Feedback / Suggestions

ಅಪಘಾತ ಪ್ರಕರಣ

  • ಬ್ರಹ್ಮಾವರ: ಹೊಸೂರು ಗ್ರಾಮದ, ಅನುದಾನಿತ ಹಿ.ಪ್ರಾ.ಶಾಲೆ ಹೊಸೂರು - ಕರ್ಜೆ ಇದರ ಮುಖ್ಯೋಪಧ್ಯಾಯರಾದ ಪಿರ್ಯಾದಿ ಸತೀಶ್‌ ಶೆಟ್ಟಿ ಇವರು ದಿನಾಂಕ 28.07.2022 ರಂದು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಮಧ್ಯಾಹ್ನ 3:45 ಗಂಟೆಗೆ 2ನೇ ತರಗತಿಯ ವಿಧ್ಯಾರ್ಥಿಗಳನ್ನು ಶಾಲೆಯ ಗೌರವ ಶಿಕ್ಷಕಿ ಶ್ರೀಮತಿ ರಮ್ಯ ರವರು ಶಾಲೆಯ ಎದುರುಗಡೆ ಇರುವ ಆಟದ  ಮೈದಾನಕ್ಕೆ ಆಟವಾಡಿಸಲು ಕರೆದು ಕೊಂಡು ಹೋಗಲು ಬ್ರಹ್ಮಾವರ - ಹೆಬ್ರಿ ರಸ್ತೆಯನ್ನು ದಾಟಲು ರಸ್ತೆ ಬದಿಯಲ್ಲಿ ನಿಂತುಕೊಂಡಿರುವ ಸಮಯ,  ಬ್ರಹ್ಮಾವರ ಕಡೆಯಿಂದ ಹೆಬ್ರಿ ಕಡೆಗೆ ಆರೋಪಿಯು ತನ್ನ ಬಾಬ್ತು  KA.20.EX.9923 ನೇ ಮೋಟಾರ್‌ ಸೈಕಲ್‌ ನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಆತನ ಎದುರಿನಲ್ಲಿ ಹೋಗುತ್ತಿದ್ದ ಒಂದು ವಾಹನವನ್ನು ಓವರ್‌ ಟೆಕ್‌ ಮಾಡಿಕೊಂಡು ರಸ್ತೆಯ ತೀರಾ ಬಲ ಬದಿಗೆ ಬಂದು ರಸ್ತೆ ದಾಟಲು ನಿಂತಿದ್ದ 2ನೇ ತರಗತಿಯ ವಿಧ್ಯಾರ್ಥಿ ಆದ ಕೌಶಿಕ (7 ವರ್ಷ)  ಎಂಬವವನಿಗೆ ಡಿಕ್ಕಿ ಹೊಡೆದನು.  ಈ ಅಪಘಾತದ ಪರಿಣಾಮ ಕೌಶಿಕನು ರಸ್ತೆಗೆ ಬಿದ್ದು  ಆತನ  ತಲೆಗೆ  ತೀವ್ರ ಸ್ವರೂಪದ ರಕ್ತಗಾಯವಾಗಿ ದೇಹದ ಇತರ ಕಡೆ ತರಚಿದ ಗಾಯವಾಗಿರುತ್ತದೆ ಕೂಡಲೇ ಕೌಶಿಕನನ್ನು ಚಿಕಿತ್ಸೆ ಬಗ್ಗೆ P.H.C ಕರ್ಜೆ ಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 127/2022 ಕಲಂ :279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ಮಾಹಂತೇಶ್ ಸಿಂಗೇ ಇವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 29-07-2022 ರಂದು ಬೆಳಿಗ್ಗೆ 10-45 ಗಂಟೆಗೆ ಪುತ್ತುರು ಗ್ರಾಮದ ಸಾಗರ ಸೆರಾಮಿಕ್ಸ್ ಎದುರುಗಡೆ ರಾ.ಹೆ 66ನೇ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಪಿರ್ಯಾದಿದಾರರು ತನ್ನ ಬಾಬ್ತು KA28C6450ನೇ ಬುಲೇರೋ ವಾಹನದ ಮುಂಭಾಗದ ಎಡಬದಿಯ ಟಯರ್ ಕಿತ್ತು ಹೋಗಿದ್ದು, ವಾಹನ ಚಾಲನ ಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ವಾಹನವು ಅಲ್ಲಿಯೇ ನಿಂತಿರುತ್ತದೆ. ಅಲ್ಲದೇ ಪಿರ್ಯಾದಿದಾರರು ಮುಂಜಾಗ್ರತಾ ಕ್ರಮವಾಗಿ ವಾಹನದ ಹಿಂಭಾಗ ಮರದ ಗೆಲ್ಲುಗಳನ್ನು ಮತ್ತು ವಾಹನದ ಹಿಂಭಾಗದ ಬಾಡಿಯ ಎರಡೂ ಬದಿ ಮರದ ಗೆಲ್ಲುಗಳನ್ನು ಇಟ್ಟಿದ್ದು, ಆ ಸಮಯ ಬ್ರಹ್ಮಾವರದ ಕಡೆಯಿಂದ ಕರಾವಳಿ ಕಡೆಗೆ KA20EJ4171ನೇ ಬುಲೇಟ್ ಸವಾರ ಫಾರೂಕ್ ಈತನು ಅಭೀಷೇಕ್ ಎಂಬಾತನನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ದುಡುಕುತನ ಮತ್ತುನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು  ಬಂದು ಪಿರ್ಯಾದಿದಾರರು ನಿಲ್ಲಿಸಿದ್ದ  ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರೋಪಿ ಬುಲೇಟ್ ಸವಾರನು ಫಾರೂಕ್ ಮತ್ತು ಹಿಂಬದಿ ಸವಾರ ಅಭಿಷೇಕ್ ರವರು ರಸ್ತೆಗೆ ಬಿದ್ದು, ಫಾರೂಕ್ ರವರ ಬಲಕಾಲಿಗೆ ತೀವ್ರ ಸ್ವರೂಪದ ಮೂಳೆ ಮುರಿತದ ಜಖಂ, ಬಲಕಣ್ಣಿನ ಹುಬ್ಬಿನ ಬಳಿ ರಕ್ತಗಾಯ ಮತ್ತು ತಲೆಗೆ ರಕ್ತ ಗಾಯ ಅಲ್ಲದೇ ಹಿಂಬದಿ ಸವಾರ ಅಭಿಷೇಕ್ ರವರ ಬಲಕಾಲಿಗೆ ಮೂಳೆಮುರಿತದ ಜಖಂ ಆಗಿರುತ್ತದೆ. ತೀವ್ರ ಸ್ವರೂಪದ  ಜಖಂ ಆಗಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ:  ಪಿರ್ಯಾದಿ ಅರುಣ್‌ಪ್ರಭು ಇವರು ತಮ್ಮ ವಾಸ್ತವ್ಯದ ಮನೆಯಾದ ಉಡುಪಿ ತಾಲೂಕು ಕುಂಜಿಬೆಟ್ಟು ಓಕುಡೆ ಲೇನ್‌ ನಲ್ಲಿರುವ ಮನೆನಂಬ್ರ: 8-1-154F1 ನೇದರ ಕಂಪೌಂಡ್‌ ಒಳಗೆ ಪಾರ್ಕಿಂಗ್‌ ಸ್ಥಳದಲ್ಲಿದ್ದ ನಿಲ್ಲಿಸಿದ್ದ ಅವರ ಮಾಲೀಕತ್ವದ ಟಿವಿಎಸ್‌ ಜೂಪಿಟರ್‌ ಸ್ಕೂಟರ್‌ ನಂಬರ್‌ KA 20 ET 8497 ಅನ್ನು ದಿನಾಂಕ: 27/07/2022 ರಂದು 22:45 ಗಂಟೆಯಿಂದ ದಿನಾಂಕ 28/07/2022 ರಂದು ಬೆಳಿಗ್ಗೆ 04:30 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್‌ ನ ಅಂದಾಜು ಮೌಲ್ಯ ರೂ. 