ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಅನಿಲ್(30), ತಂದೆ: ಆನಂದ ಪೂಜಾರಿ, ವಾಸ: ಕನ್ನುಕೆರೆ  ತೆಕ್ಕಟ್ಟೆ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 28/09/2022 ರಂದು ಬೆಳಿಗ್ಗೆ ಕೆಲಸಕ್ಕೆಂದು ತನ್ನ ಮೋಟಾರ್ ಸೈಕಲ್ ನಲ್ಲಿ ಕೋಟ ಕಡೆಗೆ ಹೋಗುತ್ತಿರುವಾಗ  ತೆಕ್ಕಟ್ಟೆ  ಈಚರ್ ಶೋ  ರೂಂ ಬಳಿ ಬೆಳಿಗ್ಗೆ 10:30 ಗಂಟೆಗೆ ಪಿರ್ಯಾದಿದಾರರ ಎದುರಿನಿಂದ KA-20-EY-9442 ನೇ ನಂಬ್ರದ ಪಲ್ಸರ್ ಮೋಟಾರ್ ಸೈಕಲ್ ಸವಾರ  ಹೋಗುತ್ತಿದ್ದು ಆ ಸಮಯ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ KA-20-MD-7889  ನೇ ಕಾರು ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಓವರ್ ಟೇಕ್ ಮಾಡಿ  ಮುಂದೆ ಹೋಗಿ ರಸ್ತೆಯ ಎಡಕ್ಕೆ ಚಲಾಯಿಸಿ ಎದುರಿನಿಂದ ಹೋಗುತ್ತಿದ್ದ  KA-20-EY-9442 ನೇ ನಂಬ್ರದ ಪಲ್ಸರ್ ಮೋಟಾರ್ ಸೈಕಲ್ ನ ಬಲ ಬದಿಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೊಟಾರ್ ಸೈಕಲ್ ಸಮೇತ ರಸ್ತೆಗೆ  ಬಿದ್ದು ಸವಾರನಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ.  ಮೋಟಾರ್ ಸೈಕಲ್ ಸವಾರನ ಹೆಸರು  ಸುನೀಲ್ ಎಂಬುದಾಗಿ ತಿಳಿಯಿತು. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 159/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ:  ಪಿರ್ಯಾದಿದಾರರಾದ ಪ್ರವೀಣ ಆಚಾರ್ಯ ಆಚಾರ್ಯ (30 ), ತಂದೆ: ವೆಂಕಟೇಶ ಅಚಾರ್ಯ, ವಾಸ:ವಿಶ್ವ ಕರ್ಮ ನಿಲಯ   5 ಸೆಂಟ್ಸ ಗುಡ್ಡೆಯಂಗಡಿ  ಬೊಮ್ಮ ರಬೆಟ್ಟು ಗ್ರಾಮ  ಉಡುಪಿ ತಾಲೂಕು ಇವರು  ಗುಡ್ಡೆಯಂಗಡಿಯಲ್ಲಿ ಶ್ರೀದೇವಿ ಅಲ್ಯೂಮಿನಿಯಂ ಎಂಬ ಅಂಗಡಿ  ಮಾಡಿಕೊಂಡಿದ್ದು, ಪಿರ್ಯಾದಿದಾರರು ದಿನಾಂಕ 28/09/2022 ರಂದು  ರಾತ್ರಿ  09:15 ಗಂಟೆಗೆ ಅಂಗಡಿಯ ಹೊರಗಡೆ ಕುಳಿತುಕೊಂಡಿದ್ದಾಗ  ಗುಡ್ಡೆಯಂಗಡಿ ಪಿಶ್ ಮಾರ್ಕೇಟ್‌ ಹತ್ತಿರ ವಾಹನ ಅಪಘಾತವಾದ ಶಬ್ದ ಕೇಳಿ ಕೂಡಲೇ ಶಬ್ದ ಬಂದ ಕಡೆ ಓಡಿದಾಗ ಗುಡ್ಡೆಯಂಗಡಿ ಪಿಶ್ ಮಾರ್ಕೇಟ್‌ ಬಳಿ ಕಾರ್ಕಳ ಕಡೆಗೆ ರಸ್ತೆ ಎಡ ಬದಿಯ ಮಣ್ಣು ರಸ್ತೆಯಲ್ಲಿ ಮೋಟಾರ್‌ ಸೈಕಲ್‌ ಒಂದು  ಬಿದ್ದುಕೊಂಡಿದ್ದು ಮೋಟಾರ್‌ ಸೈಕಲ್‌ ಪಕ್ಕದಲ್ಲಿ ಓರ್ವ ವ್ಯಕ್ತಿ  ಬಿದ್ದುಕೊಂಡಿದ್ದು  ಆತನಿಗೆ ತಲೆಗೆ ತೀವ್ರ  ರಕ್ತಗಾಯವಾಗಿ ರಕ್ತ ಸೋರಿ ರಸ್ತೆಯಲ್ಲಿ ನಿಂತಿದ್ದು ನೋಡಲಾಗಿ ಆತನು ಪಿರ್ಯಾದಿದಾರರ ಪರಿಚಯದ  ಗುಡ್ಡೆಯಂಗಡಿ ನೆಡ್ಲು ಬೈಲು ಮನೋಹರ ಜೋಗಿ(33) ಆಗಿರುತ್ತಾರೆ,  ಅವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.  