ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕೋಟ: ಪಿರ್ಯಾದಿ ಗಿರೀಶ್ ಸಿ.ಆರ್. ಇವರರು ಅವರ ಬಾಬ್ತು KA-02-AF-6488 ನೇಯ ಕಾರಿನಲ್ಲಿ ರಾತ್ರಿ ಸ್ನೇಹಿತರಾದ ನರಸಿಂಹ ಮೂರ್ತಿ, ಪರಮೇಶ್ವರ ವರುಣ್ ಮತ್ತು ಶರತ್ ಎಂಬವರೊಂದಿಗೆ ದಿನಾಂಕ 27/06/2022 ರಂದು ಕುಣಿಗಲ್‌ನಿಂದ ಚಿಕ್ಕಮಂಗಳೂರು, ಆಗುಂಬೆ, ಮುರ್ಡೇಶ್ವರಕ್ಕೆ ಪ್ರವಾಸದ ಬಗ್ಗೆ ಹೊರಟು ಚಿಕ್ಕಮಂಗಳೂರು ಆಗುಂಬೆ ಮುಗಿಸಿ, ಹಾಲಾಡಿ ಕೋಟೇಶ್ವರ ಮಾರ್ಗವಾಗಿ ಮುರ್ಡೆಶ್ವರಕ್ಕೆ ಹೊರಟು ಕಾರನ್ನು ಚಾಲಕ ನರಸಿಂಹ ಮೂರ್ತಿ ಎಂಬವರು  ಚಲಾಯಸುತ್ತಿದ್ದು, ಪಿರ್ಯಾದಿದಾರರ ಕಾರು ಹಾಲಾಡಿ ಕಡೆಯಿಂದ ಕೋಟೇಶ್ವರ ರಸ್ತೆಯಲ್ಲಿ ಸಾಗುತ್ತಾ ದಿನಾಂಕ 28/06/2022 ರಂದು ಸಂಜೆ 5:15 ಗಂಟೆಯ ಸಮಯಕ್ಕೆ ಕುಂದಾಪುರದ ಹುಣ್ಸೆಮಕ್ಕಿ ಎಂಬಲ್ಲಿನ ಪೆಟ್ರೋಲ್ ಬಂಕಿನ ಬಳಿಗೆ ತಲುಪುವಾಗ, ಎದುರಿನಿಂದ ಅಂದರೆ ಕೋಟೇಶ್ವರ ಕಡೆಯಿಂದ ಶಾಲಾ ವಾಹನ ಬಸ್ಸು ನಂಬ್ರ KA-20-AA-4804 ನೇಯದನ್ನು ಅದರಚಾಲಕ ತನ್ನ ಬಾಬ್ತು ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ಬಲಕ್ಕೆ ಇರುವ ರಸ್ತೆಯ ಕಡೆಗೆ ನಿರ್ಲಕ್ಷವಾಗಿ ಚಲಾಯಿಸಿಕೊಂಡು ಬಂದು ನಮ್ಮ ಕಾರಿನ ಎದುರಿಗೆ ಡಿಕ್ಕಿ ಹೊಡೆದನು. ಪರಿಣಾಮ ಎರಡೂ ವಾಹನಗಳು ಜಖಂ ಗೊಂಡಿದ್ದು, ಕಾರಿನ ಚಾಲಕ ನರಸಿಂಹ ಮೂರ್ತಿ ಎಂಬವರಿಗೆ ಎದೆಗೆ ಮತ್ತು ಬೆನ್ನಿಗೆ ಓಳನೋವು ಮತ್ತು ತರಚಿದ ಗಾಯ ಮತ್ತು ಪರಮೇಶ್ವರವರಿಗೆ ತಲೆಗೆ ಕಣ್ಣಿಗೆ ರಕ್ತ ಗಾಯ, ಹಾಗೂ ವರುಣ್ ಎಂಬವರಿಗೆ ತುಟಿಗೆ ರಕ್ತ ಗಾಯವಾಗಿದ್ದು ಮತ್ತು ಶರತ್ ಎಂಬವರಿಗೆ ಕೈಗೆ ಕಾಲಿಗೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 102/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿ ಕರುಣಾಕರ ಎಂ ಇವರು ಕೆಲಸದ ನಿಮಿತ್ತ ದಿನಾಂಕ:28.06.2022 ರಂದು ಬೇಳೂರಿನಿಂದ ಹೊಸಮಠಕ್ಕೆ ತನ್ನ ಬಾಪ್ತು ಕಾರಿನಲ್ಲಿ ಬೇಳೂರು ಹುಣ್ಸೆಮಕ್ಕಿ ಮಾರ್ಗದಲ್ಲಿ  ಬರುತ್ತಿರುವಾಗ ಮಧ್ಯಾಹ್ನ ಸಮಯ ಸುಮಾರು 1.00 ಘಂಟೆಗೆ ಬೇಳೂರು ಹುಣ್ಸೆಮಕ್ಕಿ ಡಾಂಬಾರು ರಸ್ತೆಯ ಪಕ್ಕದ ಚರಂಡಿಯಲ್ಲಿ ಓರ್ವ ವ್ಯಕ್ತಿ ಬಿದ್ದುಕೊಂಡಿದ್ದು ಆತನ ತಲೆಗೆ ತೀವ್ರ ತರಹದ ಗಾಯವಾಗಿದ್ದು ತಕ್ಷಣ ಪರಿಚಯದ ಕೇಶವ ಆಚಾರಿ ಹಾಗು ಇತರ  ಸಾರ್ವಜನಿಕರ ಸಹಾಯದಿಂದ ಆತನನ್ನು ಕೋಟೇಶ್ವರದ ಎನ್.