ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಸುವರ್ಣಲತಾ ಕೆ (53), ಗಂಡ:ಕೃಷ್ಣ ಬಿಲ್ಲವ, ವಾಸ: ಗೋವಿಂದ ಮಾಸ್ಟರ್ ಮನೆ, ದೊಡ್ಮನೆ,ಯೆಳಜಿತ್ ಗ್ರಾಮ ಬೈಂದೂರು ತಾಲೂಕು ಇವರ ತಾಯಿ ಲಕ್ಷ್ಮೀ (75) ಇವರು ಕಳೆದ 20 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು  ,ಈ ಬಗ್ಗೆ  ಕುಂದಾಪುರ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,  ಅಲ್ಲದೇ ಅವರ ಗಂಡ 3 ವರ್ಷಗಳ ಹಿಂದೆ ಮೃತಪಟ್ಟಿದ್ದು, ಇದೇ ಬೇಸರದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 28/06/2022 ರಂದು ಸಂಜೆ 5:30 ಗಂಟೆಗೆ ಮನೆಯ ಕೊಟ್ಟಿಗೆಯ  ಮರದ ಜಂತಿಗೆ  ಟವೆಲ್ ನಿಂದ ಕಟ್ಟಿ ಕುತ್ತಿಗೆಗೆ  ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 29/2022 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಕುಂದಾಪುರ: ದಿನಾಂಕ 28/06/2022 ರಂದು ಶ್ರೀಕಾಂತ .ಕೆ, ಪೊಲೀಸ್‌ ಉಪಾಧೀಕ್ಷಕರು, ಕುಂದಾಪುರ  ಉಪವಿಭಾಗ ಇವರಿಗೆ ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಜ್ಯುವೆಲ್ ಪಾರ್ಕ್ ಲಾಡ್ಜಿನ  ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು  ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್  ಆಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ 1. ಸಂಜೀವ ಪೂಜಾರಿ (45), ತಂದೆ : ದಿ. ಚಿಕ್ಕ ಪೂಜಾರಿ, ವಾಸ : ವಂಡ್ಸೆ, ವಂಡ್ಸೆ ಗ್ರಾಮ, ಕುಂದಾಪುರ ತಾಲೂಕು, 2. ಅಭಿಜಿತ್ (29), ತಂದೆ : ನಾಗರಾಜ, ವಾಸ : ಮಾರಣಕಟ್ಟೆ ಪೇಟೆ, ಚಿತ್ತೂರು ಗ್ರಾಮ, ಕುಂದಾಪುರ ತಾಲೂಕು, 3. ನರಸಿಂಹ ಪೂಜಾರಿ (61), ತಂದೆ : ಕುಷ್ಟ ಪೂಜಾರಿ, ವಾಸ : ಬಳ್ಕೂರು ಗ್ರಾಮ, ಕುಂದಾಪುರ ತಾಲೂಕು, 4. ಚಂದ್ರ (49), ತಂದೆ: ಸುಧಾಕರ ಶೆಟ್ಟಿ, ವಾಸ : ನೇರಳಕಟ್ಟೆ, ಕರ್ಕುಂಜೆ ಗ್ರಾಮ, ಕುಂದಾಫುರ ತಾಲೂಕು, 5. ಅಶ್ವತ್ (35), ತಂದೆ : ಮಂಜುನಾಥ, ವಾಸ : ಹೆಮ್ಮಾಡಿ, ಹೆಮ್ಮಾಡಿ ಗ್ರಾಮ, ಕುಂದಾಫುರ ತಾಲೂಕು, 6. ಅಶೋಕ (50), ತಂದೆ : ರಾಮಣ್ಣ ಶೆಟ್ಟಿ, ವಾಸ : ನೇರಳಕಟ್ಟೆ, ಕರ್ಕುಂಜೆ ಗ್ರಾಮ, ಕುಂದಾಫುರ ತಾಲೂಕು, 7. ಭುಜಂಗ ಶೆಟ್ಟಿ (44), ತಂದೆ : ಬಸವ ಶೆಟ್ಟಿ, ವಾಸ : ತಲ್ಲೂರು, ತಲ್ಲೂರು ಗ್ರಾಮ, ಕುಂದಾಫುರ ತಾಲೂಕು, 8. ಆದರ್ಶ (39), ತಂದೆ : ಭುಜಂಗ ಶೆಟ್ಟಿ, ವಾಸ : ನೂಜಾಡಿ ರಸ್ತೆ, ಕಾಸನಕಟ್ಟೆ, ವಂಡ್ಸೆ ಗ್ರಾಮ, ಕುಂದಾಪುರ ತಾಲೂಕು ಇವರನ್ನು ವಶಕ್ಕೆ ಪಡೆದು  ಆರೋಪಿತರು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ 1,61,000/, ನೆಲಕ್ಕೆ ಹಾಸಿದ ಬಟ್ಟೆ, ಇಸ್ಪೀಟು ಎಲೆಗಳು-52 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 65/2022  ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಪ್ರಭಾಕರ ಶೆಟ್ಟಿ (34), ತಂದೆ: ಮಹಾಬಲ ಶೆಟ್ಟಿ, ವಾಸ: ಕುಡೂರು,ಕೆಳಮನೆ, ಗೋಳಿಹೊಳೆ ಬೈಂದೂರು  ತಾಲೂಕು ಇವರ ತಂದೆಯ ಬೈಂದೂರು  ತಾಲೂಕು  ಗೋಳಿಹೊಳೆ ಗ್ರಾಮದ ಸರ್ವೆ ನಂಬ್ರ 259/11 ರ ಪಟ್ಟಾ ಸ್ಥಳಕ್ಕೆ ಸಂಬಂಧಿಸಿದ ಸರ್ವೆ ನಂಬ್ರ 263 ರ  ಕುಮ್ಕಿ ಜಾಗವನ್ನು ಪಿರ್ಯಾದಿದಾರರು ಅನುಭವಿಸಿಕೊಂಡು ಬಂದಿದ್ದು, ಕುಮ್ಕಿ ಸ್ಥಳದಲ್ಲಿ ಅಡಿಕೆ ತೋಟವಿದ್ದು, ಅರೋಪಿತರುಗರಾದ 1) ಶ್ರೀಮತಿ ಸರೋಜ ಶೆಟ್ಟಿ (37), ತಂದೆ: ನಾಗಯ್ಯ ಶೆಟ್ಟಿ, ವಾಸ: ಕುಡೂರು ಕೆಳಮನೆ, ಗೋಳಿಹೊಳೆ ಗ್ರಾಮ, ಬೈಂದೂರು ತಾಲೂಕು, 2) ಶ್ರೀಮತಿ ಬೇಬಿ ಶೆಟ್ಟಿ (50), ತಂದೆ: ನಾಗಯ್ಯ ಶೆಟ್ಟಿ, ವಾಸ: ಕುಡೂರು ಕೆಳಮನೆ, ಗೋಳಿಹೊಳೆ ಗ್ರಾಮ, ಬೈಂದೂರು ತಾಲೂಕು, 3) ಶ್ರೀಮತಿ ಜ್ಯೋತಿ (36), ತಂದೆ: ರಾಜೀವ ಶೆಟ್ಟಿ, ವಾಸ: ಕುಡೂರು ಕೆಳಮನೆ, ಗೋಳಿಹೊಳೆ ಗ್ರಾಮ, ಬೈಂದೂರು ತಾಲೂಕು,  4) ರಂಜಿತ್ ಶೆಟ್ಟಿ (27), ತಂದೆ: ಚಿಕ್ಕಯ್ಯ, ವಾಸ: ಕುಡೂರು ಕೆಳಮನೆ, ಗೋಳಿಹೊಳೆ ಗ್ರಾಮ, ಬೈಂದೂರು ತಾಲೂಕು, 5) ಚಿಕ್ಕಯ್ಯ ಶೆಟ್ಟಿ (47), ತಂದೆ: ನಾರಾಯಣ ಶೆಟ್ಟಿ, ವಾಸ:  ಕುಡೂರು ಕೆಳಮನೆ, ಗೋಳಿಹೊಳೆ ಗ್ರಾಮ, ಬೈಂದೂರು ತಾಲೂಕು, 6) ರೋಹಿತ್ ಶೆಟ್ಟಿ (24), ತಂದೆ: ಚಿಕ್ಕಯ್ಯ ಶೆಟ್ಟಿ, ವಾಸ: ಕುಡೂರು ಕೆಳಮನೆ, ಗೋಳಿಹೊಳೆ ಗ್ರಾಮ, ಬೈಂದೂರು ತಾಲೂಕು ಇವರು ಪಿರ್ಯಾದಿದಾರರ ಪಟ್ಟ ಸ್ಥಳ ಮತ್ತು  ಕುಮ್ಕಿ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಮರ ಮತ್ತು ಬೇಲಿಯನ್ನು ಹಾಳುಗೆಡವಿ, ಬಲತ್ಕಾರದಿಂದ ದಾರಿ ನಿರ್ಮಿಸಲು ಪ್ರಯತ್ನಿಸಿದ್ದು, ಈ ಬಗ್ಗೆ ಪಿರ್ಯಾದಿದಾರರ ತಂದೆ ಮಾನ್ಯ ಕುಂದಾಪುರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದು ಮಾನ್ಯ ನ್ಯಾಯಾಲಯವು ಸ್ಥಳದಲ್ಲಿ 3 ಅಡಿ ಕಾಲು ದಾರಿಯನ್ನು ಹೊರತು ಪಡಿಸಿ ಬೇರೆ ಯಾವುದೇ ರಸ್ತೆ ನಿರ್ಮಿಸಬಾರದೆಂದು ಮತ್ತು  ಸ್ಥಳದ ಫಿರ್ಯಾದಿದಾರರ  ಮನೆಯವರ  ಅನುಭವ, ಸ್ವಾಧೀನತೆಗೆ ಯಾವುದೇ ರೀತಿಯ ತೊಂದರೆ ಮಾಡದಂತೆ ಮಾನ್ಯ ನ್ಯಾಯಾಲಯವು ದಿನಾಂಕ 04/02/2022 ರಂದು ಮದ್ಯಂತರ ಆಧೇಶ ನೀಡಿದ್ದು, ನ್ಯಾಯಾಲಯದ ಆದೇಶ ಇದ್ದರೂ ಕೂಡಾ ಆರೋಪಿಗಳು ದಿನಾಂಕ 23/02/2022 