35,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 120/2022 ಕಲಂ:  379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ವಿಷ್ಣುಮೂರ್ತಿ ಇವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಶ್ರೀ ಪುತ್ತಿಗೆ ಮಠದಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 26/07/2022 ರಂದು ಬೆಳಿಗ್ಗೆ 09:30 ಗಂಟೆಯಿಂದ ಬೆಳಿಗ್ಗೆ 11:00 ಗಂಟೆ ನಡುವಿನ ಸಮಯದಲ್ಲಿ ಮಠದಲ್ಲಿ ಪೂಜೆಯ ಸಂದರ್ಭದಲ್ಲಿ 6 ಜನ ಮಠದ ವಿದ್ಯಾರ್ಥಿಗಳು ಮತ್ತು ಪುರೋಹಿತ ಲಕ್ಷ್ಮಿ ಪ್ರಸಾದ್ ರವರು ಬಂದು ಹೋಗಿದ್ದು, ಪೂಜೆಯ ನಂತರ ಪೂಜಾ ಸಾಮಾಗ್ರಿಗಳನ್ನು ತೆಗೆದು ಇಡುವಾಗ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿದ್ದು, ಸದರಿ ಚಿನ್ನದ ಗಿಂಡಿಯನ್ನು ಪುರೋಹಿತ ಲಕ್ಷ್ಮಿ ಪ್ರಸಾದ್ ರವರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಅನುಮಾನ ಇದ್ದು, ಕಳವಾದ ಸ್ವತ್ತಿನ ಅಂದಾಜು ಮೌಲ್ಯ ರೂ. 7,00,000/- ಆಗಬಹುದು ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 121/2022 ಕಲಂ:  380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬ್ರಹ್ಮಾವರ: ಮಾನ್ಯ ಉಡುಪಿ  ನ್ಯಾಯಾಲಯದ ಖಾಸಗಿ ಫಿರ್ಯಾದು ಸಂಖ್ಯೆ 26/2022 ರ ಸಾರಾಂಶವೇನೆಂದರೆ; ವಿದೇಶದಲ್ಲಿರುವ 1ನೇ ಆರೋಪಿ ಸದಾನಂದ ಶೆಟ್ಟಿಗಾರ್‌ (50), ತಂದೆ: ವೆಂಕಪ್ಪ ಶೆಟ್ಟಿಗಾರ್‌, ವಾಸ: ಕಾವೇರಿ, ಅಗ್ರಹಾರ, ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ಪಿರ್ಯಾದಿ ಜಯ ಪೂಜಾರಿ,ಇವರಿಗೆ ಪರಿಚಯಸ್ಥರಾಗಿರುತ್ತಾರೆ, ಸದ್ರಿ ಆರೋಪಿಯು 2017 ರಲ್ಲಿ  ಚಾಂತಾರು ಗ್ರಾಮದ ಬ್ರಹ್ಮಾವರದಲ್ಲಿ ಪಿರ್ಯಾದಿದಾರರ ವಾಹನ ನಿಲ್ದಾಣದಿಂದ ಸುಮಾರು 1 ಕಿ.ಮೀ ಅಂತರದಲ್ಲಿರುವ ಅವರ ಬಾಬ್ತು ಜಮೀನಿನಲ್ಲಿ ಮನೆ ನಿರ್ಮಾಣ ಮಾಡಲು ಆರಂಭಿಸಿ, ನಿರ್ಮಾಣದ ಜವಾಬ್ದಾರಿಯನ್ನು ಪಿರ್ಯಾದಿದಾರರಿಗೆ ನೀಡಿರುತ್ತಾರೆ, ಆ ಸಮಯ 1 ನೇ ಆರೋಪಿಯು ಪಿರ್ಯಾದಿದಾರರ ಬಳಿ ಹಣವನ್ನು ಸಾಲವಾಗಿ ನೀಡಲು ಒತ್ತಾಯ ಮಾಡುತ್ತಿದ್ದು,  ಆಗ 1 ನೇ ಆರೋಪಿಯು 2 ನೇ ಆರೋಪಿ ನಾಗರತ್ನ  (41), ಗಂಡ: ಸದಾನಂದ ಶೆಟ್ಟಿಗಾರ್‌, ವಾಸ: ಕಾವೇರಿ, ಅಗ್ರಹಾರ, ಚಾಂತಾರು ಗ್ರಾಮ, ಬ್ರಹ್ಮಾವರ ತಾಲೂಕು ಇವರಿಗೆ ನೀಡಿದ್ದ ಜನರಲ್ ಪವರ್ ಆಫ್ ಅಟಾರ್ನಿಯನ್ನು 2 ನೇ ಆರೋಪಿಯು ಪಿರ್ಯಾದಿದಾರರಿಗೆ ನೀಡಿ ಇದನ್ನು ಭದ್ರತೆಗಾಗಿ ಇಟ್ಟುಕೊಂಡು ಎಲ್ಲಿಂದಾದರೂ ಸಾಲ ಮಾಡಿ ನಮಗೆ ರೂ. 