ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಗಂಗೊಳ್ಳಿ: ದಿನಾಂಕ 28/07/2021 ರಂದು ಕುಮಾರ ಬಿಲ್ಲವ ಎಂಬುವವರು KA-20-EK-8803 TVS XL ಸ್ಕೂಟರ್‌ ನ್ನು  ಸವಾರಿ ಮಾಡಿಕೊಂಡು ಮೋವಾಡಿ ಕಡೆಯಿಂದ ಕುಂಬಾರಮಕ್ಕಿ ಕಡೆಗೆ ಹೋಗುತ್ತಿರುವಾಗ 17:30 ಗಂಟೆಗೆ ತ್ರಾಸಿ ಗ್ರಾಮದ ದೇವಳಿ, ಅಂಬಾದೇವಿ, ಚಿಕ್ಕು ದೇವಸ್ಥಾನದ ಬಳಿ ತಲುಪುವಾಗ ಕುಂಬಾರಮಕ್ಕಿ ಕಡೆಯಿಂದ ಮೋವಾಡಿ ಕಡೆಗೆ KA-20-EV-5617 ನೇ ಮೋಟಾರ್‌ ಸೈಕಲನ್ನು ಅದರ ಸವಾರ ಚೇತನ್ ಶೆಟ್ಟಿ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕುಮಾರ ಬಿಲ್ಲವ ರವರು ಸವಾರಿ ಮಾಡುತ್ತಿದ್ದ ಸ್ಕೂಟರ್‌ ಗೆ ಢಿಕ್ಕಿ ಹೊಡೆದ ಪರಿಣಾಮ ಕುಮಾರ ಬಿಲ್ಲವ ರವರು ತೀವ್ರ ಸ್ವರೂಪದ ಗಾಯಗೊಂಡಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2021 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 28/07/2021 ರಂದು ಮದ್ಯಾಹ್ನ 12:30 ಗಂಟೆಗೆ  ಪಿರ್ಯಾದಿದಾರರಾದ ವಾಹಿದ್‌ (42), ತಂದೆ:ಆದಾಮ್‌ ಸಾಹೇಬ್‌, ವಾಸ:ಅಸ್ಲಾಂ ಮಂಜಿಲ್‌, ಪುಲ್ಕೇರಿ ಕಾರ್ಕಳ ಕಸಬ ಗ್ರಾಮ, ಕಾರ್ಕಳ  ತಾಲೂಕು  ಇವರು ಹಿರ್ಗಾನ ಗ್ರಾಮದ ಜೋಡುರಸ್ತೆ ಹೆಚ್‌ಪಿ ಪೆಟ್ರೋಲ್‌ ಪಂಪ್‌ ಬಳಿ  ಇರುವ  ಪವರ್‌ ಪಾಯಿಂಟ್‌ ಎಂಬ  ಹೆಸರಿನ ವರ್ಕ್‌ ಶಾಪ್‌ ಎದುರು  ನಿಂತುಕೊಂಡಿರುವಾಗ ಎದುರುಗಡೆ ಹಾದು  ಹೋಗಿರುವ  ಕಾರ್ಕಳ – ಅಜೆಕಾರು  ರಾಜ್ಯ ಹೆದ್ದಾರಿಯಲ್ಲಿ  ಹಿರ್ಗಾನ ಕಡೆಯಿಂದ ಕಾರ್ಕಳ ಕಡೆಗೆ KA-20-U-3568  ನೇ ನೊಂದಣಿ ಸಂಖ್ಯೆಯ ಸ್ಕೂಟರನ್ನು ಅದರ  ಸವಾರ ಅನ್ವರ್‌ಹುಸೇನ್‌ ರರರು ಹೆಲ್ಮೇಟ್‌ ಧರಿಸಿಕೊಂಡು ಸ್ಕೂಟರನ್ನು ಸವಾರಿ  ಮಾಡುತ್ತಾ   ವರ್ಕ್‌ಶಾಪ್‌ ಎದುರು ತಲುಪುವಾಗ ಕಾರ್ಕಳ ಕಡೆಯಿಂದ CNO 7272 ನೇ ನೊಂದಣಿ ಸಂಖ್ಯೆಯ ಜೀಪನ್ನು ಅದರ ಚಾಲಕ  ಮುತ್ತಯ್ಯ ನಾಯ್ಕ್‌ ಇವರು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ವರ್ಕ್‌ಶಾಪ್‌ ಕಡೆಗೆ ಜೀಪನ್ನು ತಿರುಗಿಸಿದಾಗ ಜೀಪು ಸ್ಕೂಟರಿಗೆ  ಡಿಕ್ಕಿ  ಹೊಡೆದು ಸ್ಕೂಟರ್‌ ಸವಾರ  ಅನ್ವರ್‌ಹುಸೇನ್‌ ರವರು ರಸ್ತೆಗೆ ಬಿದ್ದು ಅವರ  ತಲೆಗೆ ತರಚಿದ ಗಾಯ, ಬಲಕಾಲಿಗೆ  ತೀವ್ರ ತರಹದ ಗಾಯವಾಗಿರುತ್ತದೆ. ಅನ್ವರ್‌ಹುಸೇನ್‌ ರವರನ್ನು ಚಿಕಿತ್ಸೆ ಬಗ್ಗೆ ಜೀಪು ಚಾಲಕರು ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 90/2021  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಚಂದ್ರಾವತಿ(38), ತಂದೆ: ರಾಜು,ವಾಸ: ದುರ್ಗಾನಗರ ಬೋಳಕಟ್ಟೆ ಗುಲ್ವಾಡಿ  ಗ್ರಾಮ ಕುಂದಾಪುರ ತಾಲೂಕು ಇವರ ಗಂಡ ರಾಜು(40) ರವರು ದಿನಾಂಕ 28/07/2021 ರಂದು ಮಧ್ಯಾಹ್ನ 12:30 ಗಂಟೆಗೆ ಮನೆಯ ಬಳಿ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೋದವರು ಸ್ವಲ್ಪ ಹೊತ್ತನಲ್ಲಿ  ವಾಪಾಸ್ಸು  ಮನೆಗೆ ಬಂದಿದ್ದು ನನಗೆ ಸುಸ್ತಾಗುತ್ತದೆ ಎಂದು ಹೇಳಿಮನೆಯಲ್ಲಿ ಮಲಗಿರುತ್ತಾರೆ. ಅವರ ಮಗ  ಮಹೇಂದ್ರ  ಮಧ್ಯಾಹ್ನ 1:30 ಗಂಟೆಗೆ ಮನೆಗೆ ಬಂದು ನೋಡುವಾಗ ರಾಜುರವರು ತೀವ್ರ ಅಸ್ವಸ್ಥಗೊಂಡಿದ್ದು  ಮಾತನಾಡುತ್ತಿರಲಿಲ್ಲ ಕೂಡಲೇ  ಮಹೇಂದ್ರನು  ಚಿಕಿತ್ಸೆ ಬಗ್ಗೆ ಸರಕಾರಿ  ಆಸ್ಪತ್ರೆ ಕುಂದಾಪುರರಕ್ಕೆ ಕರೆದುಕೊಂಡು ಹೋದಲ್ಲಿ 14:00 ಗಂಟೆಗೆ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 18/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ತಬುಸ್ಸುಮ್ (28), ತಂದೆ: ಬಿನ್ ಇಸ್ಮಾಯಿಲ್ ಸಾಹೇಬ್, ವಾಸ: ಫ್ಲಾಟ್ ನಂಬ್ರ: 407,4ನೇ ಮಹಡಿ, ಮಾಂಡವಿ ಎಮರಾಲ್ಡ್ ಡಿ ಸಿ ಆಪೀಸ್ ರೋಡ್ ಮಣಿಪಾಲ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಮಣಿಪಾಲದಲ್ಲಿ ಹೀನಾ ಎಂಟರ್ ಪ್ರೈಸಸ್ ನ್ನು ನಡೆಸಿಕೊಂಡು ಬಂದಿದ್ದು,  ಪಿರ್ಯಾದಿದಾರರ ಜೊತೆಯಲ್ಲಿ ಮೊಹಮ್ಮದ್ ರಪೀಕ್(45) ಎಂಬುವವರು ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ಮನೆಯಲ್ಲಿಯೇ ವಾಸವಾಗಿದ್ದರು. ಆರೋಪಿ  ಮೊಹಮ್ಮದ್ ರಪೀಕ್ ಪಿರ್ಯಾದಿದಾರರೊಂದಿಗೆ ಅನ್ಯೋನ್ಯತೆಯಿಂದ ಇರುವುದನ್ನು ಕಂಡು ಪಿರ್ಯಾದಿದಾರರು ಆರೋಪಿಯನ್ನು ನಂಬಿದ್ದರು ಆರೋಪಿಯು ಪಿರ್ಯಾದಿದಾರರನ್ನು ನಂಬುವಂತೆ ಮಾಡಿ ತನ್ನ ಅಗತ್ಯದ ಸಲುವಾಗಿ ರೂಪಾಯಿ 3,50,000/- ಹಣ ಪಡೆದು ವಾಪಾಸ್ ನೀಡುವುದಾಗಿ ಹೇಳಿ ಹಣ ನೀಡದೇ ಇದ್ದಾಗ ಪಿರ್ಯಾದಿದಾರರು ಆಪಾದಿತನಿಗೆ ಹಣ ಕೇಳಿದಾಗ ದಿನಾಂಕ 04/07/2021 ರಂದು ಮದ್ಯಾಹ್ನ 12:00 ಗಂಟೆಗೆ ಆರೋಪಿಯು ಪಿರ್ಯಾದಿದಾರರ ವಾಸದ ಮನೆಯಾದ ಫ್ಲಾಟ್ ನಂ; 407, ಮಾಂಡವಿ ಎಮರಾಲ್ಡ್‌ , ಮಣಿಪಾಲಕ್ಕೆ ಬಂದು ಹಣ ಕೊಡಲು ನನಗೆ ಆಗುದಿಲ್ಲ, ನೀನು ಏನೂ ಬೇಕಾದರೂ ಮಾಡಿಕೋ, ನಿನ್ನಿಂದ ಹಣ ವಸೂಲಿ ಮಾಡಲು ಸಾದ್ಯವಿಲ್ಲ ಎಂದು ಅವ್ಯಾಚ್ಚ ಶಬ್ದಗಳಲ್ಲಿ ಅಶ್ಲೀಲವಾಗಿ ಬೈದು ಹಲ್ಲೆ ಮಾಡಿ ಬೆದರಿಕೆ ಹಾಕಿದ್ದು,  ರೂಪಾಯಿ 3,50,000/- ವನ್ನು ಪಡೆದು ವಾಪಸ್ಸು ನೀಡದೇ ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 96/2021 ಕಲಂ: 323, 354, 420, 406,  504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-07-2021 09:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080