ಆರ್ ಆಚಾರ್ಯ ಆಸ್ಪತ್ರೆಗೆ ದಾಖಲಿಸಿದಲ್ಲಿ ಆತನ ಹೆಸರು ಪರಿಚಯದ ಹಳ್ಳಾಡಿಯ ಮಂಜುನಾಥ ಎಂಬುದಾಗಿ ತಿಳಿಯಿತು. ಆತನು ತನ್ನ ಬಾಪ್ತು KA-20-EF-3670 ನೇಯದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ಸ್ಕಿಡ್ ಆಗಿ ಬಿದ್ದ ಪರಿಣಾಮ ಮೋಟಾರು ಸೈಕಲ್ ಜಖಂ ಗೊಂಡಿದ್ದು, ಸವಾರ ಮಂಜುನಾಥ ಎಂಬುವವನಿಗೆ ತಲೆಗೆ, ಕೈಗೆ ಕಾಲಿಗೆ ರಕ್ತ ಗಾಯವಾಗಿರುತ್ತದೆ.  ಈ ಅಪಘಾತಕ್ಕೆ KA-20-EF-3670 ನೇ ಮೋಟಾರುಸೈಕಲ್ ಸವಾರನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 103/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ಮಂಜುನಾಥ ಇವರ ತಂದೆ ಪ್ರಕಾಶ್ ಸಿಂಧಗಿ ಪ್ರಾಯ 48 ವರ್ಷ ರವರು ಕಡಿಯಾಳಿ Indus-Sind ಬ್ಯಾಂಕಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದು, ನಿನ್ನೆ ದಿನಾಂಕ 28/06/2022 ರಂದು ರಾತ್ರಿ ಕೆಲಸ ಮುಗಿಸಿ KA 20 EV 5616 ನೇ ಸ್ಕೂಟರಿನಲ್ಲಿ ತನ್ನ ಮನೆಯಾದ ಗುಂಡಿಬೈಲ್ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 10:05 ಗಂಟೆಗೆ ಕಡಿಯಾಳಿ ಶ್ರೀ  ಗುರು ರಾಘವೇಂದ್ರ ರೆಸಿಡೆನ್ಸಿ ಎದುರುಗಡೆ ತಲುಪುವಾಗ ಹಿಂದಿನಿಂದ ಅಂದರೆ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ  KA 20 MC 5364 ನೇ ಕಾರನ್ನು ಅದರ ಚಾಲಕನು ರಾ.ಹೆ -169(A) ನೇದರಲ್ಲಿ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬದಿಗೆ ಬಂದು ಪಿರ್ಯಾದಿದಾರರ ತಂದೆ ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದನು ಪರಿಣಾಮ ಪ್ರಕಾಶ್ ಸಿಂಧಗಿ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಬೆನ್ನಿಗೆ, ತಲೆಗೆ ಮತ್ತು ಹಣೆಗೆ ಗಂಭೀರ ಸ್ವರೂಪದ ಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಅಫಘಾತ ಪಡಿಸಿದ ಕಾರಿನ ಚಾಲಕನು ಅಫಘಾತವಾದ ನಂತರ ಗಾಯಾಳುವನ್ನು ಉಪಚರಿಸದೇ ಇದ್ದುದ್ದಲ್ಲದೇ, ಅಫಘಾತವಾದ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡದೇ ಸ್ಥಳದಿಂದ ಪರಾರಿಯಾಗಿರುತ್ತಾನೆ. ಈ ಅಫಘಾತಕ್ಕೆ KA 20 MC 5364 ನೇ ಕಾರಿನ ಚಾಲಕನ ದುಡುಕುತನ ಮತ್ತು ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2022 ಕಲಂ: 279, 338 ಐ.ಪಿಸಿ.  ಮತ್ತು 134(ಎ&ಬಿ) ಜೊತೆಗೆ 187 ಐಎಂವಿ ಕಾಯ್ದೆ ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಉಡುಪಿ: ಪಿರ್ಯಾಧಿ ಗಣಪತಿ ಕಾಮತ್‌ ಇವರಿಗೆ ದಿನಾಂಕ: 28-06-2022 ರಂದು 12:38 AM  ಗಂಟೆಯ ಸಮಯಕ್ಕೆ ಮೊಬೈಲ್ your Account Has Been Blocked Due To KYC Update within 24 Hrs Please contact customer care 9593983124 to continue your service. ಎಂಬ ಸಂದೇಶ ಬಂದಿದ್ದು, ನಂತರ ಸದ್ರಿಯವರು customer care 9593983124 ಗೆ ಕರೆ ಮಾಡಿದಾಗ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಆಧಾರ್ ನಂಬ್ರ, ಪಾನ್ ಕಾರ್ಡ ನಂಬ್ರವನ್ನು ಪಡೆದು ನಂತ್ರ ಪಿರ್ಯಾದಿಯ ಮೊಬೈಲ್ ಗೆ ಬಂದ ಓ.ಟಿ.ಪಿಯನ್ನು ಕೇಳಿ ಪಡೆದಿದ್ದು, ಆ ಕೂಡಲೇ ಪಿರ್ಯಾದಿದಾರರು ಬಾಬ್ತು ಹೊಂದಿರುವ ಕೆನರ್ ಬ್ಯಾಂಕ್ ನ ಎಸ್.ಬಿ ಖಾತೆಯಿಂದ ರೂ. 50,000/-, ರೂ.20,756/-, ರೂ.15,176/-, ರೂ.14,750/-, ರೂ. 4,999/- ರಂತೆ ಒಟ್ಟು. ರೂ. 1,05,681/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ  ಮಾಡಿ ಮೋಸ  ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ಸೆನ್‌ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ 66©,66 (D)  ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿ ಶ್ರೀಮತಿ ಜಯಶ್ರಿ ವೆಂಕಟೇಶ್ ಪ್ರಸಾದ ಇವರು ಮತ್ತು ಆರೋಪಿತ 1.