ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ 28/08/2022 ರಂದು ಪಿರ್ಯಾದಿದಾರರಾಧ ರೋನಿ ಮುಕ್ರಿ (67) ತಂದೆ, ಜೋರ್ಜ  ಅಂಥೋನಿ ಮುಕ್ತಿ ವಾಸ, ಸೀತಾನದಿ ನಾಡ್ಪಾಲು ಗ್ರಾಮ ಹೆಬ್ರಿ ಇವರು ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದ   ಗೋಳಿಯಂಗಡಿ ವಿಶ್ವನಾಥ ವೈದ್ಯರ ಮನೆಯ ಬಳಿ ಕೆಎ-20 ಇಎಸ್-6300  ನೇ  ನಂಬ್ರದ ಟಿವಿಎಸ್ ಮೋಟಾರ್  ಸೈಕಲ್‌ನ್ನು ರಸ್ತೆಯ ಬಲಬದಿಯಲ್ಲಿ ನಿಲ್ಲಿಸಿಕೊಂಡಿರುವಾಗ  ಆರೋಪಿಯು ಕೆಎ-21 ಎಮ್-5595 ನೇ ನಂಬ್ರದ  ಕಾರನ್ನು ಅಲ್ಬಾಡಿ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಇವರು  ನಿಲ್ಲಿಸಿಕೊಂಡ ಟಿವಿಎಸ್ ಎಕ್ಸಲ್ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದಿರುತ್ತಾನೆ, ಅದರ ಪರಿಣಾಮ ಮೋಟಾರ್  ಸೈಕಲ್   ಸಮೇತ  ರಸ್ತೆಯ ಮೇಲೆ ಬಿದಿದ್ದು, ಇದರಿಂದ ರೋನಿ ಮುಕ್ರಿ ರವರ ಬಲಕಾಲಿನ ತೊಡೆಗೆ ಮೂಳೆ ಮುರಿತದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಹೆಬ್ರಿ  ಸರಕಾರಿ ಆಸ್ಪತೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ  ಚಿಕಿತ್ಸೆಯ ಬಗ್ಗೆ  ಉಡುಪಿ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 85/2022 ಕಲಂ: 279, 338 ಐ.ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಮಾಧಕ ವಸ್ತು ಸೇವನೆ ಪ್ರಕರಣ

  • ಬೈಂದೂರು: ದಿನಾಂಕ 28/08/2022 ರಂದು ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ ಎ ಕಾಯ್ಕಿಣಿ ರವರು ಸಿಬ್ಬಂದಿಗಳಾದ ಶ್ರೀನಿವಾಸ ಹೆಚ್ ಸಿ 26, ಪಿಸಿ 1172 ನೇ ಸುಜಿತ್  ಹಾಗೂ ಜೀಪು ಚಾಲಕ ಎ.ಪಿ.ಸಿ : 82 ನೇ  ಚಂದ್ರ ರವರೊಂದಿಗೆ ಜೀಪು ನಂ ಕೆಎ-20 ಜಿ-506 ನೇದರಲ್ಲಿ ಸಮಯ ಸುಮಾರು 12:00 ಗಂಟೆಗೆ ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಕರಾವಳಿ ಸಮುದ್ರ ಕಿನಾರೆ ಬಳಿ  ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಾರ್ವಜನಿಕ ಸ್ಥಳದಲ್ಲಿ ಅಮಲಿನಲ್ಲಿ ತೂರಾಡಿಕೊಂಡಿದ್ದ ನಾಗರಾಜ ಮೊಗವೀರ (23) ತಂದೆ: ಕೃಷ್ಣ ಮೊಗವೀರ ವಾಸ: 5/83 , ಕರಾವಳಿ,  ಶಿರೂರು ಗ್ರಾಮ ಬೈಂದೂರು ತಾಲೂಕು ಉಡುಪಿ ಜಿಲ್ಲೆ ಈತನನ್ನು ವಶಕ್ಕೆ ಪಡೆದುಕೊಂಡು ಬಂದಿದ್ದು ಸದ್ರಿ ವ್ಯಕ್ತಿಯು ನಿಷೇದಿತ ಮಾಧಕ ವಸ್ತುಗಳನ್ನು ಸೇವಿಸಿರುವ ಸಂಶಯವಿದ್ದು ಅವರನ್ನು ವಶಕ್ಕೆ ಪಡೆದುಕೊಂಡು ವರದಿಯೊಂದಿಗೆ ಠಾಣೆಗೆ ಹಾಜರುಪಡಿಸಿದ್ದು, ಸದ್ರಿ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಯ ಬಗ್ಗೆ ವೈದ್ಯಾಧಿಕಾರಿಯವರು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು ದಿನಾಂಕ 28/08/2022 ರಂದು ಈತನನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ನಾಗರಾಜ ಮೊಗವೀರ ರವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 173/2022 ಕಲಂ: 27(B) NDPS ACT-1985 