ಅಭಿಪ್ರಾಯ / ಸಲಹೆಗಳು

ಮಟ್ಕಾ ಜುಗಾರಿ ಪ್ರಕರಣ

  • ಉಡುಪಿ: ಉಡುಪಿ ನಗರ ಠಾಣಾ ಸರಹದ್ದಿನಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಮೋದ್‌ ಕುಮಾರ್‌.ಪಿ, ಪೊಲೀಸ್‌ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ಠಾಣೆ ಇವರು ದಿನಾಂಕ 28/09/2021 ರಂದು 16:45 ಗಂಟೆಗೆ ಆಪಾದಿತ ಕೌಶಿಕ್ (22), ತಂದೆ: ಕೃಷ್ಣ ಭಂಡಾರಿ, ವಾಸ: ರೈಲ್ವೇ ಬ್ರಿಡ್ಜ್ ಬಳಿ, ಕುಕ್ಕಿಕಟ್ಟೆ, 76 ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ  ಎಂಬಾತನನ್ನು ಠಾಣೆಗೆ ವಿಚಾರಣೆ ಬಗ್ಗೆ ಕರೆಯಿಸಿದ್ದು, ಆತನ ಮೇಲೆ ಸಂಶಯ ಬಂದು ಆತನ ಮೊಬೈಲ್ ಪಡಕೊಂಡು ನೋಡಲಾಗಿ, ಆತನ ಮೊಬೈಲಿನ ವಾಟ್ಸ್ ಅಪ್ ಗ್ರೂಪ್ ನಲ್ಲಿ ಹಲವು ಜನರು ಮಟ್ಕಾ ಜುಗಾರಿ ಆಟದ ಬಗ್ಗೆ ಲಕ್ಕಿ ನಂಬ್ರಗಳನ್ನು ಹಾಗೂ ಅದಕ್ಕೆ ಹಣವನ್ನು ನಮೂದಿಸಿ ಈತನೊಂದಿಗೆ ಚಾಟಿಂಗ್ ಮಾಡಿರುವುದು ಕಂಡು ಬಂದಿರುತ್ತದೆ. ಆಗ ಆತನಲ್ಲಿ ಈ ಬಗ್ಗೆ ವಿಚಾರಿಸಿದಾಗ ಆತನು ಮೊಬೈಲಿನಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿದ್ದಾಗಿ ಹಾಗೂ ತಾನು ಸಂಗ್ರಹಿಸಿದ ಹಣವನ್ನು ಲಿಯೋ ಎಂಬವರಿಗೆ ಕೊಡುತ್ತಿರುವುದಾಗಿ ಒಪ್ಪಿರುತ್ತಾನೆ. ಆತನ ಮೊಬೈಲ್‌ನಲ್ಲಿ Matka Group ಮತ್ತು O.C Group ಇದ್ದು, ಆರೋಪಿಯು ಪ್ರಸ್ತುತ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ಹಣ ರೂಪಾಯಿ 570/- ನ್ನು ಹಾಜರುಪಡಿಸಿರುತ್ತಾನೆ. ಆಪಾದಿತನಿಂದ ಒಪ್ಪೊ ಕಂಪೆನಿಯ ಮೊಬೈಲ್‌, ನಗದು ರೂಪಾಯಿ 570/- ಹಾಗೂ ಪ್ರಿಂಟ್ ತೆಗೆದ 4 ಹಾಳೆಗಳನ್ನು ಸ್ವಾಧೀನಪಡಿಸಿಕೊಂಡು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಪ್ರಕರಣ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 140/2021 ಕಲಂ: 78 (i) (iii) KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