1,50,000/- ನೀಡುವಂತೆ ಪದೇ ಪದೇ ಒತ್ತಾಯ ಮಾಡಿ ಕೇಳಿದ್ದರಿಂದ, ಪಿರ್ಯಾದಿದಾರರು ಆರೋಪಿಗಳ ಭರವಸೆಯ ಮಾತುಗಳನ್ನು ನಂಬಿ ದಿನಾಂಕ 19.06.2017 ರಂದು ಉಡುಪಿ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ (ನಿ.) ಬ್ರಹ್ಮಾವರ ಇಲ್ಲಿಂದ ರೂ. 1,00,000/- ಹಣವನ್ನು ಪಿರ್ಯಾದಿದಾರರ ಹೆಸರಿನಲ್ಲಿ ಸಾಲವಾಗಿ ಪಡೆದು ಮತ್ತು ಪಿರ್ಯಾದಿದಾರರು ಕಷ್ಟಪಟ್ಟು ಸಂಪಾದಿಸಿದ ರೂ. 35,000/- ಹಣವನ್ನು 1ನೇ ಆರೋಪಿಯ ಕೋರಿಕೆಯಂತೆ 2 ನೇ ಆರೋಪಿಯ ವಶಕ್ಕೆ ನೀಡಿರುತ್ತಾರೆ. ಆಗ ಅಲ್ಪ ಸ್ವಲ್ಪ ಅಸಲು ಹಾಗೂ ಬಡ್ಡಿಯನ್ನು ಆರೋಪಿಗಳು ಸದ್ರಿ ಸಂಸ್ಥೆಗೆ ಪಾವತಿಸಿರುತ್ತಾರೆ. ತದ ನಂತರ 1 ನೇ ಆರೋಪಿಯು ವಿದೇಶದಿಂದ ಊರಿಗೆ ಬಂದಾಗ ಪಿರ್ಯಾದಿದಾರರಿಂದ ತಲೆ ಮರೆಸಿಕೊಂಡಿದ್ದು  ಈ ಬಗ್ಗೆ  2 ನೇ ಆರೋಪಿಯ ಬಳಿ ವಿಚಾರಿಸಿದ್ದಲ್ಲಿ 1 ಆರೋಪಿಯನ್ನು ಭೇಟಿಯಾಗಲು ಬೀಡದೇ ವಾಪಾಸ್ಸು ಹೋಗಲು ತಿಳಿಸಿದ್ದಲ್ಲದೇ, “ ಸದಾನಂದ ಶೆಟ್ಟಿಗಾರ್ ಇನ್ನೇನು 10 ದಿವಸದಲ್ಲಿ ವಿದೇಶಕ್ಕೆ ಹೋಗುತ್ತಾನೆ, ನಿನಗೆ ಏನೂ ಮಾಡಲು ಆಗುವುದಿಲ್ಲ ನಿನ್ನ ಹಣ ಕೇಳ ಬೇಡ, ಅದು ವಾಪಾಸು ನೀಡಲು ಪಡೆದುಕೊಂಡ ಹಣ ಅಲ್ಲ, ನಾವು ನಿನಗೆ ಹಣ ವಾಪಾಸ್ಸು ನೀಡುವುದಿಲ್ಲ ಮತ್ತೆ ಹಣ ವಾಪಾಸು ಕೇಳಿದರೆ ನಿನ್ನ ಜೀವ ತೆಗೆಯುತ್ತೇನೆ” ಎಂದು ಹೆದರಿಸಿರುತ್ತಾರೆ.  ಆರೋಪಿಗಳು ಪಿರ್ಯಾದಿದಾರರನ್ನು ವಂಚಿಸುವ ದುರುದ್ದೇಶದಿಂದ , ಮೋಸದಿಂದ  ನಂಬಿಸಿ ರೂ. 1,35,000/- ಹಣವನ್ನು ಪಿರ್ಯಾದಿದಾರರಿಗೆ ವಂಚಿಸಿರುತ್ತಾರೆ. ಅಲ್ಲದೇ ಆರೋಪಿಗಳಿಗೆ ಮಾಡಿದ ಸಾಲದ ಒಟ್ಟು ಮೊತ್ತ ಈಗ 1,55,367- ಆಗಿದ್ದು, ಆರೋಪಿಗಳು ಕಟ್ಟಿದ ಬಡ್ಡಿ ಹಾಗೂ ಅಸಲು ರೂ 21,576/ ಆಗಿರುತ್ತದೆ.  ಪಿರ್ಯಾದಿದಾರರು ಸ್ವಂತ ಹಣ ಹಾಗೂ ಮೂರ್ತೆದಾರರ ಸಹಕಾರಿ ಸಂಘಕದ ಹಣ ಎಲ್ಲಾ ಸೇರಿ ಪಿರ್ಯಾದಿದಾರರಿಗೆ ಒಟ್ಟು ರೂ. 