ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಶೇಖರ ಖಾರ್ವಿ (40), ತಂದೆ; ದಾರ ಖಾರ್ವಿ, ವಾಸ; ಗಣೇಶನಮನೆ, ಜನತಾ ಕಾಲೋನಿ, ಉಪ್ಪುಂದ ಗ್ರಾಮ, ಬೈಂದೂರು ತಾಲೂಕು ಇವರಿಗೆ ಮಗ ಸಚಿತ್ ಹಾಗೂ ಮಗಳು ಸಾನ್ವಿತಾ  (4 ತಿಂಗಳು) ಎಂಬ ಇಬ್ಬರು  ಮಕ್ಕಳಿದ್ದು, ಪಿರ್ಯಾದಿದಾರರ ಹೆಂಡತಿ ಶೈಲಾ ಹೆರಿಗೆಯಾಗಿ ತಾಯಿ ಮನೆಯಾದ ಉದುರು, ಯಡ್ತರೆ ಗ್ರಾಮ ಎಂಬಲ್ಲಿ ವಾಸವಿದ್ದು, ದಿನಾಂಕ 27/08/2022 ರಂದು ರಾತ್ರಿ 11:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಿಗೆ ಅವರ ಹೆಂಡತಿಯು ದೂರವಾಣಿ ಕರೆಮಾಡಿ ತಾನು ಮಗಳು ಸಾನ್ವಿತಾಳಿಗೆ ಹಾಲು ಕುಡಿಸಿ ಮಲಗಿಸುವ ಸಮಯ ಮಗು ಸಾನ್ವಿತಾಳು ಒಮ್ಮೆಲೇ ಜೋರಾಗಿ ಅಳುತ್ತಿದ್ದು, ಮೈ ಕೈ ನಡುಗಿಸುತ್ತಿದ್ದಾಳೆ ಎಂದು ಹೇಳಿದ್ದು ಕೂಡಲೇ ಪಿರ್ಯಾದಿದಾರರು ಅಲ್ಲಿಗೆ ಹೋಗಿ ಮಗುವನ್ನು ಚಿಕಿತ್ಸೆ ಬಗ್ಗೆ ಬೈಂದೂರು ಅಂಜಲಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು  ಮಗುವನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರಕ್ಕೆ ಹೋಗುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಕುಂದಾಪುರ ಆದರ್ಶ ಆಸ್ಪತ್ರೆಗೆ ರಾತ್ರಿ 12:15 ಗಂಟೆಗೆ ಚಿಕಿತ್ಸೆಗೆ ಬಗ್ಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ದಾರಿಮಧ್ಯದಲ್ಲಿಯೇ ಸಾನ್ವಿತಾ ಮೃತಪಟ್ಟಿರುವದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 48/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .   

ಕಾಣೆ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಪಾಂಡುರಂಗ ಪ್ರಭು (41), ತಂದೆ: ರಾಮಚಂದ್ರ ಪ್ರಭು,  ವಾಸ:ಪ್ಲ್ಯಾಟ್ ನಂ:203, ನಯಾತ್  ರೆಸಿಡೆನ್ಸಿಯಲ್ ಪಾರ್ಕ್, ಫೇಸ್ 2, ಪದ್ರ,  ಪಡುಬಿದ್ರಿ, ಪಾದೆಬೆಟ್ಟು  ಗ್ರಾಮ, ಕಾಪು ತಾಲೂಕು ಇವರ ಅಣ್ಣ ರಾಘವೇಂದ್ರ  ಪ್ರಭು (42) ಎಂಬುವವರು  ಅವಿವಾಹಿತರಾಗಿದ್ದು,ಕುಡಿತದ ಚಟ ಹೊಂದಿದ್ದು. ಮತ್ತು ಎಲ್ಲೆಂದರಲ್ಲಿ  ತಿರುಗಾಡುವ ಮತ್ತು ಸಿಕ್ಕಿದ ಕೆಲಸ ಮಾಡಿಕೊಂಡು  ಕಾಲ ಕಳೆಯುವ  ಪ್ರವ್ರತ್ತಿ  ಹೊಂದಿರಿರುತ್ತಾರೆ. ದಿನಾಂಕ 05/08/2022 ರಂದು ಮನೆಗೆ  ಬಂದು ನಾನು ಕಟಪಾಡಿಯಲ್ಲಿ ಕೆಲಸ ಮಾಡುತ್ತಿದ್ದು ಮತ್ತು ಅಲ್ಲಿಯೇ  ವಾಸ್ತವ್ಯ ಇರುವುದಾಗಿ ತಿಳಿಸಿ ಳಿಗ್ಗೆ 11:00 ಗಂಟೆಗೆ  ಮನೆಯಿಂದ  ಹೋದವರು ಸಂಪರ್ಕಕ್ಕೆ ಸಿಗದೇ ಇದ್ದು, ಅವರು ಯಾವಾಗಲೂ ಪೋನ್ ಮಾಡುತ್ತಿದ್ದ ನಂಬರ್‌ಗೆ ಪೋನ್  ಮಾಡಿದಾಗ ಬೇರೆ ಕಡೆ ಕೆಲಸ ಸಿಕ್ಕಿರುವುದಾಗಿ  ಮಾಹಿತಿ ನೀಡಿರುವುದಾಗಿದೆ. ಪಿರ್ಯಾದಿದಾರರು ದಿನಾಂಕ 21/08/2022 ರಂದು ಕಟಪಾಡಿ ನವರಂಗ ಬಾರಿಗೆ ಹೋಗಿ  ವಿಚಾರಿಸಿದಾಗ ಅಲ್ಲಿ  ರಾಘವೇಂದ್ರ  ಪ್ರಭು  ರವರು ಬಟ್ಟೆ ಚೀಲ ಬಿಟ್ಟು ಹೋಗಿದ್ದು, 5-6 ದಿನಗಳಿಂದ  ಬಂದಿರುವುದಿಲ್ಲವಾಗಿ ತಿಳಿಸಿರುತ್ತಾರೆ. ಈ ಹಿಂದೆಯೂ ಹಲವು ಬಾರಿ 7-8 ದಿನ ಸುಳಿವು  ಕೊಡದೇ ತಿರುಗಾಡಿ ನಂತರ ವಾಪಾಸು ಮನೆಗೆ ಬರುತ್ತಿರುವುದಾಗಿದ್ದು, ಸಂಬಂಧಿಕರ ಮನೆಗಳಲ್ಲಿ, ಪರಿಚಯದವರಲ್ಲಿ ವಿಚಾರಿಸಿ ಹುಡುಕಾಡಿದರೂ ಪತ್ತೆಯಾಗದೇ ಇರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 107/2022, ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-08-2022 09:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080