ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಶಶಿಕಾಂತ (26) ತಂದೆ: ಮಂಜುನಾಥ ವಾಸ: ಶ್ರೀ ದೇವಿ ಕೃಪಾ ವಸ: ಪಾಡಿಬಟ್ಟು, ಪಡುಬಿದ್ರೆ, ಪಡಿಬೆಟ್ಟು ಗ್ರಾಮ ಪಡುಬಿದ್ರೆ ಅಂಚೆ, ಕಾಪು ಇವರು ನಿಟ್ಟೂರು ಕಂಚನ ಹುಂಡೈ ಶೋ ರೂಂ ನಲ್ಲಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ 29/09/2021 ರಂದು ಇವರು ತನ್ನ ಸಹೋದ್ಯೋಗಿ ದಿವ್ಯಲಕ್ಷ್ಮಿ ರವದೊಂದಿಗೆ ಕೆಲಸದ ನಿಮಿತ್ತ ತನ್ನ ಮೋಟಾರು ಸೈಕಲ್ ನಂಬ್ರ KA-20 ET-3053  ನೇದರಲ್ಲಿ ದಿವ್ಯ ರವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಹೊರಟು ಕರಾವಳಿ ಕಡೆಯಿಂದ ಅಂಬಾಗಿಲು ಜಂಕ್ಷನ್ ಕಡೆಗೆ ಬಂದು, ಅಂಬಾಗಿಲು ಜಂಕ್ಷನ್ ನಲ್ಲಿ ಬಲಕ್ಕೆ ತನ್ನ ಮೋಟಾರು ಸೈಕಲನ್ನು ತಿರುಗಿಸುವರೇ ಅಂಬಾಗಿಲು ಜಂಕ್ಷನ್ ಬಳಿ ರಸ್ತೆ ಬದಿಯಲ್ಲಿ ತನ್ನ ಮೋಟಾರು ಸೈಕಲನ್ನು ನಿಲ್ಲಿಸಿದ್ದು, ಆ ಸಮಯ ಸುಮಾರು ಸಂಜೆ 6:30 ಗಂಟೆಗೆ KA-20 ES-0453 ಮೋಟಾರು ಸೈಕಲ್ ಸವಾರ ಕೃಷ್ಣ ವಿ. ಶೆಟ್ಟಿ ಎಂಬವರು ತನ್ನ ಮೋಟಾರು ಸೈಕಲನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಅಂಬಾಗಿಲು ಜಂಕ್ಷನ್ ನಲ್ಲಿರುವ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ನಂತರ ನಿಲ್ಲಿಸಿದ್ದ ಮೋಟಾರು ಸೈಕಲಿಗೂ ಡಿಕ್ಕಿಹೊಡೆದಿದ್ದು, ಶಶಿಕಾಂತ ರವರು ಹಾಗೂ ದಿವ್ಯಾ ರವರು ರಸ್ತೆಗೆ ಬಿದ್ದು ಕೈಗೆ ತರಚಿದ ಗಾಯವಾಗಿರುತ್ತದೆ. ಹಾಗೂ ಅಫಘಾತಪಡಿಸಿದ ಮೋಟಾರು ಸೈಕಲ್ ಸವಾರ ಕೃಷ್ಣ ವಿ ಶೆಟ್ಟಿ ಎಂಬವರು ರಸ್ತೆಗೆ ಬೀದ್ದು ಮುಖಕ್ಕೆ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 65/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕೊಲ್ಲೂರು: ಪಿರ್ಯಾಧಿದಾರರಾದ ತಂಗಚ್ಚನ್ (60) ತಂದೆ: ಅಬ್ರಹಾಂ ವಾಸ: ಪಾನಪಳ್ಳಿ ಮನೆ ಉದಯಪುರ ಮುದೂರು ಗ್ರಾಮ ಬೈಂದೂರು ಇವರ ಮಗನಾದ ಮನಿಶ್ (32) ಎಂಬುವವರು ದಿನಾಂಕ 29/09/2021 ರಂದು ಬೆಳಗಿನ ಜಾವ 01:30 ಗಂಟೆಗೆ ಮುದೂರು ಗ್ರಾಮದ  ಉದಯಪುರ  ಪಾನಪಳ್ಳಿ ಎಂಬ ವಾಸದ ಮನೆಯಲ್ಲಿ  ಮಲಗಿಕೊಂಡಿದ್ದ ಸಮಯ ಎದೆನೋವು ಕಾಣಿಸಿಕೊಂಡು ಉಸಿರಾಡಲು ಸಮಸ್ಯೆ ಉಂಟಾಗಿ ಅಸ್ವಸ್ಥರಾದವರನ್ನು  ಚಿಕಿತ್ಸೆಗೆ ಕುಂದಾಪುರ ನ್ಯೂ ಮಡಿಕಲ್ ಆಸ್ಪತ್ರೆಗೆ  ಕರೆದುಕೊಂಡು ಬಂದಾಗ ವೈದ್ಯರು  ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದಾಗಿ ಸೂಚಿಸಿದಂತೆ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆಗೆ ಕರೆತರುವ ದಾರಿಯಲ್ಲಿಯೇ ಮೃತಪಟ್ಟಿರುವುದಾಗಿ ಬೆಳಗ್ಗಿನ ಜಾವ 05:13 ಗಂಟೆಗೆ ದೃಢೀಕರಿಸಿರುತ್ತಾರೆ. ಮೃತರಿಗೆ ಎದೆನೋವು ಕಾಣಿಸಿಕೊಂಡು ಹೃದಯ ಸಂಭಂದಿ ಸಮಸ್ಯೆಯಿಂದ ಮೃತಪಟ್ಟಿರುತ್ತಾರೆ ಮೃತರ ಮರಣದ ಸರಿಯಾದ    ಕಾರಣ ತಿಳಿಯಲು ವೈದ್ಯಕೀಯ ಶವ ಪರೀಕ್ಷೆಗೆ ಒಳಪಡಿಸಲಾಗಿದೆ, ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣಾ ಯು.ಡಿ.ಆರ್‌ ಕ್ರಮಾಂಕ 11/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ವಸಂತ ಶೆಟ್ಟಿ(73), ತಂದೆ: ದಿ. ಆನಂತಶೆಟ್ಟಿ, ವಾಸ:ತಡಾಲು ಮೂಡುಬೆಟ್ಟು ಅಂಚೆ, ಕರ್ಜೆ, ಹೊಸೂರು ಗ್ರಾಮ, ಬ್ರಹ್ಮಾವರ ಇವರ ಮನೆಯಲ್ಲಿ ಸುಮಾರು ಒಂದು ವರ್ಷದಿಂದ ತೋಟದ ಕೆಲಸಕ್ಕಿದ್ದ ಹೊರ್ಲಾಳಿ ಕುಳುಂಜೆಯ ವಾಸಿ ಕೃಷ್ಣ ಪೂಜಾರಿ (48) ಎಂಬವರು ಎಂದಿನಂತೆ ಕೆಲಸ ಮಾಡಿ ದಿನಾಂಕ 28/09/2021 ರ ರಾತ್ರಿ 8:30 ಗಂಟೆಗೆ ಊಟ ಮಾಡಿ ಪಿರ್ಯಾದಿ ಮನೆಯ ಎದುರು ಕಡುಮಾಡಿನಲ್ಲಿ ಮಲಗಲು ಹೋಗಿರುತ್ತಾರೆ. ಮರುದಿನ ಬೆಳಿಗ್ಗೆ 6:00 ಗಂಟೆಗೆ ಆತನನ್ನು ಕರೆದಾಗ ಆತನು ಬಾರದೇ ಇದ್ದು, ಹತ್ತಿರ ಹೋಗಿ ನೋಡಿದಾಗ ಆತನು ಮೃತಪಟ್ಟಿರುವುದು ಕಂಡು ಬಂದಿರುತ್ತದೆ. ಮೃತ ಕೃಷ್ಣ ಪೂಜಾರಿಯು ದಿನಾಂಕ 28/09/2021 ರ ರಾತ್ರಿ 8:30 ಗಂಟೆಯಿಂದ ದಿನಾಂಕ 29/09/2021 ರ ಬೆಳಿಗ್ಗೆ 6:00 ಗಂಟೆಯ ಮಧ್ಯಾವಧಿಯಲ್ಲಿ ಹೃದಯಾಘಾತದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಯು.ಡಿ.ಆರ್‌ ಕ್ರಮಾಂಕ 57/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ಮಂಜುನಾಥ ನಾಯ್ಕ (50) ಈತನು ದಿನಾಂಕ 28/09/2021 ರಂದು 19:30 ಘಂಟೆಗೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಸಿದ್ದಾಪುರ ಕನಿಷ್ಕ ಬಾರ್ ಬಳಿ ರಕ್ತವಾಂತಿ ಮಾಡಿಕೊಂಡಿದ್ದು,  ಕೂಡಲೇ ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಆತನನ್ನು  ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುತ್ತಾನೆ ಎಂದು ತಿಳಿಸಿರುತ್ತಾರೆ, ಮಂಜುನಾಥ ನಾಯ್ಕ  ಈತನು  ವಿಪರೀತ  ಶರಾಬು ಕುಡಿಯುವ ಚಟ ಹೊಂದಿದ್ದು, ಅದೇ ಕಾರಣದಿಂದಲೊ ಅಥವಾ ಬೇರೆ ಯಾವುದೋ   ಕಾರಣದಿಂದಲೊ ಮೃತಪಟ್ಟಿರುತ್ತಾನೆ, ಎಂಬುದಾಗಿ ಸತೀಶ  ನಾಯ್ಜ (39) ತಂದೆ, ಶಂಕರ ನಾಯ್ಕ ವಾಸ, ಕಲ್‌ಕೊಡ್ಗಿ ನೂಜಿನಬೈಲ್ಲು ಉಳ್ಳೂರು 74 ಗ್ರಾಮ ಕುಂದಾಪುರ ಇವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣಾ ಯು.ಡಿ.ಆರ್‌ ಕ್ರಮಾಂಕ 37/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಸುಲಿಗೆ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಸವಿತಾ (42) ಗಂಡ: ರಮೇಶ್‌ಪೂಜಾರಿ ವಾಸ: ಪಂಚವಟಿ, ಬಂಕೇರಕಟ್ಟ, ಅಂಬಲ್ಪಾಡಿ, ಉಡುಪಿ ತಾಲೂಕು. ಪ್ರಸ್ತುತ ವಿಳಾಸ: ಕೇರ್‌ಆಫ್‌ರಾಂ ಭಟ್‌, ಸಗ್ರಿ ಜುಮಾದಿ ಸ್ಥಾನದ ಬಳಿ, ಕುಂಜಿಬೆಟ್ಟು, ಉಡುಪಿ ಇವರು ಉಡುಪಿ ರಥಬೀದಿಯಲ್ಲಿರುವ ಕೆ.ವಿ ಪೈ & ಸನ್ಸ್‌ಎಂಬ ದಿನಸಿ ಅಂಗಡಿಯಲ್ಲಿ ಪ್ಯಾಕಿಂಗ್‌ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ 28/09/2021 ರಂದು 18:00 ಗಂಟೆಗೆ ಕೆಲಸ ಮುಗಿಸಿ ಮನೆ ಕಡೆಗೆ ಹೊರಟು, ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮುಕುಂದ ಕೃಪಾ ಶಾಲೆಯ ಪಕ್ಕದ ಓಣಿಯಲ್ಲಿ ನಡೆದುಕೊಂಡು ಹೋಗುವಾಗ ಸಮಯ ಸುಮಾರು 18:10 ಗಂಟೆಗೆ ಎದುರುಗಡೆಯಿಂದ 20 ರಿಂದ 25 ವರ್ಷ ವಯಸ್ಸಿನ ಓರ್ವ ಯುವಕ ಏಕಾಏಕಿ ಪಿರ್ಯಾದುದಾರರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಬಲಾತ್ಕಾರವಾಗಿ ಏಳೆದಾಗ ಇವರು ಬೊಬ್ಬೆ ಹೊಡೆದು ಆತನ ಕೈ ಹಿಡಿಯಲು ಹೋಗಿದ್ದು, ಆಗ ಕರಿಮಣಿ ಸರ ಸವಿತಾ ಇವರ ಕೈಗೆ ಬಂದಿರುತ್ತದೆ. ಅದರಲ್ಲಿದ್ದ ತಾಳಿ ಸೆಟ್‌ನ್ನು ಆರೋಪಿತನು ಸುಲಿಗೆ ಮಾಡಿಕೊಂಡು ಹೋಗಿದ್ದು, ಸುಲಿಗೆಯಾದ ತಾಳಿ ಸೆಟ್‌ನಲ್ಲಿ 5 ಗ್ರಾಂ ಚಿನ್ನ ಇದ್ದು, ಅಂದಾಜು ಮೌಲ್ಯ ರೂಪಾಯಿ 20,000/- ಆಗಿರಬಹುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 141/2021 ಕಲಂ: 392 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-09-2021 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080