ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ವಿಪುಲ್ ಶೆಟ್ಟಿ (21), ತಂದೆ: ವಿಜಯ್ ಶೆಟ್ಟಿ, ವಾಸ: ಚಿಕ್ಕನ ಬೆಟ್ಟು  ಮನೆ, ಹಾರಾಡಿ ಗ್ರಾಮ, ಸಾಲಿಕೇರಿ ಅಂಚೆ, ಬ್ರಹ್ಮಾವರ ತಾಲೂಕು, ಹಾಲಿ ವಿಳಾಸ: ಅರಸು ತೋಟ ಮೂಳೂರು ಗ್ರಾಮ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 28/07/2021 ರಂದು ಅಗತ್ಯ ಕೆಲಸದ ಬಗ್ಗೆ ಮೂಳೂರು ಪೇಟೆಗೆ ಹೋಗಿ ಕೆಲಸ ಮುಗಿಸಿ ವಾಪಸು ಮನೆಗೆ ಹೋಗುತ್ತಾ  ಮೂಳೂರು ಎಸ್.ಎಮ್. ನರ್ಸರಿ ಎದುರು ನಿಂತಿರುವಾಗ ಅವರ ತಂದೆ ವಿಜಯ ಶೆಟ್ಟಿ (58) ರವರು ಕೆಲಸ ಮುಗಿಸಿ ಮನೆಗೆ ಬರಲು ಮೂಳೂರು ಎಸ್. ಎಮ್. ನರ್ಸರಿ ಎದುರು ರಾಷ್ಟ್ರೀಯ ಹೆದ್ದಾರಿ 66 ರನ್ನು ದಾಟಲು ಉಡುಪಿ ಮಂಗಳೂರು ರಸ್ತೆಯನ್ನು ದಾಟಿ ಮಂಗಳೂರು ಉಡುಪಿ ರಸ್ತೆಯನ್ನು ದಾಟಲು ಮಂಗಳೂರು ಉಡುಪಿ ರಸ್ತೆಯ ರಸ್ತೆ ವಿಭಜಕದ ಪೂರ್ವ ಬದಿಯ ಅಂಚಿನಲ್ಲಿ ನಿಂತಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬಸ್ ನಂಬ್ರ KA-20-AA-8081 ನೇ ದನ್ನು ಅದರ ಚಾಲಕ ನವೀನಚಂದ್ರ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರ ಬಲಬದಿಗೆ ಚಲಾಯಿಸಿಕೊಂಡು ಬಂದು ಮಂಗಳೂರು ಉಡುಪಿ ರಸ್ತೆಯ ರಸ್ತೆ ವಿಭಜಕದ ಪೂರ್ವ ಬದಿಯ ಅಂಚಿನಲ್ಲಿ ನಿಂತಿದ್ದ ಪಿರ್ಯಾದಿದಾರರ ತಂದೆಗೆ ಢಿಕ್ಕಿ ಹೊಡೆದಿದ್ದು ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ತನ್ನ ತಂದೆಯನ್ನು ಉಪಚರಿಸಿ ನೋಡಿದಲ್ಲಿ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಕೂಡಲೇ ಅವರನ್ನು ಒಂದು ವಾಹನದಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪಿರ್ಯಾದಿದಾರರ ತಂದೆಯವರನ್ನು ಪರೀಕ್ಷಿಸಿ ಅವರು ಈಗಾಗಲೇ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ . ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2021  ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಸುಜಾತ (44), ಗಂಡ: ಕೃಷ್ಣ ಸೇರಿಗಾರ್‌, ವಾಸ: ಕೃಷ್ಣಾನುಗ್ರಹ, ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಮಾರ್ಪಳಿ, ಕೊರಂಗ್ರಪಾಡಿ ಗ್ರಾಮ, ಉಡುಪಿ  ಜಿಲ್ಲೆ ಇವರ ಗಂಡ  ಕೃಷ್ಣ ಸೇರಿಗಾರ್‌ (57) ಎಂಬುವವರು