ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿ ಪ್ರವೀಣ ಆಚಾರ್ಯ ಇವರು ಗುಡ್ಡೆಯಂಗಡಿಯಲ್ಲಿ ಶ್ರೀದೇವಿ ಅಲ್ಯೂಮಿನಿಯಂ ಎಂಬ ಅಂಗಡಿ  ಮಾಡಿಕೊಂಡಿದ್ದು ಪಿರ್ಯಾದಿದಾ ರರು ದಿನಾಂಕ: 28/09/2022 ರಂದು  ರಾತ್ರಿ ಸುಮಾರು  09.15 ಗಂಟೆಗೆ ಅಂಗಡಿಯ ಹೊರಗಡೆ ಕುಳಿತುಕೊಂಡಿದ್ದಾಗ  ಗುಡ್ಡೆಯಂಗಡಿ ಪಿಶ್ ಮಾರ್ಕೇಟ್‌ ಹತ್ತಿರ ವಾಹನ ಅಪಘಾತವಾದ ಶಬ್ದ ಕೇಳಿ ಕೂಡಲೇ ಶಬ್ದ ಬಂದ ಕಡೆ ಓಡಿದಾಗ ಗುಡ್ಡೆಯಂಗಡಿ ಪಿಶ್ ಮಾರ್ಕೇಟ್‌ ಬಳಿ ಕಾರ್ಕಳ ಕಡೆಗೆ ರಸ್ತೆ ಎಡ ಬದಿಯ ಮಣ್ಣು ರಸ್ತೆಯಲ್ಲಿ ಮೋಟಾರ್‌ ಸೈಕಲ್‌ ಒಂದು  ಬಿದ್ದುಕೊಂಡಿದ್ದು ಮೋಟಾರ್‌ ಸೈಕಲ್‌ ಪಕ್ಕದಲ್ಲಿ ಓರ್ವ ವ್ಯಕ್ತಿ  ಬಿದ್ದುಕೊಂಡಿದ್ದು  ಆತನಿಗೆ ತಲೆಗೆ ತೀವ್ರ  ರಕ್ತಗಾಯವಾಗಿ ರಕ್ತ ಸೋರಿ ರಸ್ತೆಯಲ್ಲಿ ನಿಂತಿದ್ದು ನೋಡಲಾಗಿ ಆತನು ಪಿರ್ಯಾದಿದಾರರ ಪರಿಚಯದ  ಗುಡ್ಡೆಯಂಗಡಿ ನೆಡ್ಲು ಬೈಲು ಮನೋಹರ ಜೋಗಿ(33) ಆಗಿರುತ್ತಾರೆ,  ಆತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ,  ಅಲ್ಲಿಂದ ಸ್ವಲ್ಪ ದೂರದಲ್ಲಿ ಗುಡ್ಡೆಯಂಗಡಿ ಪಿಶ್ ಮಾರ್ಕೇಟ್‌ ಬಳಿ ಗಣೇಶ ಬಸ್ಸು ನಿಂತುಕೊಂಡಿದ್ದು ಅಲ್ಲಿ ಸೇರಿದವರಲ್ಲಿ ವಿಚಾರಿಸಲಾಗಿ ಮನೋಹರ್‌ ತನ್ನ ಮೋಟಾರ್‌ ಸೈಕಲ್‌ನಲ್ಲಿ ಗುಡ್ಡೆಯಂಗಡಿ ಕಡೆಯಿಂದ ಕಾರ್ಕಳ ಕಡೆ ಮೋಟಾರ್‌ ಸೈಕಲ್‌ ಸವಾರಿ  ಮಾಡಿಕೊಂಡು ಹೋಗುವಾಗ ಗುಡ್ಡೆಯಂಗಡಿ ಬಸ್ಸು ನಿಲ್ದಾಣದಿಂದ ಸ್ವಲ್ಪ ಮುಂದೆ ಪಿಶ್ ಮಾರ್ಕೇಟ್‌ ಬಳಿ  ರಾತ್ರಿ 09.15 ಗಂಟೆಗೆ ಹೋಗುವಾಗ ಎದುರಿನಿಂದ ಅಂದರೆ ಕಾರ್ಕಳ ಕಡೆಯಿಂದ ಗಣೇಶ ಬಸ್ಸು ನಂಬ್ರ: KA-51-AF-1099 ನೇಯದನ್ನು ಅದರ ಚಾಲಕ ಅತೀವೇಗ  ಹಾಗೂ ಅಜಾರೂಕತೆಯಿಂದ ಚಲಾಯಿಸಿ ರಸ್ತೆಯ  ತೀರಾ ಬಲಬದಿಗೆ ಬಂದು ಮನೋಹರ್‌ ಜೋಗಿ  ಸವಾರಿ ಮಾಡಿಕೊಂಡಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ತಲೆಗೆ ತೀವ್ರ ತರಹದ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು  ಅಪಘಾತಗೊಳಿದ ಬಸ್ಸಿನ ಚಾಲಕ ಅಲ್ಲಿಯೇ ಇದ್ದು ಆತನ ಹೆಸರು ನಾರಾಯಣ  ಎಂಬುದಾಗಿ ತಿಳಿಯಿತು   ಮೊನೋಹರ್‌ ಜೋಗಿಯವರು ಸವಾರಿ ಮಾಡಿಕೊಂಡು ಬಂದ ಮೋಟಾರ್‌ ಸೈಕಲ್‌ ನಂಬ್ರ ನೋಡಲಾಗಿ KA-20-Y-3446  ನೇ ಸ್ಪ್ಲೆಂಡರ್ ಮೋಟಾರ್‌ ಸೈಕಲ್‌ ಆಗಿರುತ್ತದೆ  ಆ ಸಮಯ ಅವರ ತಂಗಿ ಗಂಡ ಸತೀಶರವರು ಬಂದಿದ್ದು ಅವರು ಮನೋಹರನನ್ನು ಆ್ಯಂಬುಲೆನ್ಸನಲ್ಲಿ ಮಣಿಪಾಲ ಕೆ,ಮ್‌,ಸಿ ಆಸ್ಪತ್ರೆಗೆ  ಹಾಕಿಕೊಂಡು  ಹೋಗಿರುತ್ತಾರೆ   ಅಪಘಾತದಿಂದ  ಮೋಟಾರ್‌ ಸೈಕಲ್‌ ಸಂಪೂರ್ಣ ಜಖಂಗೊಂಡಿದ್ದು ಬಸ್ಸಿನ ಎದುರು  ಬಾಗ ಜಖಂಗೊಂಡಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 55/2022 ಕಲಂ :279,304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿ ನರಸಿಂಹ ನಾಯ್ಕ ಇವರು ದಿನಾಂಕ 28 -09-2022 ರಂದು ಚಿತ್ತೂರಿನಲ್ಲಿ ಅಡಿಕೆ ಗಿಡಗಳಿಗೆ ಹಾಕುವ ರಸಾಯನಿಕ  ಗೊಬ್ಬರವನ್ನು ಖರಿದೀಸಿ  ಬಳಿಕ   KA 47 S 3426 ನೇ ಸ್ಕೂಟರ್‌ನ್ನು  ಚಿತ್ತೂರಿನಿಂದ ಕೆರಾಡಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಮಧ್ಯಾಹ್ನ 2:00 ಗಂಟೆಗೆ ಕುಂದಾಪುರ ತಾಲೂಕು  ಚಿತ್ತೂರು ಗ್ರಾಮದ ಚಿತ್ತೂರು - ಕೆರಾಡಿ ಮುಖ್ಯ ರಸ್ತೆಯ ಚಪ್ಪರಮಕ್ಕಿ  ಕುರಕನವೋಣೆ ಎಂಬಲ್ಲಿ  ತಲುಪಿದಾಗ  ಪಿರ್ಯಾದಿದಾರರ  ಎದುರಿನಿಂದ  ಕೆರಾಡಿ  ಕಡೆಯಿಂದ ಚಿತ್ತೂರು ಕಡೆಗೆ  ಆರೋಪಿ ತೇಜ ಬೋವಿ ತನ್ನ ಬಾಬ್ತು  KA 20 EA 9338 ನೇ ಮೋಟಾರು ಸೈಕಲ್‌  ವೇಗವಾಗಿ ದುಡುಕಿನಿಂದ  ಚಲಾಯಿಸಿ  ಮೋಟಾರು ಸೈಕಲ್‌ ವೇಗವನ್ನು  ನಿಯಂತ್ರಿಸಲಾಗದೇ ತೀರ  ಬಲ ಬದಿಗೆ ಚಲಾಯಿಸಿ  ಪಿರ್ಯಾದಿದಾರರ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು  ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು ಹಣೆಗೆ, ಮೂಗಿಗೆ ಮತ್ತು ತುಟಿಗೆ  ರಕ್ತಗಾಯ ಮತ್ತು ಬಲಕಾಲಿಗೆ ಗದ್ದಿದ  ಒಳನೋವು  ಉಂಟಾಗಿರುತ್ತದೆ. ಆರೋಪಿಯು ಮೋಟಾರು ಸೈಕಲ್‌ ಸಮೇತ  ರಸ್ತೆಗೆ ಬಿದ್ದು  ರಕ್ತಗಾಯ ಉಂಟಾಗಿರುತ್ತದೆ. ಪಿರ್ಯಾಧಿದಾರರು ಮತ್ತು ಆರೋಪಿ  ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 44/2022 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿ ಅಲ್ವಿನ್  ಅಂದ್ರಾದೆ ಇವರು ದಿನಾಂಕ: 28/09/2022 ರಂದು ಮಧ್ಯಾಹ್ನ  ಸಮಯ ಪಾಂಡೇಶ್ವರ ಪಂಚಾಯತ್ ಗೆ ಹೋಗಿದ್ದು .ಅಲ್ಲಿ ಪಂಚಾಯತ್ ಸೆಕ್ರೆಟರಿ ಇಲ್ಲದ ಕಾರಣ ಪಂಚಾಯತ್ ಹೊರಗೆ  ರಸ್ತೆ ಬಳಿ ಕಾಯುತ್ತಾ ನಿಂತಿದ್ದರು. ಸುಮಾರು ಮಧ್ಯಾಹ್ನ 12.24 ಗಂಟೆಗೆ ಸಾಸ್ತಾನ ಬಾರ್ಕೂರು ರಸ್ತೆಯಲ್ಲಿ KA 20 EP 0065 ನೇ ಸ್ಕೂಟಿಯಲ್ಲಿ  ಸವಾರರು ಹಿಂಬದಿ ಸಹ ಸವಾರಿಣಿಯನ್ನು ಕುಳ್ಳಿರಿಸಿಕೊಂಡು ಸಾಸ್ತಾನ ಕಡೆಯಿಂದ ಬಾರ್ಕೂರು ಕಡೆಗೆ ಸ್ಕೂಟಿಯನ್ನು ಸವಾರಿ ಮಾಡಿಕೊಂಡು ಬರುತ್ತಿರುವಾಗ ಆ ರಸ್ತೆಗೆ ಸಂಪರ್ಕ ಹೊಂದುವ ನಂದಿಕೇಶ್ವರ  ರಸ್ತೆಯಿಂದ KA 20 P 5341 ನೇ ಮಾರುತಿ ಆಲ್ಟೋ ಕಾರನ್ನು ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಏಕಾ ಏಕಿ ಮುಖ್ಯ ರಸ್ತೆಗೆ  ಚಲಾಯಿಸಿ ಸಾಸ್ತಾನ ಕಡೆಯಿಂದ ರಸ್ತೆಯಲ್ಲಿ  ಕ್ರಮದಂತೆ  ಬರುತ್ತಿದ್ದ  KA 20 EP 0065 ನೇ ಸ್ಕೂಟಿಗೆ ಢಿಕ್ಕಿ ಹೊಡೆದನು . ಪರಿಣಾಮ ಸ್ಕೂಟಿ ಸವಾರ ಮತ್ತು ಹಿಂಬದಿ ಕುಳಿತ ಮಹಿಳೆ ಸ್ಕೂಟಿ ಸಮೇತ ರಸ್ತೆಗೆ ಬಿದ್ದರು. ಸ್ಕೂಟಿ ಸವಾರನ ಮುಖಕ್ಕೆ ಮತ್ತು ಕೈಕಾಲುಗಳಿಗೆ  ತೀವೃ ರಕ್ತಗಾಯವಾಗಿ  ಮೊದಲಿಗೆ ಪ್ರಜ್ನಾ ಹೀನ ರಾಗಿದ್ದರು.  ಹಿಂಬದಿ ಕುಳಿತ ಮಹಿಳೆಯ ಮೈ ಕೈಗೆ ಸಣ್ಣ ಪುಟ್ಟ  ತರಚಿದ ಗಾಯವಾಗಿರುತ್ತದೆ. ಸ್ಕೂಟಿ ಸವಾರನ ಹೆಸರು ಮನೋಹರ ಶೆಟ್ಟಿ  ಹಾಗೂ ಸಹಸವಾರಿಣಿ ಗಾಯಾಳುವಿನ ಹೆಂಡತಿ ಪ್ರೀತಿ ಎಂಬುವುದಾಗಿ ತಿಳಿಯಿತು . ಆ ಸಮಯ ಅಪಘಾತ ಪಡಿಸಿದ KA 20 P 5341 ನೇ ಕಾರು ಚಾಲಕ ತನ್ನ ವಾಹನದಲ್ಲಿ ಕ್ಯಾಟರಿಂಗ್  ಊಟ ಇದೆ ಅದನ್ನು ಕೊಟ್ಟು ಬರುವುದಾಗಿ ಹೇಳಿ ಗಾಯಾಳುವನ್ನುಆಸ್ಪತ್ರೆಗೆ ಸೇರಿಸದೇ , ಅಪಘಾತದ ಮಾಹಿತಿಯನ್ನು ಯಾರಿಗೂ ತಿಳಿಸದೇ ಸ್ಥಳದಿಂದ  ಪರಾರಿಯಾಗಿರುತ್ತಾನೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 160/2022 ಕಲಂ: 279.337.338 IPC  134(A)(B) RW 187 IMV ACT    ನಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಕಾರ್ಕಳ: ಫಿರ್ಯಾದಿ ಆಂಟನಿ ಇಲಿಯಾಸ್ ಡಿಸಿಲ್ವ ಇವರು ದಿನಾಂಕ  28-09-2022 ರಂದು ಸಾಣೂರು ಗ್ರಾಮದ  ಕಡೆಬೆಟ್ಟು  ಎಂಬಲ್ಲಿ ತಾನು ಖರೀದಿ ಮಾಡಿದ ಜಾಗದಲ್ಲಿ ಪೈಪ್ ಲೈನ್ ಅಳವಡಿಸಲು ಸಂಜೆ 18-00 ಗಂಟೆಗೆ ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿದ್ದಾಗ ಅಪಾದಿತರಾದ  ಫಿರ್ಯಾದುದಾರರ ತಮ್ಮ  ಮ್ಯಾಕ್ಸಿಂ ಡಿಸಿಲ್ವ ಮತ್ತು ಆತನ ಹೆಂಡತಿ ಲೀನಾ ಡಿಸಿಲ್ವ ಫಿರ್ಯಾದುದಾರರ  ಜಾಗಕ್ಕೆ   ಅಕ್ರಮ ಪ್ರವೇಶ ಮಾಡಿ ಇಲ್ಲಿ ಪೈಪ್ ಲೈನ್ ಹಾಕಬೇಡಿ  ಎಂದುಹೇಳಿ ಅವಾಚ್ಯ ಶಬ್ದಗಳಿಂದ  ಬೈದು ಕೈಯಿಂದ ಹೊಡೆದಿದ್ದು ಕೆಳಗೆ  ಬಿದ್ದಾಗ ತುಳಿದು  ಹಲ್ಲೆ  ಮಾಡಿ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 126/2022 ಕಲಂ 447, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ:  ಫಿರ್ಯಾದಿ ವಿಠಲ್ ಕುಲಾಲ್  ಇವರಿಗೂ ಆರೋಪಿತ  1.ಮನೋಜ, 2.ಪ್ರಕಾಶ  ಹಾಂಡ 3.ಶ್ರೀಮತಿ ಶೀಲ 4.ನರಸಿಂಹ ಹಾಂಡ 5.