ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

 • ಪಡುಬಿದ್ರಿ : ದಿನಾಂಕ:27/08/2021 ರಂದು ಗಂಟೆಗೆ ಪಿರ್ಯಾದಿ ಕೀರ್ತಿ ಡಿ. ಅಮೀನ್‌ ಪ್ರಾಯ:19 ವರ್ಷ ತಂದೆ:ದಿನೇಶ್‌ ಅಮೀನ್‌ ವಾಸ:ಸುಂದರಿ ಜಿ. ಶ್ರೀಯಾನ್‌ ನಿಲಯ, ಮಠತೋಟ, ಎರ್ಮಾಳು ಬಡಾ ಗ್ರಾಮ, ಕಾಪು ತಾಲೂಕು. ಉಡುಪಿ ಜಿಲ್ಲೆ.  ಇವರು ತನ್ನ ಸ್ನೇಹಿತ ರಂಜಿತ್‌ ಕುಂದರ್‌ನ ಮೋಟಾರು ಸೈಕಲ್‌ನಲ್ಲಿ ಮುದರಂಗಡಿಯಲ್ಲಿರುವ  ಸ್ನೇಹಿತನ ಮನೆಗೆ ಮೀನು ಕೊಡಲು ಹೋಗುವಾಗ ಮದ್ಯಾಹ್ನ 2:30 ಗಂಟೆ ಸುಮಾರಿಗೆ ಕಾಪು ತಾಲೂಕು ಎಲ್ಲೂರು ಗ್ರಾಮದ ಕೆಮುಂಡೆಲು ಶಾಲೆಯ ಬಳಿ ತಲುಪುವಾಗ ಮುದರಂಗಡಿ ಕಡೆಯಿಂದ ಎರ್ಮಾಳು ಕಡೆಗೆ ಓರ್ವ ಸ್ಕೂಟಿ ಸವಾರನು ಸಹ ಸವಾರನನ್ನು ಕಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ತಿರುವಿನಲ್ಲಿ ನಿಯಂತ್ರಣ ತಪ್ಪಿ ಬಲಕ್ಕೆ ಚಲಿಸಿ ರಸ್ತೆಯ ಬದಿಯಲ್ಲಿದ್ದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದಿದ್ದು, ಪಿರ್ಯಾದಿದಾರರು ಹಾಗೂ ಇತರರು ಸ್ಥಳಕ್ಕೆ ಧಾವಿಸಿ ನೋಡಲಾಗಿ ಅವರ ಪರಿಚಯದ ಎರ್ಮಾಳ್‌ನ ತಿಲಕ್‌ ಎಚ್‌ ಸಾಲ್ಯಾನ್‌ ಹಾಗೂ ಪವನ್‌ ಕುಮಾರ್‌ ಆಗಿದ್ದು, ಸ್ಕೂಟಿ ನಂಬ್ರ ನೋಡಲಾಗಿ KA-20-EK-7220 ಆಗಿರುತ್ತದೆ. ಈ ಅಫಘಾತದಿಂದ ಸ್ಕೂಟಿ ಸವಾರ ತಿಲಕ್‌ ಎಚ್‌ ಸಾಲ್ಯಾನ್‌ ರವರ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿ ಅವನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಸಹಸವಾರ ಪವನ್‌ಕುಮಾರ್‌ನಿಗೆ ಮುಖಕ್ಕೆ ಹಾಗೂ ತಲೆಗೆ ಗಾಯ ಆಗಿರುತ್ತದೆ. ಬಳಿಕ ಸ್ಥಳಕ್ಕೆ ಬಂದ ಒಂದು ರಿಕ್ಷಾದಲ್ಲಿ ಗಾಯಾಳುಗಳನ್ನು ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿರುತ್ತಾರೆ. ಅಫಘಾತದ ಮಾಹಿತಿ ತಿಳಿದು ಆಸ್ಪತ್ರೆಗೆ ಬಂದ ತಿಲಕ್‌ನ ಅಣ್ಣ ಸಚಿನ್‌ ಸಾಲ್ಯಾನ್‌ ಜೊತೆ ಪಿರ್ಯಾದಿದಾರರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಒಳರೋಗಿಯಾಗಿ ತೀವೃನಿಗಾ ಘಟಕದಲ್ಲಿ ಚಿಕಿತ್ಸೆ ಬಗ್ಗೆ ದಾಖಲು ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ಗಾಯಾಳುಗಳ ಆರೈಕೆಯಲ್ಲಿದ್ದುದರಿಂದ ಪಿರ್ಯಾದಿ ನೀಡಲು