮೌಲ್ಯದ  ಪಸಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸ್ಥಳಕ್ಕೆ ಸಂಬಂದಿಸಿದ ನಾಗೇಶ್ , ಗಣೇಶ ಮತ್ತು ಅವರ ಕೆಲಸದವರು, ಮನೆಯವರು ಗದ್ದೆಗೆ ಪ್ರವೇಶ ಮಾಡದಂತೆ ನ್ಯಾಯಾಲಯದಲ್ಲಿ ಇಂಜೆಕ್ಷನ್ ಆದೇಶ ಇರುತ್ತದೆ.  ಭತ್ತದ ಪಸಲನ್ನು ಕಳವು ಮಾಡಲು ನಾಗೇಶ ಮತ್ತು ಗಣೇಶ ಇವರ ಕೈವಾಡ ಇರುಬಹುದಾಗಿ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 215/2022 ಕಲಂ: 379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 29-10-2022 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080