ಅಂಬಿಕಾ ರಾಣಿ ಕೆ (31) ತಂದೆ: ದಿ ಪಿ ವಿಶ್ವನಾಥ ಕಾರಂತ ವಾಸ: ಪ್ಲಾಟ್ ನಂಬ್ರ 502 ಸುವರ್ಣ ರೆಸಿಡೆನ್ಸಿ ಚಿತ್ರಪಾಡಿ ಗ್ರಾಮ ಬ್ರಹ್ಮಾವರ ತಾಲೂಕು 2.ಪ್ರಭಾವತಿ ಪ್ರಾಯ 63 ವರ್ಷ ಗಂಡ: ದಿ. ಪಿ ವಿಶ್ವನಾಥ ಕಾರಂತ ವಾಸ: ಪ್ಲಾಟ್ ನಂಬ್ರ 502 ಸುವರ್ಣ ರೆಸಿಡೆನ್ಸಿ ಚಿತ್ರಪಾಡಿ ಗ್ರಾಮ ಬ್ರಹ್ಮಾವರ ತಾಲೂಕು 3. ಭುಜಂಗ ಶೆಟ್ಟಿ ಪ್ರಾಯ 64 ವರ್ಷ ತಂದೆ: ಮಹಾಬಲ ಶೆಟ್ಟಿ ವಾಸ: ಪ್ಲಾಟ್ ನಂಬ್ರ 204 ಸುವರ್ಣ ರೆಸಿಡೆನ್ಸಿ ಚಿತ್ರಪಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರುಗಳು ಚಿತ್ರಪಾಡಿ ಗ್ರಾಮದ ಸುವರ್ಣ ರೆಸಿಡೆನ್ಸಿಯ ಅಪಾರ್ಟಮೆಂಟಿನ ವಾಸಿಗಳಾಗಿದ್ದು ದಿನಾಂಕ 18/04/2022 ರಂದು ರಾತ್ರಿ 10.00 ಗಂಟೆಗೆ  ಸದ್ರಿ ಅಪಾರ್ಟಮೆಂಟಿನಲ್ಲಿ  ನಡೆದ  ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಿರ್ಯಾದಿದಾರರಿಗೂ ಮತ್ತು ಆರೋಪಿಗಳಿಗೂ ಮಾತಿನ ಚಕಮಕಿ ನಡೆದು ಈ ಸಂದರ್ಭದಲ್ಲಿ ಆರೋಪಿ 3 ನೇಯವರು  ಪಿರ್ಯಾದಿದಾರರನ್ನು ಉದ್ದೇಶಿಸಿ  ಕೂಡಲೇ ಬರ್ತಡೆ ಪಾರ್ಟಿಯನ್ನು ನಿಲ್ಲಿಸಿ ಪಾರ್ಟಿಯಿಂದ ಬೇರೆಯವರಿಗೆ ತೊಂದರೆ ಆಗುತ್ತದೆ. ನಿಮ್ಮನ್ನು  ಕಂಬಿಯ ಹಿಂದೆ ಕೂರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದು ಅಲ್ಲದೇ  ದಿನಾಂಕ 03/06/2022 ರಂದು ಪಿರ್ಯಾದಿದಾರರು ಪ್ಲಾಟ್ ನಲ್ಲಿ ಸ್ನೇಹಿತೆಯರೊಂದಿಗೆ ಮಾತನಾಡಿಕೊಂಡಿರುವಾಗ ಆರೋಪಿ 1 ಮತ್ತು 2ನೇಯವರು ಅವಾಚ್ಯವಾಗಿ ಬೈದು ನಿಮ್ಮ ವಿರುದ್ದ ದೂರು ದಾಖಲಿಸುತ್ತೇವೆ  ನಿಮ್ಮನ್ನ ಸುಮ್ಮನೆ  ಬಿಡುವುದಿಲ್ಲ ಎಂಬುವುದಾಗಿ  ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 104/2022 ಕಲಂ: 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿ ಡಾ.ಪುಣ್ಯ ಬಿ ರಾವ್ ಇವರರು ಆರೋಪಿತ ಶ್ಯಾಮಲ ಪ್ರಭು, ರಾಘವೇಂದ್ರ ಪ್ರಭು ಮತ್ತು ರಾಜಶ್ರೀ  ಪ್ರಭು ಇ ವರ ಬಾಬ್ತು ಕಟ್ಟಡದಲ್ಲಿ  ಬಾಡಿಗೆ ಕ್ಲಿನಿಕ್ ಮಾಡಿಕೊಂಡಿದ್ದು ಪಿರ್ಯಾದಿದಾರರು ಸದ್ರಿ ಕಟ್ಟಡವನ್ನು ಬಿಡುವಂತೆ ಒತ್ತಡ ಹೇರುತ್ತಿದ್ದು ಇದರಿಂದ ಪಿರ್ಯಾದಿದಾರರು ಮಾನ್ಯ ಸಿವಿಲ್ ನ್ಯಾಯಾಲಯ ಕುಂದಾಪುರದಲ್ಲಿ ದಾವೆ ಸಂ 22/22 ಹಾಕಿದ್ದು ಆರೋಪಿ 1ಮತ್ತು 3 ನೇ ಯವರು ಬೈದು ನಿಂದಿಸುತ್ತಿದ್ದು ಆರೋಪಿ 1 ನೆಯವರು ಅಸಭ್ಯವಾಗಿ ವರ್ತಿಸುತ್ತಾ ಸಿವಿಲ್ ದಾವೆ ಹಾಕಿದ ಕಾರಣ ಸಿಟ್ಟಿನಿಂದ  ದಿನಾಂಕ 25/06/2022 ರಂದು 18 .40 ಗಂಟೆಯ ಸಮಯಕ್ಕೆ ಕ್ಲಿನಿಕ್ ನ ಪಕ್ಕದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವಾಚ್ಯವಾಗಿ ಬೈದು ವೈದ್ಯೆ ಆಗಲು ಅರ್ಹತೆ ಇಲ್ಲ ಎಂದು ನಿಂದಿಸಿ  ವ್ಯಂಗ್ಯವಾಗಿ  ಕೈಯಲ್ಲಿ  ಸನ್ನೆ ಮಾಡಿ ನಗಾಡುತ್ತಾ  ನಿಂದಿಸಿರುತ್ತಾರೆ ಎಂಬಿತ್ಯಾದಿ.  ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101 /2022 ಕಲಂ:504.355.509 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿ ವಿಠ್ಠಲ ಪರವ ಇವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ನಾಟಿ ಕೋಳಿ ವ್ಯಾಪಾರ ಮಾಡಿಕೊಂಡಿರುತ್ತಾರೆ.  ದಿನಾಂಕ 20.06.2022 ರಂದು ಪಿರ್ಯಾದಿದಾರರು ನಾಟಿ ಕೋಳಿ ಖರೀದಿಸುವ ಬಗ್ಗೆ ಚೇರ್ಕಾಡಿ ಗ್ರಾಮದ ಬಾಯರ್‌ಬೆಟ್ಟು ಎಂಬಲ್ಲಿ ಪಾವಸ್ತಿನ್‌ ಎಂಬವರ ಮನೆಯ ಬಳಿ ಸಮಯ  ಮಧ್ಯಾಹ್ನ 2.00 ಗಂಟೆಗೆ ಹೋಗಿ  ನಾಟಿ ಕೋಳಿಯ ಬಗ್ಗೆ ವಿಚಾರಿಸಿದಾಗ ಅವರ ಮಗಳು ಆರೋಪಿತೆ ವನಿತಾ ಡಿಮೆಲ್ಲೊ ರವರು ಮನೆಯಲ್ಲಿಯೇ ಇದ್ದು, ಏಕಾ ಏಕಿ ಪಿರ್ಯಾದಿದಾರರನ್ನು ಉದ್ದೇಶಿಸಿ ಸಾರ್ವಜನಿಕ ಸ್ಥಳದಲ್ಲಿ ವಾಚ್ಯವಾಗಿ ಬೈದು ಕೈಯಲ್ಲಿ ಹಿಡಿದು ಕೊಂಡಿದ್ದ ಕತ್ತಿಯನ್ನು ಪಿರ್ಯಾದಿದಾರರ ಕಡೆಗೆ ಎಸೆದಿರುತ್ತಾರೆ. ಪರಿಣಾಮ ಅವರು ಎಸೆದ ಕತ್ತಿ ಪಿರ್ಯಾದಿದಾರರ ಹಣೆಯ ಎಡ ಭಾಗಕ್ಕೆ ಹಾಗೂ ಕಣ್ಣಿನ ಬಳಿ ತಾಗಿ ರಕ್ತಗಾಯವಾಗಿ, ಅವರಿಗೆ ತಲೆ ತಿರುಗುವಂತಾಗಿ ಅಲ್ಲೇ ಬಿದ್ದರು. ನಂತರ ಗಾಯಗೊಂಡ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ. ಪಿರ್ಯದಿದಾರರಿಗೆ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಕತ್ತಿಯನ್ನು ಎಸೆದು ಹಲ್ಲೆ ಮಾಡಿದ ಆರೋಪಿತೆಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿರುವ ಪಿರ್ಯಾದು ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 111/2022 ಕಲಂ 324, 504 IPC & 3(1)(r), 3(1)(s), 3(2)(v-a ) prevention of atrocity act 1989 ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿ ರಾಜಶ್ರೀ ಪ್ರಭು ಇವರು ಪಾಂಡೇಶ್ವರ ಗ್ರಾಮದ ಸಾಸ್ತಾನ ಸರ್ವೆ ನಂಬ್ರ 32/9 ಬಿಪಿ 1 ರಲ್ಲಿ ಸ್ಥಿರಾಸ್ಥಿಯನ್ನು ಹೊಂದಿದ್ದು ಅದರಲ್ಲಿ ಮನೆ ಹಾಗೂ ಬಾಡಿಗೆ ಕೋಣೆಗಳು ಇದ್ದವು. ಅದರಲ್ಲಿ ಆರೋಪಿ 1 ನೇ ಡಾ. ಪುಣ್ಯ ರಾವ್ ಇವರು ಮೆಡಿಕಲ್ ಅಂಗಡಿಗಾಗಿ ದಿನಾಂಕ 02/03/2020 ರಂದು ಬಾಡಿಗೆ ಪಡೆದುಕೊಂಡಿದ್ದು ,ಬಾಡಿಗೆಯ ಅವಧಿ ಮುಗಿದಿದ್ದು ಅಂಗಡಿ ಕೋಣೆಯನ್ನು ಬಿಡುವಂತೆ ತಿಳಿಸಿದರೂ ಕೂಡ ಈ ವರೆಗೆ ಅಂಗಡಿ ಕೋಣೆಯನ್ನು ವಾಪಾಸ್ಸು ನೀಡಿರುವುದಿಲ್ಲ.ಇದೇ ವಿಷಯದಲ್ಲಿ ಅನೇಕ ಬಾರಿ ಅವಾಚ್ಯ ಶಬ್ದಗಳಿಂದ ಬೈದು ಕ್ರಿಮಿನಲ್ ದೂರು ದಾಖಲಿಸುತ್ತೇನೆಂದು ಅಲ್ಲದೇ ಕೊಲೆ ಬೆದರಿಕೆ ಹಾಕಿರುತ್ತಾರೆ ಪಿರ್ಯಾದಿದಾರರಿಗೆ ಸೇರಿದ ಪೈಪನ್ನು ತುಂಡು ಮಾಡಿ 1000 ದಷ್ಟು ನಷ್ಟ ಉಂಟು ಮಾಡಿರುತ್ತಾರೆ.ಅಲ್ಲದೇ ದಿನಾಂಕ 26/06/2022 ರಂದು ರಾತ್ರಿ ಸುಮಾರು 10.00 ಗಂಟೆಯ ಸಮಯಕ್ಕೆ ಅಂಗಡಿ ಕೋಣೆಯ ಬಳಿ ಶಬ್ದ ಕೇಳಿ ಬಂದಂತೆ ಹೋಗಿ ನೋಡಲಾಗಿ ಸುಮಾರು 4-5 ಜನ ವ್ಯಕ್ತಿಗಳು ಇದ್ದು ಯಾರೆಂದು ಕೇಳಿದಾಗ ಏಕಾಏಕಿ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚಿನ್ನ ತೆಗೆಯಲು ಪ್ರಯತ್ನಿಸಿದಾಗ ಜೋರಾಗಿ ಕೂಗಿಕೊಂಡಾಗ ಅವರುಗಳು ಅವಾಚ್ಯವಾಗಿ ಬೈದು ನಮಗೆ ಗೊತ್ತಿದೆ. ಅಂಗಡಿ ಕೋಣೆಯನ್ನು ನಮ್ಮ ವಶಕ್ಕೆ ಪಡೆದುಕೊಳ್ಳಬೇಕೆಂದು ಅಂಗಡಿ ಬಾಡಿಗೆಗೆ ಕೊಡದಿದ್ದರೆ ನಿಮ್ಮನ್ನೆಲ್ಲಾ ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ನಾನು ಡಾ. ಪುಣ್ಯ ಬಿ ರಾವ್ ತಮ್ಮ ಹಾಗೂ ಆಕೆಯ ಕಡೆಯವರು ಎಂದು ಹೇಳಿ ಅಲ್ಲಿಂದ ಓಡಿ ಹೋಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 105/2022 ಕಲಂ: 427,504.506,393 .R/W 34 IPC ರಂತೆ ಪ್ರಕರಣ ದಾಖಲಾಗಿರುತ್ತದೆ. 