ವಿಳಂಭವಾಗಿರುತ್ತದೆ. ಈ ಅಫಘಾತಕ್ಕೆ KA-20-EK-7220 ನೇ ಸ್ಕೂಟಿಯನ್ನು ಅದರ ಸವಾರ ತಿಲಕ್‌ ಎಚ್‌ ಸಾಲ್ಯಾನ್‌ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 84/2021 ಕಲಂ:  279, 337 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ :ಕಾರ್ಕಳ ತಾಲೂಕು, ಮುಡಾರು ಗ್ರಾಮದ ಬಜಗೋಳಿ ಬಸ್ಸು ನಿಲ್ದಾಣದ ಬಳಿ ಹಾದು ಹೋಗುವ ಕಾರ್ಕಳ-ನಾರಾವಿ ರಾಜ್ಯ ಹೆದ್ದಾರಿಯಲ್ಲಿ ಸ್ಕೂಟಿ ನಂಬ್ರ KA20EN5671 ನೇದರ ಸವಾರನು ತನ್ನ ಸ್ಕೂಟಿಯನ್ನು ಕಾರ್ಕಳ ಕಡೆಯಿಂದ ನಾರಾವಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ ಬಜಗೋಳಿ ಬಸ್ಸು ನಿಲ್ದಾಣದ ಕಡೆಯಿಂದ ಬಸ್ಸು ನಿಲ್ದಾಣದ ಮುಂಭಾಗದಲ್ಲಿರುವ ಪದ್ಮಾ ಸ್ಟೋರ್ ಕಡೆಗೆ ಹೋಗುವರೇ ರಸ್ತೆ ದಾಟುತ್ತಿದ್ದ ಅಶೋಕ ಪೂಜಾರಿ ಎಂಬವರಿಗೆ ಢಿಕ್ಕಿ ಹೊಡೆದ ಪರಿಣಾಮ ಅಶೋಕ್ ಪೂಜಾರಿಯವರು ಡಾಮಾರು ರಸ್ತೆಗೆ ಬಿದ್ದಿದ್ದು, ಅಲ್ಲದೆ ಢಿಕ್ಕಿ ಹೊಡೆದ ಸ್ಕೂಟಿ ಸವಾರನು ಕೂಡಾ ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಅಶೋಕ್ ಪೂಜಾರಿಯವರ ತಲೆಯ ಬಲಬದಿಗೆ ರಕ್ತ ಗಾಯ ಹಾಗೂ ಬಲಕೈಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಶರತ್ ಸುವರ್ಣ (26), ತಂದೆ: ರವಿ ಸುವರ್ಣ, ವಾಸ: ಪಾಚಾರಬೆಟ್ಟು ಮನೆ, ಕೆರ್ವಾಶೆ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ರವರು ದೂರು ನೀಡಿದ್ದು, ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 102/2021,ಕಲಂ: 279,337 ಭಾ.ದ.ಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು:

 • ಬೈಂದೂರು: ಪ್ರತಿವಾದಿ ಶೋಯಿಬ್ ಅರೆಹೊಳೆ ಪ್ರಾಯ 48 ವರ್ಷ ತಂದೆ: ಮಹಮ್ಮದ್ ಸಯ್ಯದ್ ಅರೆಹೊಳೆ ವಾಸ: ನ್ಯೂ ಕಾಲೋನಿ, ಮಾರ್ಕೆಟ್, ಶಿರೂರು ಗ್ರಾಮ ಬೈಂದೂರು ತಾಲೂಕು ಇವನು ಎಸ್ ಡಿ ಪಿ ಐ ಶಿರೂರು ಘಟಕದ ಅಧ್ಯಕ್ಷನಾಗಿದ್ದು ಆಗಾಗ್ಗೆ ವಿನಾ: ಕಾರಣ ತನ್ನ ಸಹಚರೊಂದಿಗೆ ಸೇರಿಕೊಂಡು ಎಸ್ ಡಿ ಪಿ ಐ ಸಭೆ ಸಮಾರಂಭ ಮಾಡಿ ಗಲಭೆಯನ್ನು ಸೃಷ್ಟಿ ಮಾಡುವುದಲ್ಲದೇ ಸಣ್ಣ ಪುಟ್ಟ ವಿಷಯಗಳನ್ನು ಕೈಗೆತ್ತಿಗೊಂಡು ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಗಲಾಟೆ ಮಾಡುವುದು ಅಲ್ಲದೇ ಕಾನೂನಿಗೆ ಗೌರವನ್ನು ಕೊಡದೇ ಇರುವ ಸ್ವಭಾವವವನ್ನು ಹೊಂದಿದವನಾಗಿರುತ್ತಾನೆ. ಸ್ವಧರ್ಮೀಯರನ್ನು ಎತ್ತಿ ಕಟ್ಟಿ ದೊಂಬಿ, ಕಲಹ, ಸಾರ್ವಜನಿಕ ಸೊತ್ತು ನಾಶ ಮಾಡುವ ಅಪರಾಧವೆಸಗಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾದ್ಯತೆಗಳು ಇರುವುದರಿಂದ ಪ್ರತಿವಾದಿಯ ಸದ್ವರ್ತನೆ ಹಾಗೂ ಒಳ್ಳೆಯ ನಡೆತೆಯ ಬಗ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಮುಚ್ಚಳಿಕೆಯನ್ನು ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಠಾಣಾ ಪಿಎಅರ್‌ ನಂ:  05/2021 ಕಲಂ 107 ಸಿಅರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಬೈಂದೂರು:  ಪ್ರತಿವಾದಿ ಅನ್ವರ್ ಹಸನ್ ಪ್ರಾಯ 46 ವರ್ಷ ತಂದೆ: ಹಸನ್ ಬಾಷಾ, ವಾಸ: ಬೈತುಲ, ಹಿಲಾಯಿ ಕಾಲೋನಿ, ಬುಕಾರಿ ಕಾಲೋನಿ, ಶಿರೂರು ಗ್ರಾಮ ಬೈಂದೂರು ತಾಲೂಕು ಇವನು ಪಿಎಫ್ಐ ಶಿರೂರು ಘಟಕದ ಅಧ್ಯಕ್ಷನಾಗಿದ್ದು ಆಗಾಗ್ಗೆ ವಿನಾ: ಕಾರಣ ತನ್ನ ಸಹಚರೊಂದಿಗೆ ಸೇರಿಕೊಂಡು ಎಸ್ ಡಿ ಫಿ ಐ ಸಭೆ ಸಮಾರಂಭ ಮಾಡಿ ಗಲಭೆಯನ್ನು ಸೃಷ್ಟಿ ಮಾಡುವುದಲ್ಲದೇ ಸಣ್ಣ ಪುಟ್ಟ ವಿಷಯಗಳನ್ನು ಕೈಗೆತ್ತಿಗೊಂಡು ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಗಲಾಟೆ ಮಾಡುವುದು ಅಲ್ಲದೇ ಕಾನೂನಿಗೆ ಗೌರವನ್ನು ಕೊಡದೇ ಇರುವ ಸ್ವಭಾವವವನ್ನು ಹೊಂದಿದವನಾಗಿರುತ್ತಾನೆ. ಸ್ವಧರ್ಮೀಯರನ್ನು ಎತ್ತಿ ಕಟ್ಟಿ ದೊಂಬಿ, ಕಲಹ, ಸಾರ್ವಜನಿಕ ಸೊತ್ತು ನಾಶ ಮಾಡುವ ಅಪರಾಧವೆಸಗಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾದ್ಯತೆಗಳು ಇರುವುದರಿಂದ ಪ್ರತಿವಾದಿಯ ಸದ್ವರ್ತನೆ ಹಾಗೂ ಒಳ್ಳೆಯ ನಡೆತೆಯ ಬಗ್ಗೆ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ  ಮುಚ್ಚಳಿಕೆಯನ್ನು ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಬೈಂದೂರು ಠಾಣಾ ಪಿಎಅರ್‌ ನಂ:  06/2021 ಕಲಂ 107 ಸಿಅರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.   
   

ಇತ್ತೀಚಿನ ನವೀಕರಣ​ : 29-08-2021 10:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080