2,11,943/- ಹಣವನ್ನು ಆರೋಪಿಗಳು ನೀಡಲು ಬಾಕಿ ಇರುತ್ತದೆ ಎಂಬಿತ್ಯಾದಿ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 126/2022 ಕಲಂ :417, 420, 506, R/W 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು:ಫಿರ್ಯಾದಿ ನಾಗರಾಜ ಭಂಡಾರಿ ಇವರಿಗೆ ಹೊನ್ನಾವರ ತಾಲೂಕು ಖರ್ವ ಗ್ರಾಮದ ಯಲಗುಪ್ಪ ನಿವಾಸಿ ಶ್ರೀ ಶಿವರಾಮ ಹೆಗ್ಡೆಯವರಿಗೆ ಸೇರಿದ ಶಿರೂರು ಗ್ರಾಮದಲ್ಲಿರುವ ಸರ್ವೆ ನಂಬ್ರ 264/4B2 ರಲ್ಲಿ 0.10 ಎಕ್ರೆ, 264/4B1P ರಲ್ಲಿ 0.15 ಎಕ್ರೆ, 302/1A1 ರಲ್ಲಿ 0.33 ಎಕ್ರೆ, 262/3A ರಲ್ಲಿ 0.36 ಎಕ್ರೆ ಜಾಗವನ್ನು ಶಿವರಾಮ ಹೆಗ್ಡೆಯವರು ಅವರ ಕಾಲದ ನಂತರ ಫಿರ್ಯಾದಿದಾರರ ಹಕ್ಕಿಗೆ ಹೋಗಬೇಕೆಂದು ದಿನಾಂಕ 10/10/2016 ರಂದು ವೀಲುನಾಮೆ ಬರೆದಿಟ್ಟಿದ್ದು, ದಿನಾಂಕ 22/11/2017 ರಂದು ಶಿವರಾಮ ಹೆಗ್ಡೆಯವರು ಮೃತಪಟ್ಟಿರುತ್ತಾರೆ. ಆ ನಂತರ ಸದ್ರಿ ಭೂಮಿಗಳು ಫಿರ್ಯಾದಿದಾರರ ಹಕ್ಕಿಗೆ ಬಂದಿರುತ್ತದೆ. ಫಿರ್ಯಾದಿದಾರರು ಬೆಂಗಳೂರಿನಲ್ಲಿ ಇರುವ ಕಾರಣ ಸದ್ರಿ ಆಸ್ತಿಗಳ ಖಾತಾ ಬದಲಾವಣೆ ಇತ್ಯಾದಿ ಕೆಲಸಕ್ಕೆ ಬೈಂದೂರು ತಾಲೂಕು ಕಛೇರಿ ಹಾಗೂ ಇತರ ಕಂದಾಯ ಇಲಾಖೆಯ ಕಛೇರಿಗೆ ಸುತ್ತಾಡಲು ಅಸಾಧ್ಯವಾದ ಕಾರಣ ಆರೋಪಿ 1ನೇ ರಾಮಕೃಷ್ಣ ಭಟ್ ರವರಲ್ಲಿ ಸದ್ರಿ ಭೂಮಿಗಳ ಆರ್.ಟಿ.ಸಿ ಫಿರ್ಯಾದಿದಾರರ ಹೆಸರಿಗೆ ಮಾಡಿಕೊಡುವಂತೆ ವಹಿಸಿಕೊಟ್ಟಿದ್ದು, ಆ ಸಮಯ ಆರೋಪಿ 1ನೇಯವರು ಫಿರ್ಯಾದಿದಾರರಿಂದ ಕೆಲವು ಕಾಗದಗಳಿಗೆ ಸಹಿ ಪಡೆದಿದ್ದು, 2021ನೇ ಜೂನ್ ತಿಂಗಳಿನಲ್ಲಿ ಫಿರ್ಯಾದಿದಾರರು ಬೆಂಗಳೂರಿನಿಂದ ಉರಿಗೆ ಬಂದಾಗ ಫಿರ್ಯಾದಿದಾರರು ಆರೋಪಿ 1 ನೇಯವರನ್ನು ನಂಬಿಕೆಯಿಂದ  ಖಾಲಿ ಕಾಗದಗಳಿಗೆ ಮತ್ತು ಖಾಲಿ ಛಾಪ ಕಾಗದಗಳಿಗೆ ಸಹಿ ಮಾಡಿರುತ್ತಾರೆ. 2022ನೇ ಜುಲೈ ತಿಂಗಳ 2ನೇ ವಾರದಲ್ಲಿ ಫಿರ್ಯಾದಿದಾರರು ಊರಿಗೆ ಬಂದಾಗ ಸದ್ರಿ ಆಸ್ತಿಗಳ ಆರ್.ಟಿ.ಸಿ ಪರಿಶೀಲಿಸಿದಾಗ, ಸರ್ವೆ ನಂಬ್ರ 264/4ಬಿ, 264/4ಬಿ1ಪಿ, 302/1ಎ1 ಭೂಮಿಯ ಆರ್.ಟಿ.