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾಧ ನಿರಂಜನ್ ಗೌಡ ಬಿ ಎಸ್  ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ. ಬೈಂದೂರು ಇವರು ದಿನಾಂಕ 28/08/2022 ರಂದು ಸಿಬ್ಬಂದಿಗಳಾದ ಹೆಚ್ ಸಿ  26, ಪಿಸಿ 2406  ಮತ್ತು ಎಪಿಸಿ 1596  ನೇಯವರೊಂದಿಗೆ ಇಲಾಖಾ ಜೀಪು ನಂಬ್ರ ಕೆಎ 20 ಜಿ 164 ನೇದರಲ್ಲಿ ಸಮಯ ಸುಮಾರು 17:45 ಗಂಟೆಗೆ ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಹಡವಿನಕೋಣೆ ಶಾಲೆಯ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಾರ್ವಜನಿಕ ಸ್ಥಳದಲ್ಲಿ ಅಮಲಿನಲ್ಲಿ ತೂರಾಡಿಕೊಂಡಿದ್ದ ಆರೋಪಿತ ಹೊಂಗೆ ಮಹಮ್ಮದ್ ಫರ್ಹಾನ್ (23)ತಂದೆ: ಮಹಮ್ಮದ್ ಅಯುಬ್ ವಾಸ: ನಾಖೂದ ಮೊಹಲ್ಲಾ ಹಡವಿನಕೋಣೆ ಶಿರೂರು ಗ್ರಾಮ ಬೈಂದೂರು ತಾಲೂಕು ರವರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದು ಸದ್ರಿ ಆರೋಪಿಯು ನಿಷೇದಿತ ಮಾಧಕ ವಸ್ತುಗಳನ್ನು ಸೇವಿಸಿರುವ ಸಂಶಯವಿದ್ದು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಯ ಬಗ್ಗೆ ವೈದ್ಯಾಧಿಕಾರಿಗಳು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು ಇವರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ದಿನಾಂಕ 28/08/2022 ರಂದು ಹೊಂಗೆ ಮಹಮ್ಮದ್ ಫರ್ಹಾನ್ ರವರು  ಗಾಂಜಾ ಸೇವಿಸಿರುವುದು ದೃಢ ಪಟ್ಟಿರುವುದಾಗಿದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 174/2022 ಕಲಂ: 27(B) NDPS ACT-1985 ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರರಾದ ಸುಕುಮಾರ ಶೆಟ್ಟಿ (48), ತಂದೆ: ವೆಂಕಪ್ಪ ಶೆಟ್ಟಿ, ವಾಸ: ಚಾಂತಾರು ಗ್ರಾಮ, ಬ್ರಹ್ಮಾವರ ರವರು ಸೇನಾಪುರ ರೈಲ್ವೆ ಸ್ಟೇಶನ್‌ನಲ್ಲಿ ಸ್ಟೇಶನ್‌ ಮಾಸ್ಟರ್‌ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 29/08/2022 ರಂದು ಕರ್ತವ್ಯದಲ್ಲಿರುವಾಗ ಬೆಳಿಗ್ಗೆ ಸಮಯ ಸುಮಾರು 6:30 ಗಂಟೆಗೆ ರೈಲ್ವೇ ನೌಕರ ಲಕ್ಷ್ಮಣ ಎಂಬವರು ಸೇನಾಪುರ ರೈಲ್ವೆ ಸ್ಟೇಷನ್ ಗೆ ಬಂದು ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿ ಕಿ,ಮಿ 645/9- 648/0 ರ ಮಧ್ಯೆಯಲ್ಲಿ ಒಂದು ಗಂಡಸಿನ ಮೃತದೇಹವು  ಬಿದ್ದಿರುವುದಾಗಿ ತಿಳಿಸಿದಂತೆ ಸುಕುಮಾರ ಶೆಟ್ಟಿ ರವರು ಕೂಡಲೇ ಸ್ಥಳಕ್ಕೆ ಬಂದು ನೋಡಲಾಗಿ ಸುಮಾರು 30 ರಿಂದ 35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹವಾಗಿರುತ್ತದೆ, ದಿನಾಂಕ 28/08/2022 ರಂದು 22:00 ಗಂಟೆಯಿಂದ ದಿನಾಂಕ 29/08/2022 ರ ಬೆಳಿಗ್ಗೆ 06:00 ಗಂಟೆಯ ಮದ್ಯಾವದಿಯಲ್ಲಿ ಚಲಿಸುವ ರೈಲಿನಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ತಲೆಗೆ ಹಾಗೂ ಮೈಕೈಗೆ ರಕ್ತಗಾಯವಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 20/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-08-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080