ರಂದು ಸಂಜೆ 5:00 ಗಂಟೆಗೆ ಕುಮ್ಕಿ ಸ್ಥಳಕ್ಕೆ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ, ತಂದೆಗೆ ಮತ್ತು ಮನೆಯವರಿಗೆ ನಿಂದಿಸಿ ಸ್ಥಳದ ಬೇಲಿಯನ್ನು ಬಲಾತ್ಕಾರದಿಂದ ದ್ವಂಸ ಮಾಡಿ ಹಾಳುಗೆಡವಿ, ನ್ಯಾಯಾಲಯದ ಮದ್ಯಂತರ ಆದೇಶವನ್ನು ದಿಕ್ಕರಿಸಿ ರಸ್ತೆ ಮಾಡಲು ಪ್ರಯತ್ನಿಸಿ ತಡೆಯಲು ಹೋದ ಪಿರ್ಯಾದಿದಾರರಿಗೆ  ಮತ್ತು ತಂದೆ ಮಹಾಬಲ ಶೆಟ್ಟಿಯವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 131/2022 ಕಲಂ: 447,427,506, 334 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 25/06/2022 ರಂದು ಮಂಜುನಾಥ, ಪೊಲೀಸ್‌ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ ಇವರಿಗೆ ಉಡುಪಿ ತಾಲೂಕು 76 ಬಡಗಬೆಟ್ಟು ಗ್ರಾಮದ ನಂದಗೋಕುಲ ಯುವಕ ಮಂಡಲ ಬಳಿ, ಸಾರ್ವಜನಿಕ ಸ್ಥಳದಲ್ಲಿಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಮೊಹಮ್ಮದ್ ಫಯಾಜ್ (29), ತಂದೆ: ಅಬ್ದುಲ್ ರಜಾಕ್, ವಾಸ: ನಂಬ್ರ 4-820, ಮಣಿಪುರ ಗ್ರಾಮ,ಕಾಪು ತಾಲೂಕು, ಉಡುಪಿ ಹಾಲಿವಾಸ: ಸುಬಾಶ್ ನಗರ, ರೈಲ್ವೆ ಬ್ರಿಜ್ಟ್ ಬಳಿಬಾಡಿಗೆ ಮನೆ, ಕಟಪಾಡಿ, ಯೆಣಗುಡ್ಡೆ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು ದಿನಾಂಕ 28/06/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2022  ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ದಿನಾಂಕ 25/06/2022 ರಂದು ಮಂಜುನಾಥ,  ಪೊಲೀಸ್ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರಿಗೆ ಉಡುಪಿ ತಾಲೂಕು 76 ನೇ ಬಡಗುಬೆಟ್ಟು ಗ್ರಾಮದ ಹನುಮಾನ್ ಗ್ಯಾರೇಜ್ ಬಳಿ, ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ವೆಲಿಂಗ್ಟನ್ ರಿಚರ್ಡ್‌ (39), ತಂದೆ: ಹ್ಯಾರಿ ಕುರಿಯನ್, ವಾಸ: ಶ್ರೀ ಮಹಾಲಕ್ಷ್ಮೀ ಲೇಔಟ್, ಕೊರಂಗ್ರಪಾಡಿ, ಭೀಮ್ ನಗರ, 76 ಬಡಗಬೆಟ್ಟು ಗ್ರಾಮ, ಉಡುಪಿ, ಉಡುಪಿ ಜಿಲ್ಲೆ ಎಂಬಾತನನ್ನು 12:50 ಗಂಟೆಗೆ ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು  ದಿನಾಂಕ 28/06/2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ  ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2022  ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 29-06-2022 10:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080