  • ಕೋಟ : ಪಿರ್ಯಾದಿ ಸಹದೇವ ಪೂಜಾರಿ(55) ತಂದೆ; ದಿ.ಮುತ್ತ ಪೂಜಾರಿ, ವಾಸ; ಓಣಿಮನೆ ಗುಂಡ್ಮಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 25/09/2021 ರಂದು ಸಂಜೆ 4-30 ಗಂಟೆಗೆ ಸಾಸ್ತಾನ ಟೋಲ್‌ಗೇಟ್‌ನ ಕಡೆಯಿಂದ ರಾ ಹೆ 66 ರಲ್ಲಿ ಪಾಂಡೇಶ್ವರ ಗ್ರಾಮದ ಹಳೇ ನಂದಾ ಚಿತ್ರ ಮಂದಿರದ ಎದುರು  ತಲುಪುವಾಗ, ಫಿರ್ಯಾದಿದಾರರ ಎದುರಿನಿಂದ ಪಿರ್ಯಾದುದಾರರ ಅಳಿಯ ಗೋಫಿ ಎಮ್‌ ರವರು ಸಾಲಿಗ್ರಾಮ ಕಡೆಯಿಂದ ಸಾಸ್ತಾನ ಕಡೆಗೆ ತನ್ನ ಮೋಟಾರು ಸೈಕಲ್‌ನಂಬ್ರ ಕೆಎ 20 ಇಯು 7762 ನೇ ದರಲ್ಲಿ ಹೋಗುತ್ತಿದ್ದು,ಆ ಸಮಯ ಗೋಪಿ ರವರ ಬೈಕ್‌ನ ಹಿಂದಿನಿಂದ ಕೆಎ 20 ಇಸಿ 3746 ನೇ ಮೋಟಾರು ಸೈಕಲ್‌ನ ಸವಾರನು ಗೋಪಿ ಎಮ್‌ರವರ ಬೈಕ್‌ನ್ನು ಹಿಂದಿಕ್ಕಿ ಓವರ್‌ಟೇಕ್‌ಮಾಡುವ ಭರದಲ್ಲಿ ಅವರ ಹಿಂದಿನಿಂದ ಬರುತ್ತಿದ್ದ ಘನ ವಾಹನವನ್ನು ನೋಡಿ ಆರೋಪಿ ಸುನೀಲ್‌ನು ತನ್ನ ಮೋಟಾರು ಸೈಕಲ್‌ನ್ನು ಒಮ್ಮಲೇ ಎಡಕ್ಕೆ ತಿರುಗಿಸಿ ಗೋಪಿ ರವರ ಮೋಟಾರು ಸೈಕಲ್‌ನ ಬಲಕ್ಕೆ ಢಿಕ್ಕಿ ಹೊಡೆದ ಪರಿಣಾಮ ಗೋಪಿರವರು ಬೈಕ್‌ಸಮೇತ ರಸ್ತೆಗೆ ಬಿದ್ದಿದ್ದು, ಅವರನ್ನು ಉಪಚರಿಸಿ ನೋಡಲಾಗಿ ಅವರ ಬಲ ಪಕ್ಕೆಲುಬುಬಿಗೆ ತೀವ್ರ ರಕ್ತಗಾಯವಾಗಿ ಮೂಳೆ ಮುರಿತವಾಗಿದ್ದು, ಬಲ ತೊಡೆ, ಬಲಕೈ ಹಾಗೂ ಮುಖದ ಚರ್ಮ ಸುಲಿದು ರಕ್ತಗಾಯವಾಗಿರುತ್ತದೆ. ಗೋಫಿ ರವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು ಕೂಡಲೇ ಅವರನ್ನು ಬ್ರಹ್ಮಾವರ ಮಹೆಶ್‌ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಅಲ್ಲಿಂದ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 169/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.

