ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ:  ಪಿರ್ಯಾದಿದಾರರಾದ ಶ್ರೀಮತಿ ವೇದಾ (41), ಗಂಡ: ಶ್ರೀನಿವಾಸ ಪೂಜಾರಿ , ವಾಸ: ಶ್ರೀ ದುರ್ಗಾ ನಿವಾಸ, ಮೈಂದಗುರಿ, ಬೈಕಂಪಾಡಿ ಅಂಚೆ, ಜೋಕಟ್ಟೆ ಗ್ರಾಮ, ಮಂಗಳೂರು ತಾಲೂಕು, ದ.ಕ ಜಿಲ್ಲೆ ಇವರ ಹಿರಿಯ  ಅಣ್ಣನಾದ ಯೋಗೀಶ್ ಕೋಟ್ಯಾನ್(55)ರವರು ತನ್ನ  ವಿಪರೀತ  ಕುಡಿತದ  ಚಟದಿಂದಾಗಿ ಮನೆಯನ್ನು ತ್ಯಜಿಸಿ,  ಅಲೆಮಾರಿಯಂತೆ  ಜೀವಿಸಿಕೊಂಡಿದ್ದವರು  ಕ್ಷಯರೋಗಕ್ಕೆ  ತುತ್ತಾಗಿ ಅಜ್ಜರಕಾಡು  ಜಿಲ್ಲಾಸ್ಪತ್ರೆಗೆ  ಚಿಕಿತ್ಸೆಯ  ಬಗ್ಗೆ  ದಾಖಲಾಗಿದ್ದು,  ಇದೇ  ಕಾರಣದಿಂದ  ಜೀವನದಲ್ಲಿ  ಜಿಗುಪ್ಸೆ  ಹೊಂದಿ ದಿನಾಂಕ  28/10/2021 ರಂದು  ಬೆಳಿಗ್ಗೆ  6:00  ಗಂಟೆಗೆ  ಟಿ.ಬಿ.  ವಾರ್ಡಿನ  ಬಾಗಿಲಿಗೆ  ನೈಲಾನ್ ಹಗ್ಗದಿಂದ  ಕುತ್ತಿಗೆಗೆ  ನೇಣು  ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 43/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಪ್ರಕಾಶ್ ವಿ (39), ತಂದೆ: ನಾರಾಯಣ ಪೂಜಾರಿ, ವಾಸ: ಎ.ಕೆ.ಜಿ ರಸ್ತೆ, ವಡೇರಹೋಬಳಿ ಗ್ರಾಮ, ಕುಂದಾಪುರ ಇವರ ತಂದೆ ನಾರಾಯಣ (66) ರವರು ದಿನಾಂಕ 28/10/2021 ರಂದು ಬೆಳಿಗ್ಗೆ 06:00ಗಂಟೆಗೆ ತೆಂಗಿನಕಾಯಿ ಹೆಕ್ಕಲು ತೋಟಕ್ಕೆ ಹೋಗಿದ್ದು 07:00 ಗಂಟೆಯಾದರೂ ವಾಪಾಸು ಬಾರದೇ ಇದ್ದು , ನಾರಾಯಣರವರನ್ನು ಹುಡುಕಲಾಗಿ, ಪಿರ್ಯಾದುದಾರರ ತೋಟದ ಪಕ್ಕದ ಕೆರೆಯಲ್ಲಿ  ತೇಲಾಡಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿದ್ದು, ಅಕ್ಕಪಕ್ಕದವರ ಸಹಾಯದಿಂದ ನಾರಾಯಣರವರನ್ನು ಮೇಲಕ್ಕೆತ್ತಲಾಗಿ ಅದಾಗಲೇ ಮೃತಪಟ್ಟಿರುವುದಾಗಿದೆ. ನಾರಾಯಣರವರು ದಿನಾಂಕ 28/10/2021 ರಂದು ಬೆಳಿಗ್ಗೆ 06:00 ಗಂಟೆಯಿಂದ 07:00  ಗಂಟೆಯ ಮದ್ಯಾವಧಿಯಲ್ಲಿ  ತೆಂಗಿನಕಾಯಿ ಹೆಕ್ಕಲು ತೋಟಕ್ಕೆ ಹೋದವರು ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 43/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಉಡುಪಿ: ದಿನಾಂಕ 28/10/2021 ರಂದು ಸಂಜೆ ಅಧ್ಯಕ್ಷರು ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಉಡುಪಿ ಘಟಕ ಇವರು ಯಾವುದೇ ಪೂರ್ವಾನುಮತಿಯಿಲ್ಲದೆ ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ಉಡುಪಿ ನಗರಸಭಾ ವ್ಯಾಪ್ತಿಯ ಜೋಡುಕಟ್ಟೆಯಿಂದ ಕ್ಲಾಕ್‌ ಟವರ್‌ವರೆಗೆ  ರ್ಯಾಲಿ ನಡೆಸಿ ಕೋವಿಡ್‌ ಸೋಂಕು ಹರಡುವುದನ್ನು ತಡೆಗಟ್ಟುವ ಬಗ್ಗೆ ಸರಕಾರ/ಜಿಲ್ಲಾಧಿಕಾರಿಯವರ ಆದೇಶವನ್ನು ಪಾಲನೆ ಮಾಡದೆ, ಆದೇಶವನ್ನು ಉಲ್ಲಂಘನೆ ಮಾಡಿರುವುದಾಗಿ ಡಾ. ಉದಯ ಕುಮಾರ್‌ ಶೆಟ್ಟಿ, ಪೌರಾಯುಕ್ತರು, ಉಡುಪಿ ನಗರ ಸಭೆ ಇವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 156/2021 ಕಲಂ: 188, 269 ಐಪಿಸಿ & ಕಲಂ: 5(1), 5(4) The Karnataka Epidemic Diseases Act  2020 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-10-2021 10:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080