ಮಣಿಪಾಲ ಬೇಕರಿಯಲ್ಲಿ ಹಾಗೂ ಉಡುಪಿಯ ಅಂತೋನಿ ಸೈಕಲ್‌ ಶಾಪ್‌ ನಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 28/07/2021 ರಂದು ಎಂದಿನಂತೆ ಬೆಳಿಗ್ಗೆ ಕೆಲಸದ ನಿಮಿತ್ತ ಮನೆಯಿಂದ ಹೋಗಿದ್ದು, ಮಣಿಪಾಲ ಬೇಕರಿಯಲ್ಲಿ ಕೆಲಸ ಮುಗಿಸಿ ಮಧ್ಯಾಹ್ನ 1:30 ಗಂಟೆಗೆ ಅಲ್ಲಿಂದ ಹೊರಟು ಬಂದವರು ಮನೆಗೆ ಬಾರದೇ, ಅಂತೋನಿ ಸೈಕಲ್‌ ಶಾಪ್‌ ಹಾಗೂ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 104/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬೈಂದೂರು: ಪಿರ್ಯಾದಿದಾರರಾದ ಸುರೇಂದ್ರ ಶೆಟ್ಟಿ (60), ತಂದೆ: ದಿ. ರಾಮಣ್ಣ ಶೆಟ್ಟಿ, ವಾಸ; ನೀರ್ ಕುಳಿ ಮನೆ, ಕಾಲ್ತೋಡು ಗ್ರಾಮ, ಬೈಂದೂರು ತಾಲೂಕು ಇವರ ಮಗಳು ಸುಶ್ಮೀತಾ (35) ರವರ ಗಂಡ ವಿಜಯ ಶೆಟ್ಟಿ ಬೊಂಬಾಯಿಯಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದು ಲಾಕ್ ಡೌನ್ ಸಮಯದಲ್ಲಿ ಊರಿಗೆ ಬಂದಿದ್ದು. ಮನೆಯಲ್ಲಿರುವಾಗ ಸುಶ್ಮಿತಾಳ ಗಂಡ ವಿಜಯ್ ಶೆಟ್ಟಿಯು ಮಕ್ಕಳಿಗೆ ಯಾವಾಗಲು ಮೊಬೈಲ್ ಪೋನ್ ಕೊಡುತ್ತಿದ್ದು ಅದೇ ವಿಚಾರವಾಗಿ ಸುಶ್ಮೀತಾ ಹಾಗೂ ಆಕೆಯ ಗಂಡನೊಂದಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದು ಪಿರ್ಯಾದಿದಾರರು ಅವರನ್ನು ಸಮಾಧಾನಪಡಿಸುತ್ತಿದ್ದರು. ದಿನಾಂಕ 28/07/2021 ರಂದು ಮಕ್ಕಳಿಗೆ ಮೊಬೈಲ್ ಪೋನ್ ನೋಡಲು ಕೊಟ್ಟ ವಿಚಾರವಾಗಿ ಪಿರ್ಯಾದಿದಾರರ ಮಗಳು ಸುಶ್ಮೀತಾಳು ಆಕೆಯ ಗಂಡ ವಿಜಯ್ ಶೆಟ್ಟಿಯಲ್ಲಿ ಗಲಾಟೆ ಮಾಡಿದಾಗ ವಿಜಯ್ ಶೆಟ್ಟಿಯು ತಾನು ಬೊಂಬಾಯಿಗೆ ಹೋಗುವುದಾಗಿ ಹೇಳಿ ಬ್ಯಾಗಿಗೆ ಬಟ್ಟೆಗಳನ್ನು ಹಾಕುತ್ತಿದ್ದು ಇದನ್ನು ನೋಡಿದ ಸುಶ್ಮೀತಾ ಮನೆಯ ಒಳಗಿನ ರೂಮಿನ ಕೋಣೆಗೆ ಹೋಗಿ ಬೆಳಿಗ್ಗೆ 11:30 ಗಂಟೆಗೆ ಬಾಗಿಲು ಹಾಕಿಕೊಂಡಿರುತ್ತಾರೆ. ಮಗಳು ಸಮೀಕ್ಷಾ ಪಿರ್ಯಾದಿದಾರರಲ್ಲಿ ಅಮ್ಮ ಕೋಣೆಗೆ ಹಗ್ಗಹಿಡಿದುಕೊಂಡು ಹೋಗಿರುತ್ತಾಳೆಂದು ಹೇಳಿದ್ದು ಪಿರ್ಯಾದಿದಾರರು ಕೋಣೆಯ ಬಾಗಿಲು ಬಡಿದಿದ್ದು ಸುಶ್ಮಿತಾಳು ಬಾಗಿಲು ತೆಗೆದಿರುವುದಿಲ್ಲ. ನಂತರ ಪಿರ್ಯಾದಿದಾರರು ಸಂಶಯಗೊಂಡು ಕೋಣೆಗೆ ಕಿಟಕಿಯ ಗಾಜು ಒಡೆದು ನೋಡಿದಾಗ ಸುಶ್ಮಿತಾ ಕೋಣೆಯ ಫ್ಯಾನಿಗೆ ನೈಲಾನ್ ಹಗ್ಗ ಸಿಕ್ಕಿಸಿ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದು, ನಂತರ ಕೋಣೆಯ ಬಾಗಿಲು ಒಡೆದು ಸುಶ್ಮೀತಾಳನ್ನು ನೇಣು ಕುಣಿಕೆಯಿಂದ ಬಿಡಿಸಿ ಕೆಳಗಿಳಿಸಿ ಖಾಸಗಿ ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಬಳಿಕ ವೈದ್ಯಾಧಿಕಾರಿಯವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆ ಎಮ್ ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಸುಶ್ಮಿತಾಳು ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 29/07/2021 ರಂದು 00:52 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ  28/2021  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಪದ್ಮಾವತಿ, (34), ಗಂಡ: ಶಂಕರ ಗಜ್ಜಿ, ಪ್ರಸ್ತುತ ವಾಸ: ರೂಂ ನಂಬ್ರ 10 ರಲ್ಲಿ 2, ಜ್ಞಾನೇಶ್ವರ ನಗರ, ಬಾಂದ್ರಾ ಈಸ್ಟ್, ಮುಂಬಯಿ, ಮಹಾರಾಷ್ಟ್ರ ರಾಜ್ಯ ಖಾಯಂ ವಿಳಾಸ: # 2-34, ಲತಾ ನಿವಾಸ, ವಿದ್ಯಾನಗರ, ಮುದರಂಗಡಿ, ಸಾಂತೂರು ಗ್ರಾಮ, ಪಿಲಾರು ಅಂಚೆ, ಕಾಪು ತಾಲೂಕು ಇವರ ತಂದೆ ನಾರಾಯಣ ಗೌಡ (70) ಎಂಬುವವರಿಗೆ ಕಿವಿಯು ಸರಿಯಾಗಿ ಕೇಳಿಸದೇ ಇದ್ದು, ಹೃದಯ ಸಂಬಂಧಿ ಹಾಗೂ ನರ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದವರಿಗೆ ಕಳೆದ 4-5 ವರ್ಷಗಳಿಂದ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು. ಅದೇ ಚಿಂತೆಯಲ್ಲಿ ಜೀವನಲ್ಲಿ ಜಿಗುಪ್ಸೆಗೊಂಡು, ದಿನಾಂಕ 26/07/2021 ರಂದು ಬೆಳಿಗ್ಗೆ 05:00 ಗಂಟೆಯ ವೇಳೆಗೆ ಕಾಪು ತಾಲೂಕು ಸಾಂತೂರು ಗ್ರಾಮ ಮುದರಂಗಡಿಯಲ್ಲಿರುವ ಅವರ ಮನೆಯ ಬಾತ್‌‌ರೂಮಿನಲ್ಲಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದವರನ್ನು ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ  ದಿನಾಂಕ 29/07/2021 ರಂದು ಬೆಳಗಿನ ಜಾವ 01:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 18/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾಪು: ಪಿರ್ಯಾದಿ ಯಶೋಧರ ಪಿ ಕೋಟ್ಯಾನ್ ಇವರ ಹೆಂಡತಿಯ ಅಕ್ಕನ ಮಗನಾದ ಚಂದ್ರಶೇಖರ (51) ಎಂಬಾತನು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕಳೆದ 5 ವರ್ಷಗಳ ಹಿಂದೆ ವಿದೇಶದಿಂದ ಊರಿಗೆ ಬಂದು ಕೆಲಸವಿಲ್ಲದ ಮನೆಯಲ್ಲಿದವನು ವಿಪರೀತ ಮಧ್ಯಪಾನ ಮಾಡುತ್ತಿದ್ದು, ಯಾವುದೋ ವಿಚಾರಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28-07-2021 ರಂದು ರಾತ್ರಿ 9:00 ಗಂಟೆಯಿಂದ ದಿನಾಂಕ 29-07-2021 ರ ಬೆಳಿಗ್ಗೆ 07:00 ಗಂಟೆಯ ಮಧ್ಯಾವದಿಯಲ್ಲಿ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

  • ಅಮಾಸೆಬೈಲು:  ದಿನಾಂಕ 29/07/2021 ರಂದು ರಾತ್ರಿ 01:45 ಗಂಟೆಗೆ ಪಿರ್ಯಾದಿದಾರರಾದ ಸುಕುಮಾರ ಶೆಟ್ಟಿ (37), ತಂದೆ: ವಸಂತ ಶೆಟ್ಟಿ, ವಾಸ: ಅರಸಮ್ಮಕಾನು ತೋಟದ ಮನೆ ಶೇಡಿಮನೆ ಗ್ರಾಮ ಹೆಬ್ರಿ ತಾಲೂಕು ಇವರು ತನ್ನ ಮನೆಯಾದ ಶೇಡಿಮನೆ ಗ್ರಾಮದ ಅರಸಿನಖಾನ್ ತೋಟದ ಮನೆ ಎಂಬಲ್ಲಿ ರಾತ್ರಿ ಮನೆಯಲ್ಲಿ ಮಲಗಿರುವಾಗ ಹೊರಗಡೆ ಗುಂಡು ಸಿಡಿದ ಶಬ್ದ ಕೇಳಿಸಿದ್ದು ಪಿರ್ಯಾದಿದಾರರು ಮನೆಯಿಂದ ಹೊರಗೆ ಬಂದು ನೋಡಿದಾಗ ನಾಲ್ಕು ಜನ ವ್ಯಕ್ತಿಗಳು ಪಿರ್ಯಾದಿದಾರರ ಮನೆಯ ಜಾಗದೊಳಗೆ ಅತ್ತಿಂದಿತ್ತ ಓಡಾಡುತ್ತಿದ್ದು ಅವರನ್ನು ವಿಚಾರಿಸಲಾಗಿ 1.ಸ್ಟಾನಿ  ಸ್ಲೇವಿಸ್ ಪಾಯಸ್ ಪ್ರಾಯ 50 ವರ್ಷ ತಂದೆ: ಮೋಂತಿ ಪಾಯಸ್ ಚರ್ಚ್ ರೋಡ್ ಕಾಬೆಟ್ಟು ಕಾರ್ಕಳ, 2. ಮೆಲ್ವಿನ್ ಫ್ರಾಕ್ಸಿ ಡಿಸೋಜಾ ಪ್ರಾಯ 38 ವರ್ಷ, ತಂದೆ: ಅಲೆಕ್ಸ್ ಡಿಸೊಜಾ, ವಾಸ: ಮರಿಯಾ ಕ್ರಪಾ ಸಿಂಡಿಕೇಟ್ ಬ್ಯಾಂಕು ಬಳಿ ನಕ್ರೆ ಕುಕ್ಕುಂದೂರು ಗ್ರಾಮ ,3. ಅಕ್ಷಯ ಪೂಜಾರಿ ಪ್ರಾಯ 23 ವರ್ಷ, ತಂದೆ: ದಿವಾಕರ ಬಂಗೇರ, ವಾಸ: ಜಡ್ಡೋಳಿ ಬಚ್ಚಪ್ಪು ಹೆಬ್ರಿ, 4) ಮೋಹನ್ ಪ್ರಾಯ 46 ವರ್ಷ, ತಂದೆ: ಸುಂದರ ದೇವಾಡಿಗ, ವಾಸ:ಕಾಳಿಕಾಂಬಾ ದೇವಸ್ಥಾನದ ಬಳಿ ಆನೆಕೆರೆ ಕಾರ್ಕಳ ಎಂದು ತಿಳಿಸಿದ್ದು ಕಾರ್ಕಳದಿಂದ ಬೇಟೆಯಾಡಲು ಬಂದಿರುವುದಾಗಿ ತಿಳಿಸಿದ್ದು ಅವರಲ್ಲಿ DBBL ಬಂದೂಕು ಇದ್ದು ಅಲ್ಲದೆ ಬಂದೂಕಿಗೆ ಉಪಯೋಗಿಸುವ 06 ಸಜೀವ ಗುಂಡುಗಳಿದ್ದು ವನ್ಯ ಜೀವಿಗಳನ್ನು ಬೇಟೆಯಾಡುವ ಉದ್ದೇಶದಿಂದ ಅ ವೇಳೆಯಲ್ಲಿ ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಬೇಟೆಯಾಡಲು ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021 ಕಲಂ:30 Indian Arms Act ಮತ್ತು 447  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 29-07-2021 05:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080