ಚಂದ್ರ ಕುಲಾಲ್ ಇವರುಗಳಿಗೂ ಕಾಲು ದಾರಿಯ ವಿಷಯದಲ್ಲಿ  ತಕರಾರು   ಇರುತ್ತದೆ, ಅದರಂತೆ  ದಿನಾಂಕ 28.09.2022 ರಂಧು 17;00  ಘಂಟೆಗೆ   ಬ್ರಹ್ಮಾವರ   ತಾಲೂಕಿನ   ಹಿಲಿಯಾಣ   ಗ್ರಾಮದ  ಹಿಲಿಯಾಣ ಜೆಡ್ಡು ಎಂಬಲ್ಲಿ  ಅವರ  ಮನೆಯ  ಬಳಿ  ಫಂಚಾಯತ್  ಸದಸ್ಯ ಹಾಗೂ ಮಾಜಿ   ಅಧ್ಯಕ್ಷರ  ಸಮಕ್ಷಮದಲ್ಲಿ  ದಾರಿಯ   ಬಗ್ಗೆ  ಗುರುತಿಸುತ್ತಿರುವಾಗ  ಆರೋಪಿಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಕೂಡಿಕೊಂಡು  ಏಕಾಏಕೀ ಫಿರ್ಯಾದುದಾರರಿಗೆ   ಹಾಗೂ ಅವರ  ಸಹೋದರ  ಸಂಜೀವ ಕುಲಾಲ್  ಇವರಿಗೆ  ಕೈಯಿಂದ  ಹಾಗೂ  ತೆಂಗಿನ ಹೆಡೆಯಿಂದ ಮುಖ   ಕೈ ಹಾಗೂ ಬೆನ್ನಿಗೆ ಹಲ್ಲೆ  ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 95/2022  ಕಲಂ:.143, 147, 148, 341,323, 324  ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ:  ಫಿರ್ಯಾದಿ ಶ್ರೀಮತಿ  ಶೀಲ ಇವರು ಮನೆಯವರಿಗೆ ಹಾಗೂ ಆರೋಪಿತ ವಿಠಲ್  ಕುಲಾಲ್ ಮತ್ತು ಸಂಜೀವ  ಕುಲಾಲ್  ಇವರುಗಳಿಗೂ ಕಾಲು ದಾರಿಯ ವಿಷಯದಲ್ಲಿ  ತಕರಾರು   ಇರುತ್ತದೆ, ಅದರಂತೆ  ದಿನಾಂಕ 28.09.2022 ರಂಧು 17;00  ಘಂಟೆಗೆ   ಬ್ರಹ್ಮಾವರ   ತಾಲೂಕಿನ   ಹಿಲಿಯಾಣ   ಗ್ರಾಮದ  ಹಿಲಿಯಾಣ ಜೆಡ್ಡು ಎಂಬಲ್ಲಿ  ಅವರ  ಮನೆಯ  ಬಳಿ   ಊರಿನ ಮುಖಂಡರ  ಸಮಕ್ಷಮದಲ್ಲಿ  ದಾರಿಯ   ಬಗ್ಗೆ  ಗುರುತಿಸುತ್ತಿರುವಾಗ  ಆರೋಪಿಗಳು ಸಮಾನ ಉದ್ದೇಶದಿಂದ  ಫಿರ್ಯಾದುದಾರರಿಗೆ ಹಲ್ಲೆ ಮಾಡಿ ಹಾಗೂ ಪ್ರಕಾಶ   ಕುಲಾಲ್   ಇವರಿಗೆ  ಕೈಯಿಂದ  ಹಾಗೂ  ತೆಂಗಿನ ಹೆಡೆಯಿಂದ   ಹಲ್ಲೆ  ಮಾಡಿ ಅವಾಚ್ಯ  ಶಬ್ದದಿಂದ  ಬೈದಿರುತ್ತಾರೆ, ಆರೋಪಿಗಳು  ಹಲ್ಲೆ ಮಾಡಿದ  ಪರಿಣಾಮ  ಫಿರ್ಯಾದುದಾರರ   ತಲೆ  ಹಾಗೂ   ಬಲಕೈಗೆ  ಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 96/2022 ಕಲಂ:.354 323 324 504  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-09-2022 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080