ಅಲ್ಲಿಂದ ಸ್ವಲ್ಪ ದೂರದಲ್ಲಿ ಗುಡ್ಡೆಯಂಗಡಿ ಪಿಶ್ ಮಾರ್ಕೇಟ್‌ ಬಳಿ ಗಣೇಶ ಬಸ್ಸು ನಿಂತುಕೊಂಡಿದ್ದು ಅಲ್ಲಿ ಸೇರಿದವರಲ್ಲಿ ವಿಚಾರಿಸಲಾಗಿ ಮನೋಹರ್‌ ತನ್ನ ಮೋಟಾರ್‌ ಸೈಕಲ್‌ನಲ್ಲಿ ಗುಡ್ಡೆಯಂಗಡಿ ಕಡೆಯಿಂದ ಕಾರ್ಕಳ ಕಡೆ ಮೋಟಾರ್‌ ಸೈಕಲ್‌ ಸವಾರಿ  ಮಾಡಿಕೊಂಡು ಹೋಗುವಾಗ ಗುಡ್ಡೆಯಂಗಡಿ ಬಸ್ಸು ನಿಲ್ದಾಣದಿಂದ ಸ್ವಲ್ಪ ಮುಂದೆ ಪಿಶ್ ಮಾರ್ಕೇಟ್‌ ಬಳಿ  ರಾತ್ರಿ 09:15 ಗಂಟೆಗೆ ಹೋಗುವಾಗ ಎದುರಿನಿಂದ ಅಂದರೆ ಕಾರ್ಕಳ ಕಡೆಯಿಂದ ಗಣೇಶ ಬಸ್ಸು ನಂಬ್ರ KA-51-AF-1099 ನೇಯದನ್ನು ಅದರ ಚಾಲಕ ಅತೀವೇಗ  ಹಾಗೂ ಅಜಾರೂಕತೆಯಿಂದ ಚಲಾಯಿಸಿ ರಸ್ತೆಯ  ತೀರಾ ಬಲಬದಿಗೆ ಬಂದು ಮನೋಹರ್‌ ಜೋಗಿ  ಸವಾರಿ ಮಾಡಿಕೊಂಡಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ತಲೆಗೆ ತೀವ್ರ ತರಹದ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು  ಅಪಘಾತಗೊಳಿದ ಬಸ್ಸಿನ ಚಾಲಕ ಅಲ್ಲಿಯೇ ಇದ್ದು ಆತನ ಹೆಸರು ನಾರಾಯಣ  ಎಂಬುದಾಗಿ ತಿಳಿಯಿತು.  ಮೊನೋಹರ್‌ ಜೋಗಿಯವರು ಸವಾರಿ ಮಾಡಿಕೊಂಡು ಬಂದ ಮೋಟಾರ್‌ ಸೈಕಲ್‌ ನಂಬ್ರ ನೋಡಲಾಗಿ KA-20-Y-3446  ನೇ ಸ್ಪ್ಲೆಂಡರ್ ಮೋಟಾರ್‌ ಸೈಕಲ್‌ ಆಗಿರುತ್ತದೆ.  ಆ ಸಮಯ ಅವರ ತಂಗಿ ಗಂಡ ಸತೀಶರವರು ಬಂದಿದ್ದು ಅವರು ಮನೋಹರ ರವರನ್ನು ಆ್ಯಂಬುಲೆನ್ಸನಲ್ಲಿ ಮಣಿಪಾಲ ಕೆಮ್‌ಸಿ ಆಸ್ಪತ್ರೆಗೆ  ಹಾಕಿಕೊಂಡು  ಹೋಗಿರುತ್ತಾರೆ.   ಅಪಘಾತದಿಂದ  ಮೋಟಾರ್‌ ಸೈಕಲ್‌ ಸಂಪೂರ್ಣ ಜಖಂಗೊಂಡಿದ್ದು ಬಸ್ಸಿನ ಎದುರು  ಬಾಗ ಜಖಂಗೊಂಡಿರುತ್ತದೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 55/2022 ಕಲಂ : 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಜುಗಾರಿ ಪ್ರಕರಣ

 • ಬೈಂದೂರು: ದಿನಾಂಕ 27/09/2022 ರಂದು ನಿರಂಜನ ಗೌಡ ಬಿ ಎಸ್,  ಪೊಲೀಸ್ ಉಪನಿರೀಕ್ಷಕರು ಬೈಂದೂರು ಪೊಲೀಸ್ ಠಾಣೆ ಇವರಿಗೆ ಬೈಂದೂರು ತಾಲೂಕು ಹೆರೂರು ಗ್ರಾಮದ ಚಿಕ್ತಾಡಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ಮಣ್ಣು ರಸ್ತೆಯ ಸಮೀಪದ ಸರಕಾರಿ ಹಾಡಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ನಡೆಯುತ್ತಿದೆ ಎಂದು ಬಂದ ಮಾಹಿತಿಯಂತೆ ದಾಳಿ ಮಾಡಿ 1) ಶ್ರೀನಿವಾಸ ದೇವಾಡಿಗ, 2) ಉಪೇಂದ್ರ ಗಾಣಿಗ, 3) ಬಾಬಣ್ಣ ಮೊಗವೀರ, 4) ದುರ್ಗಾ ಪೂಜಾರಿ, 5) ಪ್ರಶಾಂತ ಪೂಜಾರಿ ಇವರನ್ನು ವಶಕ್ಕೆ ಪಡೆದುಕೊಂಡು ಅಂದರ್‌ ಬಾಹರ್‌ ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳಾದ 1) ಪ್ಲಾಸ್ಟಿಕ್ ಟೇಬಲ್ -1,  2) ಪ್ಲಾಸ್ಟಿಕ್ ಕುರ್ಚಿ-2 3) ಡೈಮಾನ್‌,ಆಟಿನ್‌. ಇಸ್ಪೀಟ್‌, ಕಳವಾರ್‌ ಚಿತ್ರಗಳಿರುವ 52 ಇಸ್ಪೀಟ್‌ ಎಲೆಗಳು 4) ನಗದು ರೂಪಾಯಿ 21,800/-,  5) ಬೆಟ್ ಶೀಟ್ -2 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 193/2022  ಕಲಂ: 87 ಕೆ. ಪಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬ್ರಹ್ಮಾವರ: ದಿನಾಂಕ 27/09/2022 ರಂದು ಮುಕ್ತಾಬಾಯಿ, ಪೊಲೀಸ್ ಉಪನಿರೀಕ್ಷಕರು (ತನಿಖೆ), ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ ಉಪ್ಪೂರು  ಗ್ರಾಮದ  ಬಸ್ ನಿಲ್ದಾಣದ ಬಳಿ  ಆರೋಪಿ  ಪ್ರೇಮ್‌ ರೆಡ್ಡಿ @ ರೇವು ರೆಡ್ಡಿ(22) ಎಂಬಾತನನ್ನು ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ವಾಸನೆ ಬರುತ್ತಿದ್ದು, ಅವನಲ್ಲಿ ವಿಚಾರಿಸಿದಾಗ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ ಮೇರೆಗೆ ಆತನನ್ನು ವಶಕ್ಕೆ ತೆಗೆದುಕೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್‌ ಮೆಡಿಸಿನ್‌ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು ದಿನಾಂಕ 28/09/2022 ರಂದು ವೈಧ್ಯಕೀಯ ವರದಿ ಪಡೆಯಲಾಗಿ ಆರೋಪಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 159/2022 ಕಲಂ : 27(b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ .
 • ಕಾರ್ಕಳ:  ಪಿರ್ಯಾದಿದಾರರಾದ ಆಂಟನಿ ಇಲಿಯಾಸ್ ಡಿಸಿಲ್ವ (61), ತಂದೆ: ಬೆಂಜಮಿನ್ ಡಿಸಿಲ್ವ ಜಾಯ್ ಕಂಪೌಂಡ್ , ಮಿಯಾರು, ಕಾರ್ಕಳ ತಾಲೂಕು ಇವರು ದಿನಾಂಕ  28/09/2022 ರಂದು ಸಾಣೂರು ಗ್ರಾಮದ  ಕಡೆಬೆಟ್ಟು ಎಂಬಲ್ಲಿ ತಾನು ಖರೀದಿ ಮಾಡಿದ ಜಾಗದಲ್ಲಿ ಪೈಪ್ ಲೈನ್ ಅಳವಡಿಸಲು ಸಂಜೆ 18:00 ಗಂಟೆಗೆ ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿದ್ದಾಗ ಅಪಾದಿತರಾದ  ಪಿರ್ಯಾದಿದಾರರ ತಮ್ಮ  ಮ್ಯಾಕ್ಸಿಂ ಡಿಸಿಲ್ವ ಮತ್ತು ಆತನ ಹೆಂಡತಿ ಲೀನಾ ಡಿಸಿಲ್ವ  ಜಾಗಕ್ಕೆ   ಅಕ್ರಮ ಪ್ರವೇಶ ಮಾಡಿ ಇಲ್ಲಿ ಪೈಪ್ ಲೈನ್ ಹಾಕಬೇಡಿ  ಎಂದು ಹೇಳಿ ಅವಾಚ್ಯ ಶಬ್ದಗಳಿಂದ  ಬೈದು ಕೈಯಿಂದ ಹೊಡೆದಿದ್ದು ಕೆಳಗೆ  ಬಿದ್ದಾಗ ತುಳಿದು  ಹಲ್ಲೆ  ಮಾಡಿ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರು ಕಾರ್ಕಳ ಸರಕಾರಿ  ಆಸ್ಪತ್ರೆಗೆ  ಬಂದು ಒಳರೋಗಿಯಾಗಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 126/2022 ಕಲಂ: 447, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 29-09-2022 09:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080