 

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿ ರಂಗ ಇವರ ತಮ್ಮ ಸದಾನಂದ (56) ರವರು ತನ್ನ ತಂಗಿ ದಿ. ಸುಶೀಲರವರು ಮನೆಯಾದ ಸಂಪಿಗೆ ನಗರದಲ್ಲಿ ವಾಸಮಾಡಿಕೊಂಡಿದ್ದು ಅವರಿಗೆ ಮದುವೆಯಾಗಿರುವುದಿಲ್ಲ. ಸದಾನಂದರವರು ಕೆಲವು ಸಮಯದಿಂದ ಟಿಬಿ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಮೂಡಬೆಟ್ಟು ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ದಿನಾಂಕ 28/06/2022 ರಂದು ರಾತ್ರಿ 8:00 ಗಂಟೆಗೆ ಸದಾನಂದ ರವರಿಗೆ ವಿಪರೀತ ಅಸೌಖ್ಯವಾಗಿದ್ದು ಅವರನ್ನು ಪಿರ್ಯಾದಿದಾರರ ತಂಗಿಯ ಮಗ ಕುಮಾರನು ಚಿಕಿತ್ಸೆಯ ಬಗ್ಗೆ ಉಡುಪಿ  ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು  ಸದಾನಂದರವರನ್ನು ರಾತ್ರಿ 28/06/2022 ರಂದು ರಾತ್ರಿ 8:45 ಗಂಟೆ ಸಮಯಕ್ಕೆ ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 19/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವ: ದಿನಾಂಕ 28.06.2022 ರಂದು ರಾತ್ರಿ 8:00 ಗಂಟೆಯ ಮೊದಲೇ ಪಿರ್ಯಾದಿ ಸುಂದರ ಆಚಾರ್ಯ ಇವರು ಹಾಗೂ ಅವರ  ಹೆಂಡತಿ ಸರೋಜಿನಿ ಆಚಾರ್ಯ (54)  ರವರು ಒಟ್ಟಿಗೆ  ಊಟ ಮಾಡಿರುತ್ತಾರೆ. ನಂತರ ಪಿರ್ಯಾದುದಾರರು ಮನೆಯೊಳಗೆ ಇದ್ದು, ಅವರ ಹೆಂಡತಿ ಮನೆಯ ಅಂಗಳದಲ್ಲಿರುವ  ಬಾವಿಯಿಂದ  ನೀರು ತರಲು ಹೋಗಿದ್ದು, ಸಮಯ ಸುಮಾರು ರಾತ್ರಿ 8:15 ಗಂಟೆಗೆ  ಮಳೆ ಬರುತ್ತಿದ್ದು, ಆ ಸಮಯ ಬಾವಿಗೆ ಬಿದ್ದ ಜೋರಾದ ಶಬ್ದ ಕೇಳಿ ಬಾವಿಯ ಬಳಿ ಹೋಗಿ ನೋಡಿದಾಗ ನೀರು ತೆಗೆಯಲು ಹಾಕಿದ್ದ ಕಂಬ ಹಗ್ಗ ಮತ್ತು ಪಿರ್ಯಾದುದಾರರ ಪತ್ನಿ ನೀರಿಗೆ ಬಿದ್ದಿರುತ್ತಾರೆ. ಪಿರ್ಯಾದುದಾರರು ನೆರೆಕರೆಯವರನ್ನು ಕರೆದಿದ್ದು ರಾಜು ಎಂಬಾತನು ಬಾವಿಗೆ ಇಳಿದು ಪಿರ್ಯಾದುದಾರರ ಹೆಂಡತಿಯನ್ನು ಮೇಲಕ್ಕೆತ್ತಿ ನಂತರ ಚಿಕಿತ್ಸೆ ಬಗ್ಗೆ  ಶಿರ್ವ  ಸಮುದಾಯ ಆರೋಗ್ಯ ಕೇಂದ್ರಕ್ಕೆ  ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಹೆಚ್ಚಿನ ಚಿಕಿತ್ಸೆ ಬಗ್ಗೆ  ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ  ತಿಳಿಸಿದ ಮೇರೆಗೆ  ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು  ರಾತ್ರಿ 9:50 ಗಂಟೆಗೆ ಪರೀಕ್ಷಿಸಿ ಮೃತ ಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

 

ಇತ್ತೀಚಿನ ನವೀಕರಣ​ : 29-06-2022 07:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080