ಸಿ 2ನೇ ಆರೋಪಿ ರಮಾನಾಥ ಭಟ್ ರವರ ಹೆಸರಿಗೆ ಮತ್ತು ಸರ್ವೆ ನಂಬ್ರ 262/3ಎ ಭೂಮಿಯ ಆರ್ ಟಿ ಸಿ ಶಿರೂರು ಗ್ರಾಮದ ಶೋಭಾ ಬಿಲ್ಲವ ಮತ್ತು ಮಂಜುನಾಥ ಪೂಜಾರಿಯವರ ಹೆಸರಿಗೆ ದಾಖಲಾಗಿದ್ದನ್ನು ಕಂಡು ಅಘಾತಗೊಂಡ ಫಿರ್ಯಾದಿದಾರರು ಬೈಂದೂರು ತಾಲೂಕು ಕಛೇರಿಗೆ ಹೋಗಿ ಸಂಬಂಧಪಟ್ಟ ಖಾತಾ ಬದಲಾವಣೆಯ ಕಡತದ ಮಾಹಿತಿ ಪಡೆದು ಪರಿಶೀಲಿಸಿದಾಗ ದಿನಾಂಕ 23/06/2021 ರಂದು ಆರೋಪಿ 1ನೇಯವರಿಗೆ ಖಾಲಿ ಛಾಪಾ ಕಾಗದಕ್ಕೆ ಸಹಿ ಮಾಡಿಕೊಟ್ಟ ಛಾಪಾ ಕಾಗದವನ್ನು ಬಳಸಿ, ದಿನಾಂಕ 12/04/2022 ರಂದು ಫಿರ್ಯಾದಿದಾರರು ಬರೆದುಕೊಟ್ಟಿದ್ದಾರೆ ಎಂದು ಒಂದು ಸುಳ್ಳು ಜನರಲ್ ಪವರ್ ಆಪ್ ಅಟಾರ್ನಿಯನ್ನು ತಯಾರು ಮಾಡಿ, ಕುಂದಾಪುರದ ನೋಟರಿಯವರಾದ ಬಿ. ರಾಘವೇಂದ್ರ ನಾವುಡ ರವರ ಮುಂದೆ ಫಿರ್ಯಾದುದಾರರು ಸಹಿ ಹಾಕಿರುವುದಾಗಿ ತೋರಿಸಿ ಜಿಪಿಎ ಪತ್ರವನ್ನು ತಯಾರಿಸಿರುತ್ತಾರೆ. ಸದ್ರಿ ಜಿಪೆ ಪತ್ರ ತಯಾರಿಸುವ ಸಮಯ ಫಿರ್ಯಾದಿದಾರರು ಬೆಂಗಳೂರಿನಲ್ಲಯೇ ಇದ್ದು, ಫಿರ್ಯಾದಿದಾರರು ಕುಂದಾಪುರದ ನೋಟರಿಯವರಾದ ಬಿ. ರಾಘವೇಂದ್ರ ನಾವುಡರವರನ್ನು ಭೇಟಿಯಾಗಿದ್ದಾಗಲೀ, ಅವರ ಸಮಕ್ಷಮ ಯಾವುದೇ ದಾಖಲೆಗೆ ಸಹಿ ಹಾಕಿದ್ದಾಗಲೀ ಇದ್ದಿರುವುದಿಲ್ಲ. ದಿನಾಂಕ 29/04/2022 ರಂದು ಸದ್ರಿ ಭೂಮಿಗಳನ್ನು ರಮಾನಾಥ ಭಟ್ ಹಾಗೂ ಶೋಭಾ ಬಿಲ್ಲವ ಮತ್ತು ಮಂಜುನಾಥ ಪೂಜಾರಿಯವರ ಹೆಸರಿಗೆ ಸುಳ್ಳು ಕ್ರಯ ಪತ್ರವನ್ನು ನೊಂದಾಯಿಸಿದ್ದು, ಫಿರ್ಯಾದಿದಾರರು ಸದ್ರಿ ಆಸ್ತಿಯಲ್ಲಿ ಯಾವುದೇ ಆಸ್ತಿಯನ್ನು ಯಾರಿಗೂ ಮಾರಾಟ ಮಾಡಿದ್ದಿಲ್ಲ ಮತ್ತು ಆರೋಪಿ 1 ಅಥವಾ ಬೇರೆ ಯಾರದ್ದೇ ಹೆಸರಿಗಾಗಲೀ ಜನರಲ್ ಪವರ್ ಆಫ್ ಅಟಾರ್ನಿ ಬರೆದುಕೊಟ್ಟಿರುವುದಿಲ್ಲ. ಸದ್ರಿ ಜನರಲ್ ಪವರ್ ಆಫ್ ಅಟಾರ್ನಿಯಲ್ಲಿ ರಂಗನಾಥ ಹಾಗೂ ರಘುರಾಮರವರು ಸುಳ್ಳು ಸಾಕ್ಷಿಯಾಗಿ ಸಹಿ ಹಾಕಿರುತ್ತಾರೆ. ಫಿರ್ಯಾದಿದಾರರು ಸದ್ರಿ ಜಾಗದ ಮೇಲೆ ಬೈಂದೂರು ವ್ಯವಸಾಯ ಸಹಕಾರಿ ಯಡ್ತರೆ ಶಾಖೆಯಲ್ಲಿ ಜಾಗದ ಪತ್ರಗಳನ್ನು ಅಡಮಾನವಿರಿಸಿ, 1 ಲಕ್ಷ ಸಾಲವನ್ನು ಪಡೆದಿರುತ್ತಾರೆ. ಆರೋಪಿತರು ಈ ಬಗ್ಗೆ ಯಾವುದೇ ಕ್ರಮ ವಹಿಸದೇ ಫಿರ್ಯಾದಿದಾರರ ಬಾಬ್ತು ಜಾಗವನ್ನು ವಂಚನೆಯಿಂದ ಜಿಪಿಎ ಪತ್ರವನ್ನು ತಯಾರಿಸಿ ಜಾಗವನ್ನು ಪರಭಾರೆ ಮಾಡಿರುತ್ತಾರೆ. ಅವರೊಂದಿಗೆ ಶೋಭಾ ಬಿಲ್ಲವ ಹಾಗೂ ಮಂಜುನಾಥ ಪೂಜಾರಿರವರೂ ಕೂಡಾ ಸೇರಿಕೊಂಡು ಸುಳ್ಳು ಕ್ರಯ ಪತ್ರಗಳನ್ನು ಸೃಷ್ಠಿಸಿಕೊಂಡು ಅಪರಾಧ ಎಸಗಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 150/2022 ಕಲಂ, 465,  468, 471 420, ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಮಣಿಪಾಲ:ಪಿರ್ಯಾದಿ ಡಾ. ಹೆಚ್‌. ಕೆ. ಧೀಮಾನ್‌ ಇವರು ಮಾಹೆ ಮಣಿಪಾಲ ಹಾಸ್ಟೇಲ್‌ನ ಚೀಫ್‌ ವಾರ್ಡನ್‌ ಆಗಿದ್ದು , ರೂಂ ನಂ: 326 , ರವೀಂದ್ರನಾಥ ಟ್ಯಾಗೋರ್‌ ಹಾಸ್ಟೇಲ್‌ನಲ್ಲಿ ತಂಗಿರುವ ಮಣಿಪಾಲದಲ್ಲಿ ಫಾರ್ಮಸಿ ವ್ಯಾಸಾಂಗ ಮಾಡಿಕೊಂಡಿರುವ ವಿದ್ಯಾರ್ಥಿ ಅಭಯ್‌ ಕುಮಾರ್ ಪ್ರಾಯ: 26 ವರ್ಷ ಈತನು ದಿನಾಂಕ: 27.07.2022 ರಂದು ರಾತ್ರಿ 9:30 ಗಂಟೆಗೆ ಹಾಸ್ಟೇಲ್‌ನಿಂದ ಹೊರಗಡೆ ಹೋದವನು ಇದುವರೆಗೂ ವಾಪಾಸ್‌ ಹಾಸ್ಟೇಲ್‌ಗೂ ಬಾರದೇ ಇದ್ದು ಪಿರ್ಯಾದಿದಾರರು ಕಾಣೆಯಾದ ಅಭಯ್‌ ಕುಮಾರ್‌ನ ಪಾಲಕರನ್ನು  ವಿಚಾರಿಸಲಾಗಿ ಮನೆಗೆ ಕೂಡ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ.  ಆತನನ್ನು ಇದುವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2022 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಗುಂಡು ಪೂಜಾರಿ(51) ಇವರು ಸುಮಾರು 18 ವರ್ಷಗಳಿಂದ ಮಾನಸಿಕ ಅಸ್ವಸ್ಥ್ಯತೆ ಅನಾರೋಗ್ಯದಿಂದ ಬಳಲುತ್ತಿದ್ದು ಮಾತಾ ಆಸ್ಪತ್ರೆ ಹಾಗೂ ಅಜ್ಜರಕಾಡು ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ದಿನಾಂಕ  25/07/2022  14:45 ಗಂಟೆಗೆ  ಕುಂದಾಪುರ ತಾಲೂಕು ಕೊಡ್ಲಾಡಿ ಗ್ರಾಮದ ಕೆಳ ಬಾಂಡ್ಯ ಸಸಿ ಹಿತ್ಲು  ತನ್ನ ಮನೆಯಲ್ಲಿ ನಿದ್ರೆ ಮಾತ್ರೆಯನ್ನು ನುಂಗಿ ಅಸ್ವಸ್ಥರಾದ  ಇವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಅಸ್ಪತ್ರೆ, ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆ ಹಾಗೂ ಮಂಗಳೂರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಲ್ಲಿದ್ದವರು. ದಿ: 28-07-2022 ರಂದು 22:50 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 29/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.‌
  • ಕೋಟ:ಪಿರ್ಯಾದಿ ಸುರೇಶ್‌ ಜಿ ಇವರ  ಅಕ್ಕನ ಮಗ ರಂಜನ್‌ ಜಿ. (33 ವರ್ಷ) ಈತನು ಸೊಸೈಟಿಗಳಿಗೆ ಸಾಪ್ಟ ವೇರ್‌ ಇನ್‌ಸ್ಟಾಲ್‌ ಮಾಡುವ ಕೆಲಸ ಮಾಡಿಕೊಂಡಿದ್ದು ಯಾವುದೋ ಕಾರಣಕ್ಕೆ ತೀರಾ ಮನನೊಂದು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ: 29.07.2022 ರಂದು ಬೆಳಿಗ್ಗೆ 7:45 ಗಂಟೆಯಿಂದ ಬೆಳಿಗ್ಗೆ 9:45 ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಿದ್ದ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 33/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.‌
  • ಕಾರ್ಕಳ: ಪಿರ್ಯಾದಿ ನಿತ್ಯಾನಂದ ಒಳಕಾಡು ಸಮಾಜ ಸೇವಕರವರು ದಿನಾಂಕ 27/07/2022 ರಂದು ಕೆಲಸದ ನಿಮಿತ್ತ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಎಂಬಲ್ಲಿಗೆ ಹೋದ ಸಮಯ ಸುಮಾರು ಬೆಳಿಗ್ಗೆ 8:00 ಗಂಟೆಗೆ ಸಚ್ಚೇರಿಪೇಟೆ ಬಸ್ ನಿಲ್ದಾಣದ ಬಳಿ ಅನಾರೋಗ್ಯದಿಂದ ಅಸ್ವಸ್ಥಗೊಂಡು ಬಿದ್ದಿದ್ದ ಪೌಲ್ ಸೆರಾವೋ ಇವರ ಮನೆಯವರು ಯಾರೂ ಇರುವುದಿಲ್ಲ ಎಂದು ತಿಳಿದು ಬಂದಿದ್ದರಿಂದ ಪಿರ್ಯಾಧಿದಾರರು ಆತನನ್ನು 108 ಅಂಬ್ಯಲೆನ್ಸ್ ನಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು, ಪೌಲ್ ಸೆರಾವೋ ಇವರು ಚಿಕಿತ್ಸೆಗೆ ಸ್ಪಂದಿಸದೇ ಅದೇ ದಿನಾಂಕ 27/07/2022 ರಂದು ಮದ್ಯಾಹ್ನ 2:14 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ  ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 24/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.‌

Last Updated: 29-07-2022 06:13 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080