ಇತರ ಪ್ರಕರಣ

  • ಉಡುಪಿ: ನ್ಯಾಯಾಲಯದಿಂದ ಬಂದಿರುವ ಖಾಸಗಿ ಫಿರ್ಯಾದಿ ನಂಬ್ರ: 826/21ರಂತೆ ಪಿರ್ಯಾದಿ ರಮೇಶ್ ಜಿ ಡಿ, 35 ವರ್ಷ, ತಂದೆ: ಜಿ ಎಸ್ ದಯಾನಂದ, ವಾಸ : ಪ್ರೊಪೈಟರ್, ಮೆ. ಓಸ್ಟಿಯೋ ಮಾರ್ಕೇಟಿಂಗ್, 2ನೆ ಮಹಡಿ, ಶ್ರೀ ಹರಿ ಟವರ್ಸ್, ಉಡುಪಿ ಇವರು ಮತ್ತು ಆರೋಪಿ ಪ್ರಕಾಶ್ ರಾವ್ (50) ತಂದೆ: ಕೆ. ದಿನಕರ ರಾವ್ ವಾಸ: ಡೋರ್ ನಂ: 5/28(2), ಗಣೇಶ ನಿಲಯ, ಸುದಿನ್ ಕಂಪೌಂಡ್, ಅಂಬಲಪಾಡಿ – ಕಿದಿಯೂರು ರಸ್ತೆ, ಅಂಬಲಪಾಡಿ ಅಂಚೆ, ಉಡುಪಿ ತಾಲೂಕು ಇವರು ಸುಮಾರು 5 ವರ್ಷಗಳಿಂದ ಪರಿಚಿತ ವ್ಯಕ್ತಿಗಳಾಗಿದ್ದು, ಫಿರ್ಯಾದಿದಾರರು ಆ್ಯಸ್ಟಿಯೋ ಮಾರ್ಕೆಟಿಂಗ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದು, ಆರೋಪಿಯು ಜಂಟಿ ಹಕ್ಕಿನಲ್ಲಿರುವ ಸರ್ವೆ ನಂಬ್ರ: 52/20ಬಿ ರಲ್ಲಿನ 10 ಸೆಂಟ್ಸ್ ಜಾಗವನ್ನು ರೂ. 36,00,000/- ಕ್ಕೆ ಫಿರ್ಯಾದಿದಾರರಿಗೆ ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದು, ಇದನ್ನು ನಂಬಿದ ಫಿರ್ಯಾದಿದಾರರು ರೂ. 33,82,000/- ಹಣವನ್ನು ಆರೋಪಿಯ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು, ಉಳಿದ ಮೊತ್ತವನ್ನು ನೋಂದಣಿಯ ಸಮಯದಲ್ಲಿ ನೀಡುವುದಾಗಿ ಭರವಸೆ ನೀಡಿದ್ದು, ಆದರೆ ಆರೋಪಿಯು ಸದ್ರಿ ಜಾಗವನ್ನು ನೋಂದಣಿ ಮಾಡಿಕೊಡದೆ, ಎರಡು ತಿಂಗಳ ಒಳಗಾಗಿ ಮಾಡಿಕೊಡುವುದಾಗಿ ನಂಬಿಸಿದ್ದು, ಆದರೂ ನೋಂದಣೀ ಮಾಡಿಕೊಡದೇ ಅದು ಜಾಯಿಂಟ್ ಪ್ರಾಪರ್ಟಿ ಆಗಿರುವುದರಿಂದ ಉಳಿದ ಪಾಲುದಾರರು ಒಪ್ಪದೇ ಇರುವುದರಿಂದ ನೋಂದಣಿ ಮಾಡಿಕೊಡಲಾಗುತ್ತಿಲ್ಲವಾಗಿ ತಿಳಿಸಿದ್ದು, ಆಗ ಫಿರ್ಯಾದಿದಾರರು ತಾನು ನೀಡಿರುವ ಹಣವನ್ನು ವಾಪಾಸ್ಸು ನೀಡುವಂತೆ ಕೇಳಿಕೊಂಡಾಗ ಆರೋಪಿಯು 9 ಚೆಕ್ ಗಳನ್ನು ಫಿರ್ಯಾದಿದಾರರಿಗೆ ನೀಡಿದ್ದು, ಇದನ್ನು ನಗದಿಕರಿಸಲು ಫಿರ್ಯಾದಿದಾರರು ಬ್ಯಾಂಕ್ ಗೆ ಹಾಕಿದಾಗ ಅದು ಹಣ ಇಲ್ಲದೇ ಇರುವುದರಿಂದ ಅಮಾನ್ಯಗೊಂಡಿದ್ದು, ದಿನಾಂಕ: 27/01/2021ರ ದಿನಪತ್ರಿಕೆಯಲ್ಲಿ ಆರೋಪಿಯು ಕಾಣೆಯಾಗಿರುತ್ತಾನೆ ಎಂಬ ಬಗ್ಗೆ ವಿವರ ಪ್ರಕಟಣೆಗೊಂಡಿದ್ದು, ಬಳಿಕ ಫಿರ್ಯಾದಿದಾರರು 138 ಎನ್‌.ಐ ಕಾಯ್ದೆಯಡಿ ಪ್ರಕರಣ ದಾಖಲಿಸಿರುತ್ತಾರೆ. ಆರೋಪಿಯು ಉದ್ದೇಶಪೂರ್ವಕವಾಗಿ ಫಿರ್ಯಾದಿದಾರರಿಂದ ಹಣ ಗಳಿಸುವ ದುರುದ್ದೇಶದಿಂದ ಸುಳ್ಳು ಭರವಸೆ ನೀಡಿ, ರೂ 33,82,000/- ಪಡೆದುಕೊಂಡು, ಉದ್ದೇಶಿತ ಜಾಗವನ್ನು ನೋಂದಣಿ ಮಾಡಿಕೊಡದೇ ಮತ್ತು ಹಣವನ್ನು ಹಿಂತಿರುಗಿಸದೇ ಮೋಸ, ವಂಚನೆ ನಡೆಸಿರುತ್ತಾನೆ ಎಂಬುದಾಗಿದ್ದು, ಉಡುಪಿ ಸೆನ್‌ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2021 ಕಲಂ: 406,415,419,420,421,120(ಬಿ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಹೆಚ್.ಸಿ 2209 ನೇ ಸತೀಶ್ ರವರು ತಮ್ಮ ಖಾಸಗಿ ಮೋಟಾರ್ ಸೈಕಲ್ ನಲ್ಲಿ ಹೆಚ್.ಜಿ: 402 ನೇ ಸುಪ್ರತಾ ಎಂಬುವರೊಂದಿಗೆ ದಿನಾಂಕ: 26.09.2021 ರಂದು ರಾತ್ರಿ ರೌಂಡ್ಸ್ ಬಗ್ಗೆ 23-00 ಗಂಟೆಗೆ  ಠಾಣೆಯಿಂದ ಹೊರಟು ಠಾಣಾ ವ್ಯಾಪ್ತಿಯ ಕಂಡ್ಲೂರು ಬಸ್ರೂರು ಮುಂತಾದ ಕಡೆಗಳಲ್ಲಿ ಸಂಚರಿಸಿಕೊಂಡು ದಿನಾಂಕ: 27.09.2021 ರಂದು ಬೆಳಗಿನ ಜಾವ 03-25 ಗಂಟೆಗೆ ಬಳ್ಕೂರು ಗ್ರಾಮದ ಬಳ್ಕೂರು –ಗುಲ್ವಾಡಿ ಸೇತುವೆಯನ್ನು ತಲುಪುವಾಗ ಓರ್ವ ವ್ಯಕ್ತಿ  ತನ್ನ ಬಾಬ್ತು ಮೋಟಾರ್ ಸೈಕಲ್ ಅನ್ನು ಗುಲ್ವಾಡಿ ಕಡೆಯಿಂದ ಬಳ್ಕೂರು ಕಡೆಗೆ ಬರುತ್ತಿದ್ದು,  ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ತನ್ನ ಮೋಟಾರ್ ಸೈಕಲ್ ನ್ನು ವಾಪಾಸ್ ಗುಲ್ವಾಡಿ ಕಡೆಗೆ ಚಲಾಯಿಸಿಕೊಂಡು ಹೋಗಿದ್ದು, ಆತನನ್ನು ಹಿಂಬಾಲಿಸಿದಲ್ಲಿ ಆತನು ಗುಲ್ವಾಡಿ ಪ್ರಭಾಕರ್ ಟೈಲ್ಸ್ ಕಡೆಗೆ ಹೊರಟು ಹೋಗಿ ಮರೆಯಾಗಿದ್ದು, ಟಾರ್ಚ್ ಮುಖಾಂತರ ನೋಡಲಾಗಿ ಸದ್ರಿ ವ್ಯಕ್ತಿಯು ಅಪರಾಧ ಕ್ರಮಾಂಕ 48/2021 ಕಲಂ: 379 ಐಪಿಸಿ & ಕಲಂ: 11(1)(ಡಿ) ಪ್ರಾಣಿಹಿಂಸೆ ನಿಷೇಧ ಕಾಯ್ದೆ-1960 ರಲ್ಲಿಯ ಆರೋಪಿತ ಮಹಮದ್ ರಪೀಕ್ ಆಗಿದ್ದು, ಆತನಲ್ಲಿ ದೊರೆತ ಎA 20 EE 1797  ಬಗ್ಗೆ ಕೇಳಲಾಗಿ ಆತನು ತಾನು ಅಬೂಬಕರ್ ಗೆ ಜಾನುವಾರುಗಳ ಬಗ್ಗೆ ಮಾಹಿತಿ ನೀಡುತ್ತಿರುವ ಬಗ್ಗೆ ತಿಳಿಸಿದ್ದು, ಅಷ್ಟರಲ್ಲಿ ಸದ್ರಿ ಸ್ಥಳಕ್ಕೆ KA 20 N 6990ನೇ ಟಾಟಾ ಸುಮೋ ವಾಹನ ಬಂದಿದ್ದು, ಸದ್ರಿ ವಾಹನವನ್ನು ನಿಲ್ಲಿಸುವರೇ ಸೂಚಿಸಿದಲ್ಲಿ ಆತನು ಅತಿ ವೇಗವಾಗಿ ತನ್ನ ವಾಹನವನ್ನು ಬಳ್ಕೂರು ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾನೆ. ಈ ಬಗ್ಗೆ ವಿಚಾರಿಸಿದಲ್ಲಿ ಸದ್ರಿ ವಾಹನವು ಅಬೂಬಕರ್ ನದ್ದು ಎಂದು ತಿಳಿಸಿರುತ್ತಾನೆ. ಸದ್ರಿ ಯವರನ್ನು ಠಾಣೆಗೆ ಹಾಜರುಪಡಿಸುತ್ತಿದ್ದು. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವರೇ ಎಂಬಿತ್ಯಾಧಿಯನ್ನು ದಿನಾಂಕ: 27.09.2021 ರಂದು ಬೆಳಗಿನ ಜಾವ 04-30ಗಂಟೆಗೆ ಠಾಣೆಗೆ ವರದಿಯೊಂದಿಗೆ ಹಾಜರು ಪಡಿಸಿದಲ್ಲಿ ಸದ್ರಿ ವರದಿಯನ್ನು ಠಾಣಾ ಎನ್ ಸಿ ನಂಬ್ರ: 139/2021 ರಂತೆ ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸುವರೇ ಅನುಮತಿ ನೀಡುವರೇ ಕೋರಿಕೊಂಡು ಸದ್ರಿ ಆರೋಪಿತರಿಗೆ 41 (1)(ಎ) ಸಿ.ಆರ್ ಪಿ.ಸಿ ಯಂತೆ ನೋಟಿಸ್ ಜ್ಯಾರಿ ಮಾಡಲಾಗಿರುತ್ತದೆ. ದಿನಾಂಕ:28-09-2021ರಂದು 15:00ಗಂಟೆಗೆ ಪ್ರಕರಣ ದಾಖಲಿಸುವರೇ ಅನುಮತಿ ನೀಡಿದ್ದನ್ನು ಸ್ವೀಕರಿಸಿ ಕುಂದಾಫುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 62/2021 ಕಲಂ: 96(B)(D) ಕೆ.ಪಿ ಆ್ಯಕ್ಟ್ ರಂತೆ ಪ್ರಕರಣ ದಾಖಲಿಸಿರುವುದಾಗಿದೆ.

ಇತ್ತೀಚಿನ ನವೀಕರಣ​ : 